1 Kings · chapter 1 · verse 14
1 Kings 1:14 in Kannada
ಇಗೋ, ನೀನು ಇನ್ನೂ ಅರಸನ ಸಂಗಡ ಮಾತ ನಾಡುತ್ತಿರುವಾಗ ನಾನು ನಿನ್ನ ಹಿಂದೆಯೇ ಒಳಗೆ ಬಂದು ನಿನ್ನ ಮಾತು ಗಳನ್ನು ಸ್ಥಿರಮಾಡುವೆನು ಅಂದನು.
Igo, neenu innoo arasana sangada maata naaduttiruvaaga naanu ninna hindeye olage bandu ninna maatu galannu sthiramaaduvenu andanu.
1 Kings 1:14 in English
- King James Version (KJV)
- Behold, while thou yet talkest there with the king, I also will come in after thee, and confirm thy words.
- World English Bible (WEB)
- Behold, while you are still talking there with the king, I will also come in after you and confirm your words.”
- American Standard Version (ASV)
- Behold, while thou yet talkest there with the king, I also will come in after thee, and confirm thy words.
- Bible in Basic English (BBE)
- And while you are still talking there with the king, see, I will come in after you and say that your story is true.
- Darby Translation (DBY)
- Behold, while thou yet talkest there with the king, I also will come in after thee and confirm thy words.
- Webster's Bible (WBS)
- Behold, while thou art yet talking there with the king, I will also come in after thee, and confirm thy words.
- Young's Literal Translation (YLT)
- Lo, thou are yet speaking there with the king, and I come in after thee, and have completed thy words.'
Read in context
- 12ಆದದರಿಂದ ನೀನು ನಿನ್ನ ಪ್ರಾಣವನ್ನೂ ನಿನ್ನ ಮಗ ನಾದ ಸೊಲೊಮೋನನ ಪ್ರಾಣವನ್ನೂ ರಕ್ಷಿಸಿಕೊಳ್ಳುವ ಹಾಗೆ ಅಪ್ಪಣೆಯಾದರೆ ನಿನಗೆ ಆಲೋಚನೆ ಹೇಳು ತ್ತೇನೆ.
- 13ನೀನು ದಾವೀದನ ಬಳಿಗೆ ಹೋಗಿ ಅವ ನಿಗೆ--ಅರಸನಾದ, ನನ್ನ ಒಡೆಯನೇ, ನಿಶ್ಚಯವಾಗಿ ನನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನಿನ್ನ ದಾಸಿಗೆ ಆಣೆ ಇಟ್ಟು ಹೇಳಲಿಲ್ಲವೋ? ಹೀಗಿರಲಾಗಿ ಅದೋನೀಯನು ಆಳುವದು ಯಾಕೆ ಎಂದು ಹೇಳು.
- 14ಇಗೋ, ನೀನು ಇನ್ನೂ ಅರಸನ ಸಂಗಡ ಮಾತ ನಾಡುತ್ತಿರುವಾಗ ನಾನು ನಿನ್ನ ಹಿಂದೆಯೇ ಒಳಗೆ ಬಂದು ನಿನ್ನ ಮಾತು ಗಳನ್ನು ಸ್ಥಿರಮಾಡುವೆನು ಅಂದನು.
- 15ಆಗ ಬತ್ಷೆಬೆಳು ಕೊಠಡಿಯೊಳಗೆ ಅರಸನ ಬಳಿಗೆ ಹೋದಳು.
- 16ಅರ ಸನು ಅತಿವೃದ್ಧನಾಗಿರುವದರಿಂದ ಶೂನೇಮ್ಯಳಾದ ಅಬೀಷಗ್ಳು ಅರಸನಿಗೆ ಸೇವೆಮಾಡುತ್ತಾ ಇದ್ದಳು. ಬತ್ಷೆಬೆಳು ಬಾಗಿ ಅರಸನಿಗೆ ವಂದನೆ ಮಾಡಿದಳು. ಅರಸನು--ನಿನಗೇನು ಬೇಕು ಅಂದನು.
Cross references
- 2 Corinthians 13:1 2 ಕೊರಿಂಥದವರಿಗೆ 13:1ನಾನು ನಿಮ್ಮ ಬಳಿಗೆ ಬರುವದು ಇದು ಮೂರನೆಯ ಸಾರಿ. ಇಬ್ಬರು ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತೂ ಸ್ಥಾಪಿತವಾಗಬೇಕು.
- 1 Kings 1:17–27 1 ಅರಸುಗಳು 1:17–27ಆಕೆಯು ಅವನಿಗೆ--ನನ್ನ ಒಡೆಯನೇ, ನಿಶ್ಚಯವಾಗಿ ನಿನ್ನ ತರುವಾಯ ನಿನ್ನ ಮಗನಾದ ಸೊಲೊಮೋನನು ಆಳುವನೆಂದೂ ಅವನು ನಿನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವನೆಂದೂ ನೀನು ನಿನ್ನ ದಾಸಿಗೆ ನಿನ್ನ ದೇವರಾದ ಕರ್ತನ ಹೆಸರಿನಲ್ಲಿ ಪ್ರಮಾಣಮಾಡಿದಿ. ಆದರೆ ಇಗೋ, ಅರಸನಾಗಿರುವ ನನ್ನ ಒಡೆಯ ನಾದ ನೀನು ಅರಿಯದೆ ಇರುವಾಗ ಅದೋನೀಯನು ಆಳುತ್ತಾನೆ. ಇದಲ್ಲದೆ ಅವನು ಬಹಳ ಎತ್ತುಗಳನ್ನೂ ಕೊಬ್ಬಿದ ಪಶುಗಳನ್ನೂ ಕುರಿಗಳನ್ನೂ ಕೊಲ್ಲಿಸಿ ಅರಸನ ಮಕ್ಕಳೆಲ್ಲರನ್ನೂ ಯಾಜಕನಾದ ಎಬ್ಯಾತಾರನನ್ನೂ ಸೈನ್ಯಾಧಿಪತಿಯಾದ ಯೋವಾಬನನ್ನೂ ಕರೆದಿದ್ದಾನೆ. ಆದರೆ ನಿನ್ನ ಸೇವಕನಾದ ಸೊಲೊಮೋನನನ್ನು ಅವನು ಕರೆಯಲಿಲ್ಲ. ಆದದರಿಂದ ಅರಸನಾದ ನನ್ನ ಒಡೆಯನೇ, ನಿನ್ನ ತರುವಾಯ ನನ್ನ ಒಡೆಯನಾದ ಅರಸನ ಸಿಂಹಾಸನದ ಮೇಲೆ ಕುಳಿತುಕೊಳ್ಳುವವನಾ ರೆಂದು ನೀನು ಹೇಳುವ ಹಾಗೆ ಸಮಸ್ತ ಇಸ್ರಾಯೇಲ್ಯರ ಕಣ್ಣುಗಳು ನಿನ್ನ ಮೇಲೆ ಇರುತ್ತವೆ. ಇಲ್ಲದಿದ್ದರೆ ಅರಸನಾದ ನನ್ನ ಒಡೆಯನು ತನ್ನ ಪಿತೃಗಳ ಸಂಗಡ ಮಲಗಿಕೊಂಡಿರುವಾಗ ನಾನೂ ನನ್ನ ಮಗನಾದ ಸೊಲೊಮೋನನೂ ಅಪರಾಧಿಗಳಾಗಿ ಎಣಿಸಲ್ಪಟ್ಟೇವು ಅಂದಳು. ಅವಳು ಅರಸನ ಸಂಗಡ ಇನ್ನೂ ಮಾತನಾಡು ತ್ತಿರುವಾಗ ಇಗೋ, ಪ್ರವಾದಿಯಾದ ನಾತಾನನು ಬಂದನು; ಆಗ ಅರಸನಿಗೆ--ಇಗೋ, ಪ್ರವಾದಿ ಯಾದ ನಾತಾನನು ಅಂದರು. ಅವನು ಒಳಗೆ ಅರಸನ ಮುಂದೆ ಬಂದಾಗ ಮೋರೆ ಕೆಳಗಾಗಿ ನೆಲಕ್ಕೆ ಅಡ್ಡ ಬಿದ್ದನು. ಆಗ ನಾತಾನನು--ಓ ಅರಸನಾದ ನನ್ನ ಒಡೆಯನೇ, ಅದೋನೀಯನು ನನ್ನ ತರುವಾಯ ಆಳುವನೆಂದೂ ನಿನ್ನ ಸಿಂಹಾಸನದ ಮೇಲೆ ಕುಳಿತು ಕೊಳ್ಳುವನೆಂದೂ ನೀನು ಹೇಳಿದ್ದು ಹೌದೋ? ಈ ಹೊತ್ತು ಅವನು ಇಳಿದು ಹೋಗಿ ಎತ್ತು ಗಳನ್ನೂ ಕೊಬ್ಬಿದ ಪಶುಗಳನ್ನೂ ಕುರಿಗಳನ್ನೂ ಅನೇಕ ವಾಗಿ ಕೊಲ್ಲಿಸಿ ಅರಸನ ಮಕ್ಕಳೆಲ್ಲರನ್ನೂ ಸೈನ್ಯಾಧಿಪತಿ ಗಳನ್ನೂ ಯಾಜಕನಾದ ಎಬ್ಯಾತಾರನನ್ನೂ ಕರೆದಿ ದ್ದಾನೆ. ಇಗೋ, ಅವರು ಅವನ ಮುಂದೆ ತಿಂದು, ಕುಡಿದು--ಅರಸನಾದ ಅದೋನೀಯನನ್ನು ದೇವರು ರಕ್ಷಿಸಲಿ ಎಂದು ಅನ್ನುತ್ತಾರೆ. ಆದರೆ ನನ್ನನ್ನೂ ಅಂದರೆ ನಿನ್ನ ಸೇವಕನಾದ ನನ್ನನ್ನೂ ಯೆಹೋಯಾ ದಾವನ ಮಗನಾದ ಬೆನಾಯನನ್ನೂ ನಿನ್ನ ಸೇವಕನಾದ ಸೊಲೊಮೋನನನ್ನೂ ಅವನು ಕರೆಯಲೇ ಇಲ್ಲ. ಅರಸನಾದ ನನ್ನ ಒಡೆಯನಿಂದ ಈ ಕಾರ್ಯ ವಾಯಿತೋ? ಅರಸನಾದ ನನ್ನ ಒಡೆಯನು ತನ್ನ ತರುವಾಯ ತನ್ನ ಸಿಂಹಾಸನದ ಮೇಲೆ ಕುಳಿತು ಕೊಳ್ಳುವವನು ಯಾರೆಂದು ನಿನ್ನ ಸೇವಕನಾದ ನನಗೆ ನೀನು ತಿಳಿಸದೆ ಹೋದಿಯೋ ಅಂದನು.