1 Chronicles · chapter 9 · verse 2
1 Chronicles 9:2 in Kannada
ಆದರೆ ತಮ್ಮ ಸ್ವಾಸ್ತ್ಯಗಳಲ್ಲಿ ತಮ್ಮ ಪಟ್ಟಣಗಳಲ್ಲಿ ಮೊದಲು ವಾಸ ವಾಗಿದ್ದವರು ಇಸ್ರಾಯೇಲ್ಯರೂ ಯಾಜಕರೂ ಲೇವಿ ಯರೂ ನೆತಿನಿಯರೂ.
Aadare tamma svaastyagalalli tamma pattanagalalli modalu vaasa vaagiddavaru israayelyaroo yaajakaroo levi yaroo netiniyaroo.
1 Chronicles 9:2 in English
- King James Version (KJV)
- Now the first inhabitants that [dwelt] in their possessions in their cities [were], the Israelites, the priests, Levites, and the Nethinims.
- World English Bible (WEB)
- Now the first inhabitants who lived in their possessions in their cities were Israel, the priests, the Levites, and the temple servants.
- American Standard Version (ASV)
- Now the first inhabitants that dwelt in their possessions in their cities were Israel, the priests, the Levites, and the Nethinim.
- Bible in Basic English (BBE)
- Now the first to take up their heritage in their towns were: Israel, the priests, the Levites, and the Nethinim.
- Darby Translation (DBY)
- And the inhabitants that were first in their possessions in their cities were the Israelites, the priests, the Levites, and the Nethinim.
- Webster's Bible (WBS)
- Now the first inhabitants that [dwelt] in their possessions in their cities [were] , the Israelites, the priests, Levites, and the Nethinims.
- Young's Literal Translation (YLT)
- And the first inhabitants, who [are] in their possession, in their cities, of Israel, [are] the priests, the Levites, and the Nethinim.
Read in context
- 1ಹೀಗೆಯೇ ಇಸ್ರಾಯೇಲಿನವರೆಲ್ಲರೂ ವಂಶಾವಳಿಗಳ ಪ್ರಕಾರ ಲೆಕ್ಕಿಸಲ್ಪಟ್ಟಿದ್ದರು. ಇಗೋ, ತಮ್ಮ ಅಪರಾಧಗಳ ನಿಮಿತ್ತ ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಇಸ್ರಾಯೇಲ್ ಯೆಹೂದಗಳ ಅರಸರ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 2ಆದರೆ ತಮ್ಮ ಸ್ವಾಸ್ತ್ಯಗಳಲ್ಲಿ ತಮ್ಮ ಪಟ್ಟಣಗಳಲ್ಲಿ ಮೊದಲು ವಾಸ ವಾಗಿದ್ದವರು ಇಸ್ರಾಯೇಲ್ಯರೂ ಯಾಜಕರೂ ಲೇವಿ ಯರೂ ನೆತಿನಿಯರೂ.
- 3ಆದರೆ ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಹೂದನ ಮಕ್ಕಳೂ ಬೆನ್ಯಾವಿಾನಿನ ಮಕ್ಕಳೂ ಎಫ್ರಾಯಾಮ್ ಮನಸ್ಸೆ ಎಂಬವರ ಮಕ್ಕಳೂ ಯಾರಂದರೆ--
- 4ಊತೈನ ಮಗನಾದ ಅವ್ಮೆಾಹೂ ದನು; ಇವನು ಒಮ್ರಿಯ ಮಗನು; ಇವನು ಇಮ್ರಿಯ ಮಗನು; ಇವನು ಬಾನೀಯನ ಮಗನು; ಇವನು ಯೆಹೂದನ ಮಗನಾದ ಪೆರೆಚನ ಸಂತಾನದವನು.
Cross references
- Nehemiah 7:73 ನೆಹೆಮೀಯ 7:73ಹೀಗೇಯೇ ಯಾಜಕರೂ ಲೇವಿಯರೂ ದ್ವಾರ ಪಾಲಕರೂ ಹಾಡುಗಾರರೂ ಜನರಲ್ಲಿ ಕೆಲವರೂ ನೆತಿನಿಯರೂ ಸಮಸ್ತ ಇಸ್ರಾಯೇಲ್ಯರೂ ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸವಾಗಿದ್ದರು. ಏಳನೇ ತಿಂಗಳು ಬಂದಾಗ ಇಸ್ರಾಯೇಲನ ಮಕ್ಕಳು ತಮ್ಮ ತಮ್ಮ ಪಟ್ಟಣಗಳಲ್ಲಿದ್ದರು.
- Ezra 8:20 ಎಜ್ರನು 8:20ದಾವೀ ದನೂ ಪ್ರಧಾನರೂ ಲೇವಿಯರನ್ನು ಸೇವಿಸುವದಕ್ಕೆ ನೇಮಿಸಿದ ನೆತಿನಿಯರಲ್ಲಿ ಇನ್ನೂರ ಇಪ್ಪತ್ತು ಮಂದಿ ನೆತಿನಿಯರನ್ನೂ ನಮ್ಮ ಬಳಿಗೆ ಕರಕೊಂಡು ಬಂದರು. ಅವರೆಲ್ಲರೂ ಹೆಸರು ಹೆಸರಾಗಿ ಬರೆಯಲ್ಪಟ್ಟಿದ್ದರು.
- Ezra 2:58 ಎಜ್ರನು 2:58ನೆತನಿಮಿನವರೂ ಸೊಲೊಮೋನನ ಸೇವಕ ಮಕ್ಕಳೂ--ಮುನ್ನೂರ ತೊಂಭತ್ತೆರಡು ಮಂದಿಯು.
- Ezra 2:70 ಎಜ್ರನು 2:70ಯಾಜಕರೂ ಲೇವಿಯರೂ ಜನರಲ್ಲಿ ಕೆಲವರೂ ಹಾಡುಗಾರರೂ ಬಾಗಲು ಕಾಯುವವರು ನೆತನಿಮಿ ನವರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಇಸ್ರಾ ಯೇಲ್ಯರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.
- Ezra 2:43 ಎಜ್ರನು 2:43ನೆತಿನಿಯರಾದ ಜೀಹನ ಮಕ್ಕಳೂ ಹಸೂಫನ ಮಕ್ಕಳೂ ಟಬ್ಬಾವೋತನ ಮಕ್ಕಳೂ
- Nehemiah 7:60 ನೆಹೆಮೀಯ 7:60ಅಮೋನನ ಮಕ್ಕಳುನೆತಿನಿಯರೂ ಸೊಲೊಮೋನನ ಸೇವಕರ ಮಕ್ಕಳೂ ಕೂಡ ಮುನ್ನೂರ ತೊಂಭತ್ತೆರಡು ಮಂದಿಯು.
- Nehemiah 11:3–22 ನೆಹೆಮೀಯ 11:3–22ಯೆಹೂದದ ಪಟ್ಟಣಗಳಲ್ಲಿ ಇಸ್ರಾಯೇಲ್ಯರೂ ಯಾಜಕರೂ ಲೇವಿಯರೂ ನೆತಿನಿಯರೂ ಸೊಲೊ ಮೋನನ ಸೇವಕರ ಮಕ್ಕಳೂ ಅವರವರು ತಮ್ಮ ತಮ್ಮ ಪಟ್ಟಣಗಳ ಸ್ವಾಸ್ತ್ಯಗಳಲ್ಲಿ ವಾಸವಾಗಿದ್ದರು;ಆದರೆ ವಾಸವಾಗಿದ್ದ ಸೀಮೆಯ ಮುಖ್ಯಸ್ಥರು ಯಾರಂದರೆ-- ಯೆರೂಸಲೇಮಿನೊಳಗೆ ಯೂದನ ಮಕ್ಕಳಲ್ಲಿಯೂ ಬೆನ್ಯಾವಿಾನನ ಮಕ್ಕಳಲ್ಲಿಯೂ ಕೆಲ ವರು ವಾಸವಾಗಿದ್ದರು. ಯೆಹೂದನ ಮಕ್ಕಳು ಯಾರಂದರೆ--ಪೆರೆಚನ ಮಕ್ಕಳಲ್ಲಿ ಮಹಲಲೇಲನ ಮಗನಾದ ಶೆಫಟ್ಯನ ಮಗ ನಾದ ಅಮರ್ಯನ ಮಗನಾದ ಜೆಕರ್ಯನ ಮಗನಾದ ಉಜ್ಜೀಯನ ಮಗನಾದ ಅತಾಯನೂ. ಶಿಲೋನಿಯ ಮಗನಾದ ಜೆಕರೀಯನ ಮಗನಾದ ಯೋಯಾರೀಬನ ಮಗನಾದ ಅದಾಯನ ಮಗನಾದ ಹಜಾಯನ ಮಗನಾದ ಕೊಲ್ಹೋಜೆಯ ಮಗನಾದ ಬಾರೂಕನ ಮಗನಾದ ಮಾಸೇಯನೂ, ಯೆರೂ ಸಲೇಮಿನಲ್ಲಿ ವಾಸವಾಗಿರುವ ಪೆರೆಚನ ಕುಮಾರರೆಲ್ಲಾ ನಾನೂರ ಅರವತ್ತೆಂಟು ಮಂದಿ. ಇವರು ಪರಾಕ್ರಮಶಾಲಿಗಳು. ಬೆನ್ಯಾವಿಾನನ ಕುಮಾರರು ಯಾರಂದರೆ--ಯೆಶಾ ಯನ ಮಗನಾದ ಈತೀಯೇಲನ ಮಗನಾದ ಮಾಸೇ ಯನ ಮಗನಾದ ಕೋಲಾಯನ ಮಗನಾದ ಪೆದಾ ಯನ ಮಗನಾದ ಯೋವೇದನ ಮಗನಾದ ಮೆಷು ಲ್ಲಾಮನ ಮಗನಾದ ಸಲ್ಲುವು. ಅವನ ತರುವಾಯ ಗಬ್ಬಾಯನು, ಸಲ್ಲಾಯನು, ಮೊದಲಾದ ಒಂಭೈನೂರ ಇಪ್ಪತ್ತೆಂಟು ಮಂದಿಯು. ಜಿಕ್ರಿಯ ಮಗನಾದ ಯೋವೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಹಸ್ಸೆನೂವನ ಮಗನಾದ ಯೆಹೂದನು ಪಟ್ಟಣದ ಮೇಲೆ ಎರಡನೆಯವನಾಗಿದ್ದನು. ಯಾಜಕರಲ್ಲಿ ಯಾರಂದರೆ--ಯೋಯಾರೀಬನ ಮಗನಾದ ಯೆದಾಯನು, ಯಾಕೀನನು. ಅಹೀ ಟೂಬನ ಮಗನಾದ ಮೆರಾಯೋತನ ಮಗನಾದ ಚಾದೋಕನ ಮಗನಾದ ಮೆಷುಲ್ಲಾಮನ ಮಗನಾದ ಹಿಲ್ಕೀಯನ ಮಗನಾದ ಸೆರಾಯನು ದೇವರ ಆಲ ಯದ ನಾಯಕನಾಗಿದ್ದನು. ಮನೆಯ ಕೆಲಸವನ್ನು ನಡಿಸುವ ಅವರ ಸಹೋದರರು ಎಂಟು ನೂರ ಇಪ್ಪತ್ತೆರಡು ಮಂದಿ ಇದ್ದರು. ಮಲ್ಕೀಯನ ಮಗನಾದ ಪಷ್ಹೂರನ ಮಗನಾದ ಜೆಕರೀಯನ ಮಗನಾದ ಅಮ್ಜಿಯ ಮಗನಾದ ಪೆಲಲ್ಯನ ಮಗನಾದ ಯೆರೋ ಹಾಮನ ಮಗನಾದ ಅದಾಯನೂ. ಪಿತೃಗಳಲ್ಲಿ ಮುಖ್ಯಸ್ಥರಾದ ಅವನ ಸಹೋದರರೂ ಇನ್ನೂರ ನಾಲ್ವತ್ತೆರಡು ಮಂದಿಯಾಗಿದ್ದರು. ಇಮ್ಮೇರನ ಮಗ ನಾದ ಮೆಷಿಲ್ಲೇಮೋತನ ಮಗನಾದ ಅಹಜೈಯ ಮಗನಾದ ಅಜರೇಲನ ಮಗನಾದ ಅಮಷ್ಷೈಯೂ. ಅವರ ಸಹೋದರರಾದ ಪರಾಕ್ರಮಶಾಲಿಗಳೂ ನೂರ ಇಪ್ಪತ್ತೆಂಟು ಮಂದಿಯಾಗಿದ್ದರು. ಮಹಾ ಪುರುಷರಲ್ಲಿ ಒಬ್ಬನ ಮಗನಾದ ಜಬ್ದೀಯೇಲನು ಅವರಿಗೆ ಮೇಲ್ವಿಚಾರಕನಾಗಿದ್ದನು. ಲೇವಿಯರಲ್ಲಿ ಯಾರಂದರೆ--ಲೇವಿಯರ ಯಜ ಮಾನರಲ್ಲಿ ಬುನ್ನೀಯ ಮಗನಾದ ಹಷಬ್ಯನ ಮಗನಾದ ಅಜ್ರೀಕಾಮನ ಮಗನಾದ ಹಷ್ಷೂಬನ ಮಗನಾದ ಶೆಮಾಯನು; ಶಬ್ಬೆತೈನೂ ಯೋಜಾಬಾದನೂ ದೇವರ ಆಲಯದ ಹೊರಗಿನ ಕೆಲಸವನ್ನು ವಿಚಾರಿಸುವವರಾಗಿದ್ದರು. ಇದಲ್ಲದೆ ಆಸಾಫನ ಮಗ ನಾದ ಜಬ್ದೀಯ ಮಗನಾದ ವಿಾಕಾಯನ ಮಗ ನಾದ ಮತ್ತನ್ಯನು ಪ್ರಾರ್ಥನೆಯಲ್ಲಿ ಸ್ತುತಿಯನ್ನು ಪ್ರಾರಂಭಿಸಲು ಮುಖ್ಯಸ್ಥನಾಗಿದ್ದನು. ಅವನ ಸಹೋ ದರರಲ್ಲಿ ಎರಡನೆಯವನು ಬಕ್ಬುಕ್ಯನು; ಅವನ ಸಂಗಡ ಯೆದುತೂನನ ಮಗನಾದ ಗಾಲಾಲನ ಮಗನಾದ ಶಮ್ಮೂವನ ಮಗನಾದ ಅಬ್ದನು. ಪರಿ ಶುದ್ಧ ಪಟ್ಟಣದಲ್ಲಿರುವ ಲೇವಿಯರೆಲ್ಲಾ ಇನ್ನೂರ ಎಂಭತ್ತು ನಾಲ್ಕು ಮಂದಿಯಾಗಿದ್ದರು. ದ್ವಾರಪಾಲಕರಾದ ಅಕ್ಕೂಬನೂ ಟಲ್ಮೋನನೂ ಬಾಗಲುಗಳನ್ನು ಕಾಯುವವರಾದ ಅವರ ಸಹೋ ದರರೂ ನೂರ ಎಪ್ಪತ್ತೆರಡು ಮಂದಿಯಾಗಿದ್ದರು. ಇಸ್ರಾಯೇಲ್ಯರ ಮಿಕ್ಕಾದ ಯಾಜಕರೂ ಲೇವಿ ಯರೂ ತಮ್ಮ ತಮ್ಮ ಸ್ವಾಸ್ತ್ಯಗಳಾದ ಯೆಹೂದದ ಎಲ್ಲಾ ಪಟ್ಟಣಗಳಲ್ಲಿ ವಾಸವಾಗಿದ್ದರು. ಆದರೆ ನೆತಿನಿಯರು ಓಫೇಲಿನಲ್ಲಿ ವಾಸವಾಗಿದ್ದರು. ಚೀಹನೂ ಗಿಷ್ಪನೂ ನೆತಿನಿಯರ ಮೇಲಿದ್ದರು; ವಿಾಕನ ಮಗ ನಾದ ಮತ್ತನ್ಯನ ಮಗನಾದ ಹಷಬ್ಯನ ಮಗನಾದ ಬಾನೀಯ ಮಗನಾದ ಉಜ್ಜಿಯು ಯೆರೂಸಲೇಮಿ ನಲ್ಲಿರುವ ಲೇವಿಯರ ಮೇಲ್ವಿಚಾರಕನಾಗಿದ್ದನು.
- Joshua 9:21–27 ಯೆಹೋಶುವ 9:21–27ಏನಂದರೆ, ಪ್ರಧಾನರಾದ ನಾವು ಅವರಿಗೆ ಹೇಳಿದ ಹಾಗೆಯೇ ಅವರನ್ನು ಜೀವದಿಂದ ಉಳಿಸಿ ಎಲ್ಲಾ ಸಭೆಗೆ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಇರಲಿ ಎಂದು ಪ್ರಧಾನರು ಸಭೆಯವರ ಸಂಗಡ ಹೇಳಿದರು. ತರುವಾಯ ಯೆಹೋಶುವನು ಅವರನ್ನು ಕರಿಸಿ ಅವರಿಗೆ--ನಮ್ಮ ಮಧ್ಯದಲ್ಲಿ ವಾಸವಾಗಿರುವ ನೀವು ನಮ್ಮನ್ನು ಮೋಸ ಗೊಳಿಸಿ ನಾವು ನಿಮಗೆ ಬಹಳ ದೂರವಾಗಿರುವ ವರೆಂದು ನಮ್ಮ ಸಂಗಡ ಹೇಳಿದ್ದೇನು? ಈಗ ನೀವು ಶಪಿಸಲ್ಪಟ್ಟವರು; ನಿಮ್ಮಲ್ಲಿ ಒಬ್ಬನಾದರೂ ದಾಸತ್ವ ದಿಂದ ಬಿಡಿಸಲ್ಪಡುವದಿಲ್ಲ; ನನ್ನ ದೇವರ ಮನೆಗೆ ಕಟ್ಟಿಗೆ ಕಡಿಯುವವರೂ ನೀರು ತರುವವರೂ ಆಗಿರು ವಿರಿ ಎಂದು ಹೇಳಿದನು. ಅದಕ್ಕವರು ಯೆಹೋಶುವ ನಿಗೆ--ನಿಮಗೆ ದೇಶವನ್ನೆಲ್ಲಾ ಒಪ್ಪಿಸಿಕೊಡುವದಕ್ಕೂ ದೇಶದ ನಿವಾಸಿಗಳನ್ನೆಲ್ಲಾ ನಿಮ್ಮ ಮುಂದೆ ನಾಶಮಾಡು ವದಕ್ಕೂ ನಿಮ್ಮ ದೇವರಾದ ಕರ್ತನು ತನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ್ದು ನಿಮ್ಮ ಸೇವಕರಿಗೆ ನಿಶ್ಚಯವಾಗಿ ತಿಳಿಸಲ್ಪಟ್ಟದ್ದರಿಂದ ನಾವು ನಮ್ಮ ಪ್ರಾಣಗಳಿಗೋಸ್ಕರ ನಿಮಗೆ ಬಹಳ ಭಯಪಟ್ಟು ಈ ಕಾರ್ಯವನ್ನು ಮಾಡಿದೆವು. ಈಗ ಇಗೋ, ನಾವು ನಿನ್ನ ಕೈಯಲ್ಲಿ ಇದ್ದೇವೆ; ನಿನ್ನ ದೃಷ್ಟಿಗೆ ಒಳ್ಳೇದಾಗಿಯೂ ಸರಿಯಾ ಗಿಯೂ ತೋಚುವ ಹಾಗೆ ನಮಗೆ ಮಾಡು ಎಂದು ಉತ್ತರ ಕೊಟ್ಟರು. ಆ ಪ್ರಕಾರವೇಯೆಹೋಶುವನು ಅವರಿಗೆ ಮಾಡಿ ಇಸ್ರಾಯೇಲ್ ಮಕ್ಕಳು ಅವರನ್ನು ಕೊಂದುಹಾಕದ ಹಾಗೆ ಅವರನ್ನು ಇವರ ಕೈಯಿಂದ ತಪ್ಪಿಸಿ ಬಿಟ್ಟುಈ ವರೆಗೂ ಇರುವ ಹಾಗೆಯೇ ಅವರನ್ನು ಆ ದಿನದಲ್ಲಿ ಸಭೆಗೂ ಕರ್ತನು ಆದು ಕೊಳ್ಳುವ ಸ್ಥಳದಲ್ಲಿರುವ ಆತನ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಮಾಡಿದನು. ಈ ವರೆಗೂ ಇರುವ ಹಾಗೆಯೇ ಅವರನ್ನು ಆ ದಿನದಲ್ಲಿ ಸಭೆಗೂ ಕರ್ತನು ಆದು ಕೊಳ್ಳುವ ಸ್ಥಳದಲ್ಲಿರುವ ಆತನ ಬಲಿಪೀಠಕ್ಕೂ ಕಟ್ಟಿಗೆ ಕಡಿಯುವವರಾಗಿಯೂ ನೀರು ತರುವವರಾಗಿಯೂ ಮಾಡಿದನು.