1 Corinthians · chapter 7 · verse 10
1 Corinthians 7:10 in Kannada
ಮದುವೆ ಮಾಡಿಕೊಂಡಿರು ವವರಿಗೆ ನನ್ನ ಅಪ್ಪಣೆ ಮಾತ್ರವಲ್ಲದೆ ಕರ್ತನ ಅಪ್ಪಣೆ ಏನಂದರೆ--ಹೆಂಡತಿಯು ಗಂಡನನ್ನು ಬಿಟ್ಟು ಅಗಲ ಬಾರದು.
Maduve maadikondiru vavarige nanna appane maatravallade kartana appane enandare--hendatiyu gandanannu bittu agala baaradu.
1 Corinthians 7:10 in English
- King James Version (KJV)
- And unto the married I command, [yet] not I, but the Lord, Let not the wife depart from [her] husband:
- World English Bible (WEB)
- But to the married I command—not I, but the Lord—that the wife not leave her husband
- American Standard Version (ASV)
- But unto the married I give charge, [yea] not I, but the Lord, That the wife depart not from her husband
- Bible in Basic English (BBE)
- But to the married I give orders, though not I but the Lord, that the wife may not go away from her husband
- Darby Translation (DBY)
- But to the married I enjoin, not I, but the Lord, Let not wife be separated from husband;
- Webster's Bible (WBS)
- And to the married I command, [yet] not I, but the Lord, Let not the wife depart from [her] husband:
- Young's Literal Translation (YLT)
- and to the married I announce — not I, but the Lord — let not a wife separate from a husband:
Read in context
- 8ಮದುವೆಯಿಲ್ಲದವರನ್ನೂ ವಿಧವೆಯರನ್ನೂ ಕುರಿತು ನಾನು ಹೇಳುವದೇ ನಂದರೆ--ನಾನಿರುವಂತೆಯೇ ಇರುವದು ಅವರಿಗೆ ಒಳ್ಳೇದು;
- 9ಅವರು ದಮೆಯಿಲ್ಲದವರಾದರೆ ಮದುವೆ ಮಾಡಿಕೊಳ್ಳಲಿ; ತಾಪಪಡುವದಕ್ಕಿಂತ ಮದುವೆಮಾಡಿ ಕೊಳ್ಳುವದು ಉತ್ತಮ.
- 10ಮದುವೆ ಮಾಡಿಕೊಂಡಿರು ವವರಿಗೆ ನನ್ನ ಅಪ್ಪಣೆ ಮಾತ್ರವಲ್ಲದೆ ಕರ್ತನ ಅಪ್ಪಣೆ ಏನಂದರೆ--ಹೆಂಡತಿಯು ಗಂಡನನ್ನು ಬಿಟ್ಟು ಅಗಲ ಬಾರದು.
- 11ಒಂದು ವೇಳೆ ಅಗಲಿದರೂ ಮದುವೆ ಯಿಲ್ಲದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಮಾ ಧಾನವಾಗಬೇಕು; ಗಂಡನು ಹೆಂಡತಿಯನ್ನು ಬಿಡ ಬಾರದು.
- 12ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತು ಇಲ್ಲವಾದರೂ ನಾನು ಹೇಳುವದೇನಂದರೆ--ಒಬ್ಬ ಸಹೋದರನಿಗೆ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆಯು ಅವನೊಂದಿಗೆ ಇರುವದಕ್ಕೆ ಸಮ್ಮತಿಸದರೆ ಅವನು ಆಕೆಯನ್ನು ಬಿಡಬಾರದು.
Cross references
- Matthew 5:32 ಮತ್ತಾಯನು 5:32ಆದರೆ ನಾನು ನಿಮಗೆ ಹೇಳುವದೇನಂದರೆ--ಹಾದರದ ಕಾರಣ ದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಯು ವ್ಯಭಿಚಾರ ಮಾಡುವಂತೆ ಕಾರಣನಾಗುವನು; ಮತ್ತು ಬಿಡಲ್ಪಟ್ಟವಳನ್ನು ಯಾವನಾದರೂ ಮದುವೆ ಯಾದರೆ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ.
- Luke 16:18 ಲೂಕನು 16:18ಯಾವನು ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರ ಮಾಡುತ್ತಾನೆ; ಯಾವನು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುತ್ತಾನೋ ಅವನು ವ್ಯಭಿಚಾರಮಾಡುತ್ತಾನೆ.
- Matthew 19:3–9 ಮತ್ತಾಯನು 19:3–9ಆಗ ಫರಿಸಾಯರು ಸಹ ಆತನನ್ನು ಶೋಧಿಸುವದ ಕ್ಕಾಗಿ ಆತನ ಬಳಿಗೆ ಬಂದು -- ಒಬ್ಬ ಮನುಷ್ಯನು ಯಾವ ಕಾರಣದಿಂದಲಾದರೂ ತನ್ನ ಹೆಂಡತಿಯನ್ನು ಬಿಟ್ಟು ಬಿಡುವದು ಅವನಿಗೆ ನ್ಯಾಯವೋ ಎಂದು ಕೇಳಿದರು. ಆತನು ಪ್ರತ್ಯುತ್ತರವಾಗಿ ಅವರಿಗೆ-- ಆದಿಯಲ್ಲಿ ಉಂಟುಮಾಡಿದಾತನು ಅವರನ್ನು ಗಂಡು ಹೆಣ್ಣಾಗಿ ಉಂಟುಮಾಡಿದನು. ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಹೀಗೆ ಅವರಿಬ್ಬರೂ ಒಂದೇ ಶರೀರ ವಾಗಿರುವರು ಎಂದು ಹೇಳಿದ್ದನ್ನು ನೀವು ಓದ ಲಿಲ್ಲವೋ? ಆದದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿ ಸಿದ್ದನ್ನು ಮನುಷ್ಯನು ಅಗಲಿಸಬಾರದು ಎಂದು ಹೇಳಿ ದನು. ಅದಕ್ಕೆ ಅವರು ಆತನಿಗೆ--ಹೀಗಾದರೆ ತ್ಯಾಗ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಯಾಕೆ ಅಪ್ಪಣೆಕೊಟ್ಟನು ಎಂದು ಕೇಳಿದರು. ಆತನು ಅವರಿಗೆ--ಮೋಶೆಯು ನಿಮ್ಮ ಹೃದಯದ ಕಾಠಿಣ್ಯತೆಯ ದೆಸೆಯಿಂದ ನಿಮ್ಮ ಹೆಂಡತಿ ಯರನ್ನು ಬಿಟ್ಟುಬಿಡುವದಕ್ಕೆ ಅಪ್ಪಣೆಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ ಅಂದನು. ನಾನು ನಿಮಗೆ ಹೇಳುವದೇನಂದರೆ--ಹಾದರದ ಕಾರಣದಿಂ ದಲ್ಲದೆ ಯಾವನಾದರೂ ತನ್ನ ಹೆಂಡತಿಯನ್ನು ಬಿಟು ಮತ್ತೊಬ್ಬಳನ್ನು ಮದುವೆಯಾದರೆ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ. ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುತ್ತಾನೆ.
- Malachi 2:14–16 ಮಲಾಕಿಯ 2:14–16ಆದಾಗ್ಯೂ ನೀವು--ಯಾತಕ್ಕೆ ಅನ್ನುತ್ತೀರಿ? ಕರ್ತನು ನಿನಗೂ ನೀನು ವಂಚಿಸಿದ ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿ ದ್ದನು; ಆದಾಗ್ಯೂ ಅವಳು ನಿನ್ನ ಜತೆಯವಳೂ ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದಾಳೆ. ಅವನಲ್ಲಿ ಆತ್ಮ ಉಳಿದಿದ್ದರೂ ಆತನು ಅವಳನ್ನು ಒಂಟಿಗಳಾಗಿ ಮಾಡಲಿಲ್ಲವೋ? ಮತ್ತು ಒಬ್ಬಳನ್ನು ಯಾಕೆ? ಅವನು ದೇವಭಕ್ತಿಯುಳ್ಳ ಸಂತಾನವನ್ನು ಹುಡುಕುವದಕ್ಕಾ ಗಿಯೇ; ಆದದರಿಂದ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ; ಒಬ್ಬನಾದರೂ ತನ್ನ ಯೌವನದ ಹೆಂಡತಿಯನ್ನು ವಂಚಿಸದೆ ಇರಲಿ, ಇಸ್ರಾಯೇಲಿನ ದೇವರಾದ ಕರ್ತನು--ನಾನು ತಳ್ಳಿಬಿಡುವದನ್ನೂ ಒಬ್ಬನು ತನ್ನ ವಸ್ತ್ರವನ್ನು ಬಲಾತ್ಕಾರದಿಂದ ಮುಚ್ಚುವದನ್ನೂ ಹಗೆಮಾಡುತ್ತೇನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಹೀಗಿರುವದರಿಂದ ನೀವು ವಂಚಿಸದ ಹಾಗೆ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ.ನಿಮ್ಮ ಮಾತುಗಳಿಂದ ಕರ್ತನಿಗೆ ಬೇಸರಮಾಡಿ ದ್ದೀರಿ; ಆದಾಗ್ಯೂ--ನಾವು ಯಾವದರಲ್ಲಿ ಆತನಿಗೆ ಬೇಸರಮಾಡಿದ್ದೇವೆ ಎಂದು ಅನ್ನುತ್ತೀರಿ; ಕೆಟ್ಟದ್ದನ್ನು ಮಾಡುವವರೆಲ್ಲರೂ ಕರ್ತನ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆಂದೂ ನ್ಯಾಯದ ದೇವರು ಎಲ್ಲಿ ಎಂದೂ ನೀವು ಹೇಳುವದರಿಂದಲೇ.
- Mark 10:11–12 ಮಾರ್ಕನು 10:11–12ಅದಕ್ಕೆ ಆತನು ಅವರಿಗೆ-- ಯಾವನಾದರೂ ತನ್ನ ಹೆಂಡತಿ ಯನ್ನು ಬಿಟ್ಟು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿ ದ್ದಾನೆ. ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ ಅಂದನು.
- Jeremiah 3:20 ಯೆರೆಮೀಯ 3:20ನಿಶ್ಚಯವಾಗಿ ಹೆಂಡತಿಯು ತನ್ನ ಗಂಡನನ್ನು ವಂಚಿಸಿ ಬಿಡುವ ಪ್ರಕಾರ ಓ ಇಸ್ರಾಯೇಲಿನ ಮನೆತನದವರೇ, ನನಗೆ ವಂಚನೆ ಮಾಡಿದ್ದೀರಿ ಎಂದು ಕರ್ತನು ಅನ್ನುತ್ತಾನೆ.
- 1 Corinthians 7:15 1 ಕೊರಿಂಥದವರಿಗೆ 7:15ಆದರೆ ನಂಬಿಕೆಯಿಲ್ಲದವನು ಅಗಲಬೇಕೆಂದಿದ್ದರೆ ಅಗಲಿ ಹೋಗಲಿ; ಇಂಥಾ ಸಂದರ್ಭಗಳಲ್ಲಿ ಸಹೋದರ ನಾಗಲಿ ಸಹೋದರಿಯಾಗಲಿ ಬದ್ಧರಲ್ಲ, ಸಮಾಧಾನ ದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ.
- 1 Corinthians 7:12 1 ಕೊರಿಂಥದವರಿಗೆ 7:12ಮಿಕ್ಕಾದವರ ವಿಷಯದಲ್ಲಿ ಕರ್ತನ ಮಾತು ಇಲ್ಲವಾದರೂ ನಾನು ಹೇಳುವದೇನಂದರೆ--ಒಬ್ಬ ಸಹೋದರನಿಗೆ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆಯು ಅವನೊಂದಿಗೆ ಇರುವದಕ್ಕೆ ಸಮ್ಮತಿಸದರೆ ಅವನು ಆಕೆಯನ್ನು ಬಿಡಬಾರದು.
- 1 Corinthians 7:25 1 ಕೊರಿಂಥದವರಿಗೆ 7:25ಕನ್ನಿಕೆಯರನ್ನು ಕುರಿತು ನನಗೆ ಕರ್ತನಿಂದ ಯಾವ ಆಜ್ಞೆಯೂ ಇಲ್ಲ; ಆದರೆ ನಂಬಿಗಸ್ತನಾಗಿರುವದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ನಿರ್ಣಯವನ್ನು ಹೇಳುತ್ತೇನೆ.
- 1 Corinthians 7:6 1 ಕೊರಿಂಥದವರಿಗೆ 7:6ಹೀಗೆ ನಾನು ಅನುಮತಿಯಿಂದಲೇ ಮಾತನಾಡುತ್ತೇನೆ, ಆದರೆ ಆಜ್ಞೆಯಲ್ಲ.
- 1 Corinthians 7:40 1 ಕೊರಿಂಥದವರಿಗೆ 7:40ಆದರೂ ನನ್ನ ನಿರ್ಣಯಕ್ಕನುಸಾರ ಆಕೆಯು ಇದ್ದ ಹಾಗೆಯೇ ಇರುವದಾದರೆ ಆಕೆಯು ಭಾಗ್ಯವಂತಳು; ನನ್ನಲ್ಲಿ ದೇವರಾತ್ಮನು ಇದ್ದಾನೆಂದು ನಾನು ನೆನಸುತ್ತೇನೆ.