1 Chronicles · chapter 6 · verse 32
1 Chronicles 6:32 in Kannada
ಸೊಲೊ ಮೋನನು ಯೆರೂಸಲೇಮಿನಲ್ಲಿ ಕರ್ತನ ಮನೆಯನ್ನು ಕಟ್ಟುವ ವರೆಗೆ ಇವರು ಹಾಡುವ ಸೇವೆಯಲ್ಲಿ ಸಭೆಯ ಗುಡಾರ ನಿವಾಸದ ಮುಂದೆ ಸೇವಿಸುತ್ತಾ ಇದ್ದರು; ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.
Solo monanu yeroosaleminalli kartana maneyannu kattuva varege ivaru haaduva seveyalli sabheya gudaara nivaasada munde sevisuttaa iddaru; aaga avaru tamma seveyalli kramada prakaara kaayuttiddaru.
1 Chronicles 6:32 in English
- King James Version (KJV)
- And they ministered before the dwelling place of the tabernacle of the congregation with singing, until Solomon had built the house of the LORD in Jerusalem: and [then] they waited on their office according to their order.
- World English Bible (WEB)
- They ministered with song before the tabernacle of the Tent of Meeting until Solomon had built the LORD’s house in Jerusalem. They performed the duties of their office according to their order.
- American Standard Version (ASV)
- And they ministered with song before the tabernacle of the tent of meeting, until Solomon had built the house of Jehovah in Jerusalem: and they waited on their office according to their order.
- Bible in Basic English (BBE)
- They gave worship with songs before the House of the Tent of meeting, till Solomon put up the house of the Lord in Jerusalem; and they took their places for their work in their regular order.
- Darby Translation (DBY)
- And they ministered before the tabernacle of the tent of meeting with singing, until Solomon had built the house of Jehovah in Jerusalem; and they attended to their office according to their order.
- Webster's Bible (WBS)
- And they ministered before the dwelling-place of the tabernacle of the congregation with singing, until Solomon had built the house of the LORD in Jerusalem: and [then] they waited on their office, according to their order.
- Young's Literal Translation (YLT)
- and they are ministering before the tabernacle of the tent of meeting, in song, till the building by Solomon of the house of Jehovah in Jerusalem; and they stand according to their ordinance over their service.
Read in context
- 30ಇವನ ಮಗನಾದ ಉಜ್ಜಾನು; ಇವನ ಮಗನಾದ ಶಿಮ್ಮಾನು; ಇವನ ಮಗನಾದ ಹಗ್ಗೀಯನು; ಇವನ ಮಗನಾದ ಅಸಾಯನು.
- 31ಮಂಜೂಷವನ್ನು ನೆಲೆಯಾಗಿ ಇರಿಸಿದ ತರು ವಾಯ ದಾವೀದನು ಕರ್ತನ ಮನೆಯಲ್ಲಿ ಹಾಡುವ ಸೇವೆಯ ಮೇಲೆ ಇರಿಸಿದವರು ಇವರೇ.
- 32ಸೊಲೊ ಮೋನನು ಯೆರೂಸಲೇಮಿನಲ್ಲಿ ಕರ್ತನ ಮನೆಯನ್ನು ಕಟ್ಟುವ ವರೆಗೆ ಇವರು ಹಾಡುವ ಸೇವೆಯಲ್ಲಿ ಸಭೆಯ ಗುಡಾರ ನಿವಾಸದ ಮುಂದೆ ಸೇವಿಸುತ್ತಾ ಇದ್ದರು; ಆಗ ಅವರು ತಮ್ಮ ಸೇವೆಯಲ್ಲಿ ಕ್ರಮದ ಪ್ರಕಾರ ಕಾಯುತ್ತಿದ್ದರು.
- 33ತಮ್ಮ ಮಕ್ಕಳ ಸಂಗಡ ಕಾಯುತ್ತಿದ್ದವರು ಯಾರಂದರೆ--ಕೆಹಾತ್ಯರ ಮಕ್ಕಳಲ್ಲಿ ಸಂಗೀತಗಾರನಾದ ಹೇಮಾನನು. ಇವನು ಯೋವೇಲನ ಮಗನು,
- 34ಇವನು ಸಮುವೇಲನ ಮಗನು, ಇವನು ಎಲ್ಕಾನನ ಮಗನು, ಇವನು ಯೆರೋಹಾಮನ ಮಗನು, ಇವನು ಎಲೀಯೇಲನ ಮಗನು,
Cross references
- Psalm 135:1–3 ಕೀರ್ತನೆಗಳು 135:1–3ಕರ್ತನನ್ನು ಸ್ತುತಿಸಿರಿ. ಕರ್ತನ ಹೆಸರನ್ನು ಸ್ತುತಿಸಿರಿ; ಕರ್ತನ ಆಲಯ ದಲ್ಲಿಯೂ ನಮ್ಮ ದೇವರ ಆಲಯದ ಅಂಗಳ ಗಳಲ್ಲಿಯೂ ನಿಲ್ಲುವ ಕರ್ತನ ಸೇವಕರೇ, ಸ್ತುತಿಸಿರಿ. ಕರ್ತನನ್ನು ಸ್ತುತಿಸಿರಿ; ಕರ್ತನು ಒಳ್ಳೆಯವನು; ಆತನ ಹೆಸರಿಗೆ ಸ್ತುತಿಗಳನ್ನು ಹಾಡಿರಿ; ಅದು ರಮ್ಯ ವಾದದ್ದು.
- 1 Kings 8:6–13 1 ಅರಸುಗಳು 8:6–13ಇದಲ್ಲದೆ ಯಾಜಕರು ಕರ್ತನ ಒಡಂಬಡಿಕೆಯ ಮಂಜೂಷವನ್ನು ಮಹಾಪರಿಶುದ್ಧ ಸ್ಥಳವೆಂಬ ದೈವೋ ಕ್ತಿಯ ಮಂದಿರದ ಸ್ಥಾನಕ್ಕೆ ತಂದು ಕೆರೂಬಿಗಳ ರೆಕ್ಕೆಗಳ ಕೆಳಗೆ ಅದರ ಸ್ಥಳದಲ್ಲಿ ಇಟ್ಟರು. ಕೆರೂಬಿಗಳು ಎರಡು ರೆಕ್ಕೆಗಳನ್ನು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದ್ದವು. ಹೀಗೆಯೇ ಕೆರೂಬಿಗಳು ಮಂಜೂಷವನ್ನೂ ಅದರ ಕೋಲುಗಳನ್ನೂ ಮೇಲಿನಿಂದ ಮುಚ್ಚಿದ್ದವು. ಆಗ ಕೋಲುಗಳು ದೈವೋಕ್ತಿಯ ಸ್ಥಾನದ ಮುಂದೆ ಪರಿಶುದ್ಧ ಸ್ಥಳದಲ್ಲಿ ಕಾಣಲ್ಪಡುವ ಹಾಗೆ ಎಳಕೊಂಡರು; ಆದರೆ ಅವು ಹೊರಗೆ ಕಾಣಲ್ಪಡಲಿಲ್ಲ. ಅಲ್ಲಿ ಅವು ಇಂದಿನ ವರೆಗೂ ಇರುತ್ತವೆ. ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದೊಳಗಿಂದ ಬಂದ ಕಾಲದಲ್ಲಿ ಕರ್ತನು ಅವರಿಗೆ ಒಡಂಬಡಿಕೆ ಮಾಡಿದಾಗ ಮೋಶೆಯು ಹೋರೇಬಿನ ಬಳಿಯಲ್ಲಿ ಮಂಜೂಷದೊಳಗೆ ಇಟ್ಟ ಕಲ್ಲಿನ ಎರಡು ಹಲಿಗೆಗಳ ಹೊರತಾಗಿ ಅದರಲ್ಲಿ ಮತ್ತೇನೂ ಇರಲಿಲ್ಲ. ಯಾಜಕರು ಪರಿಶುದ್ಧ ಸ್ಥಳದಿಂದ ಬಂದಾಗ ಮೇಘವು ಕರ್ತನ ಮಂದಿರವನ್ನು ತುಂಬಿತ್ತು. ಕರ್ತನ ತೇಜಸ್ಸಿ ನಿಂದ ವ್ಯಾಪ್ತವಾಗಿದ್ದ ಮೇಘವು ಆಲಯವನ್ನು ತುಂಬಿ ಕೊಂಡದರಿಂದ ಯಾಜಕರು ಅಲ್ಲಿ ನಿಂತು ಸೇವೆಮಾಡ ಲಾರದವರಾದರು. ಆಗ ಸೊಲೊಮೋನನು--ಕಾರ್ಗತ್ತಲಲ್ಲಿ ವಾಸ ವಾಗಿರುವೆನೆಂದು ಕರ್ತನು ಹೇಳಿದ್ದಾನೆ. ನಿನಗೆ ನಿವಾಸದ ಮಂದಿರವನ್ನು ನೀನು ಎಂದೆಂದಿಗೂ ಅದರಲ್ಲಿ ವಾಸವಾಗಿರುವ ಹಾಗೆ ಶಾಶ್ವತ ಸ್ಥಳವನ್ನು ನಿಜವಾಗಿಯೂ ಕಟ್ಟಿಸಿದ್ದೇನೆ ಎಂದು ಹೇಳಿದನು.
- 2 Chronicles 29:25–30 2 ಪೂರ್ವಕಾಲವೃತ್ತಾಂತ 29:25–30ಇದಲ್ಲದೆ ದಾವೀದನೂ ಅರಸನ ದರ್ಶಿಯಾದ ಗಾದನೂ ಪ್ರವಾ ದಿಯಾದ ನಾತಾನನೂ ಇವರ ಆಜ್ಞೆಯ ಪ್ರಕಾರ ತಾಳ ವೀಣೆ ಕಿನ್ನರಿಗಳನ್ನು ಹಿಡಿದವರಾಗಿ ಕರ್ತನ ಆಲಯದಲ್ಲಿ ಲೇವಿಯರನ್ನು ನಿಲ್ಲಿಸಿದನು. ಕರ್ತನ ಆಜ್ಞೆಯು ಅವನ ಪ್ರವಾದಿಗಳ ಮುಖಾಂತರ ಹಾಗೆ ಇತ್ತು. ಲೇವಿಯರು ದಾವೀದನ ವಾದ್ಯಗಳನ್ನೂ ಯಾಜಕರು ತುತೂರಿಗಳನ್ನೂ ಹಿಡಿದು ನಿಂತಿರುವಾಗ ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿ ಯನ್ನು ಅರ್ಪಿಸಲು ಹೇಳಿದನು. ದಹನಬಲಿಯನ್ನು ಅರ್ಪಿಸಲು ಆರಂಭಿಸಿದಾಗ ತುತೂರಿಗಳಿಂದಲೂ ಇಸ್ರಾಯೇಲಿನ ಅರಸನಾದ ದಾವೀದನ ವಾದ್ಯಗ ಳಿಂದಲೂ ಕರ್ತನ ಹಾಡು ಆರಂಭವಾಯಿತು. ಆಗ ಸಭೆಯವರೆಲ್ಲರೂ ಆರಾಧಿಸಿದರು. ದಹನಬಲಿ ಅರ್ಪಿಸಿ ತೀರಿಸುವ ಪರ್ಯಂತರ ಹಾಡುಗಾರರು ಹಾಡಿದರು, ತುತೂರಿ ಊದುವವರು ಊದಿದರು. ಅವರು ಅರ್ಪಿಸುವದು ತೀರಿದಾಗ ಅರಸನೂ ಅವನ ಸಂಗಡ ಇದ್ದವರೆಲ್ಲರೂ ಬೊಗ್ಗಿ ಆರಾಧಿಸಿ ದರು. ಇದಲ್ಲದೆ ಅರಸನಾದ ಹಿಜ್ಕೀಯನೂ ಪ್ರಧಾ ನರೂ ದಾವೀದನ ಮತ್ತು ಪ್ರವಾದಿಯಾದ ಆಸಾಫನ ಮಾತುಗಳಿಂದ ಕರ್ತನನ್ನು ಸ್ತುತಿಸಬೇಕೆಂದು ಲೇವಿ ಯರಿಗೆ ಹೇಳಿದರು. ಆಗ ಅವರು ಸಂತೋಷವಾಗಿ ಸ್ತುತಿಸಿ ಬೊಗ್ಗಿಕೊಂಡು ಆರಾಧಿಸಿದರು.
- 1 Chronicles 9:33 1 ಪೂರ್ವಕಾಲವೃತ್ತಾಂತ 9:33ಇದಲ್ಲದೆ ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು ಸ್ವತಂತ್ರವಾಗಿ ಕೊಠಡಿ ಗಳಲ್ಲಿ ವಾಸವಾಗಿದ್ದರು; ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.
- Psalm 134:1–2 ಕೀರ್ತನೆಗಳು 134:1–2ಇಗೋ, ಕರ್ತನ ಆಲಯದಲ್ಲಿ ಪ್ರತಿ ರಾತ್ರಿ ನಿಲ್ಲುವವರಾದ ಕರ್ತನ ಸೇವಕರೆ ಎಲ್ಲಾ ಕರ್ತನನ್ನು ಸ್ತುತಿಸಿರಿ. ನಿಮ್ಮ ಕೈಗಳನ್ನು ಪರಿಶುದ್ಧ ಸ್ಥಳದಲ್ಲಿ ಎತ್ತಿ ಕರ್ತನನ್ನು ಸ್ತುತಿಸಿರಿ.ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನು ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.
- 2 Chronicles 35:15 2 ಪೂರ್ವಕಾಲವೃತ್ತಾಂತ 35:15ದಾವೀದನೂ ಆಸಾ ಫನೂ ಹೇಮಾನನೂ ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು; ಹಾಗೆಯೇ ದ್ವಾರಪಾಲಕರು ಪ್ರತಿಯೊಂದು ಬಾಗಲಲ್ಲಿ ಇದ್ದರು; ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು; ಯಾಕಂದರೆ ಅವರ ಸಹೋದರರಾದ ಲೇವಿಯರು ಅವರ ನಿಮಿತ್ತ ಸಿದ್ಧಮಾಡಿದರು.
- Ezra 3:10–11 ಎಜ್ರನು 3:10–11ಕಟ್ಟುವವರು ಕರ್ತನ ಮಂದಿರಕ್ಕೆ ಅಸ್ತಿವಾರ ಹಾಕುವಾಗ ಇಸ್ರಾ ಯೇಲಿನ ಅರಸನಾದ ದಾವೀದನ ಕಟ್ಟಳೆಯ ಪ್ರಕಾರ ಕರ್ತನನ್ನು ಸ್ತುತಿಸುವದಕ್ಕೆ ವಸ್ತ್ರಗಳನ್ನು ಧರಿಸಿಕೊಂಡವ ರಾಗಿ ತುತೂರಿಗಳನ್ನೂದುವ ಯಾಜಕರನ್ನೂ ತಾಳಗ ಳನ್ನು ಬಡಿಯುವ ಆಸಾಫನ ಮಕ್ಕಳಾದ ಲೇವಿಯರನ್ನೂ ಇಟ್ಟರು. ಆಗ ಅವರು ಕರ್ತನನ್ನು ಕೊಂಡಾಡಿ ಹೊಗಳಿ ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇಸ್ರಾಯೇಲಿನ ಮೇಲೆ ಉಂಟೆಂದೂ ಪರಸ್ಪರವಾಗಿ ಹಾಡಿದರು. ಅವರು ಕರ್ತನನ್ನು ಹೊಗ ಳಿದಾಗ ಕರ್ತನ ಮಂದಿರದ ಅಸ್ತಿವಾರವನ್ನು ಹಾಕುವ ನಿಮಿತ್ತ ಜನರೆಲ್ಲರು ಮಹಾಧ್ವನಿಯಿಂದ ಆರ್ಭಟಿಸಿ ದರು.
- Psalm 68:24–25 ಕೀರ್ತನೆಗಳು 68:24–25ದೇವರೇ, ನಿನ್ನ ಹೋಗೋಣಗಳನ್ನು ಪರಿಶುದ್ಧ ಸ್ಥಳದಲ್ಲಿ ನನ್ನ ದೇವರ ಮತ್ತು ನನ್ನ ಅರಸನ ಹೋಗೋಣಗಳನ್ನು ಅವರು ನೋಡಿದ್ದಾರೆ. ಹಾಡು ವವರು ಮುಂದಾಗಿಯೂ ಬಾರಿಸುವವರು ಹಿಂದಾ ಗಿಯೂ ಹೋದರು, ಅವರಲ್ಲಿ ದಮ್ಮಡಿ ಬಾರಿಸುವ ಕನ್ಯೆಯರು ಇದ್ದರು.
- Nehemiah 12:27–28 ನೆಹೆಮೀಯ 12:27–28ಯೆರೂಸಲೇಮಿನ ಗೋಡೆಯನ್ನು ಪ್ರತಿಷ್ಠೆ ಮಾಡುವಾಗ ಸ್ತುತಿಗಳಿಂದಲೂ ಹಾಡುವದರಿಂದಲೂ ತಾಳಗಳಿಂದಲೂ ವೀಣೆಗಳಿಂದಲೂ ಕಿನ್ನರಿಗಳಿಂದಲೂ ಪ್ರತಿಷ್ಠೆಯನ್ನು ಸಂತೋಷವಾಗಿ ಆಚರಿಸುವದಕ್ಕೆ ಲೇವಿ ಯರನ್ನು ಯೆರೂಸಲೇಮಿಗೆ ಬರಮಾಡುವ ನಿಮಿತ್ತವಾಗಿ ಅವರನ್ನು ಅವರ ಸಮಸ್ತ ಸ್ಥಳಗಳಲ್ಲಿ ಹುಡುಕಿದರು. ಹಾಡುಗಾರರ ಮಕ್ಕಳು ಯೆರೂಸಲೇಮಿನ ಸುತ್ತಲಿ ರುವ ಬೈಲಿನಿಂದಲೂ ನೆಟೋಫಾತ್ಯರ ಗ್ರಾಮಗ ಳಿಂದಲೂ
- 1 Chronicles 16:37–42 1 ಪೂರ್ವಕಾಲವೃತ್ತಾಂತ 16:37–42ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ದಾವೀದನು ಬಿಟ್ಟವರು ಯಾರಂದರೆ--ಪ್ರತಿ ದಿವಸದ ಕಾರ್ಯದ ಪ್ರಕಾರ ಯಾವಾಗಲೂ ಮಂಜೂಷದ ಮುಂದೆ ಸೇವೆಮಾಡಲು ಆಸಾಫನನ್ನೂ ಅವನ ಸಹೋ ದರರನ್ನೂ; ಒಬೇದೆದೋಮನನ್ನೂ ಅವನ ಸಹೋ ದರರಾದ ಅರವತ್ತೆಂಟು ಮಂದಿಯನ್ನೂ; ದ್ವಾರಪಾಲಕ ರಾದ ಯೆದುತೂನನ ಮಗನಾದ ಒಬೇದೆದೋಮ ನನ್ನೂ ಹೋಸನನ್ನೂ. ಯಾವಾಗಲೂ ಉದಯ ಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ದಹನಬಲಿ ಪೀಠದ ಮೇಲೆ ಕರ್ತನಿಗೆ ದಹನಬಲಿಗಳನ್ನು ಅರ್ಪಿಸು ವದಕ್ಕೂ ಕರ್ತನು ಇಸ್ರಾಯೇಲಿಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡು ವದಕ್ಕೂ ಗಿಬ್ಯೋನಿನಲ್ಲಿರುವ ಉನ್ನತದಲ್ಲಿ ಕರ್ತನ ಗುಡಾರದ ಮುಂದೆ ಸೇವಿಸುವದಕ್ಕೆ ಯಾಜಕನಾದ ಚಾದೋಕನೂ ಯಾಜಕರಾದ ಅವನ ಸಹೋದರರೂ ಅವರ ಸಂಗಡ ಆತನ ಕೃಪೆ ಯುಗಯುಗಕ್ಕಿರುವ ಕಾರಣ ಕರ್ತನನ್ನು ಕೊಂಡಾಡುವದಕ್ಕೆ ಹೇಮಾನನೂ ಯೆದುತೂನನೂ ಹೆಸರಿನಿಂದ ಲೆಕ್ಕಿಸಲ್ಪಟ್ಟು ಆಯಲ್ಪಟ್ಟ ಮಿಕ್ಕಾದವರೂ. ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.
- Nehemiah 12:45–47 ನೆಹೆಮೀಯ 12:45–47ಇದಲ್ಲದೆ ದಾವೀದನೂ ಅವನ ಮಗ ನಾದ ಸೊಲೊಮೋನನೂ ಕೊಟ್ಟ ಆಜ್ಞೆಯ ಪ್ರಕಾರ ಹಾಡುಗಾರರೂ ದ್ವಾರಪಾಲಕರೂ ತಮ್ಮ ದೇವರ ಸೇವೆಯ ಸಂಬಂಧದಲ್ಲಿಯೂ ಶುದ್ಧೀಕರಣದ ಸಂಬ ಂಧದಲ್ಲಿಯೂ ತಮ್ಮ ಕೆಲಸಗಳನ್ನು ನಡಿಸುತ್ತಿದ್ದರು. ಯಾಕಂದರೆ ದಾವೀದನ ಮತ್ತು ಆಸಾಫನ ದಿವ ಸಗಳಲ್ಲಿ ದೇವರಿಗೆ ಸ್ತೋತ್ರವನ್ನೂ ಕೊಂಡಾಟವನ್ನೂ ಹಾಡತಕ್ಕ ಹಾಡುಗಾರರಲ್ಲಿ ಮುಖ್ಯಸ್ಥರಾಗಿ ದ್ದರು.ಆದದರಿಂದ ಜೆರುಬ್ಬಾಬೆಲನ ದಿವಸಗಳ ಲ್ಲಿಯೂ ನೆಹೆವಿಾಯನ ದಿವಸಗಳಲ್ಲಿಯೂ ಇಸ್ರಾಯೇ ಲ್ಯರೆಲ್ಲರೂ ಹಾಡುಗಾರರಿಗೂ ದ್ವಾರಪಾಲಕರಿಗೂ ದಿನ ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಲೇವಿಯರಿಗೋಸ್ಕರ ಪರಿಶುದ್ಧ ಮಾಡಿದರು; ಲೇವಿಯರು ಹಾಗೆಯೇ ಆರೋನನ ಮಕ್ಕಳಿಗೆ ಪರಿಶುದ್ಧ ಮಾಡಿದರು. ಆದದರಿಂದ ಜೆರುಬ್ಬಾಬೆಲನ ದಿವಸಗಳ ಲ್ಲಿಯೂ ನೆಹೆವಿಾಯನ ದಿವಸಗಳಲ್ಲಿಯೂ ಇಸ್ರಾಯೇ ಲ್ಯರೆಲ್ಲರೂ ಹಾಡುಗಾರರಿಗೂ ದ್ವಾರಪಾಲಕರಿಗೂ ದಿನ ನಿತ್ಯದ ಕಟ್ಟಳೆಯಾದ ಅವರವರ ಪಾಲನ್ನು ಕೊಟ್ಟರು. ಇದಲ್ಲದೆ ಅವರು ಲೇವಿಯರಿಗೋಸ್ಕರ ಪರಿಶುದ್ಧ ಮಾಡಿದರು; ಲೇವಿಯರು ಹಾಗೆಯೇ ಆರೋನನ ಮಕ್ಕಳಿಗೆ ಪರಿಶುದ್ಧ ಮಾಡಿದರು.
- 1 Chronicles 6:10 1 ಪೂರ್ವಕಾಲವೃತ್ತಾಂತ 6:10ಯೋಹಾನಾನ ನನು ಯೊರೂಸಲೇಮಿನಲ್ಲಿ ಸೊಲೊಮೋನನು ಕಟ್ಟಿ ಸಿದ ದೇವಾಲಯದೊಳಗೆ ಯಾಜಕಸೇವೆನಡಿಸಿದ ಅಜರ್ಯನನ್ನು ಪಡೆದನು;
Original words (Hebrew)
- ministered · H8334שָׁרַת shârath
- before · H6440פָּנִים pânîym
- dwelling · H4908מִשְׁכָּן mishkân
- tabernacle · H168אֹהֶל ʼôhel
- congregation · H4150מוֹעֵד môwʻêd
- singing · H7892שִׁיר shîyr
- Solomon · H8010שְׁלֹמֹה Shᵉlômôh
- built · H1129בָּנָה bânâh
- house · H1004בַּיִת bayith
- Jerusalem · H3389יְרוּשָׁלַ͏ִם Yᵉrûwshâlaim
- waited · H5975עָמַד ʻâmad
- office · H5656עֲבֹדָה ʻăbôdâh
- order · H4941מִשְׁפָּט mishpâṭ