1 Chronicles · chapter 18 · verse 8
1 Chronicles 18:8 in Kannada
ಇದಲ್ಲದೆ ಹದರೆಜರನ ಪಟ್ಟಣಗಳಾದ ಟಭತಿನಿಂದಲೂ ಕೂನಿನಿಂದಲೂ ದಾವೀದನು ಅತ್ಯಧಿಕವಾಗಿ ತಾಮ್ರವನ್ನು ತಂದನು. ಅದರಿಂದ ಸೊಲೊಮೋನನು ತಾಮ್ರದ ಸಮುದ್ರ ವನ್ನೂ ಸ್ತಂಭಗಳನ್ನೂ ತಾಮ್ರದ ಪಾತ್ರೆಗಳನ್ನೂ ಮಾಡಿಸಿದನು.
Idallade hadarejarana pattanagalaada tabhatinindaloo kooninindaloo daaveedanu atyadhikavaagi taamravannu tandanu. Adarinda solomonanu taamrada samudra vannoo stambhagalannoo taamrada paatregalannoo maadisidanu.
1 Chronicles 18:8 in English
- King James Version (KJV)
- Likewise from Tibhath, and from Chun, cities of Hadarezer, brought David very much brass, wherewith Solomon made the brasen sea, and the pillars, and the vessels of brass.
- World English Bible (WEB)
- From Tibhath and from Cun, cities of Hadadezer, David took very much bronze, with which Solomon made the bronze sea, the pillars, and the vessels of bronze.
- American Standard Version (ASV)
- And from Tibhath and from Cun, cities of Hadarezer, David took very much brass, wherewith Solomon made the brazen sea, and the pillars, and the vessels of brass.
- Bible in Basic English (BBE)
- And from Tibhath and from Cun, towns of Hadadezer, David took a great store of brass, of which Solomon made the great brass water-vessel and the brass pillars and vessels.
- Darby Translation (DBY)
- And from Tibhath, and from Chun, cities of Hadarezer, David took very much brass, of which Solomon made the brazen sea, and the pillars, and the vessels of brass.
- Webster's Bible (WBS)
- Likewise from Tibhath, and from Chun, cities of Hadarezer, David brought very much brass, with which Solomon made the brazen sea, and the pillars, and the vessels of brass.
- Young's Literal Translation (YLT)
- and from Tibhath, and from Chun, cities of Hadarezer, hath David taken very much brass; with it hath Solomon made the brazen sea, and the pillars, and the vessels of brass.
Read in context
- 6ದಾವೀದನು ದಮಸ್ಕದ ಅರಾಮಿನಲ್ಲಿ ಠಾಣಗಳನ್ನು ಇಟ್ಟನು. ಅರಾಮ್ಯರು ದಾವೀದನಿಗೆ ಸೇವಕರಾಗಿ ಕಪ್ಪ ವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ರಕ್ಷಿಸಿದನು.
- 7ಆಗ ದಾವೀದನು ಹದರೆಜರನ ಸೇವಕರಿಗುಂಟಾದ ಬಂಗಾ ರದ ಗುರಾಣಿಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು.
- 8ಇದಲ್ಲದೆ ಹದರೆಜರನ ಪಟ್ಟಣಗಳಾದ ಟಭತಿನಿಂದಲೂ ಕೂನಿನಿಂದಲೂ ದಾವೀದನು ಅತ್ಯಧಿಕವಾಗಿ ತಾಮ್ರವನ್ನು ತಂದನು. ಅದರಿಂದ ಸೊಲೊಮೋನನು ತಾಮ್ರದ ಸಮುದ್ರ ವನ್ನೂ ಸ್ತಂಭಗಳನ್ನೂ ತಾಮ್ರದ ಪಾತ್ರೆಗಳನ್ನೂ ಮಾಡಿಸಿದನು.
- 9ಆದರೆ ಹಮಾತಿನ ಅರಸನಾದ ತೋವನಿಗೆ ಹದ ರೆಜರನ ಸಂಗಡ ಯುದ್ಧ ಉಂಟಾಗಿದ್ದದರಿಂದ ದಾವೀದನು ಹದರೆಜರನ ಸಮಸ್ತ ಸೈನ್ಯವನ್ನು ಹೊಡೆದ ವರ್ತಮಾನವನ್ನು ತೋವಿಗೆ ಮುಟ್ಟಿದಾಗ
- 10ಅರಸ ನಾದ ದಾವೀದನ ಕ್ಷೇಮ ಸಮಾಚಾರವನ್ನು ವಿಚಾರಿ ಸಲೂ ಹದರೆಜರನ ಸಂಗಡ ಯುದ್ಧ ಮಾಡಿ ಅವನನ್ನು ಹೊಡೆದದ್ದಕ್ಕೋಸ್ಕರ ಅವನನ್ನು ಆಶೀರ್ವದಿಸಲೂ ತೋವನು ತನ್ನ ಕುಮಾರನಾದ ಹದೋರಾಮನನ್ನು ಎಲ್ಲಾ ತರವಾದ ಬೆಳ್ಳಿ ಬಂಗಾರ ತಾಮ್ರದ ಪಾತ್ರೆಗಳು ಸಹಿತವಾಗಿ ಅವನ ಬಳಿಗೆ ಕಳುಹಿಸಿದನು.
Cross references
- 2 Samuel 8:8 2 ಸಮುವೇಲನು 8:8ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯ ಧಿಕವಾಗಿ ಹಿತ್ತಾಳೆಯನ್ನು ತೆಗೆದುಕೊಂಡು ಬಂದನು.
- 2 Chronicles 4:12–18 2 ಪೂರ್ವಕಾಲವೃತ್ತಾಂತ 4:12–18ಎರಡು ಸ್ತಂಭಗಳನ್ನೂ ಎರಡು ಸ್ತಂಭ ಗಳ ಮೇಲಿರುವ ಬೋದಿಗೆಗಳನ್ನೂ ಬೋದಿಗೆಗಳ ಮೇಲೆ ಮುಚ್ಚುವ ಎರಡು ಜಾಲರು ಹಣಿತೆಗಳನ್ನೂ ಕಂಬಗಳ ಮೇಲಿರುವ ಎರಡು ಬೋದಿಗೆಗಳನ್ನೂ ಮುಚ್ಚತಕ್ಕದ್ದಾದ ಒಂದೊಂದು ಜಾಲರು ಹೆಣಿತಕ್ಕೆ ಎರಡು ಸಾಲು ದಾಳಿಂಬರ ಕಾಯಿಗಳನ್ನೂ ಜಾಲರು ಹಣಿತೆಗಳಿಗೆ ನಾನೂರು ದಾಳಿಂಬರ ಕಾಯಿಗಳನ್ನೂ ಮಾಡಿದನು. ಇದಲ್ಲದೆ ಅವನು ಆಧಾರಗಳನ್ನೂ ಅದರ ಮೇಲೆ ಇರುವ ತೊಟ್ಟಿಗಳನ್ನೂ ಮಾಡಿದನು. ಒಂದು ಸಮುದ್ರವನ್ನೂ ಅದರ ಕೆಳಗೆ ಇರುವ ಹನ್ನೆರಡು ಎತ್ತುಗಳನ್ನೂ ಪಾತ್ರೆಗಳನ್ನೂ ಸಲಿಕೆಗಳನ್ನೂ ಕೊಂಡಿಗಳನ್ನೂ ಅವುಗಳ ಎಲ್ಲಾ ಸಾಮಾನುಗಳನ್ನೂ ಅರಸನಾದ ಸೊಲೊಮೋನನಿಗೆ ಅವನ ತಂದೆಯಾದ ಹೂರಾಮನು ಹೊಳೆಯುವ ತಾಮ್ರದಿಂದ ಕರ್ತನ ಆಲಯಕ್ಕೋಸ್ಕರ ಮಾಡಿದನು. ಯೊರ್ದನಿನ ತಗ್ಗಿ ನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ನಡುವೆ ಇರುವ ಜೇಡಿಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯಿಸಿದನು. ಹೀಗೆ ಸೊಲೊಮೋನನು ಈ ಸಾಮಾನುಗಳನ್ನೆಲ್ಲಾ ಬಹಳವಾಗಿ ಮಾಡಿಸಿದನು.ಆ ತಾಮ್ರದ ತೂಕ ತಿಳಿಯಕೂಡದಷ್ಟಾಗಿತ್ತು.
- 1 Kings 7:15–47 1 ಅರಸುಗಳು 7:15–47ಅವನು ಎರಡು ತಾಮ್ರದ ಸ್ತಂಭಗಳನ್ನು ಮಾಡಿ ದನು. ಒಂದೊಂದು ಸ್ತಂಭ ಹದಿನೆಂಟು ಮೊಳ ಉದ್ದ; ಒಂದೊಂದು ಸ್ತಂಭದ ಸುತ್ತಳತೆ ಹನ್ನೆರಡು ಮೊಳ ಇತ್ತು. ಆ ಸ್ತಂಭಗಳ ತಲೆಯಲ್ಲಿ ಇರಿಸಲು ತಾಮ್ರ ದಿಂದ ಎರಕ ಹೊಯ್ಯಲ್ಪಟ್ಟ ಎರಡು ಕುಂಭಗಳನ್ನು ಮಾಡಿದನು. ಒಂದೊಂದು ಕುಂಭವು ಐದು ಮೊಳ ಎತ್ತರವಾಗಿತ್ತು; ಸ್ತಂಭಗಳ ಕೊನೆಯಲ್ಲಿ ಇರುವ ಕುಂಭ ಗಳಿಗೆ ಜಾಲರಿನ ಹಾಗೆ ಇರುವ ಹಣತೆಗಳೂ ಸರ ಪಣಿಗಳ ಹಾಗಿರುವ ಗೊಂಡೆಗಳೂ ಇದ್ದವು. ಅವು ಒಂದೊಂದು ಕಂಭಕ್ಕೆ ಏಳೇಳು ಇದ್ದವು. ಸ್ತಂಭ ಗಳಿಗೆ ಇನ್ನೂ ಮಾಡಿದ್ದು ಹೇಗಂದರೆ, ಕೊನೆಯಲ್ಲಿ ರುವ ಕುಂಭಗಳನ್ನು ಮುಚ್ಚುವ ಹಾಗೆ ಕುಂಭಗಳೊಳಗೆ ಒಂದೊಂದರಲ್ಲಿ ಜಾಲರಿ ಕೆಲಸದ ಮೇಲೆ ಸುತ್ತಲೂ ಎರಡು ಸಾಲು ದಾಳಿಂಬದ ಹಣ್ಣುಗಳನ್ನು ಮಾಡಿದನು. ದ್ವಾರಾಂಗಳದ ಮುಂದಿರುವ ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಟಗಳ ಕೆಲಸವಾಗಿ ನಾಲ್ಕು ಮೊಳ ಎತ್ತರವಾಗಿದ್ದವು. ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೆಲಸದ ಸವಿಾಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ ಇನ್ನೂರು ದಾಳಿಂಬಗಳು ಸಾಲುಗಳಾಗಿ ಸುತ್ತಲೂ ಇದ್ದವು; ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು. ಆ ಸ್ತಂಭಗಳನ್ನು ಮಂದಿರದ ದ್ವಾರಾಂಗಳದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ ಎಡಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಬೋವಜ್ ಎಂದೂ ಹೆಸರಿಟ್ಟನು. ಸ್ತಂಭಗಳ ತಲೆ ಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೆಲಸವು ಮುಗಿಯಿತು. ಇದಲ್ಲದೆ ಎರಕದ ಸಮುದ್ರವನ್ನು ಮಾಡಿದನು. ಅದು ದುಂಡಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳವೂ ಅದರ ಎತ್ತರ ಐದು ಮೊಳವೂ ಸುತ್ತಳತೆ ಮೂವತ್ತು ಮೊಳವೂ ಆಗಿತ್ತು. ಅದರ ಅಂಚಿನ ಕೆಳ ಭಾಗದಲ್ಲಿ ಅದರ ಸುತ್ತಲೂ ಮೊಗ್ಗುಗಳಿದ್ದವು. ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಈ ಸಮುದ್ರವು ಎರಕ ಹೊಯ್ಯಲ್ಪಡು ವಾಗ ಮೊಗ್ಗುಗಳು ಎರಡು ಸಾಲಾಗಿ ಎರಕ ಹೊಯ್ಯಲ್ಪ ಟ್ಟಿದ್ದವು. ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡುತ್ತಾ ಇದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು; ಅವುಗಳ ಹಿಂಭಾಗಗಳೆಲ್ಲಾ ಒಳಪಾರ್ಶ್ವದಲ್ಲಿ ಇದ್ದವು. ಅದರ ದಪ್ಪವು ಕೈಯಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ಎರಡು ಸಾವಿರ ಕೊಳಗ ಹಿಡಿಯು ವದಾಗಿತ್ತು. ಹತ್ತು ತಾಮ್ರದ ಆಧಾರಗಳನ್ನು ಮಾಡಿದನು. ಒಂದೊಂದು ಆಧಾರವು ನಾಲ್ಕು ಮೊಳ ಉದ್ದವೂ ನಾಲ್ಕು ಮೊಳ ಅಗಲವೂ ಮೂರು ಮೊಳ ಎತ್ತರವೂ ಆಗಿತ್ತು. ಆ ಆಧಾರಗಳ ಮೇಲಿರುವ ಕೆಲಸ ಹೇಗಂದರೆ, ಅವುಗಳಿಗೆ ಅಂಚುಗಳಿದ್ದವು. ಅಂಚುಗಳು ಹಲಿಗೆಗಳ ನಡುವೆ ಇದ್ದವು. ಹಲಿಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ ಎತ್ತುಗಳೂ ಕೆರೂಬಿಗಳೂ ಇದ್ದವು. ಹಲಿಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು; ಸಿಂಹಗಳಿಗೂ ಎತ್ತುಗಳಿಗೂ ಕೆಳಭಾಗದಲ್ಲಿ ಕೆರೂಬಿಗಳ ಕೆಲಸಗಳು ಅದರ ಸಂಗಡ ಇದ್ದವು. ಒಂದೊಂದು ಆಧಾರಕ್ಕೆ ನಾಲ್ಕು ತಾಮ್ರದ ಗಾಲಿಗಳೂ ತಾಮ್ರದ ತಗಡುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಜೋಡಣೆಗಳಿದ್ದವು. ಸಮು ದ್ರದ ಕೆಳಗೆ ಇರುವ ಪ್ರತಿ ಕೆರೂಬಿಯ ಬಳಿಯಲ್ಲೂ ಎರಕ ಹೊಯ್ಯಲ್ಪಟ್ಟ ಜೋಡಣೆಗಳಿದ್ದವು. ಅಂಚಿಗೆ ಒಳಗಾದ ಅದರ ಬಾಯಿಯ ಮೇಲೆ ಒಂದು ಮೊಳ ಉದ್ದವಾಗಿತ್ತು. ಅದರ ಬಾಯಿ ದುಂಡಾಗಿ ಒಂದೂವರೆ ಮೊಳವಾಗಿತ್ತು; ಅದರ ಬಾಯಿಯ ಮೇಲೆ ಚಿತ್ರ ಗಳಿದ್ದವು; ಅದರ ಚಿತ್ರಗಳು ದುಂಡಾಗಿರದೆ ಚೌಕ ವಾಗಿದ್ದವು. ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು; ಗಾಲಿಗಳ ಅಚ್ಚುಗಳು ಆಧಾರದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು; ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು. ಅವುಗಳ ಇರುಸುಗಳೂ ಅಣಸುಗಳೂ ಚಕ್ರಗಳೂ ಕಂಬಿಗಳೂ ಎಲ್ಲಾ ಎರಕ ಹೊಯ್ಯಲ್ಪಟ್ಟಿದ್ದವು. ಒಂದೊಂದು ಆಧಾರದ ನಾಲ್ಕು ಮೂಲೆಗಳಲ್ಲಿ ಅಂಚುಗಳಿದ್ದವು; ಆಧಾರದಲ್ಲಿಂದಲೇ ಅಂಚುಗಳು ಆದವು. ಆಧಾರದ ತಲೆಯಲ್ಲಿ ಒಂದು ವರೆ ಮೊಳ ದುಂಡಾದದ್ದು ಒಂದು ಇತ್ತು; ಆಧಾರದ ತಲೆಯ ಮೇಲೆ ಅದರ ಕೈಪಿಡಿಗಳೂ ಅಂಚುಗಳೂ ಅದರಿಂದಲೇ ಆಗಿದ್ದವು. ಅದರದರ ಪ್ರಮಾಣದ ಪ್ರಕಾರ ಹಲಿಗೆಗಳ ಕೈಹಿಡಿಗಳ ಮೇಲೆಯೂ ಅಂಚು ಗಳ ಮೇಲೆಯೂ ಕೆರೂಬಿಗಳನ್ನೂ ಸಿಂಹಗಳನ್ನೂ ಖರ್ಜೂರ ಗಿಡಗಳನ್ನೂ ಚಿತ್ರಿಸಿದನು; ಸುತ್ತಲೂ ಅದ ರದರ ಪ್ರಮಾಣದ ಪ್ರಕಾರ ಚಿತ್ರಿಸಿದನು. ಈ ಪ್ರಕಾರ ಆ ಹತ್ತು ಆಧಾರಗಳನ್ನು ಮಾಡಿದನು. ಅವು ಗಳಿಗೆಲ್ಲಾ ಒಂದೇ ಎರಕವೂ ಒಂದೇ ಅಳತೆಯೂ ಒಂದೇ ಪ್ರಮಾಣವೂ ಆಗಿದ್ದವು. ಹತ್ತು ತಾಮ್ರದ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು ನಾಲ್ವತ್ತು ಕೊಳಗ ಹಿಡಿಯಿತು; ಒಂದೊಂದು ತೊಟ್ಟಿಯು ನಾಲ್ಕು ಮೊಳವು; ಆ ಹತ್ತು ಆಧಾರ ಗಳಲ್ಲಿಯೂ ಒಂದೊಂದರ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು. ಮನೆಯ ಬಲ ಪಾರ್ಶ್ವದಲ್ಲಿ ಐದು ಆಧಾರಗಳನ್ನೂ ಮನೆಯ ಎಡಪಾರ್ಶ್ವದಲ್ಲಿ ಐದು ಆಧಾರಗಳನ್ನೂ ಇಟ್ಟನು. ಆದರೆ ಸಮುದ್ರವನ್ನು ಮನೆಯ ಪೂರ್ವ ಭಾಗದ ಬಲಪಾರ್ಶ್ವದಲ್ಲಿ ದಕ್ಷಿಣಕ್ಕೆ ದುರಾಗಿ ಇಟ್ಟನು. ಹೀಗೆಯೇ ಹೀರಾಮನು ತೊಟ್ಟಿ ಗಳನ್ನೂ ಸಲಿಕೆಗಳನ್ನೂ ಪಾತ್ರೆಗಳನ್ನೂ ಮಾಡಿದನು. ಹೀರಾಮನು ಕರ್ತನ ಮನೆಗೋಸ್ಕರ ಅರಸನಾದ ಸೊಲೊಮೋನನು ಮಾಡಿಸಿದ ಎಲ್ಲಾ ಕೆಲಸಗಳನ್ನು ಮಾಡಿ ತೀರಿಸಿದನು. ಅವು ಯಾವವಂದರೆ, ಎರಡು ಸ್ತಂಭಗಳೂ ಎರಡು ಸ್ತಂಭಗಳ ತುದಿಯಲ್ಲಿರುವ ಕುಂಭಗಳ ಚಂಬು ಗಳೂ ಎರಡು ಸ್ತಂಭಗಳ ತಲೆಯಲ್ಲಿರುವ ಕುಂಭಗಳ ಎರಡು ಚಂಬುಗಳನ್ನು ಮುಚ್ಚುವ ಎರಡು ಜಾಲರಿ ಸಾಮಾನುಗಳೂ ಎರಡು ಜಾಲರಿಗಳಿಗೆ ನಾನೂರು ದಾಳಿಂಬಗಳೂ ಸ್ತಂಭಗಳ ಮೇಲೆ ಇರುವ ಎರಡು ಚಂಬುಗಳನ್ನು ಮುಚ್ಚುವಂತೆ ಒಂದು ಜಾಲರಿಗೆ ಎರಡು ಸಾಲಿನ ದಾಳಿಂಬಗಳೂ ಹತ್ತು ಆಧಾರಗಳೂ ಆಧಾ ರಗಳ ಮೇಲಿರುವ ಹತ್ತು ತೊಟ್ಟಿಗಳೂ ಒಂದು ಸಮುದ್ರವೂ ಸಮುದ್ರದ ಕೆಳಗಿರುವ ಹನ್ನೆರಡು ಎತ್ತು ಗಳೂ ಪಾತ್ರೆಗಳೂ ಸಲಿಕೆಗಳೂ ಬೋಗುಣಿಗಳೂ. ಹೀರಾಮನು ಕರ್ತನ ಮನೆಗೋಸ್ಕರ ಅರಸನಾದ ಸೊಲೊಮೋನನಿಗೆ ಮಾಡಿದ ಈ ಸಾಮಾನುಗಳೆಲ್ಲಾ ಹೊಳೆಯುವ ತಾಮ್ರದವುಗಳಾಗಿದ್ದವು. ಯೊರ್ದ ನಿಗೆ ಸೇರಿದ ಬೈಲಾದ ಸುಕ್ಕೋತಿಗೂ ಚಾರೆತಾನಿಗೂ ನಡುವೆ ಇರುವ ಜೇಡು ಮಣ್ಣಿನ ಸ್ಥಳದಲ್ಲಿ ಅರಸನು ಅವುಗಳನ್ನು ಎರಕ ಹೊಯ್ಸಿದನು. ಈ ಪಾತ್ರೆಗ ಳೆಲ್ಲಾ ಬಹು ಹೆಚ್ಚಾಗಿದ್ದದರಿಂದ ಸೊಲೊಮೋನನು ಅವುಗಳನ್ನು ಎಣಿಸದೆ ಬಿಟ್ಟನು; ತಾಮ್ರದ ತೂಕವು ಗೊತ್ತಾಗಲಿಲ್ಲ.
- 2 Chronicles 4:2–6 2 ಪೂರ್ವಕಾಲವೃತ್ತಾಂತ 4:2–6ಅವನು ಎರಕದ ಸಮುದ್ರವನ್ನು ಮಾಡಿಸಿದನು; ಅದು ಸುತ್ತಲಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳ, ಅದರ ಎತ್ತರ ಐದು ಮೊಳ, ಸುತ್ತಳತೆ ಮೂವತ್ತು ಮೊಳ ನೂಲಳತೆಯಾಗಿತ್ತು. ಅದರ ಕೆಳಭಾಗದಲ್ಲಿ ಸುತ್ತಲೂ ಎತ್ತುಗಳ ರೂಪಗಳಿದ್ದವು; ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಇದು ಎರಕ ಹೊಯ್ಯಲ್ಪಡುವಾಗ ಎತ್ತುಗಳ ರೂಪ ಎರಡು ಸಾಲಾಗಿ ಎರಕ ಹೊಯ್ಯ ಲ್ಪಟ್ಟಿದ್ದವು. ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡು ತ್ತಿದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು, ಅವುಗಳ ಹಿಂಭಾಗಗಳೆಲ್ಲಾ ಒಳಗಾಗಿದ್ದವು. ಅದರ ದಪ್ಪವು ನಾಲ್ಕು ಬೆರಳಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು; ಅದು ಮೂರು ಸಾವಿರ ಕೊಳಗ ಹಿಡಿಯುವದಾಗಿತ್ತು. ಇದಲ್ಲದೆ ಹತ್ತು ತೊಟ್ಟಿಗಳನ್ನು ಮಾಡಿಸಿ ಅವುಗಳಲ್ಲಿ ದಹನಬಲಿಗೋಸ್ಕರ ಅರ್ಪಿಸು ವವುಗಳನ್ನು ತೊಳೆಯುವ ನಿಮಿತ್ತವಾಗಿ ಬಲಪಾರ್ಶ್ವ ದಲ್ಲಿ ಐದನ್ನೂ ಎಡಪಾರ್ಶ್ವದಲ್ಲಿ ಐದನ್ನೂ ಇರಿಸಿ ದನು. ಆದರೆ ಆ ಸಮುದ್ರವು ಯಾಜಕರಿಗೋಸ್ಕರ ತೊಳೆಯುವದಕ್ಕೆ ಇತ್ತು.
- Jeremiah 52:17–23 ಯೆರೆಮೀಯ 52:17–23ಇದಲ್ಲದೆ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸ್ತಂಭಗಳನ್ನೂ ಗದ್ದಿಗೆಗಳನ್ನೂ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸಮುದ್ರವನ್ನೂ ಕಸ್ದೀಯರು ಒಡೆದು ಅವುಗಳ ಹಿತ್ತಾಳೆಯನ್ನೆಲ್ಲಾ ಬಾಬೆಲಿಗೆ ತಕ್ಕೊಂಡು ಹೋದರು. ಗುಡಾಣಗಳನ್ನೂ ಸಲಿಕೆಗಳನ್ನೂ ಕತ್ತರಿಗಳನ್ನೂ ತಂಬಿಗೆಗಳನ್ನೂ ಸೌಟುಗಳನ್ನೂ ಸೇವೆಗೆ ಸಂಬಂಧವಾದ ಎಲ್ಲಾ ಹಿತ್ತಾಳೆಯ ಪಾತ್ರೆಗಳನ್ನೂ ತಕ್ಕೊಂಡರು. ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು. ಅರಸನಾದ ಸೊಲೊಮೋನನು ಕರ್ತನ ಆಲಯದಲ್ಲಿ ಮಾಡಿಸಿದ ಎರಡು ಸ್ತಂಭಗಳನ್ನೂ ಒಂದು ಸಮುದ್ರವನ್ನೂ ಗದ್ದಿಗೆಗಳ ಕೆಳಗಿದ್ದ ಹನ್ನೆರಡು ಹಿತ್ತಾಳೆಯ ಎತ್ತುಗಳನ್ನೂ ತಕ್ಕೊಂಡನು; ಈ ಎಲ್ಲಾ ಪಾತ್ರೆಗಳಿಗೆ ಲೆಕ್ಕವಿಲ್ಲದಷ್ಟು ಹಿತ್ತಾಳೆ ತೂಕವಾಗಿತ್ತು. ಸ್ತಂಭಗಳ ವಿಷಯ, ಒಂದು ಸ್ತಂಭದ ಉದ್ದವು ಹದಿನೆಂಟು ಮೊಳವಾಗಿತ್ತು, ಹನ್ನೆರಡು ಮೊಳದ ಸರಿಗೆ ಅದನ್ನು ಸುತ್ತಿಕೊಂಡಿತು; ಅದರ ದಪ್ಪ ನಾಲ್ಕು ಬೆರಳು; ಅದು ಟೊಳ್ಳಾಗಿತ್ತು. ಅದರ ಮೇಲೆ ಹಿತ್ತಾಳೆಯ ಕುಂಭ ಇತ್ತು; ಒಂದು ಕುಂಭದ ಎತ್ತರವು ಐದು ಮೊಳವಾಗಿತ್ತು. ಮತ್ತು ಕುಂಭಗಳ ಮೇಲೆ ಸುತ್ತಲಾಗಿ ಜಾಲರು ಕೆಲಸವೂ ದಾಳಿಂಬರಗಳೂ ಇದ್ದವು; ಎಲ್ಲಾ ಹಿತ್ತಾಳೆಯೇ; ಎರಡನೇ ಸ್ತಂಭವೂ ದಾಳಿಂಬರಗಳೂ ಅದರಂತೆಯೇ ಇದ್ದವು; ಒಂದು ಕಡೆಗೆ ತೊಂಭತ್ತಾರು ದಾಳಿಂಬರಗಳೂ ಇದ್ದವು; ಜಾಲರು ಕೆಲಸದ ಮೇಲೆ ಸುತ್ತಲಾಗಿದ್ದ ದಾಳಿಂಬರಗಳೆಲ್ಲಾ ನೂರು.
- 1 Chronicles 22:14 1 ಪೂರ್ವಕಾಲವೃತ್ತಾಂತ 22:14ಇಗೋ, ನನ್ನ ಕಷ್ಟ ಸ್ಥಿತಿಯಲ್ಲಿ ನಾನು ಕರ್ತನ ಮನೆಗೋಸ್ಕರ ಒಂದು ಲಕ್ಷ ಬಂಗಾ ರದ ತಲಾಂತುಗಳನ್ನೂ ಹತ್ತು ಲಕ್ಷ ಬೆಳ್ಳಿಯ ತಲಾಂತು ಗಳನ್ನೂ ಲೆಕ್ಕವಿಲ್ಲದಷ್ಟು ತಾಮ್ರವನ್ನೂ ಕಬ್ಬಿಣವನ್ನೂ ಸಿದ್ಧಮಾಡಿದ್ದೇನೆ; ಅದು ಬಹಳವಾಯಿತು. ಹಾಗೆಯೇ ಮರಗಳನ್ನೂ ಕಲ್ಲುಗಳನ್ನೂ ಸಿದ್ಧಮಾಡಿದ್ದೇನೆ. ನೀನು ಅವುಗಳಿಗೆ ಹೆಚ್ಚಾಗಿ ಸೇರಿಸಬಹುದು.
Original words (Hebrew)
- Tibhath · H2880טִבְחַת Ṭibchath
- Chun · H3560כּוּן Kûwn
- cities · H5892עִיר ʻîyr
- Hadarezer · H1928הֲדַרְעֶזֶר Hădarʻezer
- brought · H3947לָקַח lâqach
- David · H1732דָּוִד Dâvid
- very · H3966מְאֹד mᵉʼôd
- much · H7227רַב rab
- brass · H5178נְחֹשֶׁת nᵉchôsheth
- Solomon · H8010שְׁלֹמֹה Shᵉlômôh
- made · H6213עָשָׂה ʻâsâh
- brasen · H5178נְחֹשֶׁת nᵉchôsheth
- sea · H3220יָם yâm
- pillars · H5982עַמּוּד ʻammûwd
- vessels · H3627כְּלִי kᵉlîy
- brass · H5178נְחֹשֶׁת nᵉchôsheth