1 Chronicles · chapter 15 · verse 2
1 Chronicles 15:2 in Kannada
ಆಗ ದಾವೀದನು -- ಲೇವಿಯರ ಹೊರತಾಗಿ ಮತ್ತಾರೂ ದೇವರ ಮಂಜೂಷವನ್ನು ಹೊರಬಾರದು; ಯಾಕಂದರೆ ದೇವರ ಮಂಜೂಷವನ್ನು ಹೊರಲೂ ಯುಗಯುಗಕ್ಕೆ ಆತನಿಗೆ ಸೇವೆಮಾಡಲೂ ಕರ್ತನು ಅವರನ್ನು ಆರಿಸಿಕೊಂಡಿದ್ದಾನೆ ಅಂದನು.
Aaga daaveedanu -- leviyara horataagi mattaaroo devara manjooshavannu horabaaradu; yaakandare devara manjooshavannu horaloo yugayugakke aatanige sevemaadaloo kartanu avarannu aarisikondiddaane andanu.
1 Chronicles 15:2 in English
- King James Version (KJV)
- Then David said, None ought to carry the ark of God but the Levites: for them hath the LORD chosen to carry the ark of God, and to minister unto him for ever.
- World English Bible (WEB)
- Then David said, “No one ought to carry God’s ark but the Levites. For the LORD has chosen them to carry God’s ark, and to minister to him forever.”
- American Standard Version (ASV)
- Then David said, None ought to carry the ark of God but the Levites: for them hath Jehovah chosen to carry the ark of God, and to minister unto him for ever.
- Bible in Basic English (BBE)
- Then David said, The ark of God may not be moved by any but the Levites, for they have been marked out by God to take the ark of God, and to do his work for ever.
- Darby Translation (DBY)
- Then David said, None ought to carry the ark of God but the Levites, for them has Jehovah chosen to carry the ark of God, and to serve him for ever.
- Webster's Bible (WBS)
- Then David said, None ought to carry the ark of God but the Levites: for them hath the LORD chosen to carry the ark of God, and to minister to him for ever.
- Young's Literal Translation (YLT)
- Then said David, 'None [are] to carry the ark of God, except the Levites, for on them hath Jehovah fixed to carry the ark of God, and to serve Him — unto the age.'
Read in context
- 1ಇದಲ್ಲದೆ ದಾವೀದನ ಪಟ್ಟಣದಲ್ಲಿ ದಾವೀದನು ತನಗೆ ಮನೆಗಳನ್ನು ಕಟ್ಟಿಸಿ ಕೊಂಡು ದೇವರ ಮಂಜೂಷಕ್ಕೋಸ್ಕರ ಸ್ಥಳವನ್ನು ಸಿದ್ಧಮಾಡಿ ಅದರ ನಿಮಿತ್ತ ಗುಡಾರ ಹಾಕಿಸಿದನು.
- 2ಆಗ ದಾವೀದನು -- ಲೇವಿಯರ ಹೊರತಾಗಿ ಮತ್ತಾರೂ ದೇವರ ಮಂಜೂಷವನ್ನು ಹೊರಬಾರದು; ಯಾಕಂದರೆ ದೇವರ ಮಂಜೂಷವನ್ನು ಹೊರಲೂ ಯುಗಯುಗಕ್ಕೆ ಆತನಿಗೆ ಸೇವೆಮಾಡಲೂ ಕರ್ತನು ಅವರನ್ನು ಆರಿಸಿಕೊಂಡಿದ್ದಾನೆ ಅಂದನು.
- 3ದಾವೀ ದನು ಕರ್ತನ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತಕ್ಕೊಂಡು ಬರುವ ನಿಮಿತ್ತ ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲನ್ನು ಕೂಡಿಸಿ ಬರಮಾಡಿದನು.
- 4ಇದಲ್ಲದೆ ದಾವೀದನು ಆರೋನನ ಮಕ್ಕಳನ್ನೂ ಲೇವಿಯರನ್ನೂ ಬರಮಾಡಿದನು.
Cross references
- Deuteronomy 10:8 ಧರ್ಮೋಪದೇಶಕಾಂಡ 10:8ಆ ಕಾಲದಲ್ಲಿ ಕರ್ತನು ಲೇವಿಗೋತ್ರವನ್ನು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರು ವದಕ್ಕೂ ಕರ್ತನ ಮುಂದೆ ನಿಂತುಕೊಂಡು ಆತನಿಗೆ ಸೇವೆಮಾಡಿ ಆತನ ಹೆಸರಿನಲ್ಲಿ ಆಶೀರ್ವದಿಸುವ ದಕ್ಕೂ ಈ ದಿನದ ವರೆಗೂ ಪ್ರತ್ಯೇಕಿಸಿದನು.
- Numbers 18:1–8 ಅರಣ್ಯಕಾಂಡ 18:1–8ಕರ್ತನು ಆರೋನನಿಗೆ--ನೀನೂ ನಿನ್ನ ಕುಮಾರರೂ ನಿನ್ನ ಪಿತೃಗಳ ಮನೆಯೂ ನಿನ್ನೊಂದಿಗೆ ಪರಿಶುದ್ಧ ಸ್ಥಳದ ಅಕ್ರಮವನ್ನು ಹೊತ್ತು ಕೊಳ್ಳಬೇಕು; ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವದ ಅಕ್ರಮವನ್ನು ಹೊತ್ತುಕೊಳ್ಳಬೇಕು. ನಿಮ್ಮ ಪಿತೃವಾದ ಲೇವಿಯ ಗೋತ್ರದವರಾದ ನಿನ್ನ ಸಹೋದರರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಅವರು ನಿನ್ನ ಕೂಡ ಇದ್ದು ನಿನಗೆ ಸೇವೆ ಮಾಡಬೇಕು, ಆದರೆ ನೀನು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷೀ ಗುಡಾರದ ಮುಂದೆ ಸೇವೆಮಾಡಬೇಕು; ಅವರು ನಿನ್ನ ಅಪ್ಪಣೆಯನ್ನೂ ಗುಡಾರವೆಲ್ಲಾದರ ಅಪ್ಪಣೆಯನ್ನೂ ಕಾಪಾಡಬೇಕು. ಪರಿಶುದ್ಧ ಸ್ಥಳದ ಸಾಮಾನುಗಳಿಗೂ ಬಲಿಪೀಠಕ್ಕೂ ಮಾತ್ರ ಅವರೂ ನೀವೂ ಸಾಯದ ಹಾಗೆ ಅವರು ಸವಿಾಪಕ್ಕೆ ಬರಬಾರದು. ಆದರೆ ಅವರು ನಿನ್ನ ಸಹಾಯಕರಾಗಿದ್ದು ಗುಡಾರದ ಎಲ್ಲಾ ಸೇವೆಗೋಸ್ಕರ ಸಭೆಯ ಗುಡಾರದ ಅಪ್ಪಣೆಯನ್ನು ಕಾಪಾಡಬೇಕು; ಪರಕೀಯನು ನಿಮ್ಮ ಸವಿಾಪಕ್ಕೆ ಬರ ಬಾರದು. ಇಸ್ರಾಯೇಲ್ ಮಕ್ಕಳ ಮೇಲೆ ಇನ್ನು ಮುಂದೆ ಎಂದಿಗೂ ರೌದ್ರವು ಬಾರದಹಾಗೆ ಪರಿಶುದ್ಧ ಸ್ಥಳದ ಆಜ್ಞೆಯನ್ನೂ ಬಲಿಪೀಠದ ಆಜ್ಞೆಯನ್ನೂ ನೀವು ಕಾಪಾಡಬೇಕು. ಇಗೋ, ನಾನು ನಿಮ್ಮ ಸಹೋದರ ರಾದ ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ತೆಗೆದುಕೊಂಡಿದ್ದೇನೆ. ಸಭೆಯ ಗುಡಾರದ ಸೇವೆಯನ್ನು ಮಾಡುವದಕ್ಕೆ ಅವರು ಕರ್ತನಿಗೋಸ್ಕರ ನಿಮಗೆ ದಾನವಾಗಿ ಕೊಡಲ್ಪಟ್ಟವರಾಗಿದ್ದಾರೆ. ಆದದರಿಂದ ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ಪರದೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವವನ್ನು ದಾನದ ಸೇವೆಯಾಗಿ ನಿಮಗೆ ಕೊಟ್ಟಿದ್ದೇನೆ. ಪರಕೀಯನು ಸವಿಾಪಕ್ಕೆ ಬಂದರೆ ಸಾಯಬೇಕು ಎಂದು ಹೇಳಿದನು. ಕರ್ತನು ಮಾತನಾಡಿ ಆರೋನನಿಗೆ--ಇಗೋ, ನಾನು ನಿನಗೆ ಎತ್ತುವ ಅರ್ಪಣೆಗಳ ಅಪ್ಪಣೆಗಳನ್ನು ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪರಿಶುದ್ಧ ಮಾಡುವ ಎಲ್ಲಾದರಲ್ಲಿ ನಾನು ಅವುಗಳನ್ನು ಅಭಿಷೇಕ ಕ್ಕೋಸ್ಕರ ನಿನಗೂ ನಿನ್ನ ಮಕ್ಕಳಿಗೂ ನಿತ್ಯಕಟ್ಟಳೆಯಾಗಿ ಕೊಟ್ಟಿದ್ದೇನೆ.
- Deuteronomy 31:9 ಧರ್ಮೋಪದೇಶಕಾಂಡ 31:9ಇದಲ್ಲದೆ ಮೋಶೆಯು ಈ ನ್ಯಾಯಪ್ರಮಾಣವನ್ನು ಬರೆದು ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವಂಥ ಲೇವಿಯ ಕುಮಾರರಾದ ಯಾಜಕರಿಗೂ ಇಸ್ರಾಯೇಲಿನ ಎಲ್ಲಾ ಹಿರಿಯರಿಗೂ ಒಪ್ಪಿಸಿದನು.
- Numbers 4:2–15 ಅರಣ್ಯಕಾಂಡ 4:2–15ಲೇವಿಯ ಮಕ್ಕಳೊಳಗಿಂದ ಅವರ ತಂದೆಗಳ ಮನೆ ತನದ ಕುಟುಂಬಗಳ ಪ್ರಕಾರವಾಗಿ ಮೂವತ್ತು ವರುಷವಾದವರನ್ನೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ವರನ್ನೂ ಅಂದರೆ ಐವತ್ತು ವರುಷದ ವರೆಗೆ ಸಭೆಯ ಗುಡಾರದಲ್ಲಿ ಕೆಲಸ ಮಾಡುವದಕ್ಕೆ ಸೈನ್ಯದಲ್ಲಿ ಸೇರುವವ ರನ್ನೆಲ್ಲಾ ಎಣಿಸಿ ಕೆಹಾತನ ಮಕ್ಕಳ ಲೆಕ್ಕವನ್ನು ತಕ್ಕೊಳ್ಳಿರಿ. ಸಭೆಯ ಗುಡಾರದಲ್ಲಿ ಕೆಹಾತನ ಮಕ್ಕಳ ಸೇವೆಯು ಅತಿ ಪರಿಶುದ್ಧವಾದದ್ದೇ. ಪಾಳೆಯವು ಹೊರಡು ವಾಗ ಆರೋನನೂ ಅವನ ಮಕ್ಕಳೂ ಒಳಗೆ ಹೋಗಿ ತೆರೆಯನ್ನು ಇಳಿಸಿ ಅದರಿಂದ ಸಾಕ್ಷಿಯ ಮಂಜೂಷವನ್ನು ಮುಚ್ಚಿ ಅದರ ಮೇಲೆ ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹೊದಿಸಬೇಕು. ಅದರ ಮೇಲ್ಭಾಗ ದಲ್ಲಿ ಪೂರ್ಣವಾದ ನೀಲಿ ವಸ್ತ್ರವನ್ನು ಹಾಸಿ ಅದರ ಕೋಲುಗಳನ್ನು ಇಡಬೇಕು. 7 ಸಮ್ಮುಖದ ರೊಟ್ಚಿಯ ಮೇಜಿನ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದರ ಮೇಲೆ ಪಾತ್ರೆ ಚಮಟಿಕೆ ಪಾನದ ಅರ್ಪ ಣೆಯ ಹೂಜಿ ಇವುಗಳನ್ನು ಇಡಬೇಕು. ನಿತ್ಯವಾದ ರೊಟ್ಟಿಯೂ ಅದರ ಮೇಲೆ ಇರಬೇಕು. ಅವೆ ಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ ಅದರ ಕೋಲುಗಳನ್ನು ಇಡಬೇಕು. ಇದ ಲ್ಲದೆ ಅವರು ನೀಲಿ ವಸ್ತ್ರವನ್ನು ತಕ್ಕೊಂಡು ಅದರಿಂದ ದೀಪಸ್ತಂಭವನ್ನೂ ಅದರ ದೀಪಗಳನ್ನೂ ಚಮಟಿಕೆಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಅದಕ್ಕೆ ಸೇವೆ ಮಾಡುವ ಸಕಲ ಎಣ್ಣೆಯ ಪಾತ್ರೆಗಳನ್ನೂ ಮುಚ್ಚಬೇಕು. ಅವರು ಅದನ್ನೂ ಅದರ ಎಲ್ಲಾ ವಸ್ತುಗಳನ್ನೂ ಕಡಲು ಹಂದಿಯ ಚರ್ಮಗಳ ಮುಚ್ಚಳ ದೊಳಗೆ ಇಟ್ಟು ಅಡ್ಡದಂಡೆಯ ಮೇಲೆ ಹಾಕಬೇಕು. ಇದಲ್ಲದೆ ಬಂಗಾರದ ಬಲಿಪೀಠದ ಮೇಲೆ ಅವರು ನೀಲಿ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮವನ್ನು ಮುಚ್ಚಳ ಹೊದಿಸಿ ಅದರ ಕೋಲುಗಳನ್ನು ಇಡಬೇಕು. ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವ ಸೇವೆಯ ಎಲ್ಲಾ ವಸ್ತುಗಳನ್ನು ಅವರು ತಕ್ಕೊಂಡು ನೀಲಿ ವಸ್ತ್ರದಿಂದ ಕಟ್ಟಿ ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಮುಚ್ಚಿ ಅಡ್ಡದಂಡೆಯ ಮೇಲೆ ಹಾಕಬೇಕು. ಬಲಿಪೀಠದ ಬೂದಿಯನ್ನು ತೆಗೆದು ಅದರ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಸೇವೆ ಮಾಡುವ ಎಲ್ಲಾ ವಸ್ತುಗಳನ್ನೂ ಅಗ್ನಿಪಾತ್ರೆಗಳನ್ನೂ ಮುಳ್ಳುಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಬಲಿಪೀಠದ ಎಲ್ಲಾ ವಸ್ತುಗಳನ್ನೂ ಅದರ ಮೇಲಿಟ್ಟು ಕಡಲು ಹಂದಿಯ ಚರ್ಮದ ಹೊದಿಕೆಯನ್ನು ಹಾಕಿ ಅದರ ಕೋಲುಗಳನ್ನು ಇಡಬೇಕು. ಆರೋನನೂ ಅವನ ಕುಮಾರರೂ ಪರಿಶುದ್ಧ ಸ್ಥಳವನ್ನು ಅದರ ಎಲ್ಲಾ ವಸ್ತುಗಳನ್ನು ಮುಚ್ಚಿದಮೇಲೆ ಪಾಳೆಯವು ಹೊರಡುವಾಗ ಕೆಹಾತನ ಕುಮಾರರು ಅದನ್ನು ಹೊತ್ತು ಕೊಂಡು ಹೋಗುವದಕ್ಕೆ ಪ್ರವೇಶಿಸಬೇಕು; ಅವರು ಸಾಯದ ಹಾಗೆ ಪರಿಶುದ್ಧವಾದ ಯಾವದನ್ನೂ ಮುಟ್ಟ ಬಾರದು. ಸಭೆಯ ಗುಡಾರದಲ್ಲಿ ಕೆಹಾತನ ಕುಮಾರರ ಹೊರೆಗಳು ಇವೇ ಆಗಿವೆ.
- Numbers 4:19–20 ಅರಣ್ಯಕಾಂಡ 4:19–20ಆದರೆ ಅವರು ಅತಿ ಪರಿಶುದ್ಧವಾ ದವುಗಳನ್ನು ಸವಿಾಪಿಸುವಾಗ ಅವರು ಸಾಯದೆ ಬದುಕುವ ಹಾಗೆ ಅವರಿಗೆ ಮಾಡಬೇಕಾದದ್ದೇ ನೆಂದರೆ--ಆರೋನನೂ ಅವನ ಕುಮಾರರೂ ಒಳಗೆ ಪ್ರವೇಶಿಸಿ ಅವರಲ್ಲಿ ಒಬ್ಬೊಬ್ಬನನ್ನು ಅವನ ಕೆಲಸಕ್ಕೂ ಅವನ ಹೊರೆಗೂ ನೇಮಿಸಬೇಕು. ಆದರೆ ಅವರು ಸಾಯದ ಹಾಗೆ ಪರಿಶುದ್ಧವಾದವುಗಳನ್ನು ನೋಡಲು ಒಳಗೆ ಹೋಗಬಾರದು.
- Joshua 3:3 ಯೆಹೋಶುವ 3:3ಜನರಿಗೆ ಆಜ್ಞಾಪಿಸಿ--ಯಾಜಕರಾದ ಲೇವಿಯರು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವದನ್ನು ನೋಡುವಾಗ ನೀವು ನಿಮ್ಮ ಸ್ಥಳದಿಂದ ಹೊರಟು ಅದರ ಹಿಂದೆ ಹೋಗಬೇಕು.
- Numbers 8:24–26 ಅರಣ್ಯಕಾಂಡ 8:24–26ಲೇವಿಯರಿಗೆ ಸಂಬಂಧ ಪಟ್ಟದ್ದು ಇದಾಗಿದೆ; ಇಪ್ಪತ್ತೈದು ವರುಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸಭೆಯ ಗುಡಾರದ ಸೇವೆಗಾಗಿ ಒಳಗೆ ಹೋಗುವರು. ಆದರೆ ಐವತ್ತು ವರುಷದವ ರಾಗಿ ಸೇವೆಯನ್ನು ಬಿಟ್ಟುಬಿಟ್ಟವರು ಇನ್ನು ಮೇಲೆ ಸೇವೆಮಾಡಬಾರದು.ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು. ಆದರೆ ಅವರು ಸಭೆಯ ಗುಡಾರದಲ್ಲಿ ಅಪ್ಪಣೆಯನ್ನು ಕೈಕೊಂಡು ತಮ್ಮ ಸಹೋದರರೊಂದಿಗೆ ಕೆಲಸ ಮಾಡಲಿ; ಸೇವೆಯನ್ನು ಮಾತ್ರ ಮಾಡಬಾರದು. ಈ ಪ್ರಕಾರ ನೀನು ಲೇವಿಯ ರಿಗೆ ಕಾಪಾಡಬೇಕಾದವುಗಳ ವಿಷಯದಲ್ಲಿ ಹೀಗೆ ಅವರಿಗೆ ನೇಮಿಸಬೇಕು.
- Numbers 8:13–14 ಅರಣ್ಯಕಾಂಡ 8:13–14ತರುವಾಯ ನೀನು ಲೇವಿಯರನ್ನು ಆರೋನನ ಮುಂದೆಯೂ ಅವನ ಕುಮಾರರ ಮುಂದೆಯೂ ನಿಲ್ಲಿಸಿ ಅವರನ್ನು ಕರ್ತನಿಗೆ ಕಾಣಿಕೆಯಂತೆ ಸಮರ್ಪಿಸಬೇಕು. ಹೀಗೆ ನೀನು ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ಪ್ರತ್ಯೇಕಿಸಬೇಕು; ಲೇವಿಯರು ನನ್ನವರಾಗಿರ ಬೇಕು.
- Jeremiah 33:17–22 ಯೆರೆಮೀಯ 33:17–22ಕರ್ತನು ಹೀಗೆ ಹೇಳು ತ್ತಾನೆ--ದಾವೀದನಿಗೆ ಇಸ್ರಾಯೇಲಿನ ಮನೆಯ ಸಿಂಹಾಸನದಲ್ಲಿ ಕೂತುಕೊಳ್ಳುವ ಮನುಷ್ಯನು ಇಲ್ಲದೆ ಹೋಗುವದಿಲ್ಲ. ಯಾಜಕರಿಗೂ ಲೇವಿಯರಿಗೂ ನಿತ್ಯವಾಗಿ ನನ್ನ ಮುಂದೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಆಹಾರದ ಅರ್ಪಣೆಗಳನ್ನು ಬೆಂಕಿಯಿಂದ ಅರ್ಪಿಸುವವದಕ್ಕೂ ಬಲಿಗಳನ್ನು ಮಾಡುವದಕ್ಕೂ ಮನುಷ್ಯನು ಇಲ್ಲದೆ ಹೋಗುವದಿಲ್ಲ. ಇದಲ್ಲದೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇ ನಂದರೆ--ಕರ್ತನು ಹೀಗೆ ಹೇಳುತ್ತಾನೆ-- ಹಗಲು ರಾತ್ರಿ ತಮ್ಮ ಕಾಲದಲ್ಲಿ ಆಗದ ಹಾಗೆ ಹಗಲಿನ ಸಂಗಡ ನನ್ನ ಒಡಂಬಡಿಕೆಯನ್ನೂ ರಾತ್ರಿಯ ಸಂಗಡ ನನ್ನ ಒಡಂಬಡಿಕೆಯನ್ನೂ ವಿಾರುವದಕ್ಕೆ ನಿಮ್ಮಿಂದಾದರೆ ಆಗ ನಾನು ನನ್ನ ಸೇವಕನಾದ ದಾವೀದನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಅವನ ಸಿಂಹಾಸನದಲ್ಲಿ ಆಳುವ ಮಗನು ಅವನಿಗಿಲ್ಲದ ಹಾಗೆ ಮತ್ತು ನನ್ನ ಸೇವಕರಾಗಿರುವ ಯಾಜಕರಾದ ಲೇವಿಯರ ಸಂಗಡ ಮಾಡಿದ ಒಡಂಬಡಿಕೆಯನ್ನೂ ವಿಾರುವದಕ್ಕೆ ಆದೀತು. ಆಕಾಶದ ಸೈನ್ಯವನ್ನು ಹೇಗೆ ಎಣಿಸಲಿಕ್ಕಾಗದೋ ಸಮುದ್ರದ ಮರಳನ್ನು ಹೇಗೆ ಅಳಿಯಲಿಕ್ಕಾಗದೋ ಹಾಗೆಯೇ ನಾನು ನನ್ನ ಸೇವಕನಾದ ದಾವೀದನ ಸಂತಾನವನೂ ನನಗೆ ಸೇವೆ ಮಾಡುವ ಲೇವಿಯ ರನ್ನೂ ಹೆಚ್ಚಿಸುವೆನು.
- Joshua 6:6 ಯೆಹೋಶುವ 6:6ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ--ನೀವು ಒಡಂಬಡಿ ಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ; ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿ ಗಳನ್ನು ಕರ್ತನ ಮಂಜೂಷದ ಮುಂದೆ ಹಿಡುಕೊಂಡು ಹೋಗಲಿ ಅಂದನು.
- 2 Chronicles 35:3 2 ಪೂರ್ವಕಾಲವೃತ್ತಾಂತ 35:3ಸಮಸ್ತ ಇಸ್ರಾಯೇಲ್ಯರಿಗೆ ಬೋಧಿಸತಕ್ಕ ವರೂ ಕರ್ತನಿಗೆ ಪ್ರತಿಷ್ಠಿತರೂ ಆದ ಲೇವಿಯರಿಗೆಪರಿಶುದ್ಧವಾದ ಮಂಜೂಷವು ನಿಮ್ಮ ಭುಜಗಳ ಮೇಲೆ ಭಾರವಿಲ್ಲದ ಹಾಗೆ ನೀವು ಅದನ್ನು ಇಸ್ರಾ ಯೇಲಿನ ಅರಸನಾಗಿರುವ ದಾವೀದನ ಮಗನಾದ ಸೊಲೊಮೋನನು ಕಟ್ಟಿಸಿದ ಮನೆಯಲ್ಲಿ ಇರಿಸಿ ನಿಮ್ಮ ದೇವರಾದ ಕರ್ತನನ್ನೂ ಆತನ ಜನವಾದ ಇಸ್ರಾಯೇಲ್ಯರನ್ನೂ ಸೇವಿಸಿರಿ.
- Numbers 7:9 ಅರಣ್ಯಕಾಂಡ 7:9ಆದರೆ ಕೆಹಾತ್ಯರ ಕುಮಾರರಿಗೆ ಯಾವದನ್ನೂ ಕೊಡಲಿಲ್ಲ. ಅವರು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋಗುವದೇ ಪರಿಶುದ್ಧ ಸ್ಥಳದಲ್ಲಿ ಅವರಿಗೆ ಸಂಬಂಧಪಟ್ಟ ಸೇವೆಯಾಗಿತ್ತು.
Original words (Hebrew)
- David · H1732דָּוִד Dâvid
- said · H559אָמַר ʼâmar
- carry · H5375נָשָׂא nâsâʼ
- ark · H727אָרוֹן ʼârôwn
- God · H430אֱלֹהִים ʼĕlôhîym
- Levites · H3881לֵוִיִּי Lêvîyîy
- chosen · H977בָּחַר bâchar
- carry · H5375נָשָׂא nâsâʼ
- ark · H727אָרוֹן ʼârôwn
- God · H430אֱלֹהִים ʼĕlôhîym
- minister · H8334שָׁרַת shârath
- for · H5704עַד ʻad
- ever · H5769עוֹלָם ʻôwlâm