1 Kings · chapter 17 · verse 11
1 Kings 17:11 in Kannada
ಅವಳು ತಕ್ಕೊಂಡು ಬರಲು ಹೋಗು ತ್ತಿರುವಾಗ ಅವನು ಅವಳನ್ನು ಕರೆದು--ನೀನು ದಯ ಮಾಡಿ ನಿನ್ನ ಕೈಯಲ್ಲಿ ರೊಟ್ಟಿಯ ತುಂಡನ್ನು ನನಗೆ ತಕ್ಕೊಂಡು ಬಾ ಅಂದನು.
Avalu takkondu baralu hogu ttiruvaaga avanu avalannu karedu--neenu daya maadi ninna kaiyalli rottiya tundannu nanage takkondu baa andanu.
1 Kings 17:11 in English
- King James Version (KJV)
- And as she was going to fetch [it], he called to her, and said, Bring me, I pray thee, a morsel of bread in thine hand.
- World English Bible (WEB)
- As she was going to get it, he called to her and said, “Please bring me a morsel of bread in your hand.”
- American Standard Version (ASV)
- And as she was going to fetch it, he called to her, and said, Bring me, I pray thee, a morsel of bread in thy hand.
- Bible in Basic English (BBE)
- And when she was going to get it, he said to her, And get me with it a small bit of bread.
- Darby Translation (DBY)
- And she went to fetch [it], and he called to her and said, Bring me, I pray thee, a morsel of bread in thy hand.
- Webster's Bible (WBS)
- And as she was going to bring [it] , he called to her, and said, Bring me, I pray thee, a morsel of bread in thy hand.
- Young's Literal Translation (YLT)
- And she goeth to bring [it], and he calleth unto her and saith, 'Bring, I pray thee, to me a morsel of bread in thy hand.'
Read in context
- 9ನೀನೆದ್ದು ಚೀದೋನಿಗೆ ಸೇರಿದ ಚಾರೆಪ್ತಾಕ್ಕೆ ಹೋಗಿ ಅಲ್ಲಿ ವಾಸವಾಗಿರು; ಇಗೋ, ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ ಅಂದನು.
- 10ಹಾಗೆಯೆ ಅವನೆದ್ದು ಚಾರೆಪ್ತಾಕ್ಕೆ ಹೋಗಿ ಪಟ್ಟಣದ ಬಾಗಿಲ ಬಳಿಗೆ ಬಂದಾಗ ಇಗೋ, ಅಲ್ಲಿ ಒಬ್ಬ ವಿಧವೆಯು ಕಟ್ಟಿಗೆಗಳನ್ನು ಆರಿಸಿಕೊಳ್ಳುತ್ತಾ ಇದ್ದಳು. ಅವನು ಅವಳನ್ನು ಕರೆದು--ನೀನು ದಯಮಾಡಿ ಕುಡಿ ಯುವದಕ್ಕೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತಕ್ಕೊಂಡುಬಾ ಅಂದನು.
- 11ಅವಳು ತಕ್ಕೊಂಡು ಬರಲು ಹೋಗು ತ್ತಿರುವಾಗ ಅವನು ಅವಳನ್ನು ಕರೆದು--ನೀನು ದಯ ಮಾಡಿ ನಿನ್ನ ಕೈಯಲ್ಲಿ ರೊಟ್ಟಿಯ ತುಂಡನ್ನು ನನಗೆ ತಕ್ಕೊಂಡು ಬಾ ಅಂದನು.
- 12ಅದಕ್ಕೆ ಅವಳು--ನಿನ್ನ ದೇವರಾದ ಕರ್ತನ ಜೀವದಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ ತಂಬಿಗೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ಇಗೋ, ನಾನೂ ನನ್ನ ಕುಮಾರನೂ ಅದನ್ನು ತಿಂದು ಸತ್ತುಹೋಗುವ ಹಾಗೆ ಅದನ್ನು ನನಗೂ ಅವನಿಗೂ ಸಿದ್ಧ ಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ ಅಂದಳು.
- 13ಆಗ ಎಲೀಯನು ಅವಳಿಗೆ--ಭಯಪಡಬೇಡ; ನೀನು ಹೋಗಿ ನಿನ್ನ ಮಾತಿನ ಪ್ರಕಾರವೇ ಮಾಡು. ಆದರೆ ಮೊದಲು ಅದರಲ್ಲಿ ನನಗೆ ಒಂದು ಚಿಕ್ಕ ರೊಟ್ಟಿ ಮಾಡಿ, ನನ್ನ ಬಳಿಗೆ ತಕ್ಕೊಂಡು ಬಾ; ತರು ವಾಯ ನಿನಗೂ ನಿನ್ನ ಮಗನಿಗೂ ಸಿದ್ದಮಾಡಿಕೋ.
Cross references
- Genesis 24:18–19 ಆದಿಕಾಂಡ 24:18–19ಅದಕ್ಕವಳು--ನನ್ನ ಒಡೆಯನೇ, ಕುಡಿ ಎಂದು ಹೇಳಿ ತ್ವರೆಯಾಗಿ ತನ್ನ ಕೊಡವನ್ನು ಕೈಮೇಲೆ ಇಳಿಸಿ ಅವನಿಗೆ ಕುಡಿಯಲು ಕೊಟ್ಟಳು. ಅವನಿಗೆ ಕುಡಿಯು ವದಕ್ಕೆ ಕೊಟ್ಟನಂತರ ಆಕೆಯು--ನಿನ್ನ ಒಂಟೆಗಳಿಗೂ ಸಾಕಾಗುವಷ್ಟು ನೀರನ್ನು ತರುತ್ತೇನೆ ಎಂದು ಹೇಳಿದಳು.
- Matthew 10:42 ಮತ್ತಾಯನು 10:42ಯಾವನಾದರೂ ಶಿಷ್ಯನ ಹೆಸರಿನಲ್ಲಿ ಈ ಚಿಕ್ಕವರಾದ ಒಬ್ಬನಿಗೆ ಕೇವಲ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಅವನು ತನ್ನ ಪ್ರತಿಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- 1 Kings 18:4 1 ಅರಸುಗಳು 18:4ಈಜೆಬೆ ಲಳು ಕರ್ತನ ಪ್ರವಾದಿಗಳನ್ನು ಕೊಲ್ಲುವಾಗ ಓಬ ದ್ಯನು ನೂರು ಮಂದಿ ಪ್ರವಾದಿಗಳನ್ನು ತೆಗೆದುಕೊಂಡು ಐವತ್ತು ಐವತ್ತು ಮಂದಿಯಾಗಿ ಅವರನ್ನು ಗವಿಯಲ್ಲಿ ಬಚ್ಚಿಟ್ಟು ಅವರಿಗೆ ಆಹಾರವನ್ನೂ ನೀರನ್ನೂ ಕೊಟ್ಟು ಅವರನ್ನು ಸಂರಕ್ಷಣೆ ಮಾಡುತ್ತಾ ಇದ್ದನು.)
- Genesis 18:5 ಆದಿಕಾಂಡ 18:5ನಾನು ಒಂದಿಷ್ಟು ರೊಟ್ಟಿಯನ್ನು ತರುವೆನು; ನೀವು ನಿಮ್ಮ ಹೃದಯಗಳನ್ನು ಆದರಿಸಿಕೊಳ್ಳಿರಿ; ತರುವಾಯ ನೀವು ಮುಂದೆ ಹೊರಟು ಹೋಗಬಹುದು. ಅದಕ್ಕೋಸ್ಕರವೇ ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ ಎಂದು ಬೇಡಿಕೊಂಡನು. ಅದಕ್ಕೆ ಅವರು--ನೀನು ಹೇಳಿದಂತೆಯೇ ಮಾಡು ಅಂದರು.
- 1 Kings 17:9 1 ಅರಸುಗಳು 17:9ನೀನೆದ್ದು ಚೀದೋನಿಗೆ ಸೇರಿದ ಚಾರೆಪ್ತಾಕ್ಕೆ ಹೋಗಿ ಅಲ್ಲಿ ವಾಸವಾಗಿರು; ಇಗೋ, ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ ಅಂದನು.
- Hebrews 13:2 ಇಬ್ರಿಯರಿಗೆ 13:2ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.
- Matthew 25:35–40 ಮತ್ತಾಯನು 25:35–40ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿ ದಿರಿ; ನಾನು ಅಸ್ವಸ್ಥನಾಗಿದ್ದೆನು; ನೀವು ನನ್ನನ್ನು ಸಂಧಿಸಿ ದಿರಿ; ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ ಎಂದು ಹೇಳುವನು. ಆಗ ಆ ನೀತಿವಂತರು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ಯಾವಾಗ ನೀನು ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿ ದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವದಕ್ಕೆ ಕೊಟ್ಟೆವು? ಯಾವಾಗ ನೀನು ಪರದೇಶಿಯಾ ಗಿರುವದನ್ನು ನಾವು ನೋಡಿ ನಿನ್ನನ್ನು ಒಳಕ್ಕೆ ಸೇರಿಸಿ ಕೊಂಡೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು? ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನನ್ನು ನೋಡಿ ನಿನ್ನ ಬಳಿಗೆ ಬಂದೆವು ಎಂದು ಹೇಳುವರು. ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.