1 Kings · chapter 14 · verse 13
1 Kings 14:13 in Kannada
ಇದಲ್ಲದೆ ಸಮಸ್ತ ಇಸ್ರಾ ಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಣಿಡುವರು; ಯಾಕಂದರೆ ಯಾರೊಬ್ಬಾಮನ ವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು; ಯಾರೊಬ್ಬಾಮನ ಮನೆಯೊಳಗೆ ಅವನು ಇಸ್ರಾಯೇ ಲಿನ ದೇವರಾದ ಕರ್ತನ ದೃಷ್ಟಿಗೆ ಒಳ್ಳೆಯವನಾಗಿ ದ್ದನು.
Idallade samasta israa yelyaru avanigoskara golaadi avanannu hooniduvaru; yaakandare yaarobbaamana varalli avanobbane samaadhige seruvanu; yaarobbaamana maneyolage avanu israaye lina devaraada kartana drushtige olleyavanaagi ddanu.
1 Kings 14:13 in English
- King James Version (KJV)
- And all Israel shall mourn for him, and bury him: for he only of Jeroboam shall come to the grave, because in him there is found [some] good thing toward the LORD God of Israel in the house of Jeroboam.
- World English Bible (WEB)
- All Israel will mourn for him and bury him; for he only of Jeroboam will come to the grave, because in him there is found some good thing toward the LORD, the God of Israel, in the house of Jeroboam.
- American Standard Version (ASV)
- And all Israel shall mourn for him, and bury him; for he only of Jeroboam shall come to the grave, because in him there is found some good thing toward Jehovah, the God of Israel, in the house of Jeroboam.
- Bible in Basic English (BBE)
- And all Israel will put his body to rest, weeping over him, because he only of the family of Jeroboam will be put into his resting-place in the earth; for of all the family of Jeroboam, in him only has the Lord, the God of Israel, seen some good.
- Darby Translation (DBY)
- And all Israel shall mourn for him, and they shall bury him; for he only of Jeroboam shall come to the grave, because in him there is found something good toward Jehovah the God of Israel, in the house of Jeroboam.
- Webster's Bible (WBS)
- And all Israel shall mourn for him, and bury him: for he only of Jeroboam shall come to the grave, because in him there is found [some] good thing towards the LORD God of Israel in the house of Jeroboam.
- Young's Literal Translation (YLT)
- and all Israel have mourned for him, and buried him, for this one — by himself — cometh of Jeroboam unto a grave, because there hath been found in him a good thing towards Jehovah, God of Israel, in the house of Jeroboam.
Read in context
- 11ಯಾರೊಬ್ಬಾಮನವರಲ್ಲಿ ಯಾವನು ಪಟ್ಟಣದಲ್ಲಿ ಸಾಯುವನೋ ಅವನನ್ನು ನಾಯಿಗಳು ತಿನ್ನುವವು; ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವವು ಎಂದು ಕರ್ತನು ಹೇಳಿದ್ದಾನೆ.
- 12ಆದ ದರಿಂದ ನೀನೆದ್ದು ನಿನ್ನ ಮನೆಗೆ ಹೋಗು; ನೀನು ಪಟ್ಟಣದೊಳಗೆ ಪಾದಗಳನ್ನು ಇಡುವಷ್ಟರಲ್ಲಿ ನಿನ್ನ ಮಗನು ಸಾಯುವನು.
- 13ಇದಲ್ಲದೆ ಸಮಸ್ತ ಇಸ್ರಾ ಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನನ್ನು ಹೂಣಿಡುವರು; ಯಾಕಂದರೆ ಯಾರೊಬ್ಬಾಮನ ವರಲ್ಲಿ ಅವನೊಬ್ಬನೇ ಸಮಾಧಿಗೆ ಸೇರುವನು; ಯಾರೊಬ್ಬಾಮನ ಮನೆಯೊಳಗೆ ಅವನು ಇಸ್ರಾಯೇ ಲಿನ ದೇವರಾದ ಕರ್ತನ ದೃಷ್ಟಿಗೆ ಒಳ್ಳೆಯವನಾಗಿ ದ್ದನು.
- 14ಇದಲ್ಲದೆ ಕರ್ತನು ಇಸ್ರಾಯೇಲ್ಯರನ್ನು ಆಳುವದಕ್ಕೆ ಅದೇ ದಿನದಲ್ಲಿ ಯಾರೊಬ್ಬಾಮನ ಮನೆಯವರನ್ನು ಕಡಿದುಬಿಡುವ ಒಬ್ಬ ಅರಸನನ್ನು ತನಗೋಸ್ಕರ ಎಬ್ಬಿಸುವನು.
- 15ಆದರೆ ಈಗಲೇ ಏನು ಆಗುವದು? ನೀರಿನಲ್ಲಿರುವ ದಂಟು ಅಲ್ಲಾಡುವ ಹಾಗೆ ಕರ್ತನು ಇಸ್ರಾಯೇಲ್ಯರನ್ನು ಹೊಡೆಯುವನು. ಇಸ್ರಾ ಯೇಲ್ಯರು ಕರ್ತನಿಗೆ ಕೋಪವನ್ನು ಎಬ್ಬಿಸಲು ತಮ್ಮ ವಿಗ್ರಹಾರಾಧನೆಗೋಸ್ಕರ ತೋಪುಗಳನ್ನು ಹಾಕಿದ್ದ ರಿಂದ ಆತನು ಅವರ ತಂದೆಗಳಿಗೆ ಕೊಟ್ಟ ಈ ಉತ್ತಮ ದೇಶದಲ್ಲಿಂದ ಅವರನ್ನು ನಿರ್ಮೂಲ ಮಾಡಿ ನದಿಯ ಆಚೆಯಲ್ಲಿ ಅವರನ್ನು ಚದರುವಂತೆ ಮಾಡುವನು.
Cross references
- 2 Chronicles 19:3 2 ಪೂರ್ವಕಾಲವೃತ್ತಾಂತ 19:3ಆದಾಗ್ಯೂ ನೀನು ದೇಶದಿಂದ ತೋಪು ಗಳನ್ನು ತೆಗೆದುಹಾಕಿ ದೇವರನ್ನು ಹುಡುಕಲು ನಿನ್ನ ಹೃದಯವನ್ನು ಸಿದ್ಧಪಡಿಸಿದ್ದರಿಂದ ನಿನ್ನಲ್ಲಿ ಉತ್ತಮವಾದ ಕಾರ್ಯಗಳು ಕಾಣಲ್ಪಟ್ಟಿವೆ ಅಂದನು.
- 2 Chronicles 12:12 2 ಪೂರ್ವಕಾಲವೃತ್ತಾಂತ 12:12ಅವನು ತನ್ನನ್ನು ತಗ್ಗಿಸಿಕೊಂಡಾಗ ಕರ್ತನ ಕೋಪವು ಅವನನ್ನು ಬಿಟ್ಟು ತಿರುಗಿತು; ಆತನು ಪೂರ್ಣವಾಗಿ ನಾಶಮಾಡಲು ಮನಸ್ಸಿಲ್ಲದೆ ಇದ್ದನು; ಯೆಹೂದದಲ್ಲಿ ಕಾರ್ಯಗಳು ಚೆನ್ನಾಗಿ ನಡೆದವು.
- Ezekiel 18:14–32 ಯೆಹೆಜ್ಕೇಲನು 18:14–32ಆಗ ಇಗೋ, ಅವನು ಮಗನನ್ನು ಪಡೆದ ಮೇಲೆ ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ನೋಡಿ ಆಲೊಚಿಸಿ, ಅವುಗಳಂತೆ ಮಾಡದೆ; ಪರ್ವತಗಳ ಮೇಲೆ ತಿನ್ನದೆ, ಇಸ್ರಾಯೇಲಿನ ಮನೆತನ ದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, ಇಲ್ಲವೆ ಯಾರಿಗೂ ತೊಂದರೆಪಡಿಸದೆ, ಒತ್ತೆಯನ್ನು ಹಿಡಿಯದೆ, ಇಲ್ಲವೆ ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಬೆತ್ತಲೆಯಾದವನಿಗೆ ವಸ್ತ್ರ ವನ್ನು ಹೊದಿಸಿ, ಬಡವನ ಮೇಲೆ ಕೈಮಾಡದೆ, ಬಡ್ಡಿಯನ್ನೂ ಲಾಭವನ್ನು ತೆಗೆದುಕೊಳ್ಳದೆ, ನನ್ನ ನ್ಯಾಯ ಗಳನ್ನು ಮಾಡಿ ನಿಯಮಗಳಲ್ಲಿ ನಡೆದರೆ, ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವದಿಲ್ಲ ನಿಶ್ಚಯವಾಗಿ ಬದುಕುವನು. ಆತನ ತಂದೆಯ ವಿಷಯವಾದರೋ ಅವನು ಬಹಳ ಬಲಾತ್ಕಾರ ಮಾಡಿ ದ್ದರಿಂದಲೂ ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ ತನ್ನ ಜನರ ಮಧ್ಯದಲ್ಲಿ ಕೆಟ್ಟದನ್ನು ಮಾಡಿದ್ದರಿಂದಲೂ ಇಗೋ, ಅವನು ಅಕ್ರಮದಲಿ ಸಾಯುವನು. ಆದಾಗ್ಯೂ ಇನ್ನೂ ನೀವು--ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲವೇ ಎಂದು ಹೇಳುವಿರಿ; ನಿಶ್ಚಯವಾಗಿ ಮಗನು ನ್ಯಾಯವನ್ನೂ ನೀತಿಯನ್ನೂ ಮಾಡಿ ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನಡೆದರೆ ಅವನು ನಿಶ್ಚಯವಾಗಿ ಬದುಕುವನು. ಪಾಪ ಮಾಡುವ ಪ್ರಾಣವು ತಾನಾಗಿ ಸಾಯುವದು; ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲ. ತಂದೆಯು ಮಗನ ಅಕ್ರಮವನ್ನು ಹೊರುವದಿಲ್ಲ. ನೀತಿವಂತನ ನೀತಿಯು ಅವನ ಮೇಲೆಯೇ ಇರುವದು. ದುಷ್ಟನ ದುಷ್ಟತ್ವವು ಅವನ ಮೇಲೆಯೇ ಇರುವದು. ಆದರೆ ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ನನ್ನ ನಿಯಮಗಳನ್ನೆಲ್ಲಾ ಕೈಕೊಂಡು ನ್ಯಾಯವನ್ನೂ ನೀತಿಯನ್ನೂ ನಡೆಸಿದರೆ ಅವನು ಸಾಯದೆ ನಿಶ್ಚಯವಾಗಿ ಬದುಕುವನು. ಅವನು ಮಾಡಿದ ಅಪರಾಧಗಳೆಲ್ಲಾ ಅವನಿಗೆ ವಿರುದ್ದವಾಗಿ ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು. ದುಷ್ಟನು ಸಾಯುವದರಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿ ರುವದೋ ಎಂದು ದೇವರಾದ ಕರ್ತನು ಹೇಳುತ್ತಾನೆ; ಅವನು ತನ್ನ ನಡತೆಗಳಿಂದ ಹಿಂತಿರುಗಿಕೊಂಡು ಬದು ಕಿದರೆ ನನಗೆ ಸಂತೋಷವಲ್ಲವೇ? ಆದರೆ ನೀತಿ ವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿ ರುವ ಎಲ್ಲಾ ನೀತಿಯು ಜ್ಞಾಪಕಮಾಡಲ್ಪಡುವದಿಲ್ಲ; ಅವನು ಮಾಡಿರುವ ಅಪರಾಧದಿಂದಲೂ ಪಾಪ ದಿಂದಲೂ ಅವುಗಳಲ್ಲಿ ಸಾಯುವನು. ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ. ನೀತಿವಂತನು ತನ್ನ ನೀತಿಯನ್ನು ಬಿಟ್ಟು ತಿರುಗಿಕೊಂಡು ಅನ್ಯಾಯಮಾಡಿ ಇವುಗಳಲ್ಲಿ ಸತ್ತರೆ, ಅವನು ಮಾಡಿದ ಅನ್ಯಾಯದಿಂದಲೇ ಸಾಯುವನು. ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನ್ಯಾಯವನ್ನೂ ನೀತಿಯನ್ನೂ ಅನುಸರಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಂಡು ಬದುಕುವನು. ತಾನು ಆಲೋಚಿಸಿ ತಾನು ಮಾಡುವ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ತಿರುಗಿ ಕೊಳ್ಳುವದರಿಂದ ಸಾಯದೆ ನಿಶ್ಚಯವಾಗಿ ಬದುಕು ವನು. ಆದರೆ ಇಸ್ರಾಯೇಲಿನ ಮನೆತನದವರು ಕರ್ತನ ಮಾರ್ಗ ಸಮವಲ್ಲ ಎನ್ನುತ್ತಾರೆ. ಇಸ್ರಾಯೇಲಿನ ಮನೆತನದವರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವುಗಳೇ. ಆದದರಿಂದ ಇಸ್ರಾಯೇಲಿನ ಮನೆತನದವರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ನ್ಯಾಯತೀರಿಸುವೆನಂದು ದೇವ ರಾದ ಕರ್ತನು ಹೇಳುತ್ತಾನೆ; ನಿಮ್ಮ ದುಷ್ಟತ್ವಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು ಪಶ್ಚಾತ್ತಾಪಪಡಿರಿ; ಆಗ ಅಕ್ರಮ ಗಳು ನಿಮ್ಮನ್ನು ಆಳುವದಿಲ್ಲ. ನೀವು ಮಾಡುವ ದುಷ್ಟತ್ವಗಳನ್ನೆಲ್ಲಾ ನಿಮ್ಮಿಂದ ಬಿಟ್ಟುಬಿಡಿರಿ; ಹೊಸ ಹೃದಯವನ್ನೂ ಹೊಸ ಆತ್ಮವನ್ನೂ ನೀವು ಪಡಕೊಳ್ಳಿರಿ; ಯಾಕಂದರೆ ಓ ಇಸ್ರಾಯೇಲಿನ ಮನೆತನದವರೇ, ನೀವು ಸಾಯುವದೇಕೆ?ಸಾಯುವವನ ಸಾವಿನಲ್ಲಿ ನನಗೆ ಸಂತೋಷವಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ; ಆದಕಾರಣ ತಿರುಗಿಕೊಂಡು ಬಾಳಿರಿ. ಸಾಯುವವನ ಸಾವಿನಲ್ಲಿ ನನಗೆ ಸಂತೋಷವಿಲ್ಲವೆಂದು ದೇವರಾದ ಕರ್ತನು ಹೇಳುತ್ತಾನೆ; ಆದಕಾರಣ ತಿರುಗಿಕೊಂಡು ಬಾಳಿರಿ.
- 2 Peter 2:8–9 2 ಪೇತ್ರನು 2:8–9ಆ ನೀತಿವಂತನು ಅವರ ಮಧ್ಯದಲ್ಲಿ ಇದ್ದುಕೊಂಡು ಅವರ ಅನ್ಯಾಯ ಕೃತ್ಯಗಳನ್ನು ನೋಡುತ್ತಾ ಕೇಳುತ್ತಾ ಅವುಗಳ ನಿಮಿತ್ತ ದಿನೇ ದಿನೇ ತನ್ನ ನೀತಿಯುಳ್ಳ ಆತ್ಮದಲ್ಲಿ ವೇದನೆಗೊಂಡನು. ಕರ್ತನು ನೀತಿವಂತರನ್ನು ಸಂಕಟದೊಳಗಿಂದ ತಪ್ಪಿಸುವ ದಕ್ಕೂ ಅನೀತಿವಂತರನ್ನು ಶಿಕ್ಷಿಸುವದಕ್ಕಾಗಿ ನ್ಯಾಯ ತೀರ್ಪಿನ ದಿನದ ತನಕ ಇಡುವದಕ್ಕೂ ಬಲ್ಲವನಾಗಿ ದ್ದಾನೆ.
- Numbers 20:29 ಅರಣ್ಯಕಾಂಡ 20:29ಆರೋನನು ತೀರಿಹೋದನೆಂದು ಸಭೆಯಲ್ಲಾ ನೋಡಿದಾಗ ಇಸ್ರಾಯೇಲ್ಯರ ಮನೆಯ ವರೆಲ್ಲರು ಆರೋನನಿಗೋಸ್ಕರ ಮೂವತ್ತು ದಿವಸದ ವರೆಗೂ ದುಃಖಿಸಿದರು.
- Jeremiah 22:10 ಯೆರೆಮೀಯ 22:10ಸತ್ತವನಿಗಾಗಿ ಅಳಬೇಡಿರಿ; ಅವನಿಗಾಗಿ ಗೋಳಾ ಡಬೇಡಿರಿ; ಹೊರಟುಹೋದವನಿಗಾಗಿ ಬಹಳವಾಗಿ ಅಳಿರಿ. ಅವನು ತಿರುಗಿ ಬರುವದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವದೇ ಇಲ್ಲ.
- Philemon 1:6 ಫಿಲೆಮೋನನಿಗೆ 1:6ಹೀಗೆ ನಿನ್ನ ವಿಶ್ವಾಸದ ಅನ್ಯೋನ್ಯತೆಯು ಕ್ರಿಸ್ತ ಯೇಸುವಿನಲ್ಲಿ ಮತ್ತು ನಿನ್ನಲ್ಲಿರುವ ಎಲ್ಲಾ ಒಳ್ಳೇದರ ತಿಳುವಳಿಕೆಯಲ್ಲಿ ಬಲ ವಾಗಿರುವದು.
- Jeremiah 22:18 ಯೆರೆಮೀಯ 22:18ಆದದ ರಿಂದ ಯೋಷೀಯನ ಮಗನಾದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೀಗೆ ಹೇಳುತ್ತಾನೆ--ಅವರು ಅವನನ್ನು ಕುರಿತು ಗೋಳಾಡಿ--ಹಾ, ನನ್ನ ಸಹೋದರನೇ, ಹಾ, ನನ್ನ ಸಹೋದರಿಯೇ ಎಂದು ಅನ್ನುವದಿಲ್ಲ; ಹಾ, ದೊರೆಯೇ, ಹಾ, ಅವನ ವೈಭವವೇ ಎಂದು ಅವನನ್ನು ಕುರಿತು ಗೋಳಾಡುವದಿಲ್ಲ.
- Job 19:28 ಯೋಬನು 19:28ನೀವು ಹೇಳುವಿರು--ಅವನನ್ನು ಯಾಕೆ ಹಿಂಸಿಸು ತ್ತೇವೆ? ಮಾತಿನ ಬೇರು ನನ್ನಲ್ಲಿ ಸಿಕ್ಕುವದು.ಕತ್ತಿಯ ಮುಂದೆ ಅಂಜಿಕೊಳ್ಳಿರಿ; ನ್ಯಾಯತೀರ್ವಿಕೆ ಉಂಟೆಂದು ನೀವು ತಿಳುಕೊಳ್ಳುವ ಹಾಗೆ ಕೋಪವು ಕತ್ತಿಯ ದಂಡನೆಗಳನ್ನು ಬರಮಾಡುತ್ತದೆ.
Original words (Hebrew)
- Israel · H3478יִשְׂרָאֵל Yisrâʼêl
- mourn · H5594סָפַד çâphad
- bury · H6912קָבַר qâbar
- Jeroboam · H3379יָרׇבְעָם Yârobʻâm
- come · H935בּוֹא bôwʼ
- grave · H6913קֶבֶר qeber
- found · H4672מָצָא mâtsâʼ
- good · H2896טוֹב ṭôwb
- thing · H1697דָּבָר dâbâr
- God · H430אֱלֹהִים ʼĕlôhîym
- Israel · H3478יִשְׂרָאֵל Yisrâʼêl
- house · H1004בַּיִת bayith
- Jeroboam · H3379יָרׇבְעָם Yârobʻâm