1 Chronicles · chapter 7 · verse 14
1 Chronicles 7:14 in Kannada
ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು.
Manasseya kumaararu--avana hendatiyu hetta ashreeyelanu; araamyalaada upapatniyu gilyaadanige tandeyaada maakeeranannu hettalu.
1 Chronicles 7:14 in English
- King James Version (KJV)
- The sons of Manasseh; Ashriel, whom she bare: ([but] his concubine the Aramitess bare Machir the father of Gilead:
- World English Bible (WEB)
- The sons of Manasseh: Asriel, whom his concubine the Aramitess bore. She bore Machir the father of Gilead.
- American Standard Version (ASV)
- The sons of Manasseh: Asriel, whom his concubine the Aramitess bare; she bare Machir the father of Gilead.
- Bible in Basic English (BBE)
- The sons of Manasseh by his servant-wife, the Aramaean woman: she gave birth to Machir, the father of Gilead;
- Darby Translation (DBY)
- The sons of Manasseh: Asriel, ...whom she bore; his Syrian concubine bore Machir the father of Gilead.
- Webster's Bible (WBS)
- The sons of Manasseh; Ashriel, whom she bore: ([but] his concubine the Aramitess bore Machir the father of Gilead:
- Young's Literal Translation (YLT)
- Sons of Manasseh: Ashriel, whom Jaladah his Aramaean concubine bare, with Machir father of Gilead.
Read in context
- 12ಅಹೇರನ ಕುಮಾರರಾದ ಈರನೂ ಹುಶೀ ಮನೂ ಎಂಬವರ ಮಕ್ಕಳು ಶುಪ್ಪೀಮನೂ ಹುಪ್ಪೀ ಮನೂ ಇದ್ದರು.
- 13ನಫ್ತಾಲಿಯ ಕುಮಾರರು--ಯಹಚಿಯೇಲನು, ಗೂನೀಯು, ಯೇಚೆರನು, ಶಲ್ಲೂಮನು. ಇವರು ಬಿಲ್ಹಳ ಕುಮಾರರು.
- 14ಮನಸ್ಸೆಯ ಕುಮಾರರು--ಅವನ ಹೆಂಡತಿಯು ಹೆತ್ತ ಅಷ್ರೀಯೇಲನು; ಅರಾಮ್ಯಳಾದ ಉಪಪತ್ನಿಯು ಗಿಲ್ಯಾದನಿಗೆ ತಂದೆಯಾದ ಮಾಕೀರನನ್ನು ಹೆತ್ತಳು.
- 15ಆದರೆ ಈ ಮಾಕೀರನು ಹುಪ್ಪೀಮನು ಶುಪ್ಪೀಮನು ಎಂಬವರ ಸಹೋದರಿಯಾದ ಮಾಕಳನ್ನು ಹೆಂಡತಿ ಯಾಗಿ ತಕ್ಕೊಂಡನು. ಅವನ ಮೊಮ್ಮಗನ ಹೆಸರು ಚೆಲೋಫಾದನು; ಈ ಚೆಲೋಫಾದನಿಗೆ ಕುಮಾರ್ತೆ ಗಳು ಇದ್ದರು.
- 16ಮಾಕೀರನ ಹೆಂಡತಿಯಾದ ಮಾಕಳು ಮಗನನ್ನು ಹೆತ್ತು ಪೆರೆಷೆಂದು ಹೆಸರಿಟ್ಟಳು. ಅವನ ಸಹೋದರನ ಹೆಸರು ಶೆರೆಷ್; ಇವನಿಗೆ ಊಲಾಮನು, ರೆಕೆಮನು ಎಂಬ ಹೆಸರುಳ್ಳ ಕುಮಾರ ರಿದ್ದರು.
Cross references
- Deuteronomy 3:13–15 ಧರ್ಮೋಪದೇಶಕಾಂಡ 3:13–15ಮಿಕ್ಕ ಗಿಲ್ಯಾದನ್ನೂ ಓಗನ ರಾಜ್ಯವಾದ ಎಲ್ಲಾ ಬಾಷಾನನ್ನೂ ಮನಸ್ಸೆಯ ಅರ್ಧ ಕುಲಕ್ಕೆ ಕೊಟ್ಟೆನು; ಅರ್ಗೋಬಿನ ಸಮಸ್ತ ಸೀಮೆಯನ್ನೂ ಮಹಾಶರೀರಗಳ ದೇಶವೆಂದು ಹೇಳ ಲ್ಪಟ್ಟ ಸಮಸ್ತ ಭಾಷಾನನ್ನು ಅವರಿಗೆ ಕೊಟ್ಟೆನು. ಮನಸ್ಸೆಯ ಮಗನಾದ ಯಾಯಾರನು ಅರ್ಗೋ ಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯ ವರೆಗೆ ತಕ್ಕೊಂಡು ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನ ವರೆಗೆ ಹವ್ವೊತ್ ಯಾಯಾ ರೆಂದು ಹೆಸರಿಟ್ಟನು. ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು.
- Joshua 17:1–3 ಯೆಹೋಶುವ 17:1–3ಇದಲ್ಲದೆ ಮನಸ್ಸೆಯ ಗೋತ್ರಕ್ಕೂ ಭಾಗಸಿಕ್ಕಿತು. ಯಾಕಂದರೆ ಅವನು ಯೋಸೇಫ ನಿಗೆ ಚೊಚ್ಚಲ ಮಗನಾಗಿದ್ದನು. ಮನಸ್ಸೆಯ ಹಿರಿಯ ಮಗನಾದ ಗಿಲ್ಯಾದನ ತಂದೆಯಾದ ಮಾಕೀರನು ಶೂರನಾದದರಿಂದ ಗಿಲ್ಯಾದು ಬಾಷಾನು ಅವನ ಪಾಲಿಗೆ ಬಂದವು; ಮನಸ್ಸೆಯ ಉಳಿದ ಮಕ್ಕಳಾದ ಅಬೀಯೇಜೆರಿನ ಮಕ್ಕಳಿಗೂ ಹೇಲೆಕನ ಮಕ್ಕಳಿಗೂ ಅಸ್ರೀಯೇಲನ ಮಕ್ಕಳಿಗೂ ಶೆಕೆಮನ ಮಕ್ಕಳಿಗೂ ಹೇಫೆರನ ಮಕ್ಕಳಿಗೂ ಶೆವಿಾದನನ ಮಕ್ಕಳಿಗೂ ಅವರ ಕುಟುಂಬಗಳಿಗೆ ತಕ್ಕ ಬಾಧ್ಯತೆ ಉಂಟಾಯಿತು. ಇವರು ತಮ್ಮ ಕುಟುಂಬಗಳ ಪ್ರಕಾರ ಯೋಸೇಫನ ಮಗ ನಾದ ಮನಸ್ಸೆಯ ಗಂಡು ಮಕ್ಕಳಾಗಿದ್ದವರು. ಆದರೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾ ದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರರಿಲ್ಲ; ಆದರೆ ಮಹ್ಲಾ, ನೋವಾ, ಹೋಗ್ಲಾ, ಮಿಲ್ಕಾ, ತಿರ್ಚಾ ಎಂಬ ಹೆಸರುಳ್ಳ ಕುಮಾರ್ತೆ ಯರಿದ್ದರು.
- Joshua 13:31 ಯೆಹೋಶುವ 13:31ಗಿಲ್ಯಾದಿ ನಲ್ಲಿ ಅರ್ಧವನ್ನೂ ಬಾಷಾನಿನಲ್ಲಿ ಅಷ್ಟರೋತ್, ಎದ್ರೈ ಎಂಬ ಓಗನ ರಾಜ್ಯದ ಪಟ್ಟಣಗಳನ್ನೂ ಮನಸ್ಸೆಯ ಮಗನಾದ ಮಾಕೀರನ ಮಕ್ಕಳಿಗೆ, ಅವರ ಕುಟುಂಬಗಳ ಪ್ರಕಾರ ಮಾಕೀರನ ಮಕ್ಕಳಲ್ಲಿ ಅರ್ಧ ಜನಕ್ಕೆ ಕೊಟ್ಟನು.
- Numbers 32:30–42 ಅರಣ್ಯಕಾಂಡ 32:30–42ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟದಿದ್ದರೆ ಅವರು ನಿಮ್ಮೊಳಗೆ ಕಾನಾನ್ ದೇಶದಲ್ಲಿ ಸ್ವಾಸ್ತ್ಯವನ್ನು ಹೊಂದಬೇಕು ಅಂದನು. ಆಗ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಪ್ರತ್ಯುತ್ತರವಾಗಿ--ಕರ್ತನು ನಿನ್ನ ಸೇವಕರಿಗೆ ಹೇಳಿ ದ್ದಂತೆಯೇ ನಾವು ಮಾಡುವೆವು. ನಾವು ಯುದ್ಧಕ್ಕೆ ಸಿದ್ಧವಾಗಿ ಕರ್ತನ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು; ಆದರೆ ಯೊರ್ದನ್ ನದಿಯ ಈಚೆ ಯಲ್ಲಿರುವ ನಮ್ಮ ಸ್ವಾಸ್ತ್ಯದ ಭಾಗವೇ ನಮಗಿರಲಿ ಎಂದು ಹೇಳಿದರು. ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು. ಆಗ ಗಾದನ ಮಕ್ಕಳು ದೀಬೋನ್, ಅಟಾರೋತ್, ಆರೋಯೇರ್, ಅಟ್ರೋತ್ಪೊ ಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದ್ದರು. ರೂಬೇನನ ಮಕ್ಕಳು ಹೆಷ್ಬೋನ್, ಎಲೀಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು. ಮನಸ್ಸೆಯ ಮಗನಾದ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ ಅದನ್ನು ತಕ್ಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು. ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನಿಗೆ ಕೊಟ್ಟದ್ದರಿಂದ ಅವನು ಅದರಲ್ಲಿ ವಾಸಿ ಸಿದನು. ಆದರೆ ಮನಸ್ಸೆಯ ಮಗನಾದ ಯಾಯಾ ರನು ಹೋಗಿ, ಅವರ ನಗರಗಳನ್ನು ತಕ್ಕೊಂಡು, ಅವುಗಳಿಗೆ ಯಾಯಾರನ ನಗರಗಳೆಂದು ಹೆಸರಿಟ್ಟನು.ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು. ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು.
- Numbers 27:1 ಅರಣ್ಯಕಾಂಡ 27:1ಆಗ ಯೋಸೇಫನ ಮಗನಾದ ಮನಸ್ಸೆಯಕುಟುಂಬಗಳಲ್ಲಿ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನಾದ ಚಲ್ಪಹಾದನ ಕುಮಾರ್ತೆಯ ರಾದ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ
- Numbers 26:29–34 ಅರಣ್ಯಕಾಂಡ 26:29–34ಮಾಕೀರನು ಗಿಲ್ಯಾದನನ್ನು ಪಡೆದನು; ಗಿಲ್ಯಾದ ನಿಂದ ಗಿಲ್ಯಾದ್ಯರ ಕುಟುಂಬ; ಗಿಲ್ಯಾದನ ಕುಮಾರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ; ಅಸ್ರೀಯೇಲ ನಿಂದ ಅಸ್ರೀಯೇಲ್ಯರ ಕುಟುಂಬ; ಶೆಕೆಮನಿಂದ ಶೆಕೆಮ್ಯರ ಕುಟುಂಬ; ಶೆವಿಾದಾಯನಿಂದ ಶೆವಿಾದಾ ಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ. ಹೇಫೆರನ ಮಗನಾದ ಚಲ್ಪಹಾದನಿಗೆ ಕುಮಾರ ರಿಲ್ಲ, ಕುಮಾರ್ತೆಯರು ಇದ್ದರು; ಕುಮಾರ್ತೆಯರ ಹೆಸರುಗಳು. ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ. ಮನಸ್ಸೆಯ ಕುಟುಂಬಗಳು ಇವೇ; ಅವರಲ್ಲಿ ಎಣಿಸಲ್ಪಟ್ಟವರು ಐವತ್ತೆರಡು ಸಾವಿರದ ಏಳು ನೂರು ಮಂದಿ.
- Genesis 50:23 ಆದಿಕಾಂಡ 50:23ಯೋಸೇಫನು ಎಫ್ರಾಯಾಮಿನ ಮರಿ ಮೊಮ್ಮಕ್ಕ ಳನ್ನೂ ನೋಡಿದನು. ಮನಸ್ಸೆಯ ಮಗನಾದ ಮಾಕೀ ರನ ಮಕ್ಕಳು ಸಹ ಯೋಸೇಫನ ತೊಡೆಯ ಮೇಲೆಯೇ ಬೆಳೆದರು.
- Judges 5:14 ನ್ಯಾಯಸ್ಥಾಪಕರು 5:14ಅಮಾಲೇಕ್ಯರಿಗೆ ವಿರೋಧ ಮಾಡಿದವರ ಬೇರು ಎಫ್ರಾಯಾಮಿನಿಂದ ಉಂಟಾ ಯಿತು. ನಿನ್ನ ಹಿಂದೆ ನಿನ್ನ ಜನರಲ್ಲಿ ಬೆನ್ಯಾವಿಾನನೂ; ಮಾಕೀರನಲ್ಲಿಂದ ಅಧಿಪತಿಗಳೂ ಜೆಬುಲೂನನಲ್ಲಿಂದ ಬರಹಗಾರನ ಲೇಖನಿಯನ್ನು ಉಪಯೋಗಿಸುವ ವರೂ ಬಂದರು.
- 1 Chronicles 2:21–23 1 ಪೂರ್ವಕಾಲವೃತ್ತಾಂತ 2:21–23ತರುವಾಯ ಹೆಚ್ರೋನನು ಗಿಲ್ಯಾದನ ತಂದೆಯಾದ ಮಾಕೀರನ ಮಗಳ ಬಳಿಗೆ ಹೋದನು; ಅವನು ಅರವತ್ತು ವರುಷದವನಾಗಿರು ವಾಗ ಅವಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬನನ್ನು ಹೆತ್ತಳು. ಸೆಗೂಬನು ಯಾಯಾರನನ್ನು ಪಡೆದನು. ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತ ಮೂರು ಪಟ್ಟಣಗಳು ಉಂಟಾಗಿದ್ದವು. ಇದಲ್ಲದೆ ಅವನು ಗೆಷೂರ್ಯನ್ನೂ ಅರಾಮ್ಯನ್ನೂ ಯಾಯಾರನ ಪಟ್ಟಣಗಳನ್ನೂ ಕೆನತನ್ನೂ ಅದರ ಪಟ್ಟಣಗಳನ್ನೂಅಂದರೆ ಅರುವತ್ತು ಪಟ್ಟಣಗಳನ್ನು ತೆಗೆದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ಮಕ್ಕಳಿಗೆ ಇದ್ದವು.