1 Corinthians · chapter 14 · verse 32
1 Corinthians 14:32 in Kannada
ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ.
Pravaadigala aatmagalu pravaadigala svaadheenadallive.
1 Corinthians 14:32 in English
- King James Version (KJV)
- And the spirits of the prophets are subject to the prophets.
- World English Bible (WEB)
- The spirits of the prophets are subject to the prophets,
- American Standard Version (ASV)
- and the spirits of the prophets are subject to the prophets;
- Bible in Basic English (BBE)
- And the spirits of the prophets are controlled by the prophets;
- Darby Translation (DBY)
- And spirits of prophets are subject to prophets.
- Webster's Bible (WBS)
- And the spirits of the prophets are subject to the prophets.
- Young's Literal Translation (YLT)
- and the spiritual gift of prophets to prophets are subject,
Read in context
- 30ಪಕ್ಕದಲ್ಲಿ ಕೂತಿರುವ ಮತ್ತೊಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲಿನವನು ಸುಮ್ಮನಾಗಲಿ.
- 31ನೀವೆಲ್ಲರೂ ಒಬ್ಬೊಬ್ಬರಾಗಿ ಪ್ರವಾದಿಸಬಹುದು; ಹೀಗೆ ಮಾಡಿದರೆ ಎಲ್ಲರೂ ಕಲಿತುಕೊಳ್ಳುವರು, ಎಲ್ಲರೂ ಆದರಣೆ ಹೊಂದುವರು.
- 32ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ.
- 33ಪರಿಶುದ್ಧರ ಎಲ್ಲಾ ಸಭೆಗಳಲ್ಲಿರುವ ಪ್ರಕಾರ ದೇವರು ಸಮಾಧಾನಕ್ಕೇ ಹೊರತು ಗಲಿಬಿಲಿಗೆ ಕಾರಣನಲ್ಲ.
- 34ನಿಮ್ಮ ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಬೇಕು; ಮಾತನಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ವಿಧೇಯರಾಗಿರಬೇಕೆಂದು ನ್ಯಾಯಪ್ರಮಾಣವು ಸಹ ಹೇಳುತ್ತದಲ್ಲಾ.
Cross references
- 1 John 4:1 1 ಯೋಹಾನನು 4:1ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಹೋಗಿರುವದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.
- Acts 4:19–20 ಅಪೊಸ್ತಲರ ಕೃತ್ಯಗಳು 4:19–20ಅದಕ್ಕೆ ಪೇತ್ರ ಯೋಹಾನರು ಪ್ರತ್ಯುತ್ತರವಾಗಿ ಅವರಿಗೆ--ದೇವರ ಮಾತಿಗಿಂತ ನಿಮ್ಮ ಮಾತನ್ನು ಕೇಳು ವದು ದೇವರ ದೃಷ್ಟಿಯಲ್ಲಿ ಸರಿಯೋ ನೀವೇ ತೀರ್ಪು ಮಾಡಿರಿ. ಯಾಕಂದರೆ ನಾವು ಕಂಡು ಕೇಳಿದವು ಗಳನ್ನು ಮಾತನಾಡದೆ ಇರಲಾರೆವು ಎಂದು ಹೇಳಿದರು.
- 1 Samuel 10:10–13 1 ಸಮುವೇಲನು 10:10–13ಅವನು ಆ ಗುಡ್ಡಕ್ಕೆ ಬಂದಾಗ ಇಗೋ, ಪ್ರವಾದಿಗಳ ಗುಂಪು ಅವನೆದುರಿಗೆ ಬಂತು; ಆಗ ದೇವರ ಆತ್ಮನು ಅವನ ಮೇಲೆ ಬಂದದರಿಂದ ಅವನು ಪ್ರವಾದಿಸಿದನು. ಅದಕ್ಕೆ ಮುಂಚೆ ಅವನನ್ನು ತಿಳಿದವರೆಲ್ಲರು ಅವನು ಪ್ರವಾದಿಗಳ ಸಂಗಡ ಇದ್ದು ಪ್ರವಾದಿಸುವದನ್ನು ಕಂಡಾಗ ಅವರು ಒಬ್ಬರ ಸಂಗಡ ಒಬ್ಬರು--ಕೀಷನ ಮಗನಿಗೆ ಬಂದದ್ದು ಇದೇನು? ಸೌಲನೂ ಸಹ ಪ್ರವಾದಿಗಳಲ್ಲಿ ಇದ್ದಾನೋ ಅಂದರು. ಅದಕ್ಕೆ ಅಲ್ಲಿಯವನೊಬ್ಬನು ಪ್ರತ್ಯುತ್ತರವಾಗಿ--ಇವರ ತಂದೆ ಯಾರು ಅಂದನು. ಆದದರಿಂದ ಸೌಲನು ಸಹ ಪ್ರವಾದಿಗಳಲ್ಲಿ ಇದ್ದಾನೋ ಎಂಬ ಸಾಮತಿ ಉಂಟಾ ಯಿತು. ಅವನು ಪ್ರವಾದಿಸಿ ತೀರಿಸಿದ ತರುವಾಯ ಗುಡ್ಡದ ಮೇಲಕ್ಕೆ ಬಂದನು.
- Job 32:8–11 ಯೋಬನು 32:8–11ಆದರೆ ಮನುಷ್ಯನಲ್ಲಿ ಆತ್ಮ ಉಂಟು; ಸರ್ವಶಕ್ತನ ಶ್ವಾಸವು ಅವನಿಗೆ ಗ್ರಹಿಕೆ ಕೊಡುತ್ತದೆ. ದೊಡ್ಡ ಮನುಷ್ಯರೇ ಬುದ್ಧಿವಂತರಲ್ಲ; ಮುದುಕರೇ ನ್ಯಾಯವನ್ನು ಗ್ರಹಿಸಿಕೊಳ್ಳುವವರಲ್ಲ. ಆದದರಿಂದ ನನ್ನನ್ನು ಕೇಳು; ನನ್ನ ಅಭಿಪ್ರಾಯವನ್ನು ನಾನು ತಿಳಿಸುವೆನು ಅಂದೆನು. ಇಗೋ, ನಿಮ್ಮ ಮಾತುಗಳಿಗೋಸ್ಕರ ನಾನು ಎದುರು ನೋಡಿದೆನು; ನೀವು ಏನು ಹೇಳಬೇಕೆಂದು ಹುಡುಕುತ್ತಿದ್ದಾಗ, ನಿಮ್ಮ ವಿವಾದಗಳಿಗೆ ಕಿವಿಗೊಟ್ಟೆನು;
- 1 Corinthians 14:29–30 1 ಕೊರಿಂಥದವರಿಗೆ 14:29–30ಪ್ರವಾದಿಗಳು ಇಬ್ಬರಾಗಲಿ ಮೂವರಾಗಲಿ ಮಾತನಾಡಲಿ, ಮಿಕ್ಕಾದವರು ವಿವೇಚ ನೆಮಾಡಲಿ. ಪಕ್ಕದಲ್ಲಿ ಕೂತಿರುವ ಮತ್ತೊಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲಿನವನು ಸುಮ್ಮನಾಗಲಿ.
- 2 Kings 2:5 2 ಅರಸುಗಳು 2:5ಆಗ ಯೆರಿಕೋವಿನಲ್ಲಿ ರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಕರ್ತನು ಇಂದು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು. ಅದಕ್ಕವನು--ನಾನು ಕೂಡ ಬಲ್ಲೆ, ಸುಮ್ಮನೆ ಇರ್ರಿ ಅಂದನು.
- 2 Kings 2:3 2 ಅರಸುಗಳು 2:3ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಇಂದು ಕರ್ತನು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು.
- Jeremiah 20:9 ಯೆರೆಮೀಯ 20:9ಆಗ ನಾನು ಆತನನ್ನು ಕುರಿತು ಏನೂ ಹೇಳುವದಿಲ್ಲ, ಇಲ್ಲವೆ ಆತನ ಹೆಸರಿನಲ್ಲಿ ಇನ್ನು ಮಾತನಾಡುವದೇ ಇಲ್ಲ ಎಂದು ಅಂದುಕೊಂಡೆನು; ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲ್ಪಟ್ಟಿರುವ ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು; ಬಿಗಿಹಿಡಿದು ದಣಿ ದೆನು. ನನ್ನಿಂದ ಆಗದೆ ಹೋಯಿತು.
- 1 Samuel 19:19–24 1 ಸಮುವೇಲನು 19:19–24ಇಗೋ, ದಾವೀದನು ರಾಮದ ನಯೋತಿನಲ್ಲಿ ಇದ್ದಾನೆಂದು ಸೌಲನಿಗೆ ತಿಳಿಸಲ್ಪಟ್ಟಿತು. ಆದದರಿಂದ ಸೌಲನು ದಾವೀದನನ್ನು ಹಿಡು ಕೊಂಡು ಬರಲು ದೂತರನ್ನು ಕಳುಹಿಸಿದನು. ಅವರು ಪ್ರವಾದಿಗಳ ಗುಂಪು ಪ್ರವಾದಿಸುವದನ್ನೂ ಅವರ ಮೇಲೆ ಯಜಮಾನನಾಗಿರುವ ಸಮುವೇಲನು ನಿಂತಿ ರುವದನ್ನೂ ನೋಡಿದಾಗ ದೇವರ ಆತ್ಮನು ಸೌಲನ ದೂತರ ಮೇಲೆ ಬಂದನು; ಅವರು ಸಹ ಪ್ರವಾದಿ ಸಿದರು. ಇದು ಸೌಲನಿಗೆ ತಿಳಿಸಲ್ಪಟ್ಟಾಗ ಅವನು ಬೇರೆ ದೂತರನ್ನು ಕಳುಹಿಸಿದನು; ಅವರೂ ಹಾಗೆಯೇ ಪ್ರವಾದಿಸಿದರು. ಮೂರನೆಯ ಸಾರಿ ಸೌಲನು ದೂತ ರನ್ನು ಕಳುಹಿಸಿದನು; ಅವರೂ ಹಾಗೆಯೇ ಪ್ರವಾದಿ ಸಿದರು. ಆಗ ಸೌಲನು ತಾನೇ ರಾಮಕ್ಕೆ ಹೋದನು; ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದುಸಮುವೇಲನು ದಾವೀದನು ಎಲ್ಲಿದ್ದಾರೆ ಎಂದು ಕೇಳಿ ದನು. ಆಗ ಒಬ್ಬನು--ಇಗೋ, ಅವರು ರಾಮದ ನಯೋತಿನಲ್ಲಿದ್ದಾರೆ ಅಂದನು. ಹಾಗೆಯೇ ಅವನು ರಾಮದ ನಯೋತಿಗೆ ಹೋದನು; ಆಗ ದೇವರ ಆತ್ಮ ಅವನ ಮೇಲೆ ಬಂದನು; ಅವನು ರಾಮದ ನಯೋತಿಗೆ ಸೇರುವ ವರೆಗೂ ಪ್ರವಾದಿಸುತ್ತಾ ಬಂದನು.ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ ತಾನೂ ಹಾಗೆಯೇ ಸಮುವೇಲನ ಮುಂದೆ ಪ್ರವಾದಿಸಿದನು; ಆ ದಿನ ಹಗಲೆಲ್ಲವೂ ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದದರಿಂದ--ಸೌಲನು ಕೂಡಾ ಪ್ರವಾದಿ ಗಳಲ್ಲಿ ಇದ್ದಾನೋ ಅನ್ನುವರು. ಅಲ್ಲಿ ತನ್ನ ವಸ್ತ್ರಗಳನ್ನು ಬಿಚ್ಚಿಹಾಕಿ ತಾನೂ ಹಾಗೆಯೇ ಸಮುವೇಲನ ಮುಂದೆ ಪ್ರವಾದಿಸಿದನು; ಆ ದಿನ ಹಗಲೆಲ್ಲವೂ ರಾತ್ರಿಯೆಲ್ಲವೂ ಬೆತ್ತಲೆಯಾಗಿ ಬಿದ್ದಿದ್ದನು. ಆದದರಿಂದ--ಸೌಲನು ಕೂಡಾ ಪ್ರವಾದಿ ಗಳಲ್ಲಿ ಇದ್ದಾನೋ ಅನ್ನುವರು.