1 Kings · chapter 19 · verse 12
1 Kings 19:12 in Kannada
ಭೂಕಂಪದ ತರುವಾಯ ಬೆಂಕಿಯು; ಆ ಬೆಂಕಿಯಲ್ಲಿ ಕರ್ತನು ಇರಲಿಲ್ಲ. ಬೆಂಕಿಯ ತರು ವಾಯ ಮೆಲ್ಲನೆಯಾದಂಥ, ಸೂಕ್ಷ್ಮವಾದಂಥ ಶಬ್ದವು.
Bhookampada taruvaaya benkiyu; aa benkiyalli kartanu iralilla. Benkiya taru vaaya mellaneyaadantha, sookshmavaadantha shabdavu.
1 Kings 19:12 in English
- King James Version (KJV)
- And after the earthquake a fire; [but] the LORD [was] not in the fire: and after the fire a still small voice.
- World English Bible (WEB)
- After the earthquake a fire passed; but the LORD was not in the fire. After the fire, there was a still small voice.
- American Standard Version (ASV)
- and after the earthquake a fire; but Jehovah was not in the fire: and after the fire a still small voice.
- Bible in Basic English (BBE)
- And after the earth-shock a fire, but the Lord was not in the fire. And after the fire, the sound of a soft breath.
- Darby Translation (DBY)
- And after the earthquake, a fire: Jehovah was not in the fire. And after the fire, a soft gentle voice.
- Webster's Bible (WBS)
- And after the earthquake a fire; [but] the LORD [was] not in the fire: and after the fire a still small voice.
- Young's Literal Translation (YLT)
- and after the shaking a fire: — not in the fire [is] Jehovah; and after the fire a voice still small;
Read in context
- 10ಅದಕ್ಕವನು--ಸೈನ್ಯಗಳ ದೇವ ರಾದ ಕರ್ತನಿಗೋಸ್ಕರ ನಾನು ಬಹು ರೋಷವುಳ್ಳವ ನಾಗಿದ್ದೇನೆ; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿ ಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನು ಹೌದು, ನಾನೊಬ್ಬನೇ ಉಳಿದಿ ದ್ದೇನೆ; ಆದರೆ ಅವರು ನನ್ನ ಪ್ರಾಣವನ್ನು ತೆಗೆದುಬಿಡಲು ಹುಡುಕುತ್ತಾರೆ ಅಂದನು.
- 11ಆಗ ಆತನು--ನೀನು ಹೊರಗೆ ಬಂದು ಬೆಟ್ಟದ ಮೇಲೆ ಕರ್ತನ ಮುಂದೆ ನಿಲ್ಲು ಅಂದನು. ಇಗೋ, ಕರ್ತನು ಹಾದುಹೋದನು; ಕರ್ತನ ಮುಂದೆ ಬೆಟ್ಟಗಳನ್ನು ಭೇದಿಸುವಂಥ, ಗುಡ್ಡ ಗಳನ್ನು ಒಡೆಯುವಂಥ ಮಹಾ ಬಲವಾದ ಗಾಳಿ; ಆ ಗಾಳಿಯಲ್ಲಿ ಕರ್ತನು ಇರಲಿಲ್ಲ. ಗಾಳಿಯ ತರು ವಾಯ ಭೂಕಂಪವು; ಆ ಭೂಕಂಪದಲ್ಲಿ ಕರ್ತನು ಇರಲಿಲ್ಲ.
- 12ಭೂಕಂಪದ ತರುವಾಯ ಬೆಂಕಿಯು; ಆ ಬೆಂಕಿಯಲ್ಲಿ ಕರ್ತನು ಇರಲಿಲ್ಲ. ಬೆಂಕಿಯ ತರು ವಾಯ ಮೆಲ್ಲನೆಯಾದಂಥ, ಸೂಕ್ಷ್ಮವಾದಂಥ ಶಬ್ದವು.
- 13ಎಲೀಯನು ಅದನ್ನು ಕೇಳಿದಾಗ ತನ್ನ ಕಂಬಳಿ ಯಿಂದ ತನ್ನ ಮುಖವನ್ನು ಮುಚ್ಚಿಕೊಂಡು ಹೊರಗೆ ಬಂದು ಗವಿಯ ದ್ವಾರದಲ್ಲಿ ನಿಂತನು. ಆಗ ಇಗೋಎಲೀಯನೇ, ಇಲ್ಲಿ ಏನು ಮಾಡುತ್ತೀ ಎಂಬ ಶಬ್ದವು ಅವನಿಗೆ ಉಂಟಾಯಿತು.
- 14ಅದಕ್ಕೆ ಅವನು--ಸೈನ್ಯಗಳ ದೇವರಾದ ಕರ್ತನಿಗೋಸ್ಕರ ನಾನು ಮಹಾ ರೋಷವು ಳ್ಳವನಾಗಿದ್ದೆನು; ಯಾಕಂದರೆ ಇಸ್ರಾಯೇಲಿನ ಮಕ್ಕಳು ನಿನ್ನ ಒಡಂಬಡಿಕೆಯನ್ನು ಬಿಟ್ಟು ನಿನ್ನ ಬಲಿಪೀಠಗಳನ್ನು ಕೆಡವಿ ನಿನ್ನ ಪ್ರವಾದಿಗಳನ್ನು ಕತ್ತಿಯಿಂದ ಕೊಂದು ಹಾಕಿದ್ದಾರೆ; ನಾನೊಬ್ಬನೇ ಉಳಿದಿದ್ದೇನೆ; ಅವರು ನನ್ನ ಪ್ರಾಣವನ್ನು ತೆಗೆಯಲು ಹುಡುಕುತ್ತಾರೆ ಅಂದನು.
Cross references
- Job 4:16 ಯೋಬನು 4:16ಅದು ಸುಮ್ಮನೆ ನಿಂತಿತು. ಅದರ ರೂಪವನ್ನು ನಾನು ತಿಳುಕೊಳ್ಳಲಿಲ್ಲ. ನನ್ನ ಕಣ್ಣುಗಳ ಮುಂದೆ ವಿಗ್ರಹವಿತ್ತು; ಅಲ್ಲಿ ನಿಶ್ಯಬ್ಧವಿತ್ತು. ಆಗ ಒಂದು ವಾಣಿ ಯಾಯಿತು--
- Zechariah 4:6 ಜೆಕರ್ಯ 4:6ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Deuteronomy 4:33 ಧರ್ಮೋಪದೇಶಕಾಂಡ 4:33ನೀನು ಕೇಳಿದಂತೆ ಬೆಂಕಿಯೊಳಗಿಂದ ಮಾತನಾಡುವ ದೇವರ ಶಬ್ದವನ್ನು ಕೇಳಿ ಬದುಕಿದ ಜನರು ಇದ್ದಾರೆಯೇ?
- Job 33:7 ಯೋಬನು 33:7ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು; ಇಲ್ಲವೆ ನನ್ನ ಕೈ ನಿನ್ನ ಮೇಲೆ ಭಾರವಾಗದು.
- Deuteronomy 4:11–12 ಧರ್ಮೋಪದೇಶಕಾಂಡ 4:11–12ಆಗ ನೀವು ಹತ್ತಿರ ಬಂದು ಬೆಟ್ಟದ ಕೆಳಗೆ ನಿಂತಿರಿ; ಆ ಬೆಟ್ಟವು ಕತ್ತಲೆಯಾ ಗಿದ್ದು ಮೇಘಗಳೂ ಗಾಢಾಂಧಕಾರವೂ ಉಂಟಾಗಿ ಆಕಾಶ ಮಧ್ಯದ ವರೆಗೆ ಬೆಂಕಿಯಿಂದ ಉರಿಯು ತ್ತಿತ್ತು. ಬೆಂಕಿಯ ಮಧ್ಯದೊಳಗಿಂದ ಕರ್ತನು ನಿಮ್ಮ ಸಂಗಡ ಮಾತನಾಡಿದನು; ವಾಕ್ಯಗಳ ಧ್ವನಿಯನ್ನು ನೀವು ಕೇಳಿದಿರಿ; ಆದರೆ ಆಕಾರವನ್ನು ನೋಡಲಿಲ್ಲ; ಧ್ವನಿಯನ್ನು ಮಾತ್ರ ಕೇಳಿದಿರಿ.
- Exodus 34:6 ವಿಮೋಚನಕಾಂಡ 34:6ಕರ್ತನು ಅವನೆದುರಿಗೆ ಹಾದು ಹೋಗುತ್ತಾ--ಕರ್ತನು, ಕರ್ತನಾದ ದೇವರು, ಕರುಣಾಳುವೂ ಕೃಪಾಳುವೂ ದೀರ್ಘಶಾಂತನೂ ಒಳ್ಳೇತನದಲ್ಲಿ ಮತ್ತು ಸತ್ಯದಲ್ಲಿ ಸಮೃದ್ಧಿಯಾದಾತನೂ
- Exodus 3:2 ವಿಮೋಚನಕಾಂಡ 3:2ಆಗ ಕರ್ತನ ದೂತನು ಪೊದೆಯೊಳಗಿಂದ ಅಗ್ನಿಜ್ವಾಲೆಯಲ್ಲಿ ಅವನಿಗೆ ಕಾಣಿಸಿ ಕೊಂಡನು. ಅವನು ನೋಡಿದಾಗ ಇಗೋ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು. ಆದಾಗ್ಯೂ ಪೊದೆಯು ಸುಡಲಿಲ್ಲ.
- Genesis 15:17 ಆದಿಕಾಂಡ 15:17ಸೂರ್ಯನು ಮುಳುಗಿದ ಮೇಲೆ ಕತ್ತಲಾದಾಗ ಇಗೋ, ಹೊಗೆಹಾಯುವ ಒಲೆಯೂ ಉರಿಯುವ ದೀಪವೂ ತುಂಡುಗಳ ಮಧ್ಯದಲ್ಲಿ ಹಾದುಹೋದವು.
- Hebrews 12:29 ಇಬ್ರಿಯರಿಗೆ 12:29ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ.
- Acts 2:2 ಅಪೊಸ್ತಲರ ಕೃತ್ಯಗಳು 2:2ಆಗ ರಭಸವಾಗಿ ಬೀಸುವ ಬಲವಾದ ಗಾಳಿಯೋಪಾದಿಯಲ್ಲಿ ಒಂದು ಶಬ್ದವು ಆಕಾಶದಿಂದ ಫಕ್ಕನೆ ಬಂದು ಅವರು ಕೂತಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.
- Acts 2:36–37 ಅಪೊಸ್ತಲರ ಕೃತ್ಯಗಳು 2:36–37ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು. ಅವರು ಇದನ್ನು ಕೇಳಿ ತಮ್ಮ ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಪೇತ್ರನಿಗೂ ಉಳಿದ ಅಪೊಸ್ತಲರಿಗೂ--ಜನರೇ, ಸಹೋದರರೇ, ನಾವು ಏನು ಮಾಡಬೇಕು ಎಂದು ಕೇಳಿದರು.
- 1 Kings 18:38 1 ಅರಸುಗಳು 18:38ಆಗ ಕರ್ತನ ಬೆಂಕಿಯು ಇಳಿದು ಬಂದು ದಹನಬಲಿಯನ್ನೂ ಕಟ್ಟಿಗೆ ಗಳನ್ನೂ ಕಲ್ಲುಗಳನ್ನೂ ಮಣ್ಣನ್ನೂ ಸುಟ್ಟುಬಿಟ್ಟು ಕಾಲುವೆ ಯಲ್ಲಿದ್ದ ನೀರನ್ನು ಹೀರಿಬಿಟ್ಟಿತು.