1 Kings · chapter 13 · verse 7
1 Kings 13:7 in Kannada
ಅರಸನು ದೇವರ ಮನುಷ್ಯನಿಗೆ--ನೀನು ನನ್ನ ಕೂಡ ಮನೆಗೆ ಬಂದು ನಿನ್ನನ್ನು ಚೇತರಿಸಿಕೋ. ನಾನು ನಿನಗೆ ಒಂದು ಬಹುಮಾನ ಕೊಡುವೆನು ಅಂದನು.
Arasanu devara manushyanige--neenu nanna kooda manege bandu ninnannu chetarisiko. Naanu ninage ondu bahumaana koduvenu andanu.
1 Kings 13:7 in English
- King James Version (KJV)
- And the king said unto the man of God, Come home with me, and refresh thyself, and I will give thee a reward.
- World English Bible (WEB)
- The king said to the man of God, “Come home with me and refresh yourself, and I will give you a reward.”
- American Standard Version (ASV)
- And the king said unto the man of God, Come home with me, and refresh thyself, and I will give thee a reward.
- Bible in Basic English (BBE)
- And the king said to the man of God, Come with me to my house for food and rest, and I will give you a reward.
- Darby Translation (DBY)
- And the king said to the man of God, Come home with me, and refresh thyself, and I will give thee a present.
- Webster's Bible (WBS)
- And the king said to the man of God, Come home with me, and refresh thyself, and I will give thee a reward.
- Young's Literal Translation (YLT)
- And the king speaketh unto the man of God, 'Come in with me to the house, and refresh thyself, and I give to thee a gift.'
Read in context
- 5ಇದಲ್ಲದೆ ಕರ್ತನ ಮಾತಿನಿಂದ ದೇವರ ಮನುಷ್ಯನು ಕೊಟ್ಟ ಗುರುತಿನ ಪ್ರಕಾರವೇ ಬಲಿ ಪೀಠವು ಸೀಳಿ ಹೋಗಿ ಬೂದಿಯು ಬಲಿಪೀಠದಿಂದ ಚೆಲ್ಲಲ್ಪಟ್ಟಿತು.
- 6ಆಗ ಅರಸನು ಪ್ರತ್ಯುತ್ತರವಾಗಿ ದೇವರ ಮನು ಷ್ಯನಿಗೆ--ನನ್ನ ಕೈ ಗುಣವಾಗುವ ಹಾಗೆ ನೀನು ನಿನ್ನ ದೇವರಾದ ಕರ್ತನ ಕಟಾಕ್ಷವನ್ನು ಬೇಡಿಕೊಂಡು ನನಗೋಸ್ಕರ ಪ್ರಾರ್ಥನೆ ಮಾಡು ಅಂದನು. ಆಗ ದೇವರ ಮನುಷ್ಯನು ಕರ್ತನ ಕಟಾಕ್ಷವನ್ನು ಬೇಡಿಕೊಂಡ ದ್ದರಿಂದ ಅರಸನ ಕೈ ಗುಣವಾಗಿ ಮುಂಚಿನ ಹಾಗೆ ಆಯಿತು.
- 7ಅರಸನು ದೇವರ ಮನುಷ್ಯನಿಗೆ--ನೀನು ನನ್ನ ಕೂಡ ಮನೆಗೆ ಬಂದು ನಿನ್ನನ್ನು ಚೇತರಿಸಿಕೋ. ನಾನು ನಿನಗೆ ಒಂದು ಬಹುಮಾನ ಕೊಡುವೆನು ಅಂದನು.
- 8ಆದರೆ ದೇವರ ಮನುಷ್ಯನು ಅರಸನಿಗೆ ಪ್ರತ್ಯುತ್ತರವಾಗಿ--ನೀನು ನನಗೆ ನಿನ್ನ ಅರ್ಧ ಮನೆ ಯನ್ನು ಕೊಟ್ಟರೂ ನಾನು ನಿನ್ನ ಸಂಗಡ ಹೋಗುವದಿಲ್ಲ; ಈ ಸ್ಥಳದಲ್ಲಿ ರೊಟ್ಟಿ ತಿನ್ನುವದಿಲ್ಲ, ಕುಡಿಯುವದಿಲ್ಲ.
- 9ಯಾಕಂದರೆ--ನೀನು ರೊಟ್ಟಿ ತಿನ್ನಬೇಡ, ನೀರನ್ನು ಕುಡಿಯಬೇಡ; ನೀನು ಬಂದ ಮಾರ್ಗದಿಂದ ಹಿಂತಿ ರುಗಿ ಹೋಗಬೇಡ ಎಂದು ಕರ್ತನ ವಾಕ್ಯದಿಂದ ನನಗೆ ಆಜ್ಞೆ ಆಯಿತು ಅಂದನು.
Cross references
- 2 Kings 5:15 2 ಅರಸುಗಳು 5:15ಆಗ ಅವನೂ ಅವನ ಎಲ್ಲಾ ಪರಿವಾರದವರೂ ದೇವರ ಮನುಷ್ಯನ ಬಳಿಗೆ ತಿರುಗಿ ಬಂದರು. ಅವನು ಪ್ರವಾದಿಯ ಮುಂದೆ ನಿಂತು--ಇಗೋ, ಇಸ್ರಾಯೇ ಲಿನಲ್ಲಿರುವ ದೇವರ ಹೊರತಾಗಿ ಭೂಮಿಯಲ್ಲೆ ಲ್ಲಿಯೂ ಬೇರೆ ದೇವರು ಇಲ್ಲವೆಂದು ನಾನು ಬಲ್ಲೆನು; ಆದಕಾರಣ ನೀನು ದಯಮಾಡಿ ನಿನ್ನ ಸೇವಕನಿಂದ ಕಾಣಿಕೆಯನ್ನು ತಕ್ಕೋ ಅಂದನು.
- 1 Samuel 9:7–8 1 ಸಮುವೇಲನು 9:7–8ಆಗ ಸೌಲನು ತನ್ನ ಸೇವಕನಿಗೆ--ಇಗೋ, ನಾವು ಆ ಮನುಷ್ಯನ ಬಳಿಗೆ ಹೋದರೆ ಏನು ತಕ್ಕೊಂಡು ಹೋಗುವದು? ಯಾಕಂದರೆ ನಮ್ಮ ಹಸಿಬೆಗಳಲ್ಲಿ ಇರುವ ರೊಟ್ಟಿ ಮುಗಿದುಹೋಯಿತು. ದೇವರ ಮನುಷ್ಯನ ಬಳಿಗೆ ತಕ್ಕೊಂಡು ಹೋಗಲು ತಕ್ಕ ಕಾಣಿಕೆ ಇಲ್ಲ; ನಮ್ಮ ಬಳಿಯಲ್ಲಿ ಏನದೆ ಅಂದನು. ಅದಕ್ಕೆ ಆ ಸೇವಕನು ಸೌಲನಿಗೆ ಪ್ರತ್ಯುತ್ತರವಾಗಿ--ಇಗೋ, ನನ್ನ ಕೈಯಲ್ಲಿ ಕಾಲು ಶೆಕೇಲು ಬೆಳ್ಳಿ ಅದೆ; ದೇವರ ಮನುಷ್ಯನು ನಮಗೆ ಮಾರ್ಗವನ್ನು ತಿಳಿಸುವ ಹಾಗೆ ನಾನು ಅದನ್ನು ಅವನಿಗೆ ಕೊಡುವೆನು ಅಂದನು.
- Acts 8:18–20 ಅಪೊಸ್ತಲರ ಕೃತ್ಯಗಳು 8:18–20ಅಪೊಸ್ತಲರು ಕೈಗಳನ್ನಿಡುವದರ ಮೂಲಕವಾಗಿ ಪವಿತ್ರಾತ್ಮ ಕೊಡೋ ಣವಾಗುವದನ್ನು ಸೀಮೋನನು ನೋಡಿ ಹಣವನ್ನು ತಂದು-- ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮನನ್ನು ಹೊಂದುವಂತೆ ಈ ಅಧಿಕಾರ ವನ್ನು ನನಗೂ ಕೊಡಿರಿ ಅಂದನು. ಆದರೆ ಪೇತ್ರನು ಅವನಿಗೆ--ನಿನ್ನ ಹಣವು ನಿನ್ನ ಕೂಡ ಹಾಳಾಗಿ ಹೋಗಲಿ; ನೀನು ದೇವರ ದಾನವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಯೋಚಿಸುತ್ತೀ ಯಲ್ಲಾ.
- Jeremiah 40:5 ಯೆರೆಮೀಯ 40:5ಯೆರೆವಿಾಯನು ಇನ್ನು ಹಿಂತಿ ರುಗದೆ ಇರುವಾಗ ನೆಬೂಜರದಾನನು ಹೇಳಿದ್ದೇ ನಂದರೆ--ಬಾಬೆಲಿನ ಅರಸನು ಯೆಹೂದದ ಪಟ್ಟಣ ಗಳ ಮೇಲೆ ಅಧಿಕಾರಿಯಾಗಿ ಇಟ್ಟ ಶಾಫಾನನ ಮಗ ನಾದ ಅಹೀಕಾಮನ ಮಗನಾದ ಗೆದಲ್ಯನ ಬಳಿಗೆ ತಿರುಗಿಕೋ, ಅವನ ಸಂಗಡ ಜನರೊಳಗೆ ವಾಸ ಮಾಡು; ಇಲ್ಲವೆ ಎಲ್ಲಿ ಹೋಗುವದಕ್ಕೆ ನಿನಗೆ ಸರಿಯಾಗಿ ಕಾಣುತ್ತದೋ ಅಲ್ಲಿಗೆ ಹೋಗು ಅಂದನು. ಆಗ ಕಾವಲಿನವರ ಅಧಿಪತಿಯು ಅವನಿಗೆ ಆಹಾರವನ್ನೂ ಬಹುಮಾನವನ್ನೂ ಕೊಟ್ಟು ಕಳುಹಿಸಿಬಿಟ್ಟನು.
- 1 Peter 5:2 1 ಪೇತ್ರನು 5:2ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ; ಬಲಾತ್ಕಾರದಿಂದಲ್ಲ, ಆದರೆ ಇಷ್ಟಪೂರ್ವಕವಾಗಿಯೂ; ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿ ಚಾರಣೆ ಮಾಡಿರಿ.
- Judges 13:15 ನ್ಯಾಯಸ್ಥಾಪಕರು 13:15ಮಾನೋ ಹನು ಕರ್ತನ ದೂತನಿಗೆ--ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವ ವರೆಗೆ ನಿನ್ನನ್ನು ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ ಅಂದನು.
- Malachi 1:10 ಮಲಾಕಿಯ 1:10ಉಚಿತವಾಗಿ ಬಾಗಲು ಗಳನ್ನಾದರೂ ಮುಚ್ಚವವನೂ ಇಲ್ಲವೆ ನನ್ನ ಬಲಿಪೀಠದಲ್ಲಿ ಉಚಿತವಾಗಿ ಬೆಂಕಿ ಹಚ್ಚುವವನೂ ನಿಮ್ಮಲ್ಲಿ ಯಾರು ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು--ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವದಿಲ್ಲ.
- Judges 19:21 ನ್ಯಾಯಸ್ಥಾಪಕರು 19:21ಅವನನ್ನು ತನ್ನ ಮನೆಗೆ ಕರಕೊಂಡು ಹೋಗಿ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕಾಲು ಗಳನ್ನು ತೊಳೆದು ತಿಂದು ಕುಡಿದರು.
- Genesis 18:5 ಆದಿಕಾಂಡ 18:5ನಾನು ಒಂದಿಷ್ಟು ರೊಟ್ಟಿಯನ್ನು ತರುವೆನು; ನೀವು ನಿಮ್ಮ ಹೃದಯಗಳನ್ನು ಆದರಿಸಿಕೊಳ್ಳಿರಿ; ತರುವಾಯ ನೀವು ಮುಂದೆ ಹೊರಟು ಹೋಗಬಹುದು. ಅದಕ್ಕೋಸ್ಕರವೇ ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ ಎಂದು ಬೇಡಿಕೊಂಡನು. ಅದಕ್ಕೆ ಅವರು--ನೀನು ಹೇಳಿದಂತೆಯೇ ಮಾಡು ಅಂದರು.