Psalms · chapter 68 · verse 24
Psalm 68:24 in Kannada
ದೇವರೇ, ನಿನ್ನ ಹೋಗೋಣಗಳನ್ನು ಪರಿಶುದ್ಧ ಸ್ಥಳದಲ್ಲಿ ನನ್ನ ದೇವರ ಮತ್ತು ನನ್ನ ಅರಸನ ಹೋಗೋಣಗಳನ್ನು ಅವರು ನೋಡಿದ್ದಾರೆ.
Devare, ninna hogonagalannu parishuddha sthaladalli nanna devara mattu nanna arasana hogonagalannu avaru nodiddaare.
Psalm 68:24 in English
- King James Version (KJV)
- They have seen thy goings, O God; [even] the goings of my God, my King, in the sanctuary.
- World English Bible (WEB)
- They have seen your processions, God, even the processions of my God, my King, into the sanctuary.
- American Standard Version (ASV)
- They have seen thy goings, O God, Even the goings of my God, my King, into the sanctuary.
- Bible in Basic English (BBE)
- We see your going, O God: even the going of my God, my King, into the holy place.
- Darby Translation (DBY)
- They have seen thy goings, O God, the goings of my God, my King, in the sanctuary.
- Webster's Bible (WBS)
- They have seen thy goings, O God; [even] the goings of my God, my King, in the sanctuary.
- Young's Literal Translation (YLT)
- They have seen Thy goings, O God, Goings of my God, my king, in the sanctuary.
Read in context
- 22ಬಾಷಾನಿನಿಂದ ತಿರಿಗಿ ಬರಮಾಡುವೆನು, ಸಮು ದ್ರದ ಅಗಾಧಗಳಿಂದ ನನ್ನ ಜನರನ್ನು ತಿರಿಗಿ ಬರ ಮಾಡುವೆನು ಎಂದು ಕರ್ತನು ಹೇಳಿದ್ದಾನೆ.
- 23ನಿನ್ನ ಪಾದವೂ ನಿನ್ನ ಶತ್ರುಗಳ ರಕ್ತದಲ್ಲಿ ಕಲಕುವ ಹಾಗೆ ಮಾಡುವೆನು. ನಿನ್ನ ನಾಯಿಗಳ ನಾಲಿಗೆಯೂ ಸಹ ಹಾಗೆಯೇ ಮಾಡುವದು.
- 24ದೇವರೇ, ನಿನ್ನ ಹೋಗೋಣಗಳನ್ನು ಪರಿಶುದ್ಧ ಸ್ಥಳದಲ್ಲಿ ನನ್ನ ದೇವರ ಮತ್ತು ನನ್ನ ಅರಸನ ಹೋಗೋಣಗಳನ್ನು ಅವರು ನೋಡಿದ್ದಾರೆ.
- 25ಹಾಡು ವವರು ಮುಂದಾಗಿಯೂ ಬಾರಿಸುವವರು ಹಿಂದಾ ಗಿಯೂ ಹೋದರು, ಅವರಲ್ಲಿ ದಮ್ಮಡಿ ಬಾರಿಸುವ ಕನ್ಯೆಯರು ಇದ್ದರು.
- 26ಸಭೆಗಳಲ್ಲಿ ದೇವರನ್ನು ಸ್ತುತಿ ಸಿರಿ; ಇಸ್ರಾಯೇಲನ ಬುಗ್ಗೆಯಿಂದ ಕರ್ತನನ್ನು ಸ್ತುತಿ ಸಿರಿ.
Cross references
- Psalm 47:5–7 ಕೀರ್ತನೆಗಳು 47:5–7ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ. ದೇವರಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ನಮ್ಮ ಅರಸನಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ದೇವರು ಭೂಮಿಗೆಲ್ಲಾ ಅರಸನು; ತಿಳುವಳಿಕೆಯಿಂದ ಸ್ತುತಿಗಳನ್ನು ಹಾಡಿರಿ.
- Psalm 63:2 ಕೀರ್ತನೆಗಳು 63:2ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ.
- 2 Samuel 6:12–17 2 ಸಮುವೇಲನು 6:12–17ದೇವರ ಮಂಜೂಷದ ನಿಮಿತ್ತ ಕರ್ತನು ಒಬೇ ದೆದೋಮನ ಮನೆಯನ್ನೂ ಅವನಿಗೆ ಉಂಟಾದ ದ್ದೆಲ್ಲವನ್ನೂ ಆಶೀರ್ವದಿಸಿದ್ದಾನೆಂದು ಅರಸನಾದ ದಾವೀದನಿಗೆ ತಿಳಿಸಲ್ಪಟ್ಟಿತು. ಆಗ ದಾವೀದನು ಹೊರಟು ಹೋಗಿ ದೇವರ ಮಂಜೂಷವನ್ನು ಒಬೇ ದೆದೋಮನ ಮನೆಯಿಂದ ದಾವೀದನ ಪಟ್ಟಣಕ್ಕೆ ಸಂತೋಷವಾಗಿ ತಂದನು. ಕರ್ತನ ಮಂಜೂಷ ವನ್ನು ಹೊತ್ತುಕೊಂಡು ಹೋಗುವವರು ಆರು ಹೆಜ್ಜೆ ನಡೆದಾಗ ಅವನು ಎತ್ತುಗಳನ್ನೂ ಕೊಬ್ಬಿದ ಪಶು ಗಳನ್ನೂ ಬಲಿಯಾಗಿ ಕೊಟ್ಟನು. ಇದಲ್ಲದೆ ದಾವೀ ದನು ನಾರಿನ ಎಫೋದನ್ನು ಧರಿಸಿಕೊಂಡು ತನ್ನ ಪೂರ್ಣ ಬಲದಿಂದ ಕರ್ತನ ಮುಂದೆ ನಾಟ್ಯವಾ ಡಿದನು. ಈ ಪ್ರಕಾರ ದಾವೀದನೂ ಇಸ್ರಾಯೇಲ್ ಮನೆಯವರೆಲ್ಲರೂ ಕರ್ತನ ಮಂಜೂಷವನ್ನು ಆರ್ಭಟ ದಿಂದಲೂ ತುತೂರಿಯ ಶಬ್ದದಿಂದಲೂ ಬರಮಾಡಿ ದರು. ಆದರೆ ಕರ್ತನ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ ಸೌಲನ ಮಗಳಾದ ವಿಾಕಲಳು ಕಿಟಿಕಿಯಿಂದ ನೋಡಿ ಅರಸನಾದ ದಾವೀ ದನು ಕರ್ತನ ಮುಂದೆ ಜಿಗಿಯುತ್ತಾ ನಾಟ್ಯವಾಡು ವದನ್ನು ಕಂಡು ತನ್ನ ಹೃದಯದಲ್ಲಿ ಅವನನ್ನು ತಿರಸ್ಕ ರಿಸಿದಳು. ಅವರು ಕರ್ತನ ಮಂಜೂಷವನ್ನು ಒಳಗೆ ತಂದು ದಾವೀದನು ಹಾಕಿಸಿದ ಗುಡಾರದೊಳಗೆ ಅದರ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ ದಾವೀದನು ಕರ್ತನ ಸನ್ನಿಧಿಯಲ್ಲಿ ದಹನಬಲಿಗಳನ್ನೂ ಸಮಾ ಧಾನದಬಲಿಗಳನ್ನೂ ಅರ್ಪಿಸಿದನು.
- Psalm 24:7–10 ಕೀರ್ತನೆಗಳು 24:7–10ಬಾಗಲುಗಳೇ, ನಿಮ್ಮ ತಲೆಗಳನ್ನು ಎತ್ತಿರಿ; ನಿತ್ಯ ದ್ವಾರಗಳೇ, ಎತ್ತಲ್ಪಡಿರಿ; ಮಹಿಮೆಯುಳ್ಳ ಅರಸನು ಒಳಗೆ ಬರುತ್ತಾನೆ. ಈ ಮಹಿಮೆಯ ಅರಸನು ಯಾರು? ಬಲವೂ ಪರಾಕ್ರಮವೂ ಉಳ್ಳ ಕರ್ತನು; ಯುದ್ಧದಲ್ಲಿ ಪರಾಕ್ರಮವುಳ್ಳ ಕರ್ತನು. ಬಾಗಲುಗಳೇ, ನಿಮ್ಮ ತಲೆಗಳನ್ನೆತ್ತಿರಿ; ನಿತ್ಯದ್ವಾರ ಗಳೇ, ಅವುಗಳನ್ನು ಎತ್ತಿರಿ; ಮಹಿಮೆಯ ಅರಸನು ಒಳಗೆ ಬರುತ್ತಾನೆ.ಮಹಿಮೆಯ ಅರಸನಾದ ಈತನು ಯಾರು? ಸೈನ್ಯಗಳ ಕರ್ತನು, ಈತನೇ ಮಹಿಮೆಯ ಅರಸನು--ಸೆಲಾ. ಮಹಿಮೆಯ ಅರಸನಾದ ಈತನು ಯಾರು? ಸೈನ್ಯಗಳ ಕರ್ತನು, ಈತನೇ ಮಹಿಮೆಯ ಅರಸನು--ಸೆಲಾ.
- 1 Chronicles 13:8 1 ಪೂರ್ವಕಾಲವೃತ್ತಾಂತ 13:8ಆಗ ದಾವೀದನೂ ಸಮಸ್ತ ಇಸ್ರಾ ಯೇಲ್ಯರೂ ತಮ್ಮ ಸಮಸ್ತ ಕಿನ್ನರಿ ವೀಣೆ ದಮ್ಮಡಿ ತಾಳ ತುತೂರಿಗಳಿಂದ ಬಲದಿಂದ ದೇವರ ಮುಂದೆ ಹಾಡುಗಳನ್ನೂ ಹಾಡಿದರು.
- 1 Chronicles 15:16–24 1 ಪೂರ್ವಕಾಲವೃತ್ತಾಂತ 15:16–24ಇದಲ್ಲದೆ ದಾವೀದನು ವಿಶೇಷವಾದ ವೀಣೆ ಗಳನ್ನೂ ಕಿನ್ನರಿಗಳನ್ನೂ ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನು ಎತ್ತುವ ಹಾಗೆ ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವ ದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು. ಹಾಗೆಯೇ ಲೇವಿಯರು ಯೋವೇಲನ ಮಗನಾದ ಹೇಮಾನನನ್ನೂ ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ ಮೆರಾರಿಯ ಕುಮಾರರ ಸಹೋದರರಲ್ಲಿ ಕೂಷಾಯನ ಮಗನಾದ ಎತಾನ ನನ್ನೂ ನೇಮಿಸಿದರು. ಅವರ ಸಂಗಡ ಎರಡನೇ ತರಗತಿಯ ತಮ್ಮ ಸಹೋದರರಾಗಿರುವ ಜೆಕರ್ಯ ನನ್ನೂ ಬೇನ್ನನ್ನೂ ಯಾಜೀಯೇಲನನ್ನೂ ಶೆವಿಾರಾ ಮೋತನನ್ನೂ ಯೆಹೀಯೇಲನನ್ನೂ ಉನ್ನಿಯನ್ನೂ ಎಲೀಯಾಬನನ್ನೂ ಬೆನಾಯನನ್ನೂ ಮಾಸೇಯನನ್ನೂ ಮತ್ತಿತ್ಯನನ್ನೂ ಎಲೀಫೆಲೇಹುವನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಒಬೇದೆದೋಮನನ್ನೂ ಯೆಗೀ ಯೇಲನನ್ನೂ ನೇಮಿಸಿದರು. ಹಾಡುಗಾರರಾದ ಹೇಮಾನನೂ ಆಸಾಫನೂ ಏತಾನನೂ ತಾಮ್ರದ ತಾಳಗಳನ್ನು ಬಾರಿಸುವದಕ್ಕೂ ಜೆಕರ್ಯನೂ ಅಜೀಯೇಲನೂ ಶೆವಿಾರಾಮೋತನೂ ಯೆಹೀ ಯೇಲನೂ ಉನ್ನಿಯೂ ಎಲೀಯಾಬನೂ ಮಾಸೇ ಯನೂ ಬೆನಾಯನೂ ಅಲಮೋತಿನಿಂದ ವೀಣೆಗಳನ್ನು ಬಾರಿಸುವದಕ್ಕೂ; ಮತ್ತಿತ್ಯನೂ ಎಲೀಫೆಲೇಹುವೂ ಮಿಕ್ನೇಯನೂ ಒಬೇದೆದೋಮನೂ ಯೆಗೀಯೇ ಲನೂ ಅಜಜ್ಯನೂ ಹೆಚ್ಚಳವಾಗಿ ಶಿಮಿನೇಟನಿಂದ ಕಿನ್ನರಿಗಳನ್ನು ಬಾರಿಸುವದಕ್ಕೂ ನೇಮಿಸಲ್ಪಟ್ಟಿದ್ದರು. ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡು ವದಕ್ಕೆ ನೇಮಿಸಲ್ಪಟ್ಟಿದ್ದನು. ಅವನು ಗ್ರಹಿಕೆಯುಳ್ಳವನಾ ದದರಿಂದ ಹಾಡುವದಕ್ಕೆ ಕಲಿಸುತ್ತಿದ್ದನು. ಬೆರಕ್ಯನೂ ಎಲ್ಕಾನನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು. ಯಾಜಕರಾದ ಶೆಬನ್ಯನೂ ಯೋಷಾಫಾಟನೂ ನೆತನೇಲ್ನೂ ಅಮಾಸೈಯು ಜೆಕರ್ಯನೂ ಬೆನಾಯನೂ ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು; ಒಬೇದೆ ದೋಮನೂ ಯೆಹೀಯನೂ ಮಂಜೂಷಕ್ಕೆ ದ್ವಾರ ಪಾಲಕರಾಗಿದ್ದರು.