1 Chronicles · chapter 17 · verse 10
1 Chronicles 17:10 in Kannada
ನಾನು ನಿನ್ನ ಸಮಸ್ತ ಶತ್ರುಗಳನ್ನು ತಗ್ಗಿಸಿದ್ದೇನೆ. ಕರ್ತನಾದ ನಾನು ನಿನಗೆ ಒಂದು ಮನೆಯನ್ನು ಕಟ್ಟುವೆನೆಂದು ನಿನಗೆ ತಿಳಿಸುತ್ತೇನೆ.
Naanu ninna samasta shatrugalannu taggisiddene. Kartanaada naanu ninage ondu maneyannu kattuvenendu ninage tilisuttene.
1 Chronicles 17:10 in English
- King James Version (KJV)
- And since the time that I commanded judges [to be] over my people Israel. Moreover I will subdue all thine enemies. Furthermore I tell thee that the LORD will build thee an house.
- World English Bible (WEB)
- and from the day that I commanded judges to be over my people Israel. I will subdue all your enemies. Moreover I tell you that the LORD will build you a house.
- American Standard Version (ASV)
- and [as] from the day that I commanded judges to be over my people Israel; and I will subdue all thine enemies. Moreover I tell thee that Jehovah will build thee a house.
- Bible in Basic English (BBE)
- From the time when I put judges over my people Israel; and I will overcome all those who are against you; and I will make you great and the head of a line of kings.
- Darby Translation (DBY)
- and since the days that I commanded judges to be over my people Israel. And I will subdue all thine enemies; and I tell thee that Jehovah will build thee a house.
- Webster's Bible (WBS)
- And since the time that I commanded judges [to be] over my people Israel. Moreover, I will subdue all thy enemies. Furthermore, I tell thee that the LORD will build thee a house.
- Young's Literal Translation (YLT)
- yea, even from the days that I appointed judges over My people Israel. 'And I have humbled all thine enemies, and I declare to thee that a house doth Jehovah build for thee,
Read in context
- 8ನೀನು ಎಲ್ಲಿಗೆ ಹೋದರೂ ಅಲ್ಲಿ ನಿನ್ನ ಸಂಗಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಸಂಹರಿಸಿ ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ಹೆಸರನ್ನು ನಿನಗೆ ಉಂಟುಮಾಡಿದೆನು.
- 9ಇದಲ್ಲದೆ ನಾನು ನನ್ನ ಜನರಾದ ಇಸ್ರಾಯೇಲ್ಯರಿಗೆ ಒಂದು ಸ್ಥಳವನ್ನು ನೇಮಿಸಿ ಅವರು ಇನ್ನು ಮೇಲೆ ಚದರದೆ ಸ್ವಸ್ಥಳದಲ್ಲಿ ವಾಸಮಾಡುವ ಹಾಗೆ ಅವರನ್ನು ನೆಡುವೆನು. ಪೂರ್ವದ ಹಾಗೆಯೂ ನನ್ನ ಜನರಾದ ಇಸ್ರಾಯೇ ಲಿನ ಮೇಲೆ ನ್ಯಾಯಾಧಿಪತಿಗಳನ್ನು ನೇಮಿಸಿದ ದಿವಸ ದಿಂದಾದ ಹಾಗೆಯೂ ದುಷ್ಟತನದ ಮಕ್ಕಳು ಇನ್ನು ಮೇಲೆ ಅವರನ್ನು ಕುಂದಿಸದೆ ಇರುವರು.
- 10ನಾನು ನಿನ್ನ ಸಮಸ್ತ ಶತ್ರುಗಳನ್ನು ತಗ್ಗಿಸಿದ್ದೇನೆ. ಕರ್ತನಾದ ನಾನು ನಿನಗೆ ಒಂದು ಮನೆಯನ್ನು ಕಟ್ಟುವೆನೆಂದು ನಿನಗೆ ತಿಳಿಸುತ್ತೇನೆ.
- 11ನಿನ್ನ ದಿವಸಗಳು ತೀರಿದ ಮೇಲೆ ನೀನು ನಿನ್ನ ಪಿತೃಗಳ ಬಳಿಗೆ ಸೇರಿದಾಗ ಆಗುವದೇ ನಂದರೆ, ನಾನು ನಿನ್ನ ತರುವಾಯ ನಿನ್ನ ಪುತ್ರರಿಂದಾ ಗುವ ನಿನ್ನ ಸಂತತಿಯನ್ನು ಎಬ್ಬಿಸಿ ಅವನಿಗೆ ರಾಜ್ಯವನ್ನು ಸ್ಥಿರಮಾಡುವೆನು.
- 12ಅವನು ನನಗೆ ಮನೆಯನ್ನು ಕಟ್ಟುವನು. ಅವನ ಸಿಂಹಾಸನವನ್ನು ಎಂದೆಂದಿಗೂ ಸ್ಥಿರಮಾಡುವೆನು.
Cross references
- 2 Samuel 7:11 2 ಸಮುವೇಲನು 7:11ನಿನ್ನನ್ನು ನಿನ್ನ ಎಲ್ಲಾ ಶತ್ರುಗಳಿಗೆ ತಪ್ಪಿಸಿ ನಿನಗೆ ವಿಶ್ರಾಂತಿಯನ್ನು ಉಂಟುಮಾಡಿದೆನು.
- Psalm 89:23 ಕೀರ್ತನೆಗಳು 89:23ಇದ ಲ್ಲದೆ ಅವನ ಮುಂದೆ ವೈರಿಗಳನ್ನು ಹೊಡೆದು ಬಿಡು ವೆನು; ಅವನ ಹಗೆಯವರನ್ನು ಸಂಕಟಪಡಿಸುವೆನು.
- Psalm 18:40–50 ಕೀರ್ತನೆಗಳು 18:40–50ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ. ಅವರು ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇದ್ದಿಲ್ಲ. ಕರ್ತನಿಗೂ ಮೊರೆ ಇಟ್ಟರು, ಆದರೆ ಅವರಿಗೆ ಆತನು ಉತ್ತರ ಕೊಡ ಲಿಲ್ಲ. ಗಾಳಿಯ ಮುಂದಿನ ಧೂಳಿನಹಾಗೆ ಅವ ರನ್ನು ಹೊಡೆದು ಪುಡಿಪುಡಿ ಮಾಡಿದನು; ಬೀದಿಯ ಕೆಸರಿನಹಾಗೆ ಅವರನ್ನು ಹೊರಗೆ ಚೆಲ್ಲಿಬಿಟ್ಟನು. ನೀನು ಜನರ ವಿವಾದಗಳಿಂದ ನನ್ನನ್ನು ತಪ್ಪಿಸಿದ್ದೀ; ಅನ್ಯ ಜನಾಂಗಗಳ ತಲೆಯಾಗಿ ನನ್ನನ್ನು ಮಾಡಿದ್ದೀ; ನಾನ ರಿಯದ ಜನರು ನನ್ನನ್ನು ಸೇವಿಸುವರು. ನನ್ನ ಮಾತನ್ನು ಕೇಳಿದೊಡನೆ ಅವರು ನನಗೆ ವಿಧೇಯ ರಾಗುವರು. ಪರಕೀಯರು ನನಗೆ ಅಧೀನರಾ ಗುವರು ಮತ್ತು ಅವರು ಬಾಡಿಹೋಗುವರು; ತಮ್ಮ ದುರ್ಗಗಳೊಳಗಿಂದ ನಡುಗುತ್ತಾ ಬರುವರು. ಕರ್ತನು ಜೀವಿತನಾಗಿದ್ದಾನೆ; ನನ್ನ ಬಂಡೆ ಯಾದಾತನು ಸ್ತುತಿಹೊಂದಲಿ; ನನ್ನ ರಕ್ಷಣೆಯ ದೇವರು ಘನಹೊಂದಲಿ. ನನಗೋಸ್ಕರ ಮುಯ್ಯಿಗೆ ಮುಯ್ಯಿತೀರಿಸುವಾತನೂ ಜನರನ್ನು ನನ್ನ ಕೆಳಗೆ ಅಧೀನಮಾಡುವಾತನೂ ದೇವರು ತಾನೇ. ನನ್ನ ಶತ್ರುಗಳಿಂದ ನನ್ನನ್ನು ತಪ್ಪಿಸುವನು; ಹೌದು, ನೀನು ನನ್ನ ಎದುರಾಳಿಗಳಿಂದ ತಪ್ಪಿಸಿ ನನ್ನನ್ನು ಮೇಲೆ ಎತ್ತುತ್ತೀ; ಬಲಾತ್ಕಾರ ಮಾಡುವವನಿಂದ ನನ್ನನ್ನು ಬಿಡಿಸಿದ್ದೀ. ಆದ್ದರಿಂದ ಓ ಕರ್ತನೇ, ಅನ್ಯಜನಾಂಗ ಗಳಲ್ಲಿ ನಿನಗೆ ಉಪಕಾರಸ್ತುತಿ ಮಾಡುತ್ತೇನೆ. ನಿನ್ನನ್ನು ಕೊಂಡಾಡಿ ನಿನ್ನ ಹೆಸರನ್ನು ಕೀರ್ತಿಸುವೆನು.ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ. ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ.
- Judges 4:3 ನ್ಯಾಯಸ್ಥಾಪಕರು 4:3ಆಗ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಕೂಗಿದರು. ಯಾಕಂದರೆ ಅವನಿಗೆ ಒಂಭೈನೂರು ಕಬ್ಬಿಣದ ರಥಗಳಿ ದ್ದವು; ಅವನು ಇಸ್ರಾಯೇಲ್ ಮಕ್ಕಳನ್ನು ಇಪ್ಪತ್ತು ವರುಷ ಬಲವಾಗಿ ಬಾಧೆಪಡಿಸಿದನು.
- Judges 2:14–18 ನ್ಯಾಯಸ್ಥಾಪಕರು 2:14–18ಆದದರಿಂದ ಕರ್ತನು ಇಸ್ರಾಯೇಲಿಗೆ ವಿರೋಧ ವಾಗಿ ಉರಿಗೊಂಡು ಅವರನ್ನು ಕೊಳ್ಳೆಹೊಡೆಯುವ ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ತರುವಾಯ ಅವರು ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟನು. ಕರ್ತನು ಹೇಳಿದ ಹಾಗೆಯೂ ಕರ್ತನು ಅವರಿಗೆ ಆಣೆಇಟ್ಟ ಹಾಗೆಯೂ ಅವರು ಎಲ್ಲಿ ಹೋದರೂ ಅಲ್ಲಿ ಕೇಡು ಆಗುವದಕ್ಕೆ ಕರ್ತನ ಕೈ ಅವರ ಮೇಲೆ ಇತ್ತು. ಆದಾಗ್ಯೂ ಕರ್ತನು ಅವರನ್ನು ಕೊಳ್ಳೆ ಹೊಡೆಯುವವರ ಕೈಯೊಳಗಿಂದ ಬಿಡಿಸಿದ ನ್ಯಾಯಾಧಿಪತಿಗಳನ್ನು ಎಬ್ಬಿಸಿದರೂ; ಅವರು ತಮ್ಮ ನ್ಯಾಯಾಧಿಪತಿಗಳ ಮಾತನ್ನು ಕೇಳದೆ ಅನ್ಯದೇವರುಗಳ ಹಿಂದೆ ಜಾರತ್ವಮಾಡಿ ಅವುಗಳಿಗೆ ಅಡ್ಡಬಿದ್ದು ತಮ್ಮ ತಂದೆಗಳು ಕರ್ತನ ಆಜ್ಞೆಗಳನ್ನು ಕೇಳಿ ನಡೆದ ಮಾರ್ಗವನ್ನು ಶೀಘ್ರವಾಗಿ ತೊರೆದು ಬಿಟ್ಟರು; ಅವರು ಮಾಡಿದ ಪ್ರಕಾರ ಮಾಡಲಿಲ್ಲ. ಕರ್ತನು ಅವರಿಗೆ ನ್ಯಾಯಾಧಿಪತಿಗಳನ್ನು ಎಬ್ಬಿಸಿ ಆತನು ನ್ಯಾಯಾಧಿಪತಿಯ ಸಂಗಡ ಇದ್ದು ಆ ನ್ಯಾಯಾಧಿಪತಿಯ ದಿನಗಳೆಲ್ಲಾ ಅವರನ್ನು ಅವರ ಶತ್ರುಗಳ ಕೈಯಿಂದ ರಕ್ಷಿಸುತ್ತಿದ್ದನು. ಯಾಕಂದರೆ ಅವರು ತಮ್ಮನ್ನು ಬಾಧಿಸಿ ಶ್ರಮೆಪಡಿಸುವವರ ನಿಮಿತ್ತ ಗೋಳಾಡುವದರಿಂದ ಕರ್ತನು ಪಶ್ಚಾತ್ತಾಪಪಟ್ಟನು.
- 1 Corinthians 15:25 1 ಕೊರಿಂಥದವರಿಗೆ 15:25ಯಾಕಂದರೆ ತಾನು ಎಲ್ಲಾ ವಿರೋಧಿ ಗಳನ್ನು ತನ್ನ ಪಾದಗಳ ಕೆಳಗೆ ಹಾಕುವ ತನಕ ಆತನು ಆಳುವದು ಅವಶ್ಯ.
- Exodus 1:21 ವಿಮೋಚನಕಾಂಡ 1:21ಸೂಲಗಿತ್ತಿಯರು ದೇವರಿಗೆ ಭಯ ಪಟ್ಟದ್ದರಿಂದ ಆತನು ಅವರಿಗೆ ವಂಶಾಭಿವೃದ್ಧಿಯ ನ್ನುಂಟುಮಾಡಿದನು.ಆದರೆ ಫರೋಹನು ತನ್ನ ಜನರಿಗೆಲ್ಲಾ--(ಇಬ್ರಿಯರಿಗೆ) ಹುಟ್ಟುವ ಗಂಡು ಮಕ್ಕಳನ್ನೆಲ್ಲಾ ನದಿಯಲ್ಲಿ ಹಾಕಬೇಕು. ಹೆಣ್ಣು ಮಕ್ಕಳ ನ್ನೆಲ್ಲಾ ಜೀವದಿಂದ ಉಳಿಸಬೇಕು ಎಂದು ಅಪ್ಪಣೆ ಕೊಟ್ಟನು.
- Psalm 21:8–9 ಕೀರ್ತನೆಗಳು 21:8–9ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು. ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.
- 1 Samuel 13:19–20 1 ಸಮುವೇಲನು 13:19–20ಆದರೆ ಇಬ್ರಿಯರು ತಮಗೆ ಕತ್ತಿಯನ್ನಾದರೂ ಈಟಿಯನ್ನಾ ದರೂ ಮಾಡಿಕೊಳ್ಳಬಾರದು ಎಂದು ಫಿಲಿಷ್ಟಿಯರು ಹೇಳಿಕೊಂಡದ್ದರಿಂದ ಆಗ ಇಸ್ರಾಯೇಲ್ ದೇಶದಲ್ಲಿ ಒಬ್ಬ ಕಮ್ಮಾರನಾದರೂ ಸಿಕ್ಕಲಿಲ್ಲ. ಆದದರಿಂದ ಇಸ್ರಾಯೇಲ್ಲೆಲ್ಲಾ ತಮ್ಮ ತಮ್ಮ ನೇಗಲಿನ ಗುಳಗಳನ್ನೂ ಸಲಿಕೆಗಳನ್ನೂ ಕೊಡಲಿಗಳನ್ನೂ ಗುದ್ದಲಿಗಳನ್ನೂ ಮೊನೆ ಮಾಡುವದಕ್ಕೆ ಫಿಲಿಷ್ಟಿಯರ ಬಳಿಗೆ ಹೋಗಬೇಕಾ ಗಿತ್ತು.
- Psalm 127:1 ಕೀರ್ತನೆಗಳು 127:1ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ.
- Judges 3:8 ನ್ಯಾಯಸ್ಥಾಪಕರು 3:8ಆದದರಿಂದ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪಗೊಂಡು ಅವರನ್ನು ಮೆಸೊಪೋತಾಮ್ಯದ ಅರಸನಾದ ಕೂಷನ್ ರಿಷಾತಯಿಮ್ ಕೈಗೆ ಮಾರಿಬಿಟ್ಟನು. ಇಸ್ರಾಯೇಲ್ ಮಕ್ಕಳು ಕೂಷನ್ರಿಷಾತಯಿಮ್ನ್ನು ಎಂಟು ವರುಷ ಸೇವಿಸಿದರು.
- Psalm 110:1 ಕೀರ್ತನೆಗಳು 110:1ಕರ್ತನು ನನ್ನ ಕರ್ತನಿಗೆ ಹೇಳಿದ್ದೇನೆಂದರೆ ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲ ಪಾರ್ಶ್ವದಲ್ಲಿ ಕುಳಿತುಕೋ,