1 John · chapter 4 · verse 8
1 John 4:8 in Kannada
ಪ್ರೀತಿಯಿಲ್ಲದ ವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಯಾಗಿದ್ದಾನೆ.
Preetiyillada vanu devarannu ballavanalla; yaakandare devaru preetiyaagiddaane.
1 John 4:8 in English
- King James Version (KJV)
- He that loveth not knoweth not God; for God is love.
- World English Bible (WEB)
- He who doesn’t love doesn’t know God, for God is love.
- American Standard Version (ASV)
- He that loveth not knoweth not God; for God is love.
- Bible in Basic English (BBE)
- He who has no love has no knowledge of God, because God is love.
- Darby Translation (DBY)
- He that loves not has not known God; for God is love.
- Webster's Bible (WBS)
- He that loveth not, knoweth not God; for God is love.
- Young's Literal Translation (YLT)
- he who is not loving did not know God, because God is love.
Read in context
- 6ನಾವಂತೂ ದೇವರಿಗೆ ಸಂಬಂಧಪಟ್ಟವ ರಾಗಿದ್ದೇವೆ; ದೇವರನ್ನು ಬಲ್ಲವನು ನಮ್ಮ ಮಾತನ್ನು ಕೇಳುತ್ತಾನೆ; ದೇವರಿಗೆ ಸಂಬಂಧಪಡದವನು ನಮ್ಮ ಮಾತನ್ನು ಕೇಳುವದಿಲ್ಲ. ಇದು ಸತ್ಯದ ಆತ್ಮ, ಅದು ಸುಳ್ಳಿನ ಆತ್ಮ ಎಂದು ಇದರಿಂದಲೇ ನಾವು ತಿಳಿದು ಕೊಳ್ಳುತ್ತೇವೆ.
- 7ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಯಾಕಂದರೆ ಪ್ರೀತಿಯು ದೇವರಿಂದಾಗಿದೆ. ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.
- 8ಪ್ರೀತಿಯಿಲ್ಲದ ವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಯಾಗಿದ್ದಾನೆ.
- 9ನಾವು ಆತನ ಮೂಲಕ ಜೀವಿಸು ವದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮ ಕಡೆಗೆ ಪ್ರತ್ಯಕ್ಷವಾಗಿದೆ.
- 10ನಾವು ದೇವರನ್ನು ಪ್ರೀತಿಸಿ ದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ತನ್ನ ಮಗನನ್ನು ಕಳುಹಿಸಿ ಕೊಟ್ಟದ್ದರಲ್ಲಿಯೇ ಆತನ ಪ್ರೀತಿಯು ಇರುತ್ತದೆ.
Cross references
- 1 John 4:16 1 ಯೋಹಾನನು 4:16ನಮ್ಮ ಕಡೆಗಿರುವ ದೇವರ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ, ಅದನ್ನು ನಂಬಿದ್ದೇವೆ. ದೇವರು ಪ್ರೀತಿಯಾಗಿದ್ದಾನೆ; ಪ್ರೀತಿಯಲ್ಲಿ ನೆಲೆ ಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ಮತ್ತು ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.
- 1 John 4:7 1 ಯೋಹಾನನು 4:7ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಯಾಕಂದರೆ ಪ್ರೀತಿಯು ದೇವರಿಂದಾಗಿದೆ. ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.
- Psalm 86:15 ಕೀರ್ತನೆಗಳು 86:15ಆದರೆ ನೀನು ಓ ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.
- 2 Corinthians 13:11 2 ಕೊರಿಂಥದವರಿಗೆ 13:11ಕಡೇ ಮಾತೇನಂದರೆ ಸಹೋದರರೇ, ನಿಮಗೆ ಶುಭವಾಗಲಿ. ಸಂಪೂರ್ಣರಾಗಿರ್ರಿ; ಆದರಣೆ ಹೊಂದಿದವರಾಗಿರ್ರಿ, ಒಂದೇ ಮನಸ್ಸುಳ್ಳವರಾಗಿರ್ರಿ, ಸಮಾಧಾನದಲ್ಲಿ ಜೀವಿಸಿರಿ; ಆಗ ಪ್ರೀತಿಯುಳ್ಳ ಶಾಂತಿಯ ದೇವರು ನಿಮ್ಮ ಸಂಗಡ ಇರುವನು.
- Psalm 86:5 ಕೀರ್ತನೆಗಳು 86:5ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ.
- Ephesians 2:4 ಎಫೆಸದವರಿಗೆ 2:4ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ
- Exodus 34:6–7 ವಿಮೋಚನಕಾಂಡ 34:6–7ಕರ್ತನು ಅವನೆದುರಿಗೆ ಹಾದು ಹೋಗುತ್ತಾ--ಕರ್ತನು, ಕರ್ತನಾದ ದೇವರು, ಕರುಣಾಳುವೂ ಕೃಪಾಳುವೂ ದೀರ್ಘಶಾಂತನೂ ಒಳ್ಳೇತನದಲ್ಲಿ ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ ಸಾವಿರ (ತಲೆಗಳ) ವರೆಗೂ ಕರುಣೆ ತೋರಿಸುವಾತನೂ ದೋಷಾಪರಾಧ ವನ್ನೂ ಪಾಪವನ್ನೂ ಕ್ಷಮಿಸುವಾತನೂ ಅಪರಾಧಿ ಯನ್ನು ನಿರಪರಾಧಿಯೆಂದು ಎಣಿಸದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆ ಗಳವರೆಗೂ ವಿಚಾರಿಸುವಾತನೂ ಎಂದು ಪ್ರಕಟಿಸಿ ಕೊಂಡನು.
- 1 John 1:5 1 ಯೋಹಾನನು 1:5ನಾವು ಆತನಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಯಾವದಂದರೆ--ದೇವರು ಬೆಳಕಾಗಿದ್ದಾನೆ; ಆತನಲ್ಲಿ ಎಷ್ಟು ಮಾತ್ರವೂ ಕತ್ತಲೆಯಿಲ್ಲ ಎಂಬದೇ.
- 1 John 3:6 1 ಯೋಹಾನನು 3:6ಆತನಲ್ಲಿ ನೆಲೆಗೊಂಡಿರುವವನು ಪಾಪಮಾಡನು; ಪಾಪಮಾಡುವವನು ಆತನನ್ನು ಕಂಡವನೂ ಅಲ್ಲ, ತಿಳಿದವನೂ ಅಲ್ಲ.
- 1 John 2:9 1 ಯೋಹಾನನು 2:9ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ.
- John 8:54–55 ಯೋಹಾನನು 8:54–55ಯೇಸು--ನನ್ನನ್ನು ನಾನೇ ಸನ್ಮಾನಿಸಿಕೊಂಡರೆ ನನ್ನ ಸನ್ಮಾನವು ಏನೂ ಅಲ್ಲ; ನೀವು ಯಾವಾತನನ್ನು ನಿಮ್ಮ ದೇವರೆಂದು ಹೇಳುತ್ತೀರೋ ಆ ನನ್ನ ತಂದೆಯೇ ನನ್ನನ್ನು ಸನ್ಮಾನಿಸುತ್ತಾನೆ. ಆದಾಗ್ಯೂ ನೀವು ಆತನನ್ನು ಅರಿತುಕೊಂಡಿಲ್ಲ; ಆದರೆ ನಾನು ಆತನನ್ನು ಅರಿತಿದ್ದೇನೆ. ನಾನು ಆತನನ್ನು ಅರಿಯಲಿಲ್ಲವೆಂದು ಹೇಳಿದರೆ ನಿಮ್ಮ ಹಾಗೆ ನಾನೂ ಸುಳ್ಳುಗಾರನಾಗಿ ರುವೆನು; ಆದರೆ ನಾನು ಆತನನ್ನು ಅರಿತಿದ್ದೇನೆ; ಆತನ ಮಾತನ್ನು ಕೈಕೊಂಡಿದ್ದೇನೆ.
- 1 John 2:4 1 ಯೋಹಾನನು 2:4ಒಬ್ಬನು--ನಾನು ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದಿದ್ದರೆ ಅವನು ಸುಳ್ಳುಗಾರನಾಗಿದ್ದಾನೆ; ಸತ್ಯವು ಅವನಲ್ಲಿ ಇಲ್ಲ.