1 Corinthians · chapter 11 · verse 30
1 Corinthians 11:30 in Kannada
ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರೂ ರೋಗಿಗಳೂ ಆಗಿದ್ದಾರೆ; ಅನೇಕರು ನಿದ್ರಿಸುತ್ತಾರೆ.
Ee kaaranadindale nimmalli bahu mandi balaheenaroo rogigaloo aagiddaare; anekaru nidrisuttaare.
1 Corinthians 11:30 in English
- King James Version (KJV)
- For this cause many [are] weak and sickly among you, and many sleep.
- World English Bible (WEB)
- For this cause many among you are weak and sickly, and not a few sleep.
- American Standard Version (ASV)
- For this cause many among you are weak and sickly, and not a few sleep.
- Bible in Basic English (BBE)
- For this cause a number of you are feeble and ill, and a number are dead.
- Darby Translation (DBY)
- On this account many among you [are] weak and infirm, and a good many are fallen asleep.
- Webster's Bible (WBS)
- For this cause many [are] weak and sickly among you, and many sleep.
- Young's Literal Translation (YLT)
- Because of this, among you many [are] weak and sickly, and sleep do many;
Read in context
- 28ಆದರೆ ಒಬ್ಬನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯಲ್ಲಿ ತಕ್ಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ.
- 29ಯಾಕಂದರೆ ಕರ್ತನ ದೇಹವೆಂದು ವಿವೇಚಿಸದೆ ಅಯೋಗ್ಯವಾಗಿ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವದರಿಂದ ನ್ಯಾಯತೀರ್ಪಿಗೊಳ ಗಾಗುವನು.
- 30ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರೂ ರೋಗಿಗಳೂ ಆಗಿದ್ದಾರೆ; ಅನೇಕರು ನಿದ್ರಿಸುತ್ತಾರೆ.
- 31ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ.
- 32ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.
Cross references
- Revelation 3:19 ಪ್ರಕಟನೆ 3:19ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.
- Exodus 15:26 ವಿಮೋಚನಕಾಂಡ 15:26ಆತನು-- ನೀನು ನಿನ್ನ ದೇವರಾದ ಕರ್ತನ ಸ್ವರಕ್ಕೆ ಶ್ರದ್ಧೆಯಿಂದ ಕಿವಿಗೊಟ್ಟು ಆತನ ದೃಷ್ಟಿಯಲ್ಲಿ ಸರಿಯಾದದ್ದನ್ನು ಮಾಡಿ ಆತನ ಆಜ್ಞೆಗಳಿಗೆ ಕಿವಿಗೊಟ್ಟು ಆತನ ನಿಯಮ ಗಳನ್ನು ಕೈಕೊಂಡರೆ ಐಗುಪ್ತ್ಯರ ಮೇಲೆ ಬರಮಾಡಿದ ಯಾವ ವ್ಯಾಧಿಯನ್ನೂ ನಿನ್ನ ಮೇಲೆ ಬರಮಾಡುವದಿಲ್ಲ; ನಿನ್ನನ್ನು ಸ್ವಸ್ಥಪಡಿಸುವ ಕರ್ತನು ನಾನೇ ಆಗಿದ್ದೇನೆ ಅಂದನು.ತರುವಾಯ ಅವರು ಹನ್ನೆರಡು ನೀರಿನ ಬಾವಿಗಳೂ ಎಪ್ಪತ್ತು ಖರ್ಜೂರದ ಮರಗಳೂ ಇದ್ದ ಏಲೀಮಿಗೆ ಬಂದರು. ಅವರು ಆ ನೀರುಗಳ ಬಳಿಯಲ್ಲಿ ಇಳುಕೊಂಡರು.
- Numbers 20:12 ಅರಣ್ಯಕಾಂಡ 20:12ಆಗ ಕರ್ತನು ಮೋಶೆ ಆರೋನನ ಸಂಗಡ ಮಾತನಾಡಿ--ನೀವು ಇಸ್ರಾಯೇಲ್ ಮಕ್ಕಳ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧಮಾಡುವದಕ್ಕೆ ನನ್ನಲ್ಲಿ ವಿಶ್ವಾಸಿ ಸದೆ ಇದ್ದ ಕಾರಣ ನಾನು ಅವರಿಗೆ ಕೊಟ್ಟ ದೇಶದಲ್ಲಿ ನೀವು ಸಮೂಹವನ್ನು ಸೇರಿಸುವದಿಲ್ಲ ಅಂದನು.
- Psalm 38:1–8 ಕೀರ್ತನೆಗಳು 38:1–8ಓ ಕರ್ತನೇ, ನಿನ್ನ ರೌದ್ರದಿಂದ ನನ್ನನ್ನು ಗದರಿಸಬೇಡ; ನಿನ್ನ ರೋಷದಿಂದ ನನ್ನನ್ನು ಶಿಕ್ಷಿಸಬೇಡ. ನಿನ್ನ ಬಾಣಗಳು ನನ್ನಲ್ಲಿ ಬಲವಾಗಿ ನೆಟ್ಟಿವೆ; ನಿನ್ನ ಕೈ ನನ್ನ ಮೇಲೆ ಭಾರವಾಗಿದೆ. ನಿನ್ನ ಕೋಪದ ನಿಮಿತ್ತವಾಗಿ ನನ್ನ ಶರೀರದಲ್ಲಿ ಸ್ವಸ್ಥವೇನೂ ಇಲ್ಲ; ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ವಿಶ್ರಾಂತಿಯೇ ಇಲ್ಲ. ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿಹೋಗಿವೆ; ಭಾರವಾದ ಹೊರೆಯ ಹಾಗೆ ನನಗೆ ವಿಾರಿದ ಭಾರವಾಗಿವೆ. ನನ್ನ ಬಾಸುಂಡೆಗಳು ನನ್ನ ಮೂಢತ್ವದ ನಿಮಿತ್ತ ನಾರುತ್ತಾ ಕೀವು ತುಂಬಿ ಅವೆ. ನಾನು ಕುಗ್ಗಿದ್ದೇನೆ, ಬಹಳವಾಗಿ ಬೊಗ್ಗಿದ್ದೇನೆ; ದಿನವೆಲ್ಲಾ ದುಃಖವುಳ್ಳವನಾಗಿ ತಿರುಗಾಡುತ್ತೇನೆ. ನನ್ನ ನಡುವು ಉರಿಯಿಂದ ತುಂಬಿದೆ; ನನ್ನ ಮಾಂಸದಲ್ಲಿ ಸ್ವಸ್ಥವೇನೂ ಇಲ್ಲ. ನಾನು ಬಹಳವಾಗಿ ಜಜ್ಜಲ್ಪಟ್ಟು ಬಲಹೀನನಾಗಿದ್ದೇನೆ; ನನ್ನ ಹೃದಯದ ನರಳುವಿಕೆ ಯಿಂದ ಮೂಲ್ಗುತ್ತೇನೆ.
- Amos 3:2 ಆಮೋಸ 3:2ಭೂಮಿಯ ಎಲ್ಲಾ ಕುಟುಂಬಗಳಲ್ಲಿ ನಿಮ್ಮನ್ನು ಮಾತ್ರವೇ ತಿಳಿದಿದ್ದೇನೆ; ಆದದರಿಂದ ನಾನು ನಿಮ್ಮ ಎಲ್ಲಾ ಅಕ್ರಮಗಳಿಗಾಗಿ ಶಿಕ್ಷಿಸುತ್ತೇನೆ.
- 1 Thessalonians 4:14 1 ಥೆಸಲೊನೀಕದವರಿಗೆ 4:14ಯೇಸು ಸತ್ತು ತಿರಿಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನ ಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬ ಬೇಕಲ್ಲವೇ.
- Psalm 78:30–31 ಕೀರ್ತನೆಗಳು 78:30–31ಅವರು ತಮ್ಮ ಆಶೆಯನ್ನು ಬಿಡದೆ ಅವರ ಊಟವು ಇನ್ನೂ ಅವರ ಬಾಯಿಯಲ್ಲಿ ಇರುವಾಗ ದೇವರ ಕೋಪವು ಅವರ ಮೇಲೆ ಎದ್ದು ಅವರಲ್ಲಿ ಕೊಬ್ಬಿದವ ರನ್ನು ಕೊಂದುಹಾಕಿ ಇಸ್ರಾಯೇಲಿನ ಪ್ರಾಯಸ್ಥರನ್ನು ಹೊಡೆದು ಬೀಳಿಸಿತು.
- Numbers 20:24 ಅರಣ್ಯಕಾಂಡ 20:24ಆರೋನನು ತನ್ನ ಜನರ ಸಂಗಡ ಕೂಡಿಸಲ್ಪಡುವನು; ನೀವು ಮೆರೀಬಾದ ನೀರಿನ ಹತ್ತಿರ ನನ್ನ ಮಾತಿಗೆ ತಿರುಗಿ ಬಿದ್ದದರಿಂದ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಟ್ಟ ದೇಶಕ್ಕೆ ಅವನು ಪ್ರವೇಶಿಸುವದಿಲ್ಲ.
- Psalm 89:31–34 ಕೀರ್ತನೆಗಳು 89:31–34ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ, ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು. ಆದಾಗ್ಯೂ ನನ್ನ ಪ್ರೀತಿ ಕರುಣೆಯನ್ನು ಅವನಿಂದ ಸಂಪೂರ್ಣವಾಗಿ ತೊಲಗಿಸೆನು; ಇಲ್ಲವೇ ನನ್ನ ನಂಬಿಗಸ್ತಿಕೆಯನ್ನು ವ್ಯರ್ಥ ಮಾಡೆನು. ನನ್ನ ಒಡಂಬಡಿಕೆಯನ್ನು ನಾನು ಮುರಿ ಯೆನು; ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.
- 1 Kings 13:21–24 1 ಅರಸುಗಳು 13:21–24ಅವನು ಯೆಹೂದದಿಂದ ಬಂದ ದೇವರ ಮನುಷ್ಯನಿಗೆ--ನೀನು ಕರ್ತನ ಮಾತಿಗೆ ತಿರುಗಿಬಿದ್ದು ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾ ಪಿಸಿದ ಆಜ್ಞೆಯನ್ನು ಕೈಕೊಳ್ಳದೆ ಹಿಂದಕ್ಕೆ ಬಂದುರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ ಎಂದು ಕರ್ತನು ನಿನಗೆ ಹೇಳಿದ ಸ್ಥಳದಲ್ಲಿ ನೀನು ರೊಟ್ಟಿ ತಿಂದು ನೀರು ಕುಡಿದದ್ದರಿಂದ ನಿನ್ನ ಹೆಣ ನಿನ್ನ ಪಿತೃಗಳ ಸಮಾಧಿಗೆ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ ಎಂದು ಹೇಳಿದನು. ಅವನು ರೊಟ್ಟಿ ತಿಂದು ನೀರು ಕುಡಿದ ತರುವಾಯ ಇವನು ಕರತಂದ ಪ್ರವಾದಿ ಗೋಸ್ಕರ ಕತ್ತೆಗೆ ತಡಿ ಹಾಕಿದನು. ಅವನು ಹೋದ ತರುವಾಯ ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು. ಅವನ ಹೆಣ ದಾರಿಯಲ್ಲಿ ಹಾಕ ಲ್ಪಟ್ಟಿತು; ಕತ್ತೆಯೂ ಸಿಂಹವೂ ಹೆಣದ ಬಳಿಯಲ್ಲಿ ನಿಂತುಕೊಂಡಿದ್ದವು.
- Numbers 21:6–9 ಅರಣ್ಯಕಾಂಡ 21:6–9ಆಗ ಕರ್ತನು ಜನರೊಳಗೆ ಉರಿ ಸರ್ಪ ಗಳನ್ನು ಕಳುಹಿಸಿದನು; ಅವು ಜನರನ್ನು ಕಚ್ಚಿದ್ದರಿಂದ ಇಸ್ರಾಯೇಲ್ಯರಲ್ಲಿ ಬಹು ಜನರು ಸತ್ತುಹೋದರು. ಆದದರಿಂದ ಜನರು ಮೋಶೆಯ ಬಳಿಗೆ ಬಂದು --ನಾವು ಕರ್ತನಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ; ಆತನು ನಮ್ಮಿಂದ ಸರ್ಪಗಳನ್ನು ದೂರ ಮಾಡುವ ಹಾಗೆ ಆತನಿಗೆ ಪ್ರಾರ್ಥನೆಮಾಡು ಅಂದರು. ಮೋಶೆಯು ಜನರಿ ಗೋಸ್ಕರ ಪ್ರಾರ್ಥನೆಮಾಡಿದನು. ಆಗ ಕರ್ತನು ಮೋಶೆಗೆ ಹಿತ್ತಾಳೆಯಿಂದ ಉರಿ ಸರ್ಪದ ಆಕಾರದಲ್ಲಿ ಒಂದನ್ನು ಮಾಡಿಸಿಕೊಂಡು ಕಂಬದ ಮೇಲೆ ಇಡು; ಆಗ ಕಚ್ಚಲ್ಪಟ್ಟವರೆಲ್ಲರು ಅದರ ಮೇಲೆ ದೃಷ್ಟ್ಪಿಯಿಟ್ಟರೆ ಬದುಕುವರು ಅಂದನು. ಮೋಶೆಯು ಹಿತ್ತಾಳೆಯ ಸರ್ಪವನ್ನು ಮಾಡಿ ಕಂಬದ ಮೇಲೆ ಇಟ್ಟಾಗ ಆದದ್ದೇನಂದರೆ, ಸರ್ಪವು ಕಚ್ಚಿದ ಮನುಷ್ಯನು ಹಿತ್ತಾಳೆಯ ಸರ್ಪದ ಕಡೆಗೆ ನೋಡಿದಾಗ ಬದುಕಿದನು.
- 2 Samuel 12:14–18 2 ಸಮುವೇಲನು 12:14–18ಹೇಗಿ ದ್ದರೂ ಈ ಕಾರ್ಯದಿಂದ ನೀನು ಕರ್ತನ ಶತ್ರುಗಳಿಗೆ ಬಹಳವಾಗಿ ದೇವದೂಷಣೆ ಮಾಡುವಂತೆ ಆಸ್ಪದ ಕೊಟ್ಟ ಕಾರಣ ನಿನಗೆ ಹುಟ್ಟಿದ ಮಗುವು ಸಹ ನಿಶ್ಚಯ ವಾಗಿ ಸಾಯುವದು ಅಂದನು. ಆಗ ನಾತಾನನು ತನ್ನ ಮನೆಗೆ ಹೋದನು. ಕರ್ತನು--ಊರೀಯನ ಹೆಂಡತಿಯು ದಾವೀದ ನಿಗೆ ಹೆತ್ತ ಕೂಸನ್ನು ಹೊಡೆದನು. ಅದು ಬಹಳ ಅಸ್ವಸ್ಥವಾಯಿತು. ದಾವೀದನು ಕೂಸಿಗೋಸ್ಕರ ದೇವ ರನ್ನು ಬೇಡಿಕೊಂಡನು. ಇದಲ್ಲದೆ ದಾವೀದನು ಉಪ ವಾಸಮಾಡಿ ಒಳಗೆ ಹೋಗಿ ರಾತ್ರಿಯೆಲ್ಲಾ ನೆಲದ ಮೇಲೆ ಬಿದ್ದುಕೊಂಡಿದ್ದನು. ಅವನನ್ನು ಎಬ್ಬಿಸುವದಕ್ಕೆ ಅವನ ಮನೆಯ ಹಿರಿಯರು ಅವನ ಬಳಿಗೆ ಬಂದರು; ಆದರೆ ಅವನಿಗೆ ಮನಸ್ಸಿಲ್ಲದೆ ಇತ್ತು. ಅವರ ಸಂಗಡ ಭೋಜನ ಮಾಡದೆ ಹೋದನು. ಮಗುವು ಏಳನೇ ದಿವಸ ಸತ್ತುಹೋಯಿತು. ಆಗ ಮಗುವು ಸತ್ತು ಹೋಯಿತೆಂದು ದಾವೀದನ ಸೇವಕರು ಅವನಿಗೆ ತಿಳಿ ಸುವದಕ್ಕೆ ಭಯಪಟ್ಟರು. ಯಾಕಂದರೆ ಇಗೋ, ಮಗುವು ಇನ್ನೂ ಬದುಕಿರುವಾಗ ನಾವು ಅವನ ಸಂಗಡ ಮಾತನಾಡುವಾಗ ಅವನು ನಮ್ಮ ಮಾತನ್ನು ಕೇಳದೆಹೋದನು. ಈಗ ಮಗುವು ಸತ್ತುಹೋಯಿ ತೆಂದು ನಾವು ಅವನಿಗೆ ಹೇಳಿದರೆ ಇನ್ನೂ ಎಷ್ಟು ಸಂಕಟಪಡುವನೋ ಅಂದುಕೊಂಡರು.