1 Corinthians · chapter 8 · verse 9
1 Corinthians 8:9 in Kannada
ಆದರೂ ಈ ನಿಮ್ಮ ಸ್ವಾತಂತ್ರ್ಯವು ಬಲವಿಲ್ಲದವರಿಗೆ ಒಂದು ವೇಳೆ ಅಭ್ಯಂತರ ವಾದೀತು, ಎಚ್ಚರಿಕೆಯಾಗಿರ್ರಿ.
Aadaroo ee nimma svaatantryavu balavilladavarige ondu vele abhyantara vaadeetu, echcharikeyaagirri.
1 Corinthians 8:9 in English
- King James Version (KJV)
- But take heed lest by any means this liberty of yours become a stumblingblock to them that are weak.
- World English Bible (WEB)
- But be careful that by no means does this liberty of yours become a stumbling block to the weak.
- American Standard Version (ASV)
- But take heed lest by any means this liberty of yours become a stumblingblock to the weak.
- Bible in Basic English (BBE)
- But take care that this power of yours does not give cause for trouble to the feeble.
- Darby Translation (DBY)
- But see lest anywise this your right [to eat] itself be a stumbling-block to the weak.
- Webster's Bible (WBS)
- But take heed lest by any means this liberty of yours should become a stumbling-block to them that are weak.
- Young's Literal Translation (YLT)
- but see, lest this privilege of yours may become a stumbling-block to the infirm,
Read in context
- 7ಆದರೆ ಆ ಜ್ಞಾನವು ಎಲ್ಲರಲ್ಲಿಯೂ ಇಲ್ಲ. ಕೆಲವರು ಈವರೆಗೂ ವಿಗ್ರಹದ ಬಳಿಗೆ ಹೋಗುವ ರೂಢಿಯಲ್ಲಿದ್ದದರಿಂದ ತಾವು ತಿನ್ನುವ ಪದಾರ್ಥಗಳನ್ನು ವಿಗ್ರಹಗಳಿಗೆ ಸಮರ್ಪಣೆ ಮಾಡಿದ್ದೆಂದು ತಿನ್ನುತ್ತಾರೆ; ಹೀಗೆ ಅವರ ಮನಸ್ಸು ಬಲಹೀನವಾಗಿರುವದರಿಂದ ಅಶುದ್ಧವಾಗಿದೆ.
- 8ಆದರೆ ಆಹಾರವು ನಮ್ಮನ್ನು ದೇವರಿಗೆ ಮೆಚ್ಚಿಕೆಯಾದವರನ್ನಾಗಿ ಮಾಡಲಾರದು; ಯಾಕಂದರೆ ನಾವು ತಿಂದರೆ ನಮ ಗೇನೂ ಹೆಚ್ಚಾಗುವದಿಲ್ಲ; ಇಲ್ಲವೆ ನಾವು ತಿನ್ನದಿದ್ದರೆ ನಮಗೇನೂ ಕಡಿಮೆಯಿಲ್ಲ.
- 9ಆದರೂ ಈ ನಿಮ್ಮ ಸ್ವಾತಂತ್ರ್ಯವು ಬಲವಿಲ್ಲದವರಿಗೆ ಒಂದು ವೇಳೆ ಅಭ್ಯಂತರ ವಾದೀತು, ಎಚ್ಚರಿಕೆಯಾಗಿರ್ರಿ.
- 10ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲ ವಾದ ಮನಸ್ಸಾಕ್ಷಿಯುಳ್ಳ ಯಾವನಾದರೂ ಕಂಡರೆ ಅವನೂ ವಿಗ್ರಹಕ್ಕೆ ಸಮರ್ಪಣೆ ಮಾಡಿದ ಪದಾರ್ಥ ಗಳನ್ನು ತಿನ್ನುವದಕ್ಕೆ ಧೈರ್ಯ ತಂದುಕೊಂಡಾನಲ್ಲವೇ?
- 11ಹೀಗೆ ಆ ಬಲಹೀನನಾದ ಸಹೋದರನು ನಿನ್ನ ಜ್ಞಾನದಿಂದ ನಾಶವಾಗುತ್ತಾನೆ; ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣಕೊಟ್ಟನಲ್ಲವೇ?
Cross references
- Galatians 5:13 ಗಲಾತ್ಯದವರಿಗೆ 5:13ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ಕರೆಯಲ್ಪಟ್ಟಿದ್ದೀರಿ. ಸ್ವಾತಂತ್ರ್ಯವನ್ನು ಶರೀರಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.
- Romans 14:20–21 ರೋಮಾಪುರದವರಿಗೆ 14:20–21ದೇವರ ಕಾರ್ಯವನ್ನು ಆಹಾರದ ನಿಮಿತ್ತವಾಗಿ ಕೆಡಿಸಬಾರದು. ಎಲ್ಲಾ ಪದಾರ್ಥಗಳೂ ಶುದ್ಧವೇ ಹೌದು; ಆದರೆ ವಿಘ್ನವನ್ನುಂಟು ಮಾಡು ವಂತೆ ತಿನ್ನುವವನಿಗೆ ಅದು ಕೆಟ್ಟದ್ದಾಗಿದೆ. ದೇವರ ಕಾರ್ಯವನ್ನು ಆಹಾರದ ನಿಮಿತ್ತವಾಗಿ ಕೆಡಿಸಬಾರದು. ಎಲ್ಲಾ ಪದಾರ್ಥಗಳೂ ಶುದ್ಧವೇ ಹೌದು; ಆದರೆ ವಿಘ್ನವನ್ನುಂಟು ಮಾಡು ವಂತೆ ತಿನ್ನುವವನಿಗೆ ಅದು ಕೆಟ್ಟದ್ದಾಗಿದೆ.
- 1 Peter 2:16 1 ಪೇತ್ರನು 2:16ಸ್ವತಂತ್ರರಾಗಿರ್ರಿ; ಆದರೆ ಕೆಟ್ಟತನವನ್ನು ಮರೆಮಾಡು ವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; ನೀವು ದೇವರ ದಾಸರಾಗಿದ್ದೀರಿ.
- 2 Peter 2:19 2 ಪೇತ್ರನು 2:19ಇಂಥವರು ಸ್ವಾತಂತ್ರ್ಯ ಕೊಡುತ್ತೇವೆಂದು ಅವರಿಗೆ ವಾಗ್ದಾನ ಮಾಡುತ್ತಾರೆ, ಆದರೆ ತಾವೇ ಕೆಟ್ಟತನದ ದಾಸತ್ವ ದೊಳಗಿದ್ದಾರೆ. ಯಾಕಂದರೆ ಒಬ್ಬನು ಯಾವದಕ್ಕೆ ಸೋತು ಹೋಗಿರುವನೊ? ಅವನು ಅದರ ದಾಸತ್ವ ದೊಳಗಿರುವನಷ್ಟೆ.
- 1 Corinthians 10:24 1 ಕೊರಿಂಥದವರಿಗೆ 10:24ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರ ಹಿತವನ್ನು ಚಿಂತಿಸಲಿ.
- Romans 14:1–2 ರೋಮಾಪುರದವರಿಗೆ 14:1–2ಆದರೆ ಸಂದೇಹಾಸ್ಪದವಾದವುಗಳನ್ನು ಚರ್ಚಿಸಬೇಡಿರಿ, ನಂಬಿಕೆಯಲ್ಲಿ ದೃಢವಿಲ್ಲ ದವರನ್ನು ಸೇರಿಸಿಕೊಳ್ಳಿರಿ. ಒಬ್ಬನು ಯಾವದನ್ನಾ ದರೂ ತಿನ್ನಬಹುದೆಂದು ನಂಬುತ್ತಾನೆ; ದೃಢವಿಲ್ಲದವನು ಕಾಯಿಪಲ್ಯಗಳನ್ನು ಮಾತ್ರ ತಿನ್ನುತ್ತಾನೆ;
- 1 Corinthians 8:12 1 ಕೊರಿಂಥದವರಿಗೆ 8:12ಹೀಗಿರಲಾಗಿ ಸಹೋದರರಿಗೆ ವಿರೋಧವಾಗಿ ಪಾಪಮಾಡಿ ಅವರ ನಿರ್ಬಲವಾದ ಮನಸ್ಸನ್ನು ನೋಯಿಸಿ ಕ್ರಿಸ್ತನಿಗೆ ವಿರೋಧವಾಗಿ ಪಾಪ ಮಾಡುವವರಾಗುತ್ತೀರಿ.ಆದದರಿಂದ ಆಹಾರವು ನನ್ನ ಸಹೋದರನಿಗೆ ಅಭ್ಯಂತರವಾದರೆ ನಾನು ನನ್ನ ಸಹೋದರನಿಗೆ ಅಭ್ಯಂತರಪಡಿಸದಂತೆ ಎಂದಿಗೂ ಮಾಂಸ ತಿನ್ನುವದಿಲ್ಲ.
- Romans 14:13–15 ರೋಮಾಪುರದವರಿಗೆ 14:13–15ಆದಕಾರಣ ಇನ್ನು ಮೇಲೆ ಒಬ್ಬರ ವಿಷಯದ ಲ್ಲೊಬ್ಬರು ಎಂದಿಗೂ ತೀರ್ಪು ಮಾಡದೆ ಇರೋಣ; ಇದಲ್ಲದೆ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ ಎಡೆತಡೆಯನ್ನಾಗಲಿ ಹಾಕಲೇಬಾರದೆಂದು ತೀರ್ಮಾನಿ ಸಿಕೊಳ್ಳಿರಿ. ಯಾವ ಪದಾರ್ಥವೂ ಸ್ವತಃ ಅಶುದ್ಧ ವಾದದ್ದಲ್ಲವೆಂದು ನಾನು ಬಲ್ಲೆನು, ಇದನ್ನು ನಾನು ಕರ್ತನಾದ ಯೇಸುವಿನ ಮುಖಾಂತರ ದೃಢವಾಗಿ ನಂಬಿದ್ದೇನೆ; ಆದರೆ ಯಾವದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವೇ. ನಿನ್ನ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವಾದರೆ ಪ್ರೀತಿಗೆ ತಕ್ಕಂತೆ ನೀನು ಇನ್ನು ನಡೆಯುವ ವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಸತ್ತನೋ ಅವನನ್ನು ನಿನ್ನ ಆಹಾರದಿಂದ ಕೆಡಿಸಬಾರದು.
- 1 Corinthians 10:32 1 ಕೊರಿಂಥದವರಿಗೆ 10:32ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ಅಭ್ಯಂತರವಾಗಬೇಡಿರಿ.ಇದಲ್ಲದೆ ನಾನಂತೂ ನನ್ನ ಸ್ವಪ್ರಯೊಜನವನ್ನೇ ನೋಡದೆ ಅನೇಕರು ರಕ್ಷಿಸಲ್ಪಡುವಂತೆ ಅವರ ಪ್ರಯೋಜನಕ್ಕಾಗಿ ಎಲ್ಲಾ ವಿಷಯಗಳಲ್ಲಿ ಎಲ್ಲರನ್ನು ಮೆಚ್ಚಿಸುತ್ತೇನೆ.
- 1 Corinthians 9:22 1 ಕೊರಿಂಥದವರಿಗೆ 9:22ಬಲವಿಲ್ಲದವರನ್ನು ಸಂಪಾದಿಸು ವದಕ್ಕೆ ಅವರಿಗೆ ಬಲವಿಲ್ಲದವನಂತಾದೆನು; ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥವನಾಗಿದ್ದೇನೆ.
- 1 Corinthians 8:10 1 ಕೊರಿಂಥದವರಿಗೆ 8:10ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲ ವಾದ ಮನಸ್ಸಾಕ್ಷಿಯುಳ್ಳ ಯಾವನಾದರೂ ಕಂಡರೆ ಅವನೂ ವಿಗ್ರಹಕ್ಕೆ ಸಮರ್ಪಣೆ ಮಾಡಿದ ಪದಾರ್ಥ ಗಳನ್ನು ತಿನ್ನುವದಕ್ಕೆ ಧೈರ್ಯ ತಂದುಕೊಂಡಾನಲ್ಲವೇ?
- Luke 17:1–2 ಲೂಕನು 17:1–2ತರುವಾಯ ಆತನು ಶಿಷ್ಯರಿಗೆ-- ಆಟಂಕಗಳು ಬಾರದಿರುವದು ಅಸಾಧ್ಯ; ಆದರೆ ಯಾವನಿಂದ ಅವು ಬರುವವೋ ಅವನಿಗೆ ಅಯ್ಯೋ! ಅವನು ಈ ಚಿಕ್ಕವರಲ್ಲಿ ಒಬ್ಬನಿಗೆ ಆಟಂಕ ಪಡಿಸುವದಕ್ಕಿಂತ ಅವನ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವನನ್ನು ಸಮುದ್ರದೊಳಗೆ ಬಿಸಾಡು ವದು ಅವನಿಗೆ ಉತ್ತಮವಾಗಿದೆ.