1 Kings · chapter 1 · verse 40
1 Kings 1:40 in Kannada
ಇದಲ್ಲದೆ ಜನರೆಲ್ಲರು ಅವನ ಹಿಂದೆ ಬಂದರು. ಜನರು ಪಿಳ್ಳಂಗೋವಿಗಳನ್ನು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.
Idallade janarellaru avana hinde bandaru. Janaru pillangovigalannu oodi mahaa aanandadinda santoshisidaru. Avara shabdadinda bhoomiyu kampisitu.
1 Kings 1:40 in English
- King James Version (KJV)
- And all the people came up after him, and the people piped with pipes, and rejoiced with great joy, so that the earth rent with the sound of them.
- World English Bible (WEB)
- All the people came up after him, and the people piped with pipes, and rejoiced with great joy, so that the earth shook with their sound.
- American Standard Version (ASV)
- And all the people came up after him, and the people piped with pipes, and rejoiced with great joy, so that the earth rent with the sound of them.
- Bible in Basic English (BBE)
- And all the people came up after him, piping with pipes, and they were glad with great joy, so that the earth was shaking with the sound.
- Darby Translation (DBY)
- And all the people came up after him, and the people piped with pipes, and rejoiced with great joy, so that the earth rent with the sound of them.
- Webster's Bible (WBS)
- And all the people came up after him, and the people piped with pipes, and rejoiced with great joy, so that the earth rent with the sound of them.
- Young's Literal Translation (YLT)
- And all the people come up after him, and the people are piping with pipes, and rejoicing — great joy, and the earth rendeth with their voice.
Read in context
- 38ಹಾಗೆಯೇ ಯಾಜಕನಾದ ಚಾದೋಕನೂ ಪ್ರವಾದಿಯಾದ ನಾತಾನನೂ ಯೆಹೋಯಾದಾವನ ಮಗನಾದ ಬೆನಾಯನೂ ಕೆರೆತ್ಯರೂ ಪೆಲೇತ್ಯರೂ ಹೋಗಿ ಸೊಲೊಮೋನನನ್ನು ಅರಸನಾದ ದಾವೀ ದನ ಹೇಸರ ಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಕರತಂದರು.
- 39ಆಗ ಯಾಜಕನಾದ ಚಾದೋಕನು ಗುಡಾರದೊಳಗಿಂದ ತೈಲದ ಕೊಂಬನ್ನು ತಂದು ಸೊಲೊಮೋನನನ್ನು ಅಭಿಷೇಕಿಸಿದನು. ಅವರು ತುತೂರಿಯನ್ನು ಊದಿದರು. ಆಗ ಜನರೆಲ್ಲರು--ಅರಸನಾದ ಸೊಲೊಮೋನನನ್ನು ದೇವರು ರಕ್ಷಿಸಲಿ ಅಂದರು.
- 40ಇದಲ್ಲದೆ ಜನರೆಲ್ಲರು ಅವನ ಹಿಂದೆ ಬಂದರು. ಜನರು ಪಿಳ್ಳಂಗೋವಿಗಳನ್ನು ಊದಿ ಮಹಾ ಆನಂದದಿಂದ ಸಂತೋಷಿಸಿದರು. ಅವರ ಶಬ್ದದಿಂದ ಭೂಮಿಯು ಕಂಪಿಸಿತು.
- 41ಆಗ ಅದೋನೀಯನೂ ಅವನ ಸಂಗಡ ಕರೆಯಲ್ಪಟ್ಟವರೂ ತಿಂದು ತೀರಿಸಿದಾಗ ಅದನ್ನು ಕೇಳಿದರು. ಯೋವಾಬನು ತುತೂರಿಯ ಶಬ್ದವನ್ನು ಕೇಳಿದಾಗ--ಪಟ್ಟಣದಲ್ಲಿ ಗದ್ದಲದ ಶಬ್ದ ಯಾಕೆ ಅಂದನು.
- 42ಅವನು ಇನ್ನೂ ಮಾತನಾಡು ತ್ತಿರುವಾಗ ಇಗೋ, ಯಾಜಕನಾಗಿರುವ ಎಬ್ಯಾತಾರನ ಮಗನಾದ ಯೋನಾತಾನನು ಬಂದನು. ಅದೋನೀ ಯನು ಅವನಿಗೆ--ಒಳಗೆ ಬಾ; ಯಾಕಂದರೆ ನೀನು ಪರಾಕ್ರಮಶಾಲಿ, ಒಳ್ಳೇ ವರ್ತಮಾನವನ್ನು ತರುತ್ತೀ ಅಂದನು.
Cross references
- Psalm 97:1 ಕೀರ್ತನೆಗಳು 97:1ಕರ್ತನು ಆಳುತ್ತಾನೆ; ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋ ಷಿಸಲಿ.
- 2 Kings 11:20 2 ಅರಸುಗಳು 11:20ಆಗ ದೇಶದ ಜನರೆಲ್ಲರೂ ಸಂತೋಷಪಟ್ಟರು; ಪಟ್ಟಣವು ಶಾಂತವಾಗಿತ್ತು. ಆದರೆ ಅತಲ್ಯಳನ್ನು ಅರಮನೆಯ ಬಳಿಯಲ್ಲಿ ಕತ್ತಿಯಿಂದ ಕೊಂದುಹಾಕಿ ದರು.ಯೆಹೋವಾಷನು ಏಳು ವರುಷದವನಾ ಗಿದ್ದಾಗ ಆಳಲು ಆರಂಭಿಸಿದನು.
- 1 Chronicles 12:38–40 1 ಪೂರ್ವಕಾಲವೃತ್ತಾಂತ 12:38–40ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲ್ಯರ ಮೇಲೆ ಅರಸನಾಗ ಮಾಡಲು ಪೂರ್ಣಹೃದಯದಿಂದ ಹೆಬ್ರೋನಿಗೆ ಬಂದರು. ಇದಲ್ಲದೆ ಇಸ್ರಾಯೇಲಿ ನಲ್ಲಿದ್ದ ಮಿಕ್ಕಾದವರೆಲ್ಲರೂ ದಾವೀದನನ್ನು ಅರಸ ನಾಗ ಮಾಡಲು ಒಂದೇ ಹೃದಯವುಳ್ಳವರಾಗಿದ್ದರು. ಅವರು ಅಲ್ಲಿ ದಾವೀದನ ಸಂಗಡ ಮೂರು ದಿವಸ ಇದ್ದು ತಿನ್ನುತ್ತಾ ಕುಡಿಯುತ್ತಾ ಇದ್ದರು.ಅವರ ಸಹೋದರರು ಅವರಿಗೋಸ್ಕರ ಸಿದ್ಧಮಾಡಿ ದರು.ಇದಲ್ಲದೆ ಅವರ ಬಳಿಯಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ಕತ್ತೆ ಒಂಟೆ ಹೇಸರಕತ್ತೆ ಎತ್ತುಗಳ ಮೇಲೆ ರೊಟ್ಟಿಗಳನ್ನೂ ಆಹಾರವನ್ನೂ ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷೇ ಗೊನೆಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಎತ್ತುಗಳನ್ನೂ ಕುರಿ ಗಳನ್ನೂ ಬಹಳವಾಗಿ ತಂದರು; ಯಾಕಂದರೆ ಇಸ್ರಾ ಯೇಲಿನಲ್ಲಿ ಸಂತೋಷವಿತ್ತು. ಇದಲ್ಲದೆ ಅವರ ಬಳಿಯಲ್ಲಿದ್ದ ಇಸ್ಸಾಕಾರ್, ಜೆಬುಲೂನ್, ನಫ್ತಾಲಿಯರು ಮೊದಲುಗೊಂಡು ಎಲ್ಲರೂ ಕತ್ತೆ ಒಂಟೆ ಹೇಸರಕತ್ತೆ ಎತ್ತುಗಳ ಮೇಲೆ ರೊಟ್ಟಿಗಳನ್ನೂ ಆಹಾರವನ್ನೂ ಹಿಟ್ಟನ್ನೂ ಅಂಜೂರದ ಉಂಡೆಗಳನ್ನೂ ಒಣಗಿದ ದ್ರಾಕ್ಷೇ ಗೊನೆಗಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಎತ್ತುಗಳನ್ನೂ ಕುರಿ ಗಳನ್ನೂ ಬಹಳವಾಗಿ ತಂದರು; ಯಾಕಂದರೆ ಇಸ್ರಾ ಯೇಲಿನಲ್ಲಿ ಸಂತೋಷವಿತ್ತು.
- 1 Samuel 11:15 1 ಸಮುವೇಲನು 11:15ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ ಆ ಸ್ಥಳದಲ್ಲಿ ಕರ್ತನ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ ಕರ್ತನಿಗೆ ಸಮಾ ಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲ್ಯರೂ ಬಹಳವಾಗಿ ಸಂತೋಷ ಪಟ್ಟರು.
- Luke 19:37 ಲೂಕನು 19:37ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ--
- Daniel 3:5 ದಾನಿಯೇಲನು 3:5ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳುವಾಗ ಅರಸನಾದ ನೆಬೂಕ ದ್ನೆಚ್ಚರನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು.
- 2 Kings 11:14 2 ಅರಸುಗಳು 11:14ಅವಳು ದೃಷ್ಟಿಸಿ ನೋಡುವಾಗ ಇಗೋ, ಅರಸನು ಪದ್ಧತಿಯ ಪ್ರಕಾರ ಸ್ತಂಭದ ಬಳಿ ಯಲ್ಲಿ ನಿಂತಿದ್ದನು. ಪ್ರಧಾನರೂ ತುತೂರಿ ಊದು ವವರೂ ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದಿದರು. ಆಗ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದು ಕೊಂಡು--ದ್ರೋಹ, ದ್ರೋಹ ಎಂದು ಕೂಗಿದಳು.
- Revelation 11:15–18 ಪ್ರಕಟನೆ 11:15–18ಏಳನೆಯ ದೂತನು ತುತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ-- ಈ ಲೋಕದ ರಾಜ್ಯಗಳು ನಮ್ಮ ಕರ್ತನ ಮತ್ತು ಆತನ ಕ್ರಿಸ್ತನ ರಾಜ್ಯಗಳಾದವು; ಆತನು ಯುಗ ಯುಗಾಂತರಗಳಲ್ಲಿಯೂ ಆಳುವನು ಎಂದು ಹೇಳಿ ದವು. ತರುವಾಯ ದೇವರ ಸಮಕ್ಷಮದಲ್ಲಿ ತಮ ತಮ್ಮ ಆಸನಗಳ ಮೇಲೆ ಕೂತಿರುವ ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡಬಿದ್ದು-- ಓ ಕರ್ತನೇ, ಸರ್ವಶಕ್ತನಾದ ದೇವರೇ, ಇರುವಾತನೂ ಇದ್ದಾತನೂ ಬರುವಾತನೂ ಆಗಿರುವ ನೀನು ನಿನ್ನ ಮಹಾಅಧಿಕಾರ ವನ್ನು ವಹಿಸಿಕೊಂಡು ಆಳಿದ್ದರಿಂದ ನಾವು ನಿನಗೆ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುತ್ತೇವೆ ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು. ಜನಾಂಗಗಳು ಕೋಪಿಸಿ ಕೊಂಡವು, ನಿನ್ನ ಕೋಪವು ಬಂದಿತು. ಸತ್ತವರು ತೀರ್ಪು ಹೊಂದುವದಕ್ಕೂ ನೀನು ನಿನ್ನ ಸೇವಕರಾದ ಪ್ರವಾದಿಗಳಿಗೂ ಪರಿಶುದ್ಧರಿಗೂ ನಿನ್ನ ನಾಮಕ್ಕೆ ಭಯಪಡುವ ಚಿಕ್ಕವರಿಗೂ ದೊಡ್ಡವರಿಗೂ ಪ್ರತಿ ಫಲವನ್ನು ಕೊಡುವದಕ್ಕೆ ಮತ್ತು ಭೂಮಿಯನ್ನು ನಾಶಮಾಡುವವರನುಆಗ ಪರಲೋಕದಲ್ಲಿ ದೇವಾಲಯವು ತೆರೆಯ ಲ್ಪಟ್ಟಿತು; ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು; ಇದಲ್ಲದೆ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆನೆಕಲ್ಲಿನ ಮಳೆಯೂ ಉಂಟಾದವು.
- Zechariah 9:9 ಜೆಕರ್ಯ 9:9ಚೀಯೋನ್ ಕುಮಾರ್ತೆಯೇ, ಬಹಳವಾಗಿ ಉಲ್ಲಾಸಪಡು; ಯೆರೂಸಲೇಮಿನ ಕುಮಾರ್ತೆಯೇ, ಆರ್ಭಟಿಸು; ಇಗೋ, ನಿನ್ನ ಅರಸನು ನಿನ್ನ ಬಳಿಗೆ ಬರುತ್ತಾನೆ; ಆತನು ನೀತಿವಂತನಾಗಿಯೂ ರಕ್ಷಿಸುವಾತ ನಾಗಿಯೂ ದೀನನಾಗಿಯೂ ಕತ್ತೆಯ ಮೇಲೆ ಹೌದು, ಕತ್ತೆಯ ಮರಿಯ ಮೇಲೆ ಹತ್ತಿದವನಾಗಿಯೂ ಬರು ತ್ತಾನೆ.