1 Chronicles · chapter 22 · verse 12
1 Chronicles 22:12 in Kannada
ಆದರೆ ಕರ್ತನು ನಿನಗೆ ಬುದ್ಧಿಯನ್ನೂ ಗ್ರಹಿಕೆಯನ್ನೂ ಕೊಡಲಿ; ಇಸ್ರಾಯೇ ಲನ್ನು ಕುರಿತು ನಿನಗೆ ಆಜ್ಞಾಪಿಸಲಿ; ನಿನ್ನ ದೇವರಾದ ಕರ್ತನ ನ್ಯಾಯಪ್ರಮಾಣವನ್ನು ನೀನು ಕೈಕೊಳ್ಳುವ ಹಾಗೆ
Aadare kartanu ninage buddhiyannoo grahikeyannoo kodali; israaye lannu kuritu ninage aajnyaapisali; ninna devaraada kartana nyaayapramaanavannu neenu kaikolluva haage
1 Chronicles 22:12 in English
- King James Version (KJV)
- Only the LORD give thee wisdom and understanding, and give thee charge concerning Israel, that thou mayest keep the law of the LORD thy God.
- World English Bible (WEB)
- May the LORD give you discretion and understanding, and put you in charge of Israel, so that you may keep the law of the LORD your God.
- American Standard Version (ASV)
- Only Jehovah give thee discretion and understanding, and give thee charge concerning Israel; that so thou mayest keep the law of Jehovah thy God.
- Bible in Basic English (BBE)
- Only may the Lord give you wisdom, and knowledge of his orders for Israel, so that you may keep the law of the Lord your God.
- Darby Translation (DBY)
- Only, Jehovah give thee wisdom and understanding, and place thee over Israel, and to keep the law of Jehovah thy God.
- Webster's Bible (WBS)
- Only the LORD give thee wisdom and understanding, and give thee charge concerning Israel, that thou mayest keep the law of the LORD thy God.
- Young's Literal Translation (YLT)
- Only, Jehovah give to thee wisdom and understanding, and charge thee concerning Israel, even to keep the law of Jehovah thy God;
Read in context
- 10ಅವನು ನನ್ನ ನಾಮಕ್ಕೆ ಮನೆಯನ್ನು ಕಟ್ಟಿಸುವನು. ಅವನು ನನ್ನ ಮಗನಾಗಿರುವನು, ನಾನು ಅವನಿಗೆ ತಂದೆ ಯಾಗಿರುವೆನು; ಇಸ್ರಾಯೇಲಿನ ಮೇಲೆ ಅವನ ರಾಜ್ಯದ ಸಿಂಹಾಸನವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು.
- 11ಈಗ ನನ್ನ ಮಗನೇ, ಕರ್ತನು ನಿನ್ನನ್ನು ಕುರಿತು ಹೇಳಿದ ಪ್ರಕಾರ ನೀನು ಸಫಲವನ್ನು ಹೊಂದುವ ಹಾಗೆಯೂ ನೀನು ನಿನ್ನ ದೇವರಾದ ಕರ್ತನ ಮನೆಯನ್ನು ಕಟ್ಟಿಸುವ ಹಾಗೆಯೂ ಆತನು ನಿನ್ನ ಸಂಗಡ ಇರಲಿ.
- 12ಆದರೆ ಕರ್ತನು ನಿನಗೆ ಬುದ್ಧಿಯನ್ನೂ ಗ್ರಹಿಕೆಯನ್ನೂ ಕೊಡಲಿ; ಇಸ್ರಾಯೇ ಲನ್ನು ಕುರಿತು ನಿನಗೆ ಆಜ್ಞಾಪಿಸಲಿ; ನಿನ್ನ ದೇವರಾದ ಕರ್ತನ ನ್ಯಾಯಪ್ರಮಾಣವನ್ನು ನೀನು ಕೈಕೊಳ್ಳುವ ಹಾಗೆ
- 13ಕರ್ತನು ಇಸ್ರಾಯೇಲನ್ನು ಕುರಿತು ಮೋಶೆಗೆ ಆಜ್ಞಾಪಿಸಿದ ನೇಮಗಳನ್ನೂ ನ್ಯಾಯಗಳನ್ನೂ ಕೈಕೊ ಳ್ಳಲು ನೀನು ಜಾಗ್ರತೆಯಾಗಿರು; ಆಗ ಸಫಲವನ್ನು ಹೊಂದುವಿ. ಬಲವಾಗಿರು, ದೃಢವಾಗಿರು; ಭಯಪಡ ಬೇಡ, ಹೆದರಬೇಡ.
- 14ಇಗೋ, ನನ್ನ ಕಷ್ಟ ಸ್ಥಿತಿಯಲ್ಲಿ ನಾನು ಕರ್ತನ ಮನೆಗೋಸ್ಕರ ಒಂದು ಲಕ್ಷ ಬಂಗಾ ರದ ತಲಾಂತುಗಳನ್ನೂ ಹತ್ತು ಲಕ್ಷ ಬೆಳ್ಳಿಯ ತಲಾಂತು ಗಳನ್ನೂ ಲೆಕ್ಕವಿಲ್ಲದಷ್ಟು ತಾಮ್ರವನ್ನೂ ಕಬ್ಬಿಣವನ್ನೂ ಸಿದ್ಧಮಾಡಿದ್ದೇನೆ; ಅದು ಬಹಳವಾಯಿತು. ಹಾಗೆಯೇ ಮರಗಳನ್ನೂ ಕಲ್ಲುಗಳನ್ನೂ ಸಿದ್ಧಮಾಡಿದ್ದೇನೆ. ನೀನು ಅವುಗಳಿಗೆ ಹೆಚ್ಚಾಗಿ ಸೇರಿಸಬಹುದು.
Cross references
- James 1:5 ಯಾಕೋಬನು 1:5ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆ ಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲ ರಿಗೂ ಉದಾರ ಮನಸ್ಸಿನಿಂದ ಕೊಡುವಾತನಾಗಿದ್ದಾನೆ.
- 2 Chronicles 1:10 2 ಪೂರ್ವಕಾಲವೃತ್ತಾಂತ 1:10ನಾನು ಈ ಜನರ ಮುಂದೆ ಹೊರಡುವ ಹಾಗೆಯೂ ಬರುವ ಹಾಗೆಯೂ ನನಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡು. ಈ ನಿನ್ನ ಮಹಾಜನಕ್ಕೆ ನ್ಯಾಯ ತೀರಿಸತಕ್ಕವನು ಯಾರು ಅಂದನು.
- 1 Kings 3:9–12 1 ಅರಸುಗಳು 3:9–12ಆದದರಿಂದ ನಿನ್ನ ಜನರಿಗೆ ನ್ಯಾಯ ವಿಚಾ ರಿಸಲು ಒಳ್ಳೇದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ ನಿನ್ನ ಸೇವಕನಿಗೆ ಜ್ಞಾನವುಳ್ಳ ಹೃದಯವನ್ನು ಕೊಡ ಬೇಕು. ಈ ನಿನ್ನ ಬಹು ಗುಂಪಾದ ಜನರ ನ್ಯಾಯ ವಿಚಾರಿಸಲು ಸಾಮರ್ಥ್ಯವುಳ್ಳವನು ಯಾವನು ಅಂದನು. ಸೊಲೊಮೋನನು ಕೇಳಿದ ಈ ಮಾತು ಕರ್ತನ ದೃಷ್ಟಿಗೆ ಒಳ್ಳೇದಾಗಿತ್ತು. ಆದದರಿಂದ ದೇವರು ಅವನಿಗೆ--ನೀನು ನಿನಗೋಸ್ಕರ ಹೆಚ್ಚಾದ ದಿವಸಗಳನ್ನು ಕೇಳದೆ ನಿನಗೋಸ್ಕರ ಐಶ್ವರ್ಯವನ್ನು ಕೇಳದೆ ನಿನ್ನ ಶತ್ರುಗಳ ಪ್ರಾಣವನ್ನು ಕೇಳದೆ ನ್ಯಾಯವನ್ನು ತಿಳಿಯಲು ನಿನಗೋಸ್ಕರ ಜ್ಞಾನವನ್ನು ಕೇಳಿದ್ದ ರಿಂದ ಇಗೋ, ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ಇಗೋ, ನಿನಗಿಂತ ಮುಂಚೆ ನಿನಗೆ ಸಮಾನವಾದವನು ಇಲ್ಲದ ಹಾಗೆಯೂ ನಿನ್ನ ತರುವಾಯ ನಿನ್ನಂಥವನು ಯಾವನೂ ಏಳದ ಹಾಗೆಯೂ ನಿನಗೆ ಜ್ಞಾನವೂ ಗ್ರಹಿಕೆಯುಳ್ಳ ಹೃದ ಯವನ್ನು ಕೊಟ್ಟಿದ್ದೇನೆ.
- Proverbs 14:8 ಜ್ಞಾನೋಕ್ತಿಗಳು 14:8ಜಾಣನ ಜ್ಞಾನವು ತನ್ನ ಮಾರ್ಗವನ್ನು ಗ್ರಹಿಸುವಂತ ದ್ದಾಗಿದೆ; ಮೂಢರ ಬುದ್ಧಿಹೀನತೆಯು ಮೋಸಕರ.
- Luke 21:15 ಲೂಕನು 21:15ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು.
- 1 John 2:3 1 ಯೋಹಾನನು 2:3ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯು ವದರಿಂದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳು ಕೊಳ್ಳುತ್ತೇವೆ.
- Deuteronomy 4:6 ಧರ್ಮೋಪದೇಶಕಾಂಡ 4:6ಹೀಗಿರುವ ದರಿಂದ ನೀವು ಅವುಗಳನ್ನು ಕೈಕೊಂಡು ಅನುಸರಿಸಿರಿ; ಯಾಕಂದರೆ ಜನಾಂಗಗಳ ಮುಂದೆ ಇರುವ ನಿಮ್ಮ ಜ್ಞಾನವೂ ನಿಮ್ಮ ವಿವೇಕವೂ ಇದೇ ಆಗಿದೆ. ಅವರು ಈ ನಿಯಮಗಳನ್ನೆಲ್ಲಾ ಕೇಳಿ--ನಿಶ್ಚಯವಾಗಿ ಈ ದೊಡ್ಡ ಜನಾಂಗವು ಜ್ಞಾನವೂ ವಿವೇಕವೂ ಉಳ್ಳ ಜನವಾಗಿದೆ ಅನ್ನುವರು.
- Proverbs 2:6–7 ಜ್ಞಾನೋಕ್ತಿಗಳು 2:6–7ಜ್ಞಾನವನ್ನು ಕರ್ತನೇ ಕೊಡುತ್ತಾನೆ; ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. ನೀತಿವಂತರಿಗೋಸ್ಕರ ಆತನು ಸುಜ್ಞಾನವನ್ನು ಕೂಡಿಸುವನು. ಯಥಾರ್ಥದಿಂದ ನಡೆದುಕೊಳ್ಳುವವರಿಗೆ ಆತನು ಗುರಾಣಿಯಾಗಿದ್ದಾನೆ.
- Psalm 72:1 ಕೀರ್ತನೆಗಳು 72:1ಓ ದೇವರೇ, ನಿನ್ನ ನ್ಯಾಯತೀರ್ಪುಗಳನ್ನು ಅರಸನಿಗೂ ನೀತಿಯನ್ನು ಅರಸನ ಮಗನಿಗೂ ಕೊಡು.
- 1 Kings 11:1–10 1 ಅರಸುಗಳು 11:1–10ಅರಸನಾದ ಸೊಲೊಮೋನನು ಫರೋಹನ ಮಗಳಲ್ಲದೆ ಅನ್ಯ ಜನಾಂಗಗಳ ಸ್ತ್ರೀಯರಾದ--ಮೋವಾಬ್ಯರು ಅಮ್ಮೋನ್ಯರು ಎದೋ ಮ್ಯರು ಚೀದೋನ್ಯರು ಹಿತ್ತಿಯರನ್ನೂ ಮೋಹಿಸಿದನು. ಈ ಜನಾಂಗಗಳನ್ನು ಕುರಿತು ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಿಮಗೂ ಅವರಿಗೂ ಕೊಟ್ಟುಕೊಳ್ಳುವದು ಇರಬಾರದು, ಅವರು ನಿಶ್ಚಯವಾಗಿ ನಿಮ್ಮ ಹೃದಯವನ್ನು ತಮ್ಮ ದೇವರುಗಳ ಕಡೆಗೆ ತಿರುಗಿಸುವರು ಎಂದು ಹೇಳಿದ್ದನು. ಆದರೆ ಸೊಲೊಮೋನನು ಪ್ರೀತಿಯಲ್ಲಿ ಇವರನ್ನು ಅಂಟಿಕೊಂಡನು. ಅವನಿಗೆ ಅರಸುಗಳ ಕುಮಾರ್ತೆಯರಾದ ಏಳು ನೂರು ಮಂದಿ ಪತ್ನಿಯರೂ ಮುನ್ನೂರು ಮಂದಿ ಉಪಪತ್ನಿಗಳೂ ಇದ್ದರು. ಅವನ ಪತ್ನಿಯರು ಅವನ ಹೃದಯವನ್ನು ತಿರುಗಿಸಿದರು. ಸೊಲೊಮೋನನು ಮುದುಕನಾದ ಕಾಲದಲ್ಲಿ ಏನಾಯಿತಂದರೆ, ಅವನ ಪತ್ನಿಯರು ಅನ್ಯದೇವರುಗಳ ಕಡೆಗೆ ಅವನ ಹೃದಯವನ್ನು ತಿರುಗ ಮಾಡಿದರು. ಅವನ ಹೃದಯವು ತನ್ನ ತಂದೆಯಾದ ದಾವೀದನ ಹೃದಯದ ಹಾಗೆ ತನ್ನ ದೇವರಾದ ಕರ್ತನ ಸಂಗಡ ಪರಿಪೂರ್ಣವಾಗಿ ಇರಲಿಲ್ಲ. ಸೊಲೊಮೋನನು ಚೀದೋನ್ಯರ ದೇವತೆಯಾದ ಅಷ್ಟೋರೆತನ್ನೂ ಅಮ್ಮೋ ನ್ಯರ ಅಸಹ್ಯಕರವಾದ ಮಿಲ್ಕೋಮನ್ನೂ ಹಿಂಬಾ ಲಿಸಿದನು. ಹೀಗೆಯೇ ಸೊಲೊಮೋನನು ತನ್ನ ತಂದೆಯಾದ ದಾವೀದನ ಹಾಗೆ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸದೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷ್ಗೋಸ್ಕ ರವೂ ಅಮ್ಮೋನನ ಮಕ್ಕಳ ಅಸಹ್ಯಕರವಾದ ಮೋಲೆ ಕ್ನಿಗೋಸ್ಕರವೂ ಯೆರೂಸಲೇಮಿಗೆ ಎದುರಾಗಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು. ಇದೇ ಪ್ರಕಾರ ತಮ್ಮ ದೇವರುಗಳಿಗೆ ಧೂಪವನ್ನು ಸುಟ್ಟು ಬಲಿಗಳನ್ನು ಅರ್ಪಿಸುವ ತನ್ನ ಅನ್ಯ ಜಾತಿಯ ಸಮಸ್ತ ಪತ್ನಿಯರಿಗೋಸ್ಕರವೂ ಕಟ್ಟಿಸಿದನು. ಆದಕಾರಣ ಸೊಲೊಮೋನನಿಗೆ ಎರಡು ಸಾರಿ ಪ್ರತ್ಯಕ್ಷನಾದ ಇಸ್ರಾಯೇಲಿನ ದೇವರಾದ ಕರ್ತನ ಕಡೆಯಿಂದ ಅವನ ಹೃದಯವು ತಿರುಗಿಹೋದದರಿಂದ ಕರ್ತನು ಅವನ ಮೇಲೆ ಕೋಪಿಸಿಕೊಂಡಿದ್ದನು. ಅನ್ಯ ದೇವರುಗಳ ಹಿಂದೆ ಹೋಗಬಾರದೆಂದು ಆತನು ಇದನ್ನು ಕುರಿತು ಅವನಿಗೆ ಆಜ್ಞಾಪಿಸಿದ್ದನು. ಆದರೆ ಕರ್ತನು ಆಜ್ಞಾಪಿಸಿ ದ್ದನ್ನು ಅವನು ಕೈಕೊಳ್ಳದೆ ಹೋದನು.