1 Chronicles · chapter 17 · verse 12
1 Chronicles 17:12 in Kannada
ಅವನು ನನಗೆ ಮನೆಯನ್ನು ಕಟ್ಟುವನು. ಅವನ ಸಿಂಹಾಸನವನ್ನು ಎಂದೆಂದಿಗೂ ಸ್ಥಿರಮಾಡುವೆನು.
Avanu nanage maneyannu kattuvanu. Avana sinhaasanavannu endendigoo sthiramaaduvenu.
1 Chronicles 17:12 in English
- King James Version (KJV)
- He shall build me an house, and I will stablish his throne for ever.
- World English Bible (WEB)
- He will build me a house, and I will establish his throne forever.
- American Standard Version (ASV)
- He shall build me a house, and I will establish his throne for ever.
- Bible in Basic English (BBE)
- He will be the builder of my house, and I will make the seat of his authority certain for ever.
- Darby Translation (DBY)
- It is he who shall build me a house, and I will establish his throne for ever.
- Webster's Bible (WBS)
- He shall build me a house, and I will establish his throne for ever.
- Young's Literal Translation (YLT)
- he doth build for Me a house, and I have established his throne unto the age;
Read in context
- 10ನಾನು ನಿನ್ನ ಸಮಸ್ತ ಶತ್ರುಗಳನ್ನು ತಗ್ಗಿಸಿದ್ದೇನೆ. ಕರ್ತನಾದ ನಾನು ನಿನಗೆ ಒಂದು ಮನೆಯನ್ನು ಕಟ್ಟುವೆನೆಂದು ನಿನಗೆ ತಿಳಿಸುತ್ತೇನೆ.
- 11ನಿನ್ನ ದಿವಸಗಳು ತೀರಿದ ಮೇಲೆ ನೀನು ನಿನ್ನ ಪಿತೃಗಳ ಬಳಿಗೆ ಸೇರಿದಾಗ ಆಗುವದೇ ನಂದರೆ, ನಾನು ನಿನ್ನ ತರುವಾಯ ನಿನ್ನ ಪುತ್ರರಿಂದಾ ಗುವ ನಿನ್ನ ಸಂತತಿಯನ್ನು ಎಬ್ಬಿಸಿ ಅವನಿಗೆ ರಾಜ್ಯವನ್ನು ಸ್ಥಿರಮಾಡುವೆನು.
- 12ಅವನು ನನಗೆ ಮನೆಯನ್ನು ಕಟ್ಟುವನು. ಅವನ ಸಿಂಹಾಸನವನ್ನು ಎಂದೆಂದಿಗೂ ಸ್ಥಿರಮಾಡುವೆನು.
- 13ನಾನು ಅವನ ತಂದೆಯಾಗಿರು ವೆನು; ಅವನು ನನ್ನ ಮಗನಾಗಿರುವನು. ನಿನಗೆ ಮುಂಚೆ ಇದ್ದವನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ. ಅವನನ್ನು ನನ್ನ ಮನೆಯಲ್ಲಿಯೂ ನನ್ನ ರಾಜ್ಯದಲ್ಲಿಯೂ ಎಂದೆಂದಿಗೂ ನೆಲೆಗೊಳಿಸುವೆನು;
- 14ಅವನ ಸಿಂಹಾಸನವು ಯುಗ ಯುಗಕ್ಕೂ ಸ್ಥಿರವಾಗಿರುವದು.
Cross references
- Isaiah 9:7 ಯೆಶಾಯ 9:7ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
- Daniel 2:44 ದಾನಿಯೇಲನು 2:44ಅರ ಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವನು. ಅದರ ರಾಜ್ಯ ವನ್ನು ಬೇರೆ ಜನರಿಗೆ ಕೊಡದೆ ಆ ರಾಜ್ಯಗಳನ್ನೆಲ್ಲಾ ಧ್ವಂಸ ಮಾಡಿ ಮುಗಿಸಿ ಎಂದೆಂದಿಗೂ ನಿಲ್ಲುವದು.
- 1 Kings 5:5 1 ಅರಸುಗಳು 5:5ಆದದರಿಂದ ಇಗೋ, ನನ್ನ ದೇವರಾದ ಕರ್ತನ ಹೆಸರಿಗೆ ಮನೆಯನ್ನು ಕಟ್ಟಿಸಬೇಕೆಂದಿದ್ದೇನೆ. ಅದರ ವಿಷಯವಾಗಿ ಕರ್ತನು ನನ್ನ ತಂದೆಯಾದ ದಾವೀದನಿಗೆ--ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ನಾನು ಇರಿಸುವ ನಿನ್ನ ಮಗನೇ ನನ್ನ ಹೆಸರಿಗೆ ಮನೆಯನ್ನು ಕಟ್ಟಿಸುವನು ಎಂದು ಹೇಳಿದ್ದಾನಲ್ಲವೇ.
- Revelation 11:15 ಪ್ರಕಟನೆ 11:15ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ-- ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು.
- Acts 7:47–48 ಅಪೊಸ್ತಲರ ಕೃತ್ಯಗಳು 7:47–48ಆದರೆ ಸೊಲೊಮೋನನು ಆತನಿಗೋಸ್ಕರ ಮನೆಯನ್ನು ಕಟ್ಟಿಸಿದನು. ಆದರೂ ಮಹೋನ್ನತನು ಕೈಯಿಂದ ಕಟ್ಟಿದ ಆಲಯಗಳಲ್ಲಿ ವಾಸಮಾಡುವಾತನಲ್ಲ. ಯಾಕಂದರೆ--
- 1 Chronicles 22:9–10 1 ಪೂರ್ವಕಾಲವೃತ್ತಾಂತ 22:9–10ಇಗೋ, ಸಮಾ ಧಾನವುಳ್ಳ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು; ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ಸಮಾಧಾನವನ್ನು ಕೊಡುವೆನು. ಅವ ನಿಗೆ ಸೊಲೊಮೋನನೆಂಬ ಹೆಸರಾಗುವದು; ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಸಮಾಧಾನ ವನ್ನೂ ವಿಶ್ರಾಂತಿಯನ್ನೂ ಕೊಡುವೆನು. ಅವನು ನನ್ನ ನಾಮಕ್ಕೆ ಮನೆಯನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು, ನಾನು ಅವನಿಗೆ ತಂದೆ ಯಾಗಿರುವೆನು; ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು.
- 1 Chronicles 28:6–10 1 ಪೂರ್ವಕಾಲವೃತ್ತಾಂತ 28:6–10ಆತನು ನನ್ನ ಸಂಗಡ--ನಿನ್ನ ಮಗನಾದ ಸೊಲೊಮೋನನು ತಾನೇನನ್ನ ಮನೆಯನ್ನೂ ಅಂಗಳಗಳನ್ನೂ ಕಟ್ಟಿಸುವನು; ಅವನನ್ನು ನನಗೆ ಮಗನಾಗಿರಲು ಆದುಕೊಂಡೆನು. ನಾನು ಅವನಿಗೆ ತಂದೆಯಾಗಿರುವೆನು. ಇದಲ್ಲದೆ ಈಗಿನಂತೆ ನನ್ನ ಆಜ್ಞೆಗಳನ್ನೂ ನ್ಯಾಯಗಳನ್ನೂ ಅವನು ನಡಿಸಲು ದೃಢವಾಗಿದ್ದರೆ ಅವನ ರಾಜ್ಯವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು ಅಂದನು. ಆದ ದರಿಂದ ನೀವು ಈ ಉತ್ತಮವಾದ ದೇಶವನ್ನು ಸ್ವಾಧೀನ ಮಾಡಿಕೊಂಡು ಅದನ್ನು ನಿರಂತರದಲ್ಲಿ ನಿಮ್ಮ ತರು ವಾಯ ಇರುವ ನಿಮ್ಮ ಮಕ್ಕಳಿಗೆ ಬಾಧ್ಯತೆಯಾಗಿ ಕೊಡುವ ಹಾಗೆ ಕರ್ತನ ಸಭೆಯಾದ ಸಮಸ್ತ ಇಸ್ರಾ ಯೇಲಿನ ಸಮ್ಮುಖದಲ್ಲಿಯೂ ನಮ್ಮ ದೇವರ ಕೇಳುವಿಕೆ ಯಲ್ಲಿಯೂ ನಿಮ್ಮ ದೇವರಾದ ಕರ್ತನ ಆಜ್ಞೆಗಳನ್ನೆಲ್ಲಾ ಹುಡುಕಿ ಕೈಕೊಳ್ಳಿರಿ. ಇದಲ್ಲದೆ ನನ್ನ ಮಗನಾದ ಸೊಲೊಮೋನನೇ, ನೀನು ನಿನ್ನ ತಂದೆಯ ದೇವ ರನ್ನು ತಿಳಿದು ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸು. ಕರ್ತನು ಸಕಲ ಹೃದಯಗಳನ್ನು ಶೋಧಿಸಿ ಯೋಚನೆಗಳ ಕಲ್ಪನೆಯ ನ್ನೆಲ್ಲಾ ತಿಳಿದಿದ್ದಾನೆ. ನೀನು ಆತನನ್ನು ಹುಡುಕಿದರೆ ಆತನು ನಿನಗೆ ಸಿಕ್ಕುವನು; ನೀನು ಆತನನ್ನು ಬಿಟ್ಟು ಬಿಟ್ಟರೆ ಆತನು ನಿನ್ನನ್ನು ಎಂದೆಂದಿಗೂ ತೊರೆದುಬಿಡು ವನು. ಆದದರಿಂದ ಜಾಗ್ರತೆಯಾಗಿರು; ಯಾಕಂದರೆ ಕರ್ತನು ಪರಿಶುದ್ಧ ಸ್ಥಾನಕ್ಕೋಸ್ಕರ ಮನೆಯನ್ನು ಕಟ್ಟಿಸು ವದಕ್ಕೆ ನಿನ್ನನ್ನು ಆದುಕೊಂಡಿದ್ದಾನೆ; ನೀನು ದೃಢವಾ ಗಿದ್ದು ಅದನ್ನು ಮಾಡು ಅಂದನು.
- Psalm 89:36–37 ಕೀರ್ತನೆಗಳು 89:36–37ಅವನ ಸಂತತಿಯು ಯುಗ ಯುಗಕ್ಕೂ ಅವನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವದು. ಚಂದ್ರನ ಹಾಗೆ ಅದು ಯುಗಯುಗಕ್ಕೂ, ಸ್ಥಿರವಾಗಿರುವದು; ಪರಲೋಕದಲ್ಲಿ ರುವ ಸಾಕ್ಷಿಯ ಹಾಗೆ ನಂಬಿಕೆ ಯುಳ್ಳದ್ದಾಗಿರುವದು ಸೆಲಾ.
- Ezra 5:11 ಎಜ್ರನು 5:11ಅವರು ನಮಗೆ ಕೊಟ್ಟ ಪ್ರತ್ಯುತ್ತರವೇನಂದರೆನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರಾಗಿದ್ದೇವೆ. ಅನೇಕ ವರುಷಗಳ ಹಿಂದೆ ಇಸ್ರಾ ಯೇಲಿನಲ್ಲಿದ್ದ ಒಬ್ಬ ಮಹಾ ಅರಸನು ಕಟ್ಟಿಸಿ ತೀರಿಸಿದ್ದ ಆಲಯವನ್ನು ನಾವು ಕಟ್ಟಿಸುತ್ತೇವೆ.
- Zechariah 6:12–13 ಜೆಕರ್ಯ 6:12–13ಅವನಿಗೆ ಹೇಳತಕ್ಕದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ಚಿಗುರೆಂದು ಹೆಸರುಳ್ಳ ಮನುಷ್ಯನು, ಅವನು ತನ್ನ ಸ್ಥಳದೊಳಗಿಂದ ಚಿಗುರು ವನು, ಆತನೇ ಕರ್ತನ ದೇವಾಲಯವನ್ನು ಕಟ್ಟುವನು. ಹೌದು, ಆತನು ಕರ್ತನ ದೇವಾಲಯವನ್ನು ಕಟ್ಟು ವನು; ಆತನು ಮಹಿಮೆಯನ್ನು ಧರಿಸುವನು; ಕೂತು ಕೊಂಡು ತನ್ನ ಸಿಂಹಾಸನದಲ್ಲಿ ಆಳುವನು, ತನ್ನ ಸಿಂಹಾಸನದಲ್ಲಿ ಯಾಜಕನಾಗಿರುವನು; ಸಮಾಧಾನದ ಆಲೋಚನೆ ಅವರಿಬ್ಬರೊಳಗೆ ಇರುವದು.
- Psalm 89:4 ಕೀರ್ತನೆಗಳು 89:4ಎಂದೆಂದಿಗೂ ನಿನ್ನ ಸಂತತಿಯನ್ನು ಸ್ಥಿರ ಪಡಿಸುವೆನು; ತಲತಲಾಂತರಕ್ಕೂ ನಿನ್ನ ಸಿಂಹಾಸನವನ್ನು ಕಟ್ಟುವೆನು ಸೆಲಾ.
- John 2:19–21 ಯೋಹಾನನು 2:19–21ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ದೇವಾಲ ಯವನ್ನು ಕೆಡವಿದರೆ ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು ಅಂದನು. ಅದಕ್ಕೆ ಯೆಹೂದ್ಯರು-- ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷಗಳು ಹಿಡಿದವು; ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವಿಯೋ ಅಂದರು. ಆದರೆ ಆತನು ತನ್ನ ದೇಹವೆಂಬ ಆಲಯವನ್ನು ಕುರಿತು ಹೇಳಿದನು.