1 Chronicles · chapter 9 · verse 1
1 Chronicles 9:1 in Kannada
ಹೀಗೆಯೇ ಇಸ್ರಾಯೇಲಿನವರೆಲ್ಲರೂ ವಂಶಾವಳಿಗಳ ಪ್ರಕಾರ ಲೆಕ್ಕಿಸಲ್ಪಟ್ಟಿದ್ದರು. ಇಗೋ, ತಮ್ಮ ಅಪರಾಧಗಳ ನಿಮಿತ್ತ ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಇಸ್ರಾಯೇಲ್ ಯೆಹೂದಗಳ ಅರಸರ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
Heegeye israayelinavarellaroo vanshaavaligala prakaara lekkisalpattiddaru. Igo, tamma aparaadhagala nimitta baabelige sereyaagi oyyalpatta israayel yehoodagala arasara pustakadalli bareyalpattive.
1 Chronicles 9:1 in English
- King James Version (KJV)
- So all Israel were reckoned by genealogies; and, behold, they [were] written in the book of the kings of Israel and Judah, [who] were carried away to Babylon for their transgression.
- World English Bible (WEB)
- So all Israel were listed by genealogies; and behold, they are written in the book of the kings of Israel. Judah was carried away captive to Babylon for their disobedience.
- American Standard Version (ASV)
- So all Israel were reckoned by genealogies; and, behold, they are written in the book of the kings of Israel. And Judah was carried away captive to Babylon for their transgression.
- Bible in Basic English (BBE)
- So all Israel was listed by their families; and, truly, they are recorded in the book of the kings of Israel. And Judah was taken away as prisoners to Babylon because of their sin.
- Darby Translation (DBY)
- And all Israel were registered by genealogy; and behold, they are written in the book of the kings of Israel. And Judah was carried away to Babylon because of their transgression.
- Webster's Bible (WBS)
- So all Israel were reckoned by genealogies; and behold, they [were] written in the book of the kings of Israel and Judah, [who] were carried away to Babylon for their transgression.
- Young's Literal Translation (YLT)
- And all Israel have reckoned themselves by genealogy, and lo, they are written on the book of the kings of Israel and Judah — they were removed to Babylon for their trespass.
Read in context
- 1ಹೀಗೆಯೇ ಇಸ್ರಾಯೇಲಿನವರೆಲ್ಲರೂ ವಂಶಾವಳಿಗಳ ಪ್ರಕಾರ ಲೆಕ್ಕಿಸಲ್ಪಟ್ಟಿದ್ದರು. ಇಗೋ, ತಮ್ಮ ಅಪರಾಧಗಳ ನಿಮಿತ್ತ ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಇಸ್ರಾಯೇಲ್ ಯೆಹೂದಗಳ ಅರಸರ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 2ಆದರೆ ತಮ್ಮ ಸ್ವಾಸ್ತ್ಯಗಳಲ್ಲಿ ತಮ್ಮ ಪಟ್ಟಣಗಳಲ್ಲಿ ಮೊದಲು ವಾಸ ವಾಗಿದ್ದವರು ಇಸ್ರಾಯೇಲ್ಯರೂ ಯಾಜಕರೂ ಲೇವಿ ಯರೂ ನೆತಿನಿಯರೂ.
- 3ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಹೂದನ ಮಕ್ಕಳೂ ಬೆನ್ಯಾವಿಾನಿನ ಮಕ್ಕಳೂ ಎಫ್ರಾಯಾಮ್ ಮನಸ್ಸೆ ಎಂಬವರ ಮಕ್ಕಳೂ ಯಾರಂದರೆ--
Cross references
- 1 Chronicles 5:25–26 1 ಪೂರ್ವಕಾಲವೃತ್ತಾಂತ 5:25–26ಆದರೆ ಅವರು ತಮ್ಮ ಪಿತೃಗಳ ದೇವರಿಗೆ ವಿರೋಧವಾಗಿ ಅಪರಾಧಮಾಡಿ ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು.ಆದ ಕಾರಣ ಇಸ್ರಾಯೇಲಿನ ದೇವರು ಅಶ್ಯೂರಿನ ಅರಸ ನಾದ ಪೂಲನ ಆತ್ಮವನ್ನೂ ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರದವರನ್ನೂ ಹಲಹಕ್ಕೂ ಹಾಬೋರಿಗೂ ಹಾರಕ್ಕೂ ಗೋಜಾನ್ ನದಿಯ ಪ್ರದೇಶಕ್ಕೂ ತಕ್ಕೊಂಡುಹೋದರು. ಅವರು ಇಂದಿನ ವರೆಗೂ ಅಲ್ಲೇ ಇದ್ದಾರೆ. ಆದ ಕಾರಣ ಇಸ್ರಾಯೇಲಿನ ದೇವರು ಅಶ್ಯೂರಿನ ಅರಸ ನಾದ ಪೂಲನ ಆತ್ಮವನ್ನೂ ಅಶ್ಯೂರಿನ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರದವರನ್ನೂ ಹಲಹಕ್ಕೂ ಹಾಬೋರಿಗೂ ಹಾರಕ್ಕೂ ಗೋಜಾನ್ ನದಿಯ ಪ್ರದೇಶಕ್ಕೂ ತಕ್ಕೊಂಡುಹೋದರು. ಅವರು ಇಂದಿನ ವರೆಗೂ ಅಲ್ಲೇ ಇದ್ದಾರೆ.
- Nehemiah 7:64 ನೆಹೆಮೀಯ 7:64ಇವರು ವಂಶಾವಳಿಯಾಗಿ ಬರೆಯಲ್ಪಟ್ಟವರಲ್ಲಿ ತಮ್ಮ ಹೆಸರು ಗಳನ್ನು ಹುಡುಕಿದರು; ಆದರೆ ಸಿಕ್ಕದೆ ಹೋದದ ರಿಂದ ಅವರು ಅಶುಚಿಯಾದವರೆಂದು ಎಣಿಸಲ್ಪಟ್ಟು ಯಾಜಕ ಉದ್ಯೋಗದಿಂದ ತೆಗೆದುಹಾಕಲ್ಪಟ್ಟರು.
- Nehemiah 7:5 ನೆಹೆಮೀಯ 7:5ತರುವಾಯ ಅವರು ವಂಶಾವಳಿಯಿಂದ ಲೆಕ್ಕಿಸಲ್ಪಡುವ ಹಾಗೆ ಪ್ರಮುಖರನ್ನೂ ಅಧಿಕಾರಸ್ಥರನ್ನೂ ಜನರನ್ನೂ ಕೂಡಿಸಿ ಕೊಳ್ಳಲು ನನ್ನ ದೇವರು ನನ್ನ ಹೃದಯದಲ್ಲಿ ಪ್ರೇರೇಪಿ ಸಿದನು. ಆಗ ನಾನು ಮೊದಲಿನಲ್ಲಿ ಬಂದವರ ವಂಶಾ ವಳಿಯ ಪತ್ರಿಕೆಯನ್ನು ಕಂಡೆನು.
- Ezra 2:62–63 ಎಜ್ರನು 2:62–63ಇವರು ವಂಶಾವಳಿಯ ಪ್ರಕಾರ ಲೆಕ್ಕಿಸ ಲ್ಪಟ್ಟವರಲ್ಲಿ ತಮ್ಮ ವಂಶಾವಳಿಯನ್ನು ಹುಡುಕಿದರು. ಅದು ಸಿಕ್ಕದೆಹೋದರಿಂದ ಅವರು ಅಶುದ್ಧ ರೆಂದು ಯಾಜಕ ಉದ್ಯೋಗದಿಂದ ತೆಗೆಯಲ್ಪಟ್ಟರು. ಊರೀಮ್ ತುವ್ಮೆಾಮ್ ಇರುವ ಯಾಜಕನು ಏಳುವ ವರೆಗೂ ಮಹಾಪರಿಶುದ್ಧವಾದವುಗಳನ್ನು ತಿನ್ನ ಬಾರದೆಂದು ತರ್ಷಾತನು ಅವರಿಗೆ ಹೇಳಿದನು.
- Jeremiah 52:14–15 ಯೆರೆಮೀಯ 52:14–15ಸುತ್ತಲಿರುವ ಯೆರೂಸಲೇಮಿನ ಗೋಡೆ ಗಳನ್ನೆಲ್ಲಾ ಕಾವಲಿನವರ ಅಧಿಪತಿಯ ಸಂಗಡ ಇದ್ದ ಕಸ್ದೀಯರ ದಂಡೆಲ್ಲಾ ಕೆಡವಿ ಹಾಕಿತು. ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವ ರಾದ ಕೆಲವರನ್ನೂ ಪಟ್ಟಣದಲ್ಲಿ ಉಳಿದ ಜನರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಸಮೂಹದಲ್ಲಿ ಮಿಕ್ಕಾದವರನ್ನೂ ಸೆರೆಯಾಗಿ ಒಯ್ದನು.
- Ezra 2:59 ಎಜ್ರನು 2:59ತೇಲ್ಮೆಲಹ ತೇಲ್ಹರ್ಷ ಕೆರೂಬದ್ದಾನ್ ಇಮ್ಮೇರ್ ಎಂಬುವ ಸ್ಥಳಗಳನ್ನು ಬಿಟ್ಟು ಬಂದವರಾರಂದರೆ, ದೆಲಾ ಯನ ಮಕ್ಕಳೂ ಟೋಬೀಯನ ಮಕ್ಕಳೂ ನೆಕೋದನ ಮಕ್ಕಳೂ--ಆರುನೂರ ಐವತ್ತೆರಡು ಮಂದಿಯು.
- Daniel 1:2 ದಾನಿಯೇಲನು 1:2ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
- Matthew 1:1–16 ಮತ್ತಾಯನು 1:1–16ಯೇಸು ಕ್ರಿಸ್ತನ ವಂಶಾವಳಿಯ ಪುಸ್ತಕವು; ಆತನು ದಾವೀದನ ಮಗನು, ಆತನು ಅಬ್ರ ಹಾಮನ ಮಗನು. ಅಬ್ರಹಾಮನಿಂದ ಇಸಾಕನು ಹುಟ್ಟಿದನು; ಇಸಾಕ ನಿಂದ ಯಾಕೋಬನು ಹುಟ್ಟಿದನು; ಯಾಕೋಬ ನಿಂದ ಯೂದನೂ ಅವನ ಸಹೋದರರೂ ಹುಟ್ಟಿ ದರು; ಯೂದನಿಂದ ತಾಮಾರಳಲ್ಲಿ ಪೆರೆಚನೂ ಜೆರಹನೂ ಹುಟ್ಟಿದರು; ಪೆರೆಚನಿಂದ ಹೆಚ್ರೋಮನು ಹುಟ್ಟಿದನು; ಹೆಚ್ರೋಮನಿಂದ ಅರಾಮನು ಹುಟ್ಟಿ ದನು; ಅರಾಮನಿಂದ ಅವ್ಮೆಾನಾದಾಬನು ಹುಟ್ಟಿ ದನು; ಅವ್ಮೆಾನಾದಾಬನಿಂದ ನಹಶೋನನು ಹುಟ್ಟಿ ದನು; ನಹಶೋನನಿಂದ ಸಲ್ಮೋನನು ಹುಟ್ಟಿದನು; ಸಲ್ಮೋನನಿಂದ ರಾಹಾಬಳಲ್ಲಿ ಬೋವಜನು ಹುಟ್ಟಿ ದನು; ಬೋವಜನಿಂದ ರೂತಳಲ್ಲಿ ಓಬೇದನು ಹುಟ್ಟಿದನು; ಓಬೇದನಿಂದ ಇಷಯನು ಹುಟ್ಟಿದನು; ಇಷಯನಿಂದ ಅರಸನಾದ ದಾವೀದನು ಹುಟ್ಟಿದನು. ಅರಸನಾದ ದಾವೀದನಿಂದ ಊರೀಯನ ಹೆಂಡತಿ ಯಾಗಿದ್ದವಳಲ್ಲಿ ಸೊಲೊಮೋನನು ಹುಟ್ಟಿದನು; ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು; ಅಬೀಯನಿಂದ ಆಸನು ಹುಟ್ಟಿದನು; ಆಸನಿಂದ ಯೆಹೋಷಾಫಾಟನು ಹುಟ್ಟಿದನು; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು; ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು; ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು; ಮನಸ್ಸೆಯಿಂದ ಆಮೋನನು ಹುಟ್ಟಿದನು; ಆಮೋನನಿಂದ ಯೋಷೀಯನು ಹುಟ್ಟಿದನು; ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು. ಅವರು ಬಾಬೆಲಿಗೆ ಬಂದ ಮೇಲೆ ಯೆಕೂನ್ಯ ನಿಂದ ಶೆಯಲ್ತಿಯೇಲನು ಹುಟ್ಟಿದನು; ಶೆಯೆಲ್ತಿ ಯೇಲಿನಿಂದ ಜೆರುಬ್ಬಾಬೆಲನು ಹುಟ್ಟಿದನು; ಜೆರುಬ್ಬಾಬೆಲನಿಂದ ಅಬಿಹೂದನು ಹುಟ್ಟಿದನು; ಅಬಿಹೂದನಿಂದ ಎಲ್ಯಕೀಮನು ಹುಟ್ಟಿದನು; ಎಲ್ಯ ಕೀಮನಿಂದ ಅಜೋರನು ಹುಟ್ಟಿದನು; ಅಜೋರ ನಿಂದ ಸದೋಕನು ಹುಟ್ಟಿದನು; ಸದೋಕನಿಂದ ಅಖೀಮನು ಹುಟ್ಟಿದನು; ಅಖೀಮನಿಂದ ಎಲಿ ಹೂದನು ಹುಟ್ಟಿದನು; ಎಲಿಹೂದನಿಂದ ಎಲಿ ಯಾಜರನು ಹುಟ್ಟಿದನು; ಎಲಿಯಾಜರನಿಂದ ಮತ್ತಾನ ನು ಹುಟ್ಟಿದನು; ಮತ್ತಾನನಿಂದ ಯಾಕೋಬನು ಹುಟ್ಟಿದನು; ಕ್ರಿಸ್ತನೆಂದು ಕರೆಯಲ್ಪಟ್ಟ ಯೇಸು ಮರಿ ಯಳಲ್ಲಿ ಹುಟ್ಟಿದನು; ಆಕೆಯ ಗಂಡನಾದ ಯೋಸೇ ಫನು ಯಾಕೋಬನಿಂದ ಹುಟ್ಟಿದನು.
- 2 Chronicles 33:11 2 ಪೂರ್ವಕಾಲವೃತ್ತಾಂತ 33:11ಆದಕಾರಣ ಕರ್ತನು ಅಶ್ಶೂರದ ಅರಸನ ಸೈನ್ಯದ ಅಧಿಪತಿಗಳನ್ನು ಬರಮಾಡಿದನು. ಅವರು ಮನಸ್ಸೆಯನ್ನು ಮುಳ್ಳುಗಿಡಗಳಲ್ಲಿ ಹಿಡಿದು ಅವನಿಗೆ ಸಂಕೋಲೆಗಳನ್ನು ಹಾಕಿ ಅವನನ್ನು ಬಾಬೆಲಿಗೆ ಒಯ್ದರು.
- Luke 3:28–38 ಲೂಕನು 3:28–38ಇವನು ಮೆಲ್ಖಿಯ ಮಗನು; ಇವನು ಅದ್ದಿಯ ಮಗನು; ಇವನು ಕೊಸಾಮನ ಮಗನು; ಇವನು ಎಲ್ಮದಾಮನ ಮಗನು; ಇವನು ಏರನ ಮಗನು; ಇವನು ಯೋಸೇಯನ ಮಗನು; ಇವನು ಎಲಿಯೇಜರನ ಮಗನು; ಇವನು ಯೋರೈಮನ ಮಗನು; ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಸಿಮಿ ಯೋನನ ಮಗನು; ಇವನು ಯೂದನ ಮಗನು; ಇವನು ಯೋಸೇಫನ ಮಗನು; ಇವನು ಯೋನಾಮನ ಮಗನು; ಇವನು ಎಲಿಯಕೀಮನ ಮಗನು; ಇವನು ಮೆಲೆಯಾನ ಮಗನು; ಇವನು ಮೆನ್ನನ ಮಗನು; ಇವನು ಮತ್ತಾಥನ ಮಗನು; ಇವನು ನಾತಾನನ ಮಗನು; ಇವನು ದಾವೀದನ ಮಗನು; ಇವನು ಇಷಯನ ಮಗನು; ಇವನು ಓಬೇದನ ಮಗನು; ಇವನು ಬೋವಜನ ಮಗನು; ಇವನು ಸಲ್ಮೋನನ ಮಗನು; ಇವನು ನಹಸ್ಸೋನನ ಮಗನು; ಇವನು ಅಮ್ಮಿನಾದಾಬನ ಮಗನು; ಇವನು ಅರಾಮನ ಮಗನು; ಇವನು ಎಸ್ರೋಮನ ಮಗನು; ಇವನು ಪೆರೆಸನ ಮಗನು; ಇವನು ಯೂದನ ಮಗನು; ಇವನು ಯಾಕೋಬನ ಮಗನು; ಇವನು ಇಸಾಕನ ಮಗನು; ಇವನು ಅಬ್ರಹಾಮನ ಮಗನು; ಇವನು ತೇರನ ಮಗನು; ಇವನು ನಹೋರನ ಮಗನು; ಇವನು ಸೆರೂಗನ ಮಗನು; ಇವನು ರೆಗೂವನ ಮಗನು; ಇವನು ಪೆಲೆಗನ ಮಗನು; ಇವನು ಹೇಬೆರನ ಮಗನು; ಇವನು ಸಾಲನ ಮಗನು; ಇವನು ಕಯಿನಾನನ ಮಗನು; ಇವನು ಅರ್ಫಕ್ಷಾದನ ಮಗನು; ಇವನು ಶೇಮನ ಮಗನು; ಇವನು ನೋಹನ ಮಗನು; ಇವನು ಲಾಮೆಕನ ಮಗನು; ಇವನು ಮೆತೂಷಲನ ಮಗನು; ಇವನು ಹನೋಕನ ಮಗನು; ಇವನು ಯೆರೆದನ ಮಗನು; ಇವನು ಮಹಲಲೇಲನ ಮಗನು; ಇವನು ಕಾಯಿನನ ಮಗನು;ಇವನು ಎನೋಷನ ಮಗನು; ಇವನು ಸೇಥನ ಮಗನು; ಇವನು ಆದಾಮನ ಮಗನು; ಇವನು ದೇವರ ಮಗನು. ಇವನು ಎನೋಷನ ಮಗನು; ಇವನು ಸೇಥನ ಮಗನು; ಇವನು ಆದಾಮನ ಮಗನು; ಇವನು ದೇವರ ಮಗನು.
- 2 Chronicles 36:9–10 2 ಪೂರ್ವಕಾಲವೃತ್ತಾಂತ 36:9–10ಯೆಹೋಯಾಕೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು.
- Jeremiah 39:9 ಯೆರೆಮೀಯ 39:9ಆಗ ಪಟ್ಟಣದೊಳಗೆ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಅವನ ಕಡೆಗೆ ಒಳಬಿದ್ದು ಮೊರೆ ಹೊಕ್ಕವರನ್ನೂ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಕಾವಲಿನವರ ಅಧಿಪತಿ ಯಾದ ನೆಬೂಜರದಾನನು ಬಾಬೆಲಿಗೆ ಸೆರೆಯಾಗಿ ತಕ್ಕೊಂಡು ಹೋದನು.