Hebrews · chapter 13 · verse 2
Hebrews 13:2 in Kannada
ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.
Pararige satkaara maaduvadannu mareyabediri; adannu maaduvalli kelavaru tiliyade dootarannu satkarisiddaare.
Hebrews 13:2 in English
- King James Version (KJV)
- Be not forgetful to entertain strangers: for thereby some have entertained angels unawares.
- World English Bible (WEB)
- Don’t forget to show hospitality to strangers, for in doing so, some have entertained angels without knowing it.
- American Standard Version (ASV)
- Forget not to show love unto strangers: for thereby some have entertained angels unawares.
- Bible in Basic English (BBE)
- Take care to keep open house: because in this way some have had angels as their guests, without being conscious of it.
- Darby Translation (DBY)
- Be not forgetful of hospitality; for by it some have unawares entertained angels.
- Webster's Bible (WBS)
- Be not forgetful to entertain strangers: for by this some have entertained angels unawares.
- Young's Literal Translation (YLT)
- of the hospitality be not forgetful, for through this unawares certain did entertain messengers;
Read in context
- 1ಸಹೋದರ ಪ್ರೀತಿಯು ನೆಲೆಯಾಗಿರಲಿ.
- 2ಪರರಿಗೆ ಸತ್ಕಾರ ಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೂತರನ್ನು ಸತ್ಕರಿಸಿದ್ದಾರೆ.
- 3ಸೆರೆಯವರ ಸಂಗಡ ನೀವೂ ಬಂಧಿಸಲ್ಪಟ್ಟವರೆಂದು ಅವರನ್ನು ಜ್ಞಾಪಕ ಮಾಡಿಕೊಳ್ಳಿರಿ. ನೀವು ಶರೀರದಲ್ಲಿರುವ ದರಿಂದ ಕಷ್ಟವನ್ನು ಅನುಭವಿಸುವವರನ್ನು ನೆನಸಿರಿ.
- 4ವಿವಾಹವು ಎಲ್ಲಾದರಲ್ಲಿ ಗೌರವವಾದದ್ದೂ ಹಾಸಿಗೆಯು ನಿಷ್ಕಳಂಕವಾದದ್ದೂ ಆಗಿದೆ. ಆದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನು.
Cross references
- Matthew 25:35 ಮತ್ತಾಯನು 25:35ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ;
- Genesis 18:1–3 ಆದಿಕಾಂಡ 18:1–3ಕರ್ತನು ಮಮ್ರೇಯ ಮೈದಾನಗಳಲ್ಲಿ ಅಬ್ರಹಾಮನಿಗೆ ಕಾಣಿಸಿಕೊಂಡನು. ಅವನು ಮಧ್ಯಾಹ್ನದ ವೇಳೆ ಗುಡಾರದ ಬಾಗಲಿನಲ್ಲಿ ಕೂತುಕೊಂಡಿದ್ದನು. ಆಗ ತನ್ನ ಕಣ್ಣುಗಳನ್ನೆತ್ತಿ ನೋಡಲು ಅಗೋ, ಮೂವರು ಪುರುಷರು ಅವನ ಪಕ್ಕದಲ್ಲಿ ನಿಂತಿದ್ದರು. ಅವನು ಅವರನ್ನು ನೋಡಿ ಅವರಿಗೆ ಎದುರಾಗಿ ಗುಡಾರದ ಬಾಗಲಿನಿಂದ ಓಡಿಬಂದು ನೆಲದ ವರೆಗೂ ಬೊಗ್ಗಿ-- ನನ್ನ ಕರ್ತನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರೆತಿದ್ದರೆ ನಿನ್ನ ದಾಸನ ಬಳಿಯಿಂದ ಹೊರಟುಹೋಗಬೇಡ.
- 1 Peter 4:9 1 ಪೇತ್ರನು 4:9ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
- Romans 12:13 ರೋಮಾಪುರದವರಿಗೆ 12:13ಪರಿಶುದ್ಧರ ಕೊರತೆಯ ಪ್ರಕಾರ ಹಂಚಿರಿ; ಅತಿಥಿಸತ್ಕಾರವನ್ನು ಮಾಡಿರಿ.
- Matthew 25:43 ಮತ್ತಾಯನು 25:43ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಗೆ ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂಧಿಸಲಿಲ್ಲ ಎಂದು ಹೇಳುವನು.
- Matthew 25:40 ಮತ್ತಾಯನು 25:40ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.
- Leviticus 19:34 ಯಾಜಕಕಾಂಡ 19:34ಆದರೆ ನಿಮ್ಮಲ್ಲಿ ವಾಸವಾಗಿರುವ ಪರಕೀಯನು ನಿಮ್ಮೊಳಗೆ ಹುಟ್ಟಿದವನಂತಿರಲಿ, ನೀವು ಅವನನ್ನು ನಿಮ್ಮಂತೆಯೇ ಪ್ರೀತಿಸಬೇಕು. ಯಾಕಂದರೆ ನೀವು ಐಗುಪ್ತದೇಶದಲ್ಲಿ ಪರಕೀಯರಾಗಿದ್ದಿರಿ; ನಿಮ್ಮ ದೇವರಾ ಗಿರುವ ಕರ್ತನು ನಾನೇ.
- Titus 1:8 ತೀತನಿಗೆ 1:8ಅತಿಥಿಸತ್ಕಾರವನ್ನು ಪ್ರೀತಿಸುವವನು ಒಳ್ಳೆಯವರನ್ನು ಪ್ರೀತಿಸುವವನೂ ಸ್ವಸ್ಥಚಿತ್ತನೂ ನ್ಯಾಯವಂತನೂ ಪರಿಶುದ್ಧನೂ ಜಿತೇಂದ್ರಿಯನೂ ಆಗಿದ್ದು
- Deuteronomy 10:18–19 ಧರ್ಮೋಪದೇಶಕಾಂಡ 10:18–19ಆತನು ತಂದೆ ಇಲ್ಲದವರಿಗೂ ವಿಧವೆ ಯರಿಗೂ ನ್ಯಾಯತೀರಿಸುತ್ತಾನೆ; ಪರದೇಶಿಯನ್ನು ಪ್ರೀತಿಮಾಡಿ ಅನ್ನ ವಸ್ತ್ರ ಕೊಡುತ್ತಾನೆ. ಹೀಗಿರುವ ದರಿಂದ ನೀವು ಪರದೇಶಿಯನ್ನು ಪ್ರೀತಿಮಾಡಬೇಕು; ಯಾಕಂದರೆ ನೀವು ಐಗುಪ್ತದಲ್ಲಿ ಪರದೇಶಿಗಳಾಗಿದ್ದಿರಿ.
- 1 Kings 17:10–16 1 ಅರಸುಗಳು 17:10–16ಹಾಗೆಯೆ ಅವನೆದ್ದು ಚಾರೆಪ್ತಾಕ್ಕೆ ಹೋಗಿ ಪಟ್ಟಣದ ಬಾಗಿಲ ಬಳಿಗೆ ಬಂದಾಗ ಇಗೋ, ಅಲ್ಲಿ ಒಬ್ಬ ವಿಧವೆಯು ಕಟ್ಟಿಗೆಗಳನ್ನು ಆರಿಸಿಕೊಳ್ಳುತ್ತಾ ಇದ್ದಳು. ಅವನು ಅವಳನ್ನು ಕರೆದು--ನೀನು ದಯಮಾಡಿ ಕುಡಿ ಯುವದಕ್ಕೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತಕ್ಕೊಂಡುಬಾ ಅಂದನು. ಅವಳು ತಕ್ಕೊಂಡು ಬರಲು ಹೋಗು ತ್ತಿರುವಾಗ ಅವನು ಅವಳನ್ನು ಕರೆದು--ನೀನು ದಯ ಮಾಡಿ ನಿನ್ನ ಕೈಯಲ್ಲಿ ರೊಟ್ಟಿಯ ತುಂಡನ್ನು ನನಗೆ ತಕ್ಕೊಂಡು ಬಾ ಅಂದನು. ಅದಕ್ಕೆ ಅವಳು--ನಿನ್ನ ದೇವರಾದ ಕರ್ತನ ಜೀವದಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ ತಂಬಿಗೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ಇಗೋ, ನಾನೂ ನನ್ನ ಕುಮಾರನೂ ಅದನ್ನು ತಿಂದು ಸತ್ತುಹೋಗುವ ಹಾಗೆ ಅದನ್ನು ನನಗೂ ಅವನಿಗೂ ಸಿದ್ಧ ಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ ಅಂದಳು. ಆಗ ಎಲೀಯನು ಅವಳಿಗೆ--ಭಯಪಡಬೇಡ; ನೀನು ಹೋಗಿ ನಿನ್ನ ಮಾತಿನ ಪ್ರಕಾರವೇ ಮಾಡು. ಆದರೆ ಮೊದಲು ಅದರಲ್ಲಿ ನನಗೆ ಒಂದು ಚಿಕ್ಕ ರೊಟ್ಟಿ ಮಾಡಿ, ನನ್ನ ಬಳಿಗೆ ತಕ್ಕೊಂಡು ಬಾ; ತರು ವಾಯ ನಿನಗೂ ನಿನ್ನ ಮಗನಿಗೂ ಸಿದ್ದಮಾಡಿಕೋ. ಕರ್ತನು ಭೂಮಿಯ ಮೇಲೆ ಮಳೆಯನ್ನು ಕೊಡುವ ವರೆಗೂ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ; ತಂಬಿಗೆಯಲ್ಲಿರುವ ಎಣ್ಣೆಯು ಮುಗಿಯುವದಿಲ್ಲ ಎಂದು ಇಸ್ರಾಯೇಲಿನ ದೇವರಾದ ಕರ್ತನು ಹೇಳು ತ್ತಾನೆ ಅಂದನು. ಆಗ ಅವಳು ಹೋಗಿ ಎಲೀಯನ ಮಾತಿನ ಹಾಗೆಯೇ ಮಾಡಿ, ಅವಳೂ ಇವನೂ ಅವಳ ಮನೆಯವರೂ ಅನೇಕ ದಿವಸ ತಿಂದರು. ಕರ್ತನು ಎಲೀಯನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಮಡಕೆಯಲ್ಲಿರುವ ಹಿಟ್ಟು ತೀರದೆ ತಂಬಿಗೆ ಯಲ್ಲಿರುವ ಎಣ್ಣೆಯು ಮುಗಿಯದೆ ಇತ್ತು.
- Judges 13:15–25 ನ್ಯಾಯಸ್ಥಾಪಕರು 13:15–25ಮಾನೋ ಹನು ಕರ್ತನ ದೂತನಿಗೆ--ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವ ವರೆಗೆ ನಿನ್ನನ್ನು ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ ಅಂದನು. ಕರ್ತನ ದೂತನು ಮಾನೋಹನಿಗೆ--ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ರೊಟ್ಟಿಯನ್ನು ತಿನ್ನುವ ದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ ಅದನ್ನು ಕರ್ತನಿಗೆ ಅರ್ಪಿಸಬೇಕು ಅಂದನು. ಅವನು ಕರ್ತನ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಕರ್ತನ ದೂತನಿಗೆ--ನೀನು ಹೇಳಿದ ಮಾತುಗಳು ನೆರವೇರುವಾಗ ನಾವು ನಿನ್ನನ್ನು ಘನ ಪಡಿಸುವ ಹಾಗೆ ನಿನ್ನ ಹೆಸರೇನು ಅಂದನು. ಆದರೆ ಕರ್ತನ ದೂತನು ಅವನಿಗೆ--ನನ್ನ ಹೆಸರು ಏನೆಂದು ನೀನು ಕೇಳುವದೇನು? ಆ ಹೆಸರು ರಹಸ್ಯವಾದದ್ದು ಅಂದನು. ಹೀಗೆ ಮಾನೋಹನು ಮೇಕೆಯ ಮರಿಯನ್ನೂ ಅರ್ಪಣೆಯನ್ನೂ ತಂದು ಅವುಗಳನ್ನು ಬಂಡೆಯ ಮೇಲೆ ಕರ್ತನಿಗೆ ಅರ್ಪಿಸಿದನು. ಮಾನೋ ಹನೂ ಅವನ ಹೆಂಡತಿಯೂ ನೋಡುವಾಗ ಕರ್ತನ ದೂತನು ಆಶ್ಚರ್ಯವಾದದ್ದನ್ನು ಮಾಡಿದನು. ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳು ವಾಗ ಏನಾಯಿತಂದರೆ, ಕರ್ತನ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋ ಹನೂ ಅವನ ಹೆಂಡತಿಯೂ ನೋಡಿ ನೆಲದ ಮೇಲೆ ಬೋರಲು ಬಿದ್ದರು. ಆದರೆ ಕರ್ತನ ದೂತನು ಮಾನೋಹನಿಗೂ ಅವನ ಹೆಂಡತಿಗೂ ತಿರಿಗಿ ಕಾಣಿಸ ಲಿಲ್ಲ. ಆಗ ಇವನು ಕರ್ತನ ದೂತನೆಂದು ಮಾನೋಹನು ತಿಳುಕೊಂಡನು. ಮಾನೋಹನು ತನ್ನ ಹೆಂಡತಿಗೆ--ನಾವು ದೇವರನ್ನು ಕಂಡದ್ದರಿಂದ ನಿಶ್ಚಯ ವಾಗಿ ಸಾಯುವೆವು ಅಂದನು. ಅವನ ಹೆಂಡತಿ ಅವನಿಗೆ--ಕರ್ತನು ನಮ್ಮನ್ನು ಕೊಂದುಹಾಕುವದಕ್ಕೆ ಮನಸ್ಸಾಗಿದ್ದರೆ ಆತನು ನಮ್ಮ ಕೈಯಿಂದ ದಹನಬಲಿ ಯನ್ನೂ ಅರ್ಪಣೆಯನ್ನೂ ಅಂಗೀಕರಿಸುತ್ತಿರಲಿಲ್ಲ; ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ. ಈಗ ಹೇಳಿದವುಗಳನ್ನು ನಮಗೆ ತಿಳಿಯ ಮಾಡುತ್ತಿರಲಿಲ್ಲ ಅಂದಳು. ಆ ಸ್ತ್ರೀಯು ಮಗನನ್ನು ಹೆತ್ತು ಅವನಿಗೆ ಸಂಸೋನನು ಎಂದು ಹೆಸರಿಟ್ಟಳು. ಆ ಹುಡುಗನು ಬೆಳೆದನು; ಕರ್ತನು ಅವನನ್ನು ಆಶೀರ್ವದಿಸಿದನು.ಇದಲ್ಲದೆ ಚೊರ್ಗಕ್ಕೂ ಎಷ್ಟಾ ವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಕರ್ತನ ಆತ್ಮವು ಆಗಾಗ್ಗೆ ಪ್ರೇರೇಪಿಸುವದಕ್ಕೆ ಪ್ರಾರಂಭಿಸಿತು. ಇದಲ್ಲದೆ ಚೊರ್ಗಕ್ಕೂ ಎಷ್ಟಾ ವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಕರ್ತನ ಆತ್ಮವು ಆಗಾಗ್ಗೆ ಪ್ರೇರೇಪಿಸುವದಕ್ಕೆ ಪ್ರಾರಂಭಿಸಿತು.
- Job 31:32 ಯೋಬನು 31:32ಪರದೇಶಸ್ಥನು ಬೀದಿ ಯಲ್ಲಿ ಇಳುಕೊಳ್ಳಲಿಲ್ಲ; ಆದರೆ ನನ್ನ ಬಾಗಲನ್ನು ಮಾರ್ಗಸ್ಥರಿಗೆ ತೆರೆಯುತ್ತಾ ಇದ್ದೆನು.
Original words (Greek)
- Be · G1950ἐπιλανθάνομαι epilanthánomai
- not · G3361μή mḗ
- forgetful · G1950ἐπιλανθάνομαι epilanthánomai
- strangers · G5381φιλονεξία philonexía
- for · G1063γάρ gár
- there · G3778οὗτος hoûtos
- by · G1223διά diá
- some · G5100τὶς tìs
- entertained · G3579ξενίζω xenízō
- angels · G32ἄγγελος ángelos
- unawares · G2990λανθάνω lanthánō