1 Corinthians · chapter 6 · verse 12
1 Corinthians 6:12 in Kannada
ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತ ವಾಗಿವೆ. ಆದರೆ ಎಲ್ಲವುಗಳು ವಿಹಿತವಾಗಿಲ್ಲ; ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತವಾಗಿವೆ, ಆದರೆ ನಾನು ಯಾವ ಅಧಿಕಾರಕ್ಕೂ ಒಳಪಡುವದಿಲ್ಲ.
Nanage ellaa vishayagalu nyaayasammata vaagive. Aadare ellavugalu vihitavaagilla; nanage ellaa vishayagalu nyaayasammatavaagive, aadare naanu yaava adhikaarakkoo olapaduvadilla.
1 Corinthians 6:12 in English
- King James Version (KJV)
- All things are lawful unto me, but all things are not expedient: all things are lawful for me, but I will not be brought under the power of any.
- World English Bible (WEB)
- “All things are lawful for me,” but not all things are expedient. “All things are lawful for me,” but I will not be brought under the power of anything.
- American Standard Version (ASV)
- All things are lawful for me; but not all things are expedient. All things are lawful for me; but I will not be brought under the power of any.
- Bible in Basic English (BBE)
- I am free to do all things; but not all things are wise. I am free to do all things; but I will not let myself come under the power of any.
- Darby Translation (DBY)
- All things are lawful to me, but all things do not profit; all things are lawful to me, but I will not be brought under the power of any.
- Webster's Bible (WBS)
- All things are lawful to me, but all things are not expedient: all things are lawful for me, but I will not be brought under the power of any.
- Young's Literal Translation (YLT)
- All things are lawful to me, but all things are not profitable; all things are lawful to me, but I — I will not be under authority by any;
Read in context
- 10ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲು ಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.
- 11ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮನಲ್ಲಿಯೂ ತೊಳೆಯಲ್ಪಟ್ಟಿರಿ; ಶುದ್ಧೀಕರಿಸಲ್ಪಟ್ಟಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.
- 12ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತ ವಾಗಿವೆ. ಆದರೆ ಎಲ್ಲವುಗಳು ವಿಹಿತವಾಗಿಲ್ಲ; ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತವಾಗಿವೆ, ಆದರೆ ನಾನು ಯಾವ ಅಧಿಕಾರಕ್ಕೂ ಒಳಪಡುವದಿಲ್ಲ.
- 13ಆಹಾರಪದಾರ್ಥಗಳು ಹೊಟ್ಟೆಗಾಗಿ, ಹೊಟ್ಟೆಯು ಆಹಾರಪದಾರ್ಥಗಳಿಗಾಗಿ ಇವೆ; ಆದರೆ ಅದನ್ನೂ ಅವುಗಳನ್ನೂ ದೇವರು ನಾಶಮಾಡುತ್ತಾನೆ; ಈಗ ದೇಹವು ಜಾರತ್ವಕ್ಕಾಗಿ ಅಲ್ಲ, ಆದರೆ ಕರ್ತನಿಗಾಗಿ ಇದೆ; ಕರ್ತನು ದೇಹಕ್ಕೋಸ್ಕರ ಇದ್ದಾನೆ.
- 14ದೇವರು ಕರ್ತನನ್ನು ಎಬ್ಬಿಸಿದ್ದಲ್ಲದೆ ತನ್ನ ಸ್ವಂತಬಲದಿಂದ ನಮ್ಮನ್ನೂ ಎಬ್ಬಿಸುವನು.
Cross references
- 1 Corinthians 10:23–33 1 ಕೊರಿಂಥದವರಿಗೆ 10:23–33ನನಗೆ ಎಲ್ಲಾ ವಿಷಯಗಳು ನ್ಯಾಯಸಮ್ಮತ ವಾಗಿವೆ; ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ; ಎಲ್ಲಾ ವಿಷಯಗಳು ನನಗೆ ನ್ಯಾಯಸಮ್ಮತವಾಗಿವೆ; ಆದರೆ ಎಲ್ಲವೂ ಭಕ್ತಿವೃದ್ಧಿಯನ್ನುಂಟು ಮಾಡುವದಿಲ್ಲ. ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರ ಹಿತವನ್ನು ಚಿಂತಿಸಲಿ. ಕಟುಕರ ಅಂಗಡಿಯಲ್ಲಿ ಮಾರುವದೇನಿದ್ದರೂ ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ. ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ? ನಂಬದವರಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವದಕ್ಕೆ ನಿಮಗಿಷ್ಟವಿದ್ದರೆ ನಿಮ ಗೇನು ಬಡಿಸಿದರೂ ಅದನ್ನು ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ. ಆದರೆ ಒಬ್ಬನು ನಿಮಗೆ--ಇದು ವಿಗ್ರಹಕ್ಕೆ ಬಲಿಕೊಟ್ಟದ್ದು ಎಂದು ಹೇಳಿದರೆ ಈ ವಿಷಯವನ್ನು ತಿಳಿಸಿದವನ ನಿಮಿತ್ತ ವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ತಿನ್ನ ಬೇಡಿರಿ; ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ? ಆದರೆ ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ, ಬೇರೆಯವನ ಮನಸ್ಸಾಕ್ಷಿಗಾಗಿ ನಾನು ಹೇಳುತ್ತೇನೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು? ನಾನು ಕೃಪೆಯಿಂದ ಪಾಲುಗಾರನಾಗಿ ಯಾವದಕ್ಕೋಸ್ಕರ ಕೃತಜ್ಞತೆಯನ್ನು ಸಲ್ಲಿಸುತ್ತೇನೋ ಅದರ ವಿಷಯದಲ್ಲಿ ನಾನು ಯಾಕೆ ದೂಷಿಸಲ್ಪಡಬೇಕು? ಆದದರಿಂದ ನೀವು ತಿಂದರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ. ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಅಭ್ಯಂತರವಾಗಬೇಡಿರಿ.ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ. ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ.
- 1 Corinthians 9:27 1 ಕೊರಿಂಥದವರಿಗೆ 9:27ಆದರೆ ನಾನು ಬೇರೆಯವರಿಗೆ ಸಾರಿದ ಮೇಲೆ ಯಾವ ವಿಧದಲ್ಲಿಯೂ ನಾನು ಭ್ರಷ್ಠನಾಗದಂತೆ ನನ್ನ ದೇಹವನ್ನು ಅಧೀನತೆಯಲ್ಲಿಟ್ಟು ಅದನ್ನು ಸ್ವಾಧೀನಪಡಿಸಿಕೊಳ್ಳುತ್ತೇನೆ.
- Hebrews 12:15–16 ಇಬ್ರಿಯರಿಗೆ 12:15–16ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹೋಗ ದಂತೆಯೂ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಕಳವಳ ಹುಟ್ಟಿಸಿ ಅದರಿಂದ ಅನೇಕರು ಅಶುದ್ಧರಾಗ ದಂತೆಯೂ ಯಾವ ಜಾರನಾಗಲಿ--ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆಯೂ ಜಾಗ್ರತೆ ಯಿಂದ ನೋಡಿಕೊಳ್ಳಿರಿ. ಆ ಏಸಾವನು ಒಂದು ತುತ್ತನ್ನಕ್ಕಾಗಿ ತನ್ನ ಚೊಚ್ಚಲತನದ ಹಕ್ಕನ್ನು ಮಾರಿ ಬಿಟ್ಟನು;
- Romans 14:14–23 ರೋಮಾಪುರದವರಿಗೆ 14:14–23ಯಾವ ಪದಾರ್ಥವೂ ಸ್ವತಃ ಅಶುದ್ಧ ವಾದದ್ದಲ್ಲವೆಂದು ನಾನು ಬಲ್ಲೆನು, ಇದನ್ನು ನಾನು ಕರ್ತನಾದ ಯೇಸುವಿನ ಮುಖಾಂತರ ದೃಢವಾಗಿ ನಂಬಿದ್ದೇನೆ; ಆದರೆ ಯಾವದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವೇ. ನಿನ್ನ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವಾದರೆ ಪ್ರೀತಿಗೆ ತಕ್ಕಂತೆ ನೀನು ಇನ್ನು ನಡೆಯುವ ವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಸತ್ತನೋ ಅವನನ್ನು ನಿನ್ನ ಆಹಾರದಿಂದ ಕೆಡಿಸಬಾರದು. ನಿಮಗಿರುವ ಮೇಲು ದೂಷಣೆಗೆ ಆಸ್ಪದವಾಗಬಾರದು. ಯಾಕಂದರೆ ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ಆದರೆ ನೀತಿಯೂ ಸಮಾಧಾನವೂ ಪವಿತ್ರಾತ್ಮನಲ್ಲಿರುವ ಆನಂದವೂ ಆಗಿದೆ. ಕ್ರಿಸ್ತನ ಸೇವೆಯನ್ನು ಮಾಡುವವನು ಈ ವಿಷಯಗಳಲ್ಲಿ ದೇವರಿಗೆ ಮೆಚ್ಚಿಕೆಯಾದವನಾಗಿಯೂ ಮನುಷ್ಯರಿಗೆ ಸಂಭಾವಿತನಾಗಿಯೂ ಇರುವನಷ್ಟೆ. ಆದದರಿಂದ ನಾವು ಸಮಾಧಾನವನ್ನುಂಟು ಮಾಡುವವುಗಳನೂ ಪರಸ್ಪರ ಭಕ್ತಿವೃದ್ಧಿಯನ್ನುಂಟು ಮಾಡುವವುಗಳನ್ನೂ ಅನುಸರಿಸೋಣ. ದೇವರ ಕಾರ್ಯವನ್ನು ಆಹಾರದ ನಿಮಿತ್ತವಾಗಿ ಕೆಡಿಸಬಾರದು. ಎಲ್ಲಾ ಪದಾರ್ಥಗಳೂ ಶುದ್ಧವೇ ಹೌದು; ಆದರೆ ವಿಘ್ನವನ್ನುಂಟು ಮಾಡು ವಂತೆ ತಿನ್ನುವವನಿಗೆ ಅದು ಕೆಟ್ಟದ್ದಾಗಿದೆ. ದೇವರ ಕಾರ್ಯವನ್ನು ಆಹಾರದ ನಿಮಿತ್ತವಾಗಿ ಕೆಡಿಸಬಾರದು. ಎಲ್ಲಾ ಪದಾರ್ಥಗಳೂ ಶುದ್ಧವೇ ಹೌದು; ಆದರೆ ವಿಘ್ನವನ್ನುಂಟು ಮಾಡು ವಂತೆ ತಿನ್ನುವವನಿಗೆ ಅದು ಕೆಟ್ಟದ್ದಾಗಿದೆ. ನಿನಗೆ ನಂಬಿಕೆಯಿದೆಯೋ? ದೇವರ ಸನ್ನಿಧಿಯಲ್ಲಿ ಅದು ನಿನಗೇ ಇರಲಿ. ಒಬ್ಬನು ತಾನು ಒಪ್ಪುವ ವಿಷಯದಲ್ಲಿ ತನ್ನನ್ನು ತಾನು ಖಂಡಿಸಿ ಕೊಳ್ಳದಿದ್ದರೆ ಅವನು ಧನ್ಯನು.ಸಂಶಯಪಟ್ಟು ಉಣ್ಣುವವನು ದಂಡಿಸಲ್ಪಡುವನು; ಯಾಕಂದರೆ ಅವನು ನಂಬಿಕೆಯಿಂದ ಉಣ್ಣುವದಿಲ್ಲ. ಯಾವದಕ್ಕೆ ನಂಬಿಕೆಯು ಆಧಾರವಿಲ್ಲವೋ ಅದು ಪಾಪ. ಸಂಶಯಪಟ್ಟು ಉಣ್ಣುವವನು ದಂಡಿಸಲ್ಪಡುವನು; ಯಾಕಂದರೆ ಅವನು ನಂಬಿಕೆಯಿಂದ ಉಣ್ಣುವದಿಲ್ಲ. ಯಾವದಕ್ಕೆ ನಂಬಿಕೆಯು ಆಧಾರವಿಲ್ಲವೋ ಅದು ಪಾಪ.
- 1 Corinthians 8:7–13 1 ಕೊರಿಂಥದವರಿಗೆ 8:7–13ಆದರೆ ಆ ಜ್ಞಾನವು ಎಲ್ಲರಲ್ಲಿಯೂ ಇಲ್ಲ. ಕೆಲವರು ಈವರೆಗೂ ವಿಗ್ರಹದ ಬಳಿಗೆ ಹೋಗುವ ರೂಢಿಯಲ್ಲಿದ್ದದರಿಂದ ತಾವು ತಿನ್ನುವ ಪದಾರ್ಥಗಳನ್ನು ವಿಗ್ರಹಗಳಿಗೆ ಸಮರ್ಪಣೆ ಮಾಡಿದ್ದೆಂದು ತಿನ್ನುತ್ತಾರೆ; ಹೀಗೆ ಅವರ ಮನಸ್ಸು ಬಲಹೀನವಾಗಿರುವದರಿಂದ ಅಶುದ್ಧವಾಗಿದೆ. ಆದರೆ ಆಹಾರವು ನಮ್ಮನ್ನು ದೇವರಿಗೆ ಮೆಚ್ಚಿಕೆಯಾದವರನ್ನಾಗಿ ಮಾಡಲಾರದು; ಯಾಕಂದರೆ ನಾವು ತಿಂದರೆ ನಮ ಗೇನೂ ಹೆಚ್ಚಾಗುವದಿಲ್ಲ; ಇಲ್ಲವೆ ನಾವು ತಿನ್ನದಿದ್ದರೆ ನಮಗೇನೂ ಕಡಿಮೆಯಿಲ್ಲ. ಆದರೂ ಈ ನಿಮ್ಮ ಸ್ವಾತಂತ್ರ್ಯವು ಬಲವಿಲ್ಲದವರಿಗೆ ಒಂದು ವೇಳೆ ಅಭ್ಯಂತರ ವಾದೀತು, ಎಚ್ಚರಿಕೆಯಾಗಿರ್ರಿ. ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲ ವಾದ ಮನಸ್ಸಾಕ್ಷಿಯುಳ್ಳ ಯಾವನಾದರೂ ಕಂಡರೆ ಅವನೂ ವಿಗ್ರಹಕ್ಕೆ ಸಮರ್ಪಣೆ ಮಾಡಿದ ಪದಾರ್ಥ ಗಳನ್ನು ತಿನ್ನುವದಕ್ಕೆ ಧೈರ್ಯ ತಂದುಕೊಂಡಾನಲ್ಲವೇ? ಹೀಗೆ ಆ ಬಲಹೀನನಾದ ಸಹೋದರನು ನಿನ್ನ ಜ್ಞಾನದಿಂದ ನಾಶವಾಗುತ್ತಾನೆ; ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣಕೊಟ್ಟನಲ್ಲವೇ? ಹೀಗಿರಲಾಗಿ ಸಹೋದರರಿಗೆ ವಿರೋಧವಾಗಿ ಪಾಪಮಾಡಿ ಅವರ ನಿರ್ಬಲವಾದ ಮನಸ್ಸನ್ನು ನೋಯಿಸಿ ಕ್ರಿಸ್ತನಿಗೆ ವಿರೋಧವಾಗಿ ಪಾಪ ಮಾಡುವವರಾಗುತ್ತೀರಿ.ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ. ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ.
- 2 Thessalonians 3:9 2 ಥೆಸಲೊನೀಕದವರಿಗೆ 3:9ನಿಮ್ಮಿಂದ ಪೋಷಣೆ ಹೊಂದು ವದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ. ನೀವು ನಮ್ಮನ್ನು ಅನುಸರಿಸುವದಕ್ಕಾಗಿ ನಿಮಗೆ ಮಾದರಿ ಯಾಗಿರೋಣವೆಂದೇ ಮಾಡಿದೆವು;
- Jude 1:12 ಯೂದನು 1:12ಳಂಕರಾದ ಇವರು ನಿಮ್ಮ ಪ್ರೇಮ ಭೋಜನಗಳಲ್ಲಿ ನಿರ್ಭಯವಾಗಿ ತಿಂದು ತಮ್ಮನ್ನು ತಾವೇ ಪೋಷಿಸಿಕೊಳ್ಳುತ್ತಾರೆ. ಇವರು ಗಾಳಿಯಿಂದ ಬಡಿಸಿಕೊಂಡು ಹೋಗುವ ನೀರಿಲ್ಲದ ಮೇಘಗಳೂ ಎರಡು ಸಾರಿ ಸತ್ತವರೂ ಹಣ್ಣು ಬಿಡದೆ ಒಣಗಿಹೋಗಿ ಬೇರು ಸಹಿತ ಕಿತ್ತುಬಿದ್ದ ಮರಗಳೂ
- 1 Corinthians 8:4 1 ಕೊರಿಂಥದವರಿಗೆ 8:4ವಿಗ್ರಹಗಳಿಗೆ ಸಮರ್ಪಣೆ ಮಾಡಿದವುಗಳನ್ನು ತಿನ್ನುವದರ ವಿಷ ಯದಲ್ಲಿ ನಾನು ಹೇಳುವದೇನಂದರೆ, ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದೂ ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ ನಾವು ಬಲ್ಲೆವು.
- 1 Corinthians 9:12 1 ಕೊರಿಂಥದವರಿಗೆ 9:12ನಿಮ್ಮ ಮೇಲಿರುವ ಅಧಿಕಾರದಲ್ಲಿ ಇತರರಿಗೆ ಪಾಲು ಇದ್ದರೆ ಅವರಿಗಿಂತ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಅಧಿಕಾರವನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿ ಕೊಂಡಿರುತ್ತೇವೆ.
- Romans 7:14 ರೋಮಾಪುರದವರಿಗೆ 7:14ನ್ಯಾಯ ಪ್ರಮಾಣವು ಆತ್ಮೀಕವಾದದ್ದೆಂದು ನಾವು ಬಲ್ಲೆವು; ಆದರೆ ನಾನು ಶರೀರಾಧೀನನೂ ಪಾಪದ ಅಧೀನದಲ್ಲಿ ರುವದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ.
Original words (Greek)
- things · G3956πᾶς pâs
- lawful · G1832ἔξεστι éxesti
- me · G3427μοί moí
- but · G235ἀλλά allá
- things · G3956πᾶς pâs
- are · G4851συμφέρω symphérō
- not · G3756οὐ ou
- expedient · G4851συμφέρω symphérō
- things · G3956πᾶς pâs
- lawful · G1832ἔξεστι éxesti
- me · G3427μοί moí
- but · G235ἀλλά allá
- I · G1473ἐγώ egṓ
- will · G1850ἐξουσιάζω exousiázō
- not · G3756οὐ ou
- power · G1850ἐξουσιάζω exousiázō
- of · G5259ὑπό hypó
- any · G5100τὶς tìs