Jeremiah · chapter 22 · verse 10
Jeremiah 22:10 in Kannada
ಸತ್ತವನಿಗಾಗಿ ಅಳಬೇಡಿರಿ; ಅವನಿಗಾಗಿ ಗೋಳಾ ಡಬೇಡಿರಿ; ಹೊರಟುಹೋದವನಿಗಾಗಿ ಬಹಳವಾಗಿ ಅಳಿರಿ. ಅವನು ತಿರುಗಿ ಬರುವದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವದೇ ಇಲ್ಲ.
Sattavanigaagi alabediri; avanigaagi golaa dabediri; horatuhodavanigaagi bahalavaagi aliri. Avanu tirugi baruvade illa. Taanu huttida deshavannu innu noduvade illa.
Jeremiah 22:10 in English
- King James Version (KJV)
- Weep ye not for the dead, neither bemoan him: [but] weep sore for him that goeth away: for he shall return no more, nor see his native country.
- World English Bible (WEB)
- Don’t weep for the dead. Don’t bemoan him; but weep bitterly for him who goes away, for he will return no more, and not see his native country.
- American Standard Version (ASV)
- Weep ye not for the dead, neither bemoan him; but weep sore for him that goeth away; for he shall return no more, nor see his native country.
- Bible in Basic English (BBE)
- Let there be no weeping for the dead, and make no songs of grief for him: but make bitter weeping for him who has gone away, for he will never come back or see again the country of his birth.
- Darby Translation (DBY)
- Weep not for the dead, neither bemoan him; [but] weep sore for him that goeth away, for he shall return no more, nor see his native country.
- Webster's Bible (WBS)
- Weep ye not for the dead, neither bemoan him: [but] weep bitterly for him that goeth away: for he shall return no more, nor see his native country.
- Young's Literal Translation (YLT)
- Ye do not weep for the dead, nor bemoan for him, Weep ye sore for the traveller, For he doth not return again, Nor hath he seen the land of his birth.
Read in context
- 8ಅನೇಕ ಜನಾಂಗಗಳು ಈ ಪಟ್ಟಣವನ್ನು ಹಾದುಹೋಗುವರು, ಕರ್ತನು ಈ ದೊಡ್ಡ ಪಟ್ಟಣಕ್ಕೆ ಯಾಕೆ ಈ ಪ್ರಕಾರ ಮಾಡಿ ದ್ದಾನೆಂದು ನೆರೆಯವರು ಒಬ್ಬರಿಗೊಬ್ಬರು ಹೇಳಿಕೊಳ್ಳು ವರು.
- 9ಆಗ ಅವರು--ತಮ್ಮ ದೇವರಾದ ಕರ್ತನ ಒಡಂಬಡಿಕೆಯನ್ನು ಬಿಟ್ಟು, ಬೇರೆ ದೇವರುಗಳಿಗೆ ನಮ ಸ್ಕರಿಸಿ ಸೇವಿಸಿದ್ದರಿಂದಲೇ ಎಂದು ಅವರು ಉತ್ತರ ಕೊಡುವರು.
- 10ಸತ್ತವನಿಗಾಗಿ ಅಳಬೇಡಿರಿ; ಅವನಿಗಾಗಿ ಗೋಳಾ ಡಬೇಡಿರಿ; ಹೊರಟುಹೋದವನಿಗಾಗಿ ಬಹಳವಾಗಿ ಅಳಿರಿ. ಅವನು ತಿರುಗಿ ಬರುವದೇ ಇಲ್ಲ. ತಾನು ಹುಟ್ಟಿದ ದೇಶವನ್ನು ಇನ್ನು ನೋಡುವದೇ ಇಲ್ಲ.
- 11ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ ಈ ಸ್ಥಳವನ್ನು ಬಿಟ್ಟು ಹೋದವನೂ ಆದ ಶಲ್ಲೂಮನನ್ನು ಕುರಿತು ಕರ್ತನು ಹೀಗೆ ಹೇಳು ತ್ತಾನೆ--ಅವನು ಇನ್ನು ಇಲ್ಲಿಗೆ ತಿರುಗಿ ಬರುವದೇ ಇಲ್ಲ.
- 12ಅವರು ಅವನನ್ನು ಸೆರೆಯಾಗಿ ಒಯ್ದ ಸ್ಥಳದ ಲ್ಲಿಯೇ ಸಾಯುವನು; ಈ ದೇಶವನ್ನು ಇನ್ನು ನೋಡು ವದೇ ಇಲ್ಲ;
Cross references
- Jeremiah 22:11 ಯೆರೆಮೀಯ 22:11ಯೆಹೂದದ ಅರಸನಾದ ಯೋಷೀಯನ ಮಗನು ತನ್ನ ತಂದೆಯಾದ ಯೋಷೀಯನಿಗೆ ಬದಲಾಗಿ ಆಳಿದವನೂ ಈ ಸ್ಥಳವನ್ನು ಬಿಟ್ಟು ಹೋದವನೂ ಆದ ಶಲ್ಲೂಮನನ್ನು ಕುರಿತು ಕರ್ತನು ಹೀಗೆ ಹೇಳು ತ್ತಾನೆ--ಅವನು ಇನ್ನು ಇಲ್ಲಿಗೆ ತಿರುಗಿ ಬರುವದೇ ಇಲ್ಲ.
- Ecclesiastes 4:2 ಪ್ರಸಂಗಿ 4:2ಆದಕಾರಣ ಇನ್ನೂ ಜೀವ ದಿಂದಿದ್ದು ಬದುಕುವವರಿಗಿಂತ ಆಗಲೇ ಮೃತಪಟ್ಟ ಸತ್ತವರನ್ನು ನಾನು ಹೆಚ್ಚಾಗಿ ಹೊಗಳಿದೆನು.
- Lamentations 4:9 ಪ್ರಲಾಪಗಳು 4:9ಕತ್ತಿಯಿಂದ ಹತರಾದವರು ಹಸಿವೆ ಯಿಂದ ಹತರಾದವರಿಗಿಂತ ಲೇಸು, ಇವರು ಭೂಫಲ ಗಳಿಲ್ಲದೆ ಕ್ಷಾಮದಿಂದ ತಿವಿಯಲ್ಪಟ್ಟು ಕ್ಷೀಣಿಸಿ ಹೋಗುತ್ತಾರೆ.
- Isaiah 57:1 ಯೆಶಾಯ 57:1ನೀತಿವಂತನು ನಾಶವಾಗುವನು, ಅದನ್ನು ಯಾವ ಮನುಷ್ಯನು ಮನಸ್ಸಿಗೆ ತಾರನು. ಕರುಣೆಯುಳ್ಳ ಮನುಷ್ಯರು ತೆಗೆದುಹಾಕಲ್ಪಡುವರು, ನೀತಿವಂತನು ಮುಂದೆ ಬರುವ ಕೇಡಿನಿಂದ ಪಾರಾಗು ತ್ತಾನೆಂಬದನ್ನು ಯಾರೂ ಯೋಚಿಸರು.
- 2 Kings 23:30–34 2 ಅರಸುಗಳು 23:30–34ಅವನ ಸೇವಕರು ಸತ್ತವನಾದ ಅವನನ್ನು ರಥದಲ್ಲಿ ಮೆಗಿದ್ದೋವಿನಿಂದ ಯೆರೂಸಲೇಮಿಗೆ ತಕ್ಕೊಂಡು ಬಂದು ಅವನ ಸ್ವಂತ ಸಮಾಧಿಯಲ್ಲಿ ಹೂಣಿಟ್ಟರು. ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ಅಭಿಷೇಕಿಸಿ ಅವನ ತಂದೆಗೆ ಬದಲಾಗಿ ಅರಸನನ್ನಾಗಿ ಮಾಡಿದರು. ಯೆಹೋವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ಮೂರು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿ ಲಿಬ್ನ ಪಟ್ಟಣದ ಯೆರೆವಿಾಯನ ಮಗಳಾಗಿದ್ದು ಹಮೂಟಲ್ ಎಂಬವಳಾಗಿದ್ದಳು. ಅವನು ತನ್ನ ತಂದೆಗಳು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಅವನು ಯೆರೂಸಲೇಮಿನಲ್ಲಿ ಆಳದ ಹಾಗೆ ಫರೋಹನೆಕೋ ಎಂಬವನು ಹಮಾತ್ ದೇಶದ ರಿಬ್ಲಾದಲ್ಲಿ ಅವನನ್ನು ಬಂಧಿಸಿ ದೇಶದ ಮೇಲೆ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರವನ್ನೂ ದಂಡ ತೆರಬೇಕಾ ಯಿತು. ಫರೋಹನೆಕೋ ಯೋಷೀಯನ ಮಗ ನಾದ ಎಲ್ಯಾಕೀಮನನ್ನು ಅವನ ತಂದೆಯಾದ ಯೋಷೀ ಯನಿಗೆ ಬದಲಾಗಿ ಅರಸನನ್ನಾಗಿ ಮಾಡಿ ಅವನಿಗೆ ಯೆಹೋಯಾಕೀಮನೆಂಬ ಬದಲು ಹೆಸರನ್ನಿಟ್ಟು ಯೆಹೋವಾಹಾಜನನ್ನು ತೆಗೆದುಕೊಂಡು ಹೋದನು; ಅವನು ಐಗುಪ್ತದಲ್ಲಿ ಸತ್ತನು.
- 2 Chronicles 35:23–25 2 ಪೂರ್ವಕಾಲವೃತ್ತಾಂತ 35:23–25ಆಗ ಬಿಲ್ಲುಗಾ ರರು ಅರಸನಾದ ಯೋಷೀಯನ ಮೇಲೆ ಎಸೆದರು; ಅರಸನು ತನ್ನ ಸೇವಕರಿಗೆ--ನನ್ನನ್ನು ಆಚೆಗೆ ಒಯ್ಯಿರಿ; ಯಾಕಂದರೆ ಬಹು ಗಾಯಪಟ್ಟಿದ್ದೇನೆ ಅಂದನು. ಆದದರಿಂದ ಅವನ ಸೇವಕರು ಆ ರಥದೊಳಗಿಂದ ಅವನನ್ನು ತೆಗೆದುಕೊಂಡು ಅವನಿಗಿದ್ದ ಎರಡನೇ ರಥ ದಲ್ಲಿ ಅವನನ್ನು ಇರಿಸಿ ಯೆರೂಸಲೇಮಿಗೆ ತಂದರು. ಅವನು ಅಲ್ಲಿ ಸತ್ತು ತನ್ನ ಪಿತೃಗಳ ಸಮಾಧಿಗಳಲ್ಲಿ ಹೂಣಲ್ಪಟ್ಟನು. ಸಮಸ್ತ ಯೆಹೂದ ಯೆರೂಸಲೇಮಿ ನವರು ಯೋಷೀಯನಿಗೋಸ್ಕರ ದುಃಖಪಟ್ಟರು. ಇದಲ್ಲದೆ ಯೆರೆವಿಾಯನು ಯೋಷೀಯನಿಗೋಸ್ಕರ ಗೋಳಾಡಿದನು. ಹಾಡುಗಾರರೂ ಹಾಡುಗಾರ್ತಿ ಯರೂ ಯೋಷೀಯನಿಗೋಸ್ಕರ ಇದುವರೆಗೂ ತಮ್ಮ ಗೋಳಾಟಗಳಲ್ಲಿ ಹೇಳುತ್ತಾರೆ. ಇದು ಇಸ್ರಾಯೇಲಿ ನಲ್ಲಿ ನೇಮಕವಾಯಿತು. ಇಗೋ, ಅವು ಪ್ರಲಾಪ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.
- 2 Kings 22:20 2 ಅರಸುಗಳು 22:20ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು.
- Jeremiah 22:18 ಯೆರೆಮೀಯ 22:18ಆದದ ರಿಂದ ಯೋಷೀಯನ ಮಗನಾದ ಯೆಹೂದದ ಅರಸನಾದ ಯೆಹೋಯಾಕೀಮನನ್ನು ಕುರಿತು ಕರ್ತನು ಹೀಗೆ ಹೇಳುತ್ತಾನೆ--ಅವರು ಅವನನ್ನು ಕುರಿತು ಗೋಳಾಡಿ--ಹಾ, ನನ್ನ ಸಹೋದರನೇ, ಹಾ, ನನ್ನ ಸಹೋದರಿಯೇ ಎಂದು ಅನ್ನುವದಿಲ್ಲ; ಹಾ, ದೊರೆಯೇ, ಹಾ, ಅವನ ವೈಭವವೇ ಎಂದು ಅವನನ್ನು ಕುರಿತು ಗೋಳಾಡುವದಿಲ್ಲ.
- Luke 23:28 ಲೂಕನು 23:28ಆದರೆ ಯೇಸು ಅವರ ಕಡೆಗೆ ತಿರುಗಿ ಕೊಂಡು--ಯೆರೂಸಲೇಮಿನ ಕುಮಾರ್ತೆಯರೇ, ನನ ಗಾಗಿ ಅಳಬೇಡಿರಿ; ಆದರೆ ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ.
- Ezekiel 19:3–4 ಯೆಹೆಜ್ಕೇಲನು 19:3–4ತನ್ನ ಮರಿಗಳಲ್ಲಿ ಒಂದನ್ನು ಬೆಳೆಸಿದಳು; ಇದು ಪ್ರಾಯದ ಸಿಂಹವಾಯಿತು, ಇದು ಕೊಳ್ಳೆ ಹೊಡೆಯು ವದನ್ನು ಕಲಿತು ಮನುಷ್ಯರನ್ನು ನುಂಗಿಬಿಟ್ಟಿತು. ಜನಾಂಗಗಳವರು ಅದರ ಸುದ್ದಿಯನ್ನು ಕೇಳಿದರು; ಅವರ ಹಳ್ಳದಲ್ಲಿ ಇದನ್ನು ಹಿಡಿದುಕೊಂಡರು, ಸಂಕೋ ಲೆಗಳಿಂದ ಬಂಧಿಸಿ ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು.