Malachi · chapter 1 · verse 10
Malachi 1:10 in Kannada
ಉಚಿತವಾಗಿ ಬಾಗಲು ಗಳನ್ನಾದರೂ ಮುಚ್ಚವವನೂ ಇಲ್ಲವೆ ನನ್ನ ಬಲಿಪೀಠದಲ್ಲಿ ಉಚಿತವಾಗಿ ಬೆಂಕಿ ಹಚ್ಚುವವನೂ ನಿಮ್ಮಲ್ಲಿ ಯಾರು ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು--ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವದಿಲ್ಲ.
Uchitavaagi baagalu galannaadaroo muchchavavanoo illave nanna balipeethadalli uchitavaagi benki hachchuvavanoo nimmalli yaaru endu heluttaane. Sainyagala kartanu--nimmalli nanage ishtavilla mattu nimma kaiyinda naanu kaanikeyannu angeekarisuvadilla.
Malachi 1:10 in English
- King James Version (KJV)
- Who [is there] even among you that would shut the doors [for nought?] neither do ye kindle [fire] on mine altar for nought. I have no pleasure in you, saith the LORD of hosts, neither will I accept an offering at your hand.
- World English Bible (WEB)
- “Oh that there were one among you who would shut the doors, that you might not kindle fire on my altar in vain! I have no pleasure in you,” says the LORD of Armies, “neither will I accept an offering at your hand.
- American Standard Version (ASV)
- Oh that there were one among you that would shut the doors, that ye might not kindle [fire on] mine altar in vain! I have no pleasure in you, saith Jehovah of hosts, neither will I accept an offering at your hand.
- Bible in Basic English (BBE)
- If only there was one among you who would see that the doors were shut, so that you might not put a light to the fire on my altar for nothing! I have no pleasure in you, says the Lord of armies, and I will not take an offering from your hands.
- Darby Translation (DBY)
- Who is there among you that would even shut the doors? and ye would not kindle [fire] on mine altar for nothing. I have no delight in you, saith Jehovah of hosts, neither will I accept an oblation at your hand.
- Webster's Bible (WBS)
- Who [is there] even among you that would shut the doors [for nought] ? neither do ye kindle [fire] on my altar for naught. I have no pleasure in you, saith the LORD of hosts, neither will I accept an offering at your hand.
- Young's Literal Translation (YLT)
- Who [is] even among you, And he shutteth the two-leaved doors? Yea, ye do not kindle Mine altar for nought, I have no pleasure in you, said Jehovah of Hosts, And a present I do not accept of your hand.
Read in context
- 8ಇದ ಲ್ಲದೆ ನೀವು ಕುರುಡಾದದ್ದನ್ನು ಬಲಿಗಾಗಿ ಅರ್ಪಿಸಿ ದರೆ ಅದು ಕೆಟ್ಟದ್ದಲ್ಲವೋ? ಕುಂಟಾದದ್ದನ್ನೂ ರೋಗ ವುಳ್ಳದ್ದನ್ನೂ ಅರ್ಪಿಸಿದರೆ ಅದು ಕೆಟ್ಟದ್ದಲ್ಲವೋ? ಸೈನ್ಯ ಗಳ ಕರ್ತನು--ಅದನ್ನು ನಿನ್ನ ದೊರೆಗೆ ಅರ್ಪಿಸು, ಅವನು ನಿನಗೆ ಮೆಚ್ಚುವನೋ? ಇಲ್ಲವೆ ನಿನಗೆ ಮುಖ ದಾಕ್ಷಿಣ್ಯ ತೋರಿಸುವನೋ?
- 9ಹಾಗಾದರೆ ಈಗ ದೇವರು ನಮ್ಮನ್ನು ಕನಿಕರಿಸುವ ಹಾಗೆ ಆತನನ್ನು ಬೇಡಿಕೊಳ್ಳಿರಿ ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು --ಇದು ನಿಮ್ಮಿಂದಲೇ ಆಯಿತು; ನಿಮಗೆ ಆತನು ಮುಖದಾಕ್ಷಿಣ್ಯ ತೋರಿಸುವನೋ?
- 10ಉಚಿತವಾಗಿ ಬಾಗಲು ಗಳನ್ನಾದರೂ ಮುಚ್ಚವವನೂ ಇಲ್ಲವೆ ನನ್ನ ಬಲಿಪೀಠದಲ್ಲಿ ಉಚಿತವಾಗಿ ಬೆಂಕಿ ಹಚ್ಚುವವನೂ ನಿಮ್ಮಲ್ಲಿ ಯಾರು ಎಂದು ಹೇಳುತ್ತಾನೆ. ಸೈನ್ಯಗಳ ಕರ್ತನು--ನಿಮ್ಮಲ್ಲಿ ನನಗೆ ಇಷ್ಟವಿಲ್ಲ ಮತ್ತು ನಿಮ್ಮ ಕೈಯಿಂದ ನಾನು ಕಾಣಿಕೆಯನ್ನು ಅಂಗೀಕರಿಸುವದಿಲ್ಲ.
- 11ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- 12ಆದರೆ ನೀವು--ಕರ್ತನ ಮೇಜು ಅಶುದ್ಧವಾ ದದ್ದೆಂದೂ ಅದರ ಫಲವೂ ಅದರ ಊಟವೂ ಹೀನ ವಾದದ್ದೆಂದೂ ಹೇಳಿ ಅದನ್ನು ಅಪವಿತ್ರಮಾಡಿದ್ದೀರಿ.
Cross references
- 1 Peter 5:2 1 ಪೇತ್ರನು 5:2ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ; ಬಲಾತ್ಕಾರದಿಂದಲ್ಲ, ಆದರೆ ಇಷ್ಟಪೂರ್ವಕವಾಗಿಯೂ; ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿ ಚಾರಣೆ ಮಾಡಿರಿ.
- Amos 5:21–24 ಆಮೋಸ 5:21–24ನಿಮ್ಮ ನಿಮ್ಮ ಪರಿಶುದ್ಧ ಸಭೆಗಳನ್ನು ನಾನು ಮೂಸುವದಿಲ್ಲ. ನೀವು ನನಗೆ ದಹನಬಲಿಗಳನ್ನೂ ಆಹಾರ ಅರ್ಪಣೆಗಳನ್ನೂ ಅರ್ಪಿಸಿದರೂ ನಾನು ಅವುಗಳನ್ನು ಅಂಗೀ ಕರಿಸುವದಿಲ್ಲ, ಇಲ್ಲವೆ ನಿಮ್ಮ ಕೊಬ್ಬಿದ ಪ್ರಾಣಿಗಳ ಸಮಾಧಾನದ ಬಲಿಗಳನ್ನು ಲಕ್ಷಿಸುವದಿಲ್ಲ. ನಿಮ್ಮ ಹಾಡುಗಳ ಬೊಬ್ಬೆಗಳನ್ನು ನನ್ನಿಂದ ತೊಲಗಿಸಿರಿ; ನಿಮ್ಮ ವೀಣೆಗಳ ಮಧುರ ಸ್ವರವನ್ನು ನಾನು ಕೇಳುವದಿಲ್ಲ. ಆದರೆ ನ್ಯಾಯವು ನೀರಿನಂತೆಯೂ ನೀತಿಯು ಬಲವಾದ ಪ್ರವಾಹದಂತೆಯೂ ಹರಿಯಲಿ.
- Micah 3:11 ಮೀಕ 3:11ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Hosea 5:6 ಹೋಶೇಯ 5:6ಅವರು ಕರ್ತನನ್ನು ಹುಡುಕುವದಕ್ಕೆ ಅವರ ಮಂದೆಗಳೊಂದಿಗೂ ಹಿಂಡುಗಳೊಂದಿಗೂ ಹೋಗುವರು. ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡ ಕಾರಣ ಅವರು ಆತನನ್ನು ಕಾಣುವದೇ ಇಲ್ಲ.
- Jeremiah 6:20 ಯೆರೆಮೀಯ 6:20ಶೇಬದಿಂದ ಸಾಂಬ್ರಾಣಿಯೂ ದೂರ ದೇಶದಿಂದ ಒಳ್ಳೇ ಸುಗಂಧವೂ ನನಗೆ ಬರುವದು ಯಾತಕ್ಕೆ? ನಿಮ್ಮ ದಹನಬಲಿಗಳು ಮೆಚ್ಚಿಕೆಯಾಗಲಿಲ್ಲ; ನಿಮ್ಮ ಬಲಿಗಳು ನನಗೆ ರುಚಿ ಇಲ್ಲ.
- Isaiah 1:11–15 ಯೆಶಾಯ 1:11–15ನೀವು ಲೆಕ್ಕವಿಲ್ಲದಷ್ಟು ಯಜ್ಞಗಳನ್ನು ನನಗೆ ಅರ್ಪಿಸುವ ಉದ್ದೇಶವೇನು? ಎಂದು ಕರ್ತನು ನುಡಿಯುತ್ತಾನೆ. ಟಗರುಗಳ ದಹನಬಲಿಗಳು, ಪುಷ್ಟಿ ಪ್ರಾಣಿಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿ, ಕುರಿ, ಹೋತಗಳ ರಕ್ತಕ್ಕೆ ನಾನು ಸಂತೋಷಪಡುವ ದಿಲ್ಲ. ನೀವು ನನ್ನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳ ಬೇಕೆಂದು ಬರುತ್ತೀರಲ್ಲಾ; ನನ್ನ ಪ್ರಾಕಾರಗಳನ್ನು ತುಳಿ ಯಲು ಯಾರು ನಿಮ್ಮನ್ನು ಕೇಳಿಕೊಂಡರು? ಇನ್ನು ವ್ಯರ್ಥವಾದ ಕಾಣಿಕೆಗಳನ್ನು ತಾರದಿರಿ, ಧೂಪವು ನನಗೆ ಅಸಹ್ಯ, ಹುಣ್ಣಿಮೆಗಳೂ ಸಬ್ಬತ್ತುಗಳೂ ಸಭೆಗಳು ಕೂಡುವದೂ ಇವು ಬೇಡ; ದುಷ್ಟತನದಿಂದ ಕೂಡಿದ ವಿಶೇಷ ಕೂಟವನ್ನು ಸಹ ನಾನು ಸಹಿಸಲಾರೆನು. ನಿಮ್ಮ ಹುಣ್ಣಿಮೆಗಳನ್ನೂ ನೇಮಕವಾದ ಹಬ್ಬಗಳನ್ನೂ ನನ್ನ ಆತ್ಮವು ಹಗೆಮಾಡುತ್ತದೆ. ಅವು ನನಗೆ ಭಾರ, ಸಹಿಸಲು ಬೇಸರ. ನೀವು ನಿಮ್ಮ ಕೈಗಳನ್ನು ಚಾಚಲು ನಾನು ನನ್ನ ಕಣ್ಣುಗಳನ್ನು ನಿಮಗೆ ಮರೆಮಾಡುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿ ದರೂ ನಾನು ಕೇಳೆನು, ನಿಮ್ಮ ಕೈಗಳು ರಕ್ತದಿಂದ ತುಂಬಿಯವೆ.
- Jeremiah 8:10 ಯೆರೆಮೀಯ 8:10ಆದದರಿಂದ ಅವರ ಹೆಂಡತಿಯರನ್ನು ಬೇರೊಬ್ಬರಿಗೂ ಅವರ ಹೊಲಗಳನ್ನು ಸ್ವಾಧೀನಮಾಡಿಕೊಳ್ಳುವವರಿಗೂ ನಾನು ಕೊಡುವೆನು; ಚಿಕ್ಕವನು ಮೊದಲುಗೊಂಡು ದೊಡ್ಡವನ ತನಕ ಅವರೆಲ್ಲರು ಲೋಭಕ್ಕೆ ಒಪ್ಪಿಸಿಕೊಟ್ಟಿದ್ದಾರೆ. ಪ್ರವಾದಿ ಮೊದಲುಗೊಂಡು ಯಾಜಕನ ವರೆಗೂ ಪ್ರತಿ ಯೊಬ್ಬನು ಮೋಸದಿಂದ ವರ್ತಿಸುತ್ತಾನೆ.
- Jeremiah 14:12 ಯೆರೆಮೀಯ 14:12ಅವರು ಉಪವಾಸ ಮಾಡಿದಾಗ್ಯೂ ನಾನು ಅವರ ಮೊರೆಯನ್ನು ಕೇಳುವದಿಲ್ಲ; ಅವರು ದಹನಬಲಿಗಳನ್ನೂ ಕಾಣಿಕೆಗಳನ್ನೂ ಅರ್ಪಿಸಿದಾಗ್ಯೂ ನಾನು ಅವರನ್ನು ಅಂಗೀಕರಿಸುವದಿಲ್ಲ; ಆದರೆ ನಾನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಅವರನ್ನು ನಿರ್ಮೂಲ ಮಾಡಿಬಿಡುತ್ತೇನೆ ಎಂದು ಹೇಳಿದನು.
- Isaiah 56:11–12 ಯೆಶಾಯ 56:11–12ಹೌದು, ಎಂದಿಗೂ ಸಾಕೆನ್ನದ ಹೊಟ್ಟೇಬಾಕ ನಾಯಿಗಳು, ಅವರು ಗ್ರಹಿಕೆಯಿಲ್ಲದ ಕುರುಬರು; ಅವರೆಲ್ಲರು ತಮ್ಮ ತಮ್ಮ ಸ್ವಂತ ಮಾರ್ಗಕ್ಕೂ ಪ್ರತಿಯೊಬ್ಬನು ತನಗೆ ಲಾಭ ಸಿಕ್ಕುವ ಕಡೆಗೂ ತಿರುಗಿ ಕೊಳ್ಳುವನು.ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು. ಬನ್ನಿರಿ, ನಾನು ದ್ರಾಕ್ಷಾರಸವನ್ನು ತರುವೆನು; ನಮ್ಮನ್ನು ನಾವೇ ಅಮಲೇರುವ ಮದ್ಯದಿಂದ ತುಂಬಿಸಿ ಕೊಳ್ಳುವ! ನಾಳೆಯು ಈ ದಿವಸದಂತೆಯೇ ಬಹಳ ಸಮೃದ್ಧಿಯಾಗಿರುವದು.
- Hebrews 10:38 ಇಬ್ರಿಯರಿಗೆ 10:38ನೀತಿ ವಂತನು ನಂಬಿಕೆಯಿಂದಲೆ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನ್ನ ಆತ್ಮವು ಸಂತೊಷಿಸುವದಿಲ್ಲ.ನಾವಾ ದರೋ ಹಿಂದೆಗೆದವರಾಗಿ ನಾಶವಾಗುವವರಲ್ಲಿ ಅಲ್ಲ, ನಂಬುವವರಾಗಿ ಆತ್ಮರಕ್ಷಣೆಯನ್ನು ಹೊಂದುವವ ರಾಗಿದ್ದೇವೆ.
- John 10:12 ಯೋಹಾನನು 10:12ಆದರೆ ಕೂಲಿಯವನು ಕುರುಬನಲ್ಲವಾದದ ರಿಂದಲೂ ಕುರಿಗಳು ತನ್ನವುಗಳಲ್ಲವಾದದರಿಂದಲೂ ತೋಳ ಬರುವದನ್ನು ಕಂಡು ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ; ಆಗ ತೋಳವು ಕುರಿಗಳನ್ನು ಹಿಡಿದು ಕೊಂಡು ಅವುಗಳನ್ನು ಚದರಿಸುತ್ತದೆ.
- 1 Corinthians 9:13 1 ಕೊರಿಂಥದವರಿಗೆ 9:13ಪವಿತ್ರವಾದವುಗಳ ಸೇವೆ ಮಾಡುವವರು ಆಲಯದವುಗಳಿಂದ ಜೀವಿಸುವರೆಂದೂ ಯಜ್ಞವೇದಿಯ ಬಳಿಯಲ್ಲಿ ಸೇವೆ ಮಾಡುವವರು ಯಜ್ಞವೇದಿಯೊಂದಿಗೆ ಪಾಲುಗಾರರೆಂದೂ ನಿಮಗೆ ಗೊತ್ತಿಲ್ಲವೋ?