Jeremiah · chapter 52 · verse 17
Jeremiah 52:17 in Kannada
ಇದಲ್ಲದೆ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸ್ತಂಭಗಳನ್ನೂ ಗದ್ದಿಗೆಗಳನ್ನೂ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸಮುದ್ರವನ್ನೂ ಕಸ್ದೀಯರು ಒಡೆದು ಅವುಗಳ ಹಿತ್ತಾಳೆಯನ್ನೆಲ್ಲಾ ಬಾಬೆಲಿಗೆ ತಕ್ಕೊಂಡು ಹೋದರು.
Idallade kartana aalayadallidda hittaaleya stambhagalannoo gaddigegalannoo kartana aalayadallidda hittaaleya samudravannoo kasdeeyaru odedu avugala hittaaleyannellaa baabelige takkondu hodaru.
Jeremiah 52:17 in English
- King James Version (KJV)
- Also the pillars of brass that [were] in the house of the LORD, and the bases, and the brasen sea that [was] in the house of the LORD, the Chaldeans brake, and carried all the brass of them to Babylon.
- World English Bible (WEB)
- The Chaldeans broke the pillars of bronze that were in the LORD’s house and the bases and the bronze sea that were in the LORD’s house in pieces, and carried all of their bronze to Babylon.
- American Standard Version (ASV)
- And the pillars of brass that were in the house of Jehovah, and the bases and the brazen sea that were in the house of Jehovah, did the Chaldeans break in pieces, and carried all the brass of them to Babylon.
- Bible in Basic English (BBE)
- And the brass pillars which were in the house of the Lord, and the wheeled bases and the great brass water-vessel in the house of the Lord, were broken up by the Chaldaeans, who took all the brass away to Babylon.
- Darby Translation (DBY)
- And the brazen pillars that were in the house of Jehovah, and the bases, and the brazen sea that was in the house of Jehovah, the Chaldeans broke up, and carried all the brass thereof to Babylon.
- Webster's Bible (WBS)
- Also the pillars of brass that [were] in the house of the LORD, and the bases, and the brazen sea that [was] in the house of the LORD, the Chaldeans broke, and carried all the brass of them to Babylon.
- Young's Literal Translation (YLT)
- And the pillars of brass that [are] to the house of Jehovah, and the bases, and the brasen sea that [is] in the house of Jehovah, have the Chaldeans broken, and they bear away all the brass of them to Babylon;
Read in context
- 15ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವ ರಾದ ಕೆಲವರನ್ನೂ ಪಟ್ಟಣದಲ್ಲಿ ಉಳಿದ ಜನರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಸಮೂಹದಲ್ಲಿ ಮಿಕ್ಕಾದವರನ್ನೂ ಸೆರೆಯಾಗಿ ಒಯ್ದನು.
- 16ಆದರೆ ಕಾವಲಿನವರ ಅಧಿಪತಿಯಾದ ನೆಬೂಜರದಾನನು ದೇಶದ ಬಡವರಲ್ಲಿ ಕೆಲವರನ್ನು ದ್ರಾಕ್ಷೇತೋಟ ಕಾಯು ವವರಾಗಿಯೂ ಬೇಸಾಯ ಮಾಡುವವರಾಗಿಯೂ ಬಿಟ್ಟನು.
- 17ಇದಲ್ಲದೆ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸ್ತಂಭಗಳನ್ನೂ ಗದ್ದಿಗೆಗಳನ್ನೂ ಕರ್ತನ ಆಲಯದಲ್ಲಿದ್ದ ಹಿತ್ತಾಳೆಯ ಸಮುದ್ರವನ್ನೂ ಕಸ್ದೀಯರು ಒಡೆದು ಅವುಗಳ ಹಿತ್ತಾಳೆಯನ್ನೆಲ್ಲಾ ಬಾಬೆಲಿಗೆ ತಕ್ಕೊಂಡು ಹೋದರು.
- 18ಗುಡಾಣಗಳನ್ನೂ ಸಲಿಕೆಗಳನ್ನೂ ಕತ್ತರಿಗಳನ್ನೂ ತಂಬಿಗೆಗಳನ್ನೂ ಸೌಟುಗಳನ್ನೂ ಸೇವೆಗೆ ಸಂಬಂಧವಾದ ಎಲ್ಲಾ ಹಿತ್ತಾಳೆಯ ಪಾತ್ರೆಗಳನ್ನೂ ತಕ್ಕೊಂಡರು.
- 19ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು.
Cross references
- Jeremiah 27:19–22 ಯೆರೆಮೀಯ 27:19–22ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯಯನನ್ನೂ ಯೆಹೂದದ ಮತ್ತು ಯೆರೂಸ ಲೇಮಿನ ಶ್ರೇಷ್ಠರೆಲ್ಲರನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ತಕ್ಕೊಂಡು ಹೋಗದಂಥ ಸ್ಥಂಭಗಳನ್ನು ಕುರಿತು ಸಮುದ್ರವನ್ನು ಕುರಿತು ಗದ್ದಿಗೆ ಗಳನ್ನು ಕುರಿತು ಈ ಪಟ್ಟಣದಲ್ಲಿ ಉಳಿದ ಬೇರೆ ಪಾತ್ರೆ ಗಳನ್ನು ಕುರಿತು ಸೈನ್ಯಗಳ ಕರ್ತನು ಹೇಳುವದೇನಂದರೆ-- ಕರ್ತನ ಆಲಯದಲ್ಲಿಯೂ ಯೆಹೂದದ ಮತ್ತು ಯೆರೂಸಲೇಮಿನ ಅರಸನ ಮನೆಯಲ್ಲಿಯೂ ಉಳಿದಿರುವ ಪಾತ್ರೆಗಳ ವಿಷಯವಾಗಿ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ. ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ.
- 2 Chronicles 4:12–15 2 ಪೂರ್ವಕಾಲವೃತ್ತಾಂತ 4:12–15ಎರಡು ಸ್ತಂಭಗಳನ್ನೂ ಎರಡು ಸ್ತಂಭ ಗಳ ಮೇಲಿರುವ ಬೋದಿಗೆಗಳನ್ನೂ ಬೋದಿಗೆಗಳ ಮೇಲೆ ಮುಚ್ಚುವ ಎರಡು ಜಾಲರು ಹಣಿತೆಗಳನ್ನೂ ಕಂಬಗಳ ಮೇಲಿರುವ ಎರಡು ಬೋದಿಗೆಗಳನ್ನೂ ಮುಚ್ಚತಕ್ಕದ್ದಾದ ಒಂದೊಂದು ಜಾಲರು ಹೆಣಿತಕ್ಕೆ ಎರಡು ಸಾಲು ದಾಳಿಂಬರ ಕಾಯಿಗಳನ್ನೂ ಜಾಲರು ಹಣಿತೆಗಳಿಗೆ ನಾನೂರು ದಾಳಿಂಬರ ಕಾಯಿಗಳನ್ನೂ ಮಾಡಿದನು. ಇದಲ್ಲದೆ ಅವನು ಆಧಾರಗಳನ್ನೂ ಅದರ ಮೇಲೆ ಇರುವ ತೊಟ್ಟಿಗಳನ್ನೂ ಮಾಡಿದನು. ಒಂದು ಸಮುದ್ರವನ್ನೂ ಅದರ ಕೆಳಗೆ ಇರುವ ಹನ್ನೆರಡು ಎತ್ತುಗಳನ್ನೂ ಪಾತ್ರೆಗಳನ್ನೂ ಸಲಿಕೆಗಳನ್ನೂ ಕೊಂಡಿಗಳನ್ನೂ
- Jeremiah 52:21–23 ಯೆರೆಮೀಯ 52:21–23ಸ್ತಂಭಗಳ ವಿಷಯ, ಒಂದು ಸ್ತಂಭದ ಉದ್ದವು ಹದಿನೆಂಟು ಮೊಳವಾಗಿತ್ತು, ಹನ್ನೆರಡು ಮೊಳದ ಸರಿಗೆ ಅದನ್ನು ಸುತ್ತಿಕೊಂಡಿತು; ಅದರ ದಪ್ಪ ನಾಲ್ಕು ಬೆರಳು; ಅದು ಟೊಳ್ಳಾಗಿತ್ತು. ಅದರ ಮೇಲೆ ಹಿತ್ತಾಳೆಯ ಕುಂಭ ಇತ್ತು; ಒಂದು ಕುಂಭದ ಎತ್ತರವು ಐದು ಮೊಳವಾಗಿತ್ತು. ಮತ್ತು ಕುಂಭಗಳ ಮೇಲೆ ಸುತ್ತಲಾಗಿ ಜಾಲರು ಕೆಲಸವೂ ದಾಳಿಂಬರಗಳೂ ಇದ್ದವು; ಎಲ್ಲಾ ಹಿತ್ತಾಳೆಯೇ; ಎರಡನೇ ಸ್ತಂಭವೂ ದಾಳಿಂಬರಗಳೂ ಅದರಂತೆಯೇ ಇದ್ದವು; ಒಂದು ಕಡೆಗೆ ತೊಂಭತ್ತಾರು ದಾಳಿಂಬರಗಳೂ ಇದ್ದವು; ಜಾಲರು ಕೆಲಸದ ಮೇಲೆ ಸುತ್ತಲಾಗಿದ್ದ ದಾಳಿಂಬರಗಳೆಲ್ಲಾ ನೂರು.
- 1 Kings 7:50 1 ಅರಸುಗಳು 7:50ಅಪರಂಜಿಯ ತಂಬಿಗೆಗಳು, ಕತ್ತರಿಗಳು, ಸಲಿಕೆಗಳು, ಸೌಟುಗಳು, ಅಗ್ನಿ ಪಾತ್ರೆಗಳು, ಮಹಾಪರಿಶುದ್ಧ ಸ್ಥಳ ವಾದ ಒಳಗಿನ ಮನೆಯ ಕದಗಳಿಗೋಸ್ಕರವೂ ಮಂದಿ ರವೆಂಬ ಮನೆಯ ಕದಗಳಿಗೋಸ್ಕರವೂ ಬಂಗಾರದ ಕೀಲುಗಳನ್ನೆಲ್ಲಾ ಮಾಡಿಸಿದನು.ಹೀಗೆ ಅರಸನಾ ಗಿರುವ ಸೊಲೊಮೋನನು ಕರ್ತನ ಮನೆಗೋಸ್ಕರ ಮಾಡಿಸಿದ ಕೆಲಸವೆಲ್ಲಾ ತೀರಿಸಿದ ನಂತರ ತನ್ನ ತಂದೆ ಯಾದ ದಾವೀದನು ಪ್ರತಿಷ್ಟೆಮಾಡಿದ ಬೆಳ್ಳಿಯನ್ನೂ ಚಿನ್ನವನ್ನೂ ಸಾಮಾನುಗಳನ್ನೂ ತಕ್ಕೊಂಡು ಬಂದು ಕರ್ತನ ಮನೆಯ ಉಗ್ರಾಣಗಳಲ್ಲಿ ಇಟ್ಟನು.
- 1 Kings 7:15–37 1 ಅರಸುಗಳು 7:15–37ಅವನು ಎರಡು ತಾಮ್ರದ ಸ್ತಂಭಗಳನ್ನು ಮಾಡಿ ದನು. ಒಂದೊಂದು ಸ್ತಂಭ ಹದಿನೆಂಟು ಮೊಳ ಉದ್ದ; ಒಂದೊಂದು ಸ್ತಂಭದ ಸುತ್ತಳತೆ ಹನ್ನೆರಡು ಮೊಳ ಇತ್ತು. ಆ ಸ್ತಂಭಗಳ ತಲೆಯಲ್ಲಿ ಇರಿಸಲು ತಾಮ್ರ ದಿಂದ ಎರಕ ಹೊಯ್ಯಲ್ಪಟ್ಟ ಎರಡು ಕುಂಭಗಳನ್ನು ಮಾಡಿದನು. ಒಂದೊಂದು ಕುಂಭವು ಐದು ಮೊಳ ಎತ್ತರವಾಗಿತ್ತು; ಸ್ತಂಭಗಳ ಕೊನೆಯಲ್ಲಿ ಇರುವ ಕುಂಭ ಗಳಿಗೆ ಜಾಲರಿನ ಹಾಗೆ ಇರುವ ಹಣತೆಗಳೂ ಸರ ಪಣಿಗಳ ಹಾಗಿರುವ ಗೊಂಡೆಗಳೂ ಇದ್ದವು. ಅವು ಒಂದೊಂದು ಕಂಭಕ್ಕೆ ಏಳೇಳು ಇದ್ದವು. ಸ್ತಂಭ ಗಳಿಗೆ ಇನ್ನೂ ಮಾಡಿದ್ದು ಹೇಗಂದರೆ, ಕೊನೆಯಲ್ಲಿ ರುವ ಕುಂಭಗಳನ್ನು ಮುಚ್ಚುವ ಹಾಗೆ ಕುಂಭಗಳೊಳಗೆ ಒಂದೊಂದರಲ್ಲಿ ಜಾಲರಿ ಕೆಲಸದ ಮೇಲೆ ಸುತ್ತಲೂ ಎರಡು ಸಾಲು ದಾಳಿಂಬದ ಹಣ್ಣುಗಳನ್ನು ಮಾಡಿದನು. ದ್ವಾರಾಂಗಳದ ಮುಂದಿರುವ ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಟಗಳ ಕೆಲಸವಾಗಿ ನಾಲ್ಕು ಮೊಳ ಎತ್ತರವಾಗಿದ್ದವು. ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೆಲಸದ ಸವಿಾಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ ಇನ್ನೂರು ದಾಳಿಂಬಗಳು ಸಾಲುಗಳಾಗಿ ಸುತ್ತಲೂ ಇದ್ದವು; ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು. ಆ ಸ್ತಂಭಗಳನ್ನು ಮಂದಿರದ ದ್ವಾರಾಂಗಳದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ ಎಡಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಬೋವಜ್ ಎಂದೂ ಹೆಸರಿಟ್ಟನು. ಸ್ತಂಭಗಳ ತಲೆ ಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೆಲಸವು ಮುಗಿಯಿತು. ಇದಲ್ಲದೆ ಎರಕದ ಸಮುದ್ರವನ್ನು ಮಾಡಿದನು. ಅದು ದುಂಡಾಗಿ ಈ ಅಂಚಿನಿಂದ ಆ ಅಂಚಿಗೆ ಹತ್ತು ಮೊಳವೂ ಅದರ ಎತ್ತರ ಐದು ಮೊಳವೂ ಸುತ್ತಳತೆ ಮೂವತ್ತು ಮೊಳವೂ ಆಗಿತ್ತು. ಅದರ ಅಂಚಿನ ಕೆಳ ಭಾಗದಲ್ಲಿ ಅದರ ಸುತ್ತಲೂ ಮೊಗ್ಗುಗಳಿದ್ದವು. ಅವು ಒಂದೊಂದು ಮೊಳಕ್ಕೆ ಹತ್ತಾಗಿ ಆ ಸಮುದ್ರದ ಸುತ್ತಲೂ ಇದ್ದವು. ಈ ಸಮುದ್ರವು ಎರಕ ಹೊಯ್ಯಲ್ಪಡು ವಾಗ ಮೊಗ್ಗುಗಳು ಎರಡು ಸಾಲಾಗಿ ಎರಕ ಹೊಯ್ಯಲ್ಪ ಟ್ಟಿದ್ದವು. ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ ಮೂರು ಪಶ್ಚಿಮಕ್ಕೂ ಮೂರು ದಕ್ಷಿಣಕ್ಕೂ ಮೂರು ಪೂರ್ವಕ್ಕೂ ನೋಡುತ್ತಾ ಇದ್ದವು. ಆ ಸಮುದ್ರವು ಅವುಗಳ ಮೇಲೆ ಇತ್ತು; ಅವುಗಳ ಹಿಂಭಾಗಗಳೆಲ್ಲಾ ಒಳಪಾರ್ಶ್ವದಲ್ಲಿ ಇದ್ದವು. ಅದರ ದಪ್ಪವು ಕೈಯಷ್ಟಾಗಿಯೂ ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ಎರಡು ಸಾವಿರ ಕೊಳಗ ಹಿಡಿಯು ವದಾಗಿತ್ತು. ಹತ್ತು ತಾಮ್ರದ ಆಧಾರಗಳನ್ನು ಮಾಡಿದನು. ಒಂದೊಂದು ಆಧಾರವು ನಾಲ್ಕು ಮೊಳ ಉದ್ದವೂ ನಾಲ್ಕು ಮೊಳ ಅಗಲವೂ ಮೂರು ಮೊಳ ಎತ್ತರವೂ ಆಗಿತ್ತು. ಆ ಆಧಾರಗಳ ಮೇಲಿರುವ ಕೆಲಸ ಹೇಗಂದರೆ, ಅವುಗಳಿಗೆ ಅಂಚುಗಳಿದ್ದವು. ಅಂಚುಗಳು ಹಲಿಗೆಗಳ ನಡುವೆ ಇದ್ದವು. ಹಲಿಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ ಎತ್ತುಗಳೂ ಕೆರೂಬಿಗಳೂ ಇದ್ದವು. ಹಲಿಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು; ಸಿಂಹಗಳಿಗೂ ಎತ್ತುಗಳಿಗೂ ಕೆಳಭಾಗದಲ್ಲಿ ಕೆರೂಬಿಗಳ ಕೆಲಸಗಳು ಅದರ ಸಂಗಡ ಇದ್ದವು. ಒಂದೊಂದು ಆಧಾರಕ್ಕೆ ನಾಲ್ಕು ತಾಮ್ರದ ಗಾಲಿಗಳೂ ತಾಮ್ರದ ತಗಡುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಜೋಡಣೆಗಳಿದ್ದವು. ಸಮು ದ್ರದ ಕೆಳಗೆ ಇರುವ ಪ್ರತಿ ಕೆರೂಬಿಯ ಬಳಿಯಲ್ಲೂ ಎರಕ ಹೊಯ್ಯಲ್ಪಟ್ಟ ಜೋಡಣೆಗಳಿದ್ದವು. ಅಂಚಿಗೆ ಒಳಗಾದ ಅದರ ಬಾಯಿಯ ಮೇಲೆ ಒಂದು ಮೊಳ ಉದ್ದವಾಗಿತ್ತು. ಅದರ ಬಾಯಿ ದುಂಡಾಗಿ ಒಂದೂವರೆ ಮೊಳವಾಗಿತ್ತು; ಅದರ ಬಾಯಿಯ ಮೇಲೆ ಚಿತ್ರ ಗಳಿದ್ದವು; ಅದರ ಚಿತ್ರಗಳು ದುಂಡಾಗಿರದೆ ಚೌಕ ವಾಗಿದ್ದವು. ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು; ಗಾಲಿಗಳ ಅಚ್ಚುಗಳು ಆಧಾರದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು; ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು. ಅವುಗಳ ಇರುಸುಗಳೂ ಅಣಸುಗಳೂ ಚಕ್ರಗಳೂ ಕಂಬಿಗಳೂ ಎಲ್ಲಾ ಎರಕ ಹೊಯ್ಯಲ್ಪಟ್ಟಿದ್ದವು. ಒಂದೊಂದು ಆಧಾರದ ನಾಲ್ಕು ಮೂಲೆಗಳಲ್ಲಿ ಅಂಚುಗಳಿದ್ದವು; ಆಧಾರದಲ್ಲಿಂದಲೇ ಅಂಚುಗಳು ಆದವು. ಆಧಾರದ ತಲೆಯಲ್ಲಿ ಒಂದು ವರೆ ಮೊಳ ದುಂಡಾದದ್ದು ಒಂದು ಇತ್ತು; ಆಧಾರದ ತಲೆಯ ಮೇಲೆ ಅದರ ಕೈಪಿಡಿಗಳೂ ಅಂಚುಗಳೂ ಅದರಿಂದಲೇ ಆಗಿದ್ದವು. ಅದರದರ ಪ್ರಮಾಣದ ಪ್ರಕಾರ ಹಲಿಗೆಗಳ ಕೈಹಿಡಿಗಳ ಮೇಲೆಯೂ ಅಂಚು ಗಳ ಮೇಲೆಯೂ ಕೆರೂಬಿಗಳನ್ನೂ ಸಿಂಹಗಳನ್ನೂ ಖರ್ಜೂರ ಗಿಡಗಳನ್ನೂ ಚಿತ್ರಿಸಿದನು; ಸುತ್ತಲೂ ಅದ ರದರ ಪ್ರಮಾಣದ ಪ್ರಕಾರ ಚಿತ್ರಿಸಿದನು. ಈ ಪ್ರಕಾರ ಆ ಹತ್ತು ಆಧಾರಗಳನ್ನು ಮಾಡಿದನು. ಅವು ಗಳಿಗೆಲ್ಲಾ ಒಂದೇ ಎರಕವೂ ಒಂದೇ ಅಳತೆಯೂ ಒಂದೇ ಪ್ರಮಾಣವೂ ಆಗಿದ್ದವು.
- 2 Kings 25:13–17 2 ಅರಸುಗಳು 25:13–17ಇದಲ್ಲದೆ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸ್ತಂಭಗಳನ್ನೂ ಆಧಾರಗಳನ್ನೂ ಕರ್ತನ ಮನೆಯಲ್ಲಿದ್ದ ಹಿತ್ತಾಳೆ ಸಮುದ್ರವೆಂಬ ಪಾತ್ರೆ ಯನ್ನೂ ಕಸ್ದೀಯರು ಒಡೆದು ಹಾಕಿ ಅದರ ಹಿತ್ತಾಳೆ ಯನ್ನು ಬಾಬೆಲಿಗೆ ಒಯ್ದರು. ಮಡಕೆಗಳನ್ನೂ ಸಲಿಕೆ ಗಳನ್ನೂ ಕತ್ತರಿಗಳನ್ನೂ ಸೌಟುಗಳನ್ನೂ ಅವರು ಸೇವಿಸುತ್ತಿದ್ದ ಎಲ್ಲಾ ಹಿತ್ತಾಳೆಯ ಸಾಮಾನುಗಳನ್ನೂ ತಕ್ಕೊಂಡು ಹೋದರು. ಕಾವಲುಗಾರರ ಅಧಿಪತಿಯು ಅಗ್ನಿಪಾತ್ರೆಗಳನ್ನೂ ತಟ್ಟೆಗಳನ್ನೂ ಬಂಗಾರ ದವುಗಳಾದ ಬಂಗಾರವನ್ನೂ ಬೆಳ್ಳಿಯವುಗಳಾದ ಬೆಳ್ಳಿ ಯನ್ನೂ ತಕ್ಕೊಂಡನು. ಸೊಲೊಮೋನನು ಕರ್ತನ ಮನೆಗೋಸ್ಕರ ಮಾಡಿಸಿದ್ದ ಎರಡು ಸ್ತಂಭಗಳೂ ಸಮುದ್ರವೆನಿಸಿಕೊಂಡ ಪಾತ್ರೆಯೂ ಆಧಾರಗಳೂ ಈ ಎಲ್ಲಾ ಸಾಮಾನುಗಳ ತಾಮ್ರವು ತೂಕ ಮಾಡ ಲಾರದಷ್ಟಿತ್ತು. ಒಂದು ಸ್ತಂಭವು ಹದಿನೆಂಟು ಮೊಳ ಎತ್ತರವಾಗಿತ್ತು. ಅದರ ಮೇಲಿದ್ದ ಬೋದಿಗೆ ತಾಮ್ರ ದ್ದಾಗಿ ಮೂರು ಮೊಳ ಉದ್ದವಾಗಿತ್ತು. ಬೋದಿಗೆಯ ಸುತ್ತಲಿದ್ದ ಹೆಣೆತದ ಕೆಲಸವೂ ದಾಳಿಂಬರಗಳೂ ಎಲ್ಲಾ ತಾಮ್ರವಾಗಿತ್ತು. ಎರಡನೇ ಸ್ತಂಭಕ್ಕೆ ಇದರ ಹಾಗೆಯೇ ಹೆಣೆತದ ಕೆಲಸ ಉಂಟಾಗಿತ್ತು.
- 2 Chronicles 36:18 2 ಪೂರ್ವಕಾಲವೃತ್ತಾಂತ 36:18ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು.
- Lamentations 1:10 ಪ್ರಲಾಪಗಳು 1:10ವೈರಿಯು ಆಕೆಯ ಎಲ್ಲಾ ರಮ್ಯವಾದ ವಸ್ತುಗಳ ಮೇಲೆ ತನ್ನ ಕೈ ಚಾಚಿದ್ದಾನೆ. ನಿನ್ನ ಸಭೆಯಲ್ಲಿ ಸೇರ ಬಾರದೆಂದು ನೀನು ಆಜ್ಞಾಪಿಸಿದ ಅನ್ಯ ಜನಾಂಗಗಳು ತನ್ನ ಪರಿಶುದ್ಧ ಸ್ಥಳದಲ್ಲಿ ಸೇರಿರುವದನ್ನು ನೋಡಿದ್ದಾಳೆ.
- Daniel 1:2 ದಾನಿಯೇಲನು 1:2ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
Original words (Hebrew)
- pillars · H5982עַמּוּד ʻammûwd
- brass · H5178נְחֹשֶׁת nᵉchôsheth
- house · H1004בַּיִת bayith
- bases · H4350מְכוֹנָה mᵉkôwnâh
- brasen · H5178נְחֹשֶׁת nᵉchôsheth
- sea · H3220יָם yâm
- house · H1004בַּיִת bayith
- Chaldeans · H3778כַּשְׂדִּי Kasdîy
- brake · H7665שָׁבַר shâbar
- carried · H5375נָשָׂא nâsâʼ
- brass · H5178נְחֹשֶׁת nᵉchôsheth
- Babylon · H894בָּבֶל Bâbel