Exodus · chapter 3 · verse 2
Exodus 3:2 in Kannada
ಆಗ ಕರ್ತನ ದೂತನು ಪೊದೆಯೊಳಗಿಂದ ಅಗ್ನಿಜ್ವಾಲೆಯಲ್ಲಿ ಅವನಿಗೆ ಕಾಣಿಸಿ ಕೊಂಡನು. ಅವನು ನೋಡಿದಾಗ ಇಗೋ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು. ಆದಾಗ್ಯೂ ಪೊದೆಯು ಸುಡಲಿಲ್ಲ.
Aaga kartana dootanu podeyolaginda agnijvaaleyalli avanige kaanisi kondanu. Avanu nodidaaga igo, podeyu benkiyinda uriyuttittu. Aadaagyoo podeyu sudalilla.
Exodus 3:2 in English
- King James Version (KJV)
- And the angel of the LORD appeared unto him in a flame of fire out of the midst of a bush: and he looked, and, behold, the bush burned with fire, and the bush [was] not consumed.
- World English Bible (WEB)
- The LORD’s angel appeared to him in a flame of fire out of the middle of a bush. He looked, and behold, the bush burned with fire, and the bush was not consumed.
- American Standard Version (ASV)
- And the angel of Jehovah appeared unto him in a flame of fire out of the midst of a bush: and he looked, and, behold, the bush burned with fire, and the bush was not consumed.
- Bible in Basic English (BBE)
- And the angel of the Lord was seen by him in a flame of fire coming out of a thorn-tree: and he saw that the tree was on fire, but it was not burned up.
- Darby Translation (DBY)
- And the Angel of Jehovah appeared to him in a flame of fire out of the midst of a thorn-bush: and he looked, and behold, the thorn-bush burned with fire, and the thorn-bush was not being consumed.
- Webster's Bible (WBS)
- And the angel of the LORD appeared to him in a flame of fire out of the midst of a bush: and he looked, and behold, the bush burned with fire, and the bush [was] not consumed.
- Young's Literal Translation (YLT)
- and there appeareth unto him a messenger of Jehovah in a flame of fire, out of the midst of the bush, and he seeth, and lo, the bush is burning with fire, and the bush is not consumed.
Read in context
- 1ಮೋಶೆಯು ತನ್ನ ಮಾವನಾಗಿರುವ ಮಿದ್ಯಾನಿನ ವೈದಿಕನಾದ ಇತ್ರೋವನ ಮಂದೆಯನ್ನು ಮೇಯಿಸುತ್ತಿರಲಾಗಿ ಅರಣ್ಯದ ಹಿಂಭಾ ಗಕ್ಕೆ ನಡಿಸಿಕೊಂಡುಹೋಗಿ ಹೋರೇಬ್ ಎಂಬ ದೇವರ ಬೆಟ್ಟಕ್ಕೆ ಬಂದನು.
- 2ಆಗ ಕರ್ತನ ದೂತನು ಪೊದೆಯೊಳಗಿಂದ ಅಗ್ನಿಜ್ವಾಲೆಯಲ್ಲಿ ಅವನಿಗೆ ಕಾಣಿಸಿ ಕೊಂಡನು. ಅವನು ನೋಡಿದಾಗ ಇಗೋ, ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು. ಆದಾಗ್ಯೂ ಪೊದೆಯು ಸುಡಲಿಲ್ಲ.
- 3ಆಗ ಮೋಶೆಯು--ನಾನು ಹೋಗಿ ಆ ಪೊದೆಯು ಯಾಕೆ ಸುಡದೆ ಇರುವದೆಂಬ ಆಶ್ಚರ್ಯ ವನ್ನು ನೋಡುವೆನು ಅಂದನು.
- 4ಅವನು ನೋಡು ವದಕ್ಕೆ ಹತ್ತಿರ ಬರುವದನ್ನು ಕರ್ತನು ನೋಡಿದಾಗ ದೇವರು ಪೊದೆಯೊಳಗಿಂದ ಅವನಿಗೆ--ಮೋಶೆಯೇ, ಮೋಶೆಯೇ ಎಂದು ಕರೆದನು; ಆಗ ಅವನು--ನಾನು ಇಲ್ಲಿ ಇದ್ದೇನೆ ಅಂದನು.
Cross references
- Acts 7:30–35 ಅಪೊಸ್ತಲರ ಕೃತ್ಯಗಳು 7:30–35ನಾಲ್ವತ್ತು ವರುಷ ತುಂಬಿದ ಮೇಲೆ ಸೀನಾಯಿ ಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು. ಮೋಶೆಯು ಅದನ್ನು ಕಂಡು ಆ ನೋಟಕ್ಕೆ ಆಶ್ಚರ್ಯಪಟ್ಟು ನೋಡಬೇಕೆಂದು ಹತ್ತಿರಕ್ಕೆ ಬಂದನು. ಆಗ--ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ಹೇಳುವ ಕರ್ತನ ಧ್ವನಿಯು ಅವನಿಗಾಯಿತು. ಆಗ ಮೋಶೆಯು ನಡುಗುತ್ತಾ ಅದನ್ನು ನೋಡುವದಕ್ಕೆ ಧೈರ್ಯವಿಲ್ಲ ದವನಾದನು. ಕರ್ತನು ಅವನಿಗೆ--ನಿನ್ನ ಕಾಲಿನ ಕೆರಗಳನ್ನು ತೆಗೆ; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿ. ನಾನು ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ; ಅವರ ಮೊರೆಯನ್ನು ಕೇಳಿ ಅವರನ್ನು ಬಿಡಿಸುವದಕ್ಕೆ ಇಳಿದು ಬಂದಿದ್ದೇನೆ; ಈಗ ನಿನ್ನನ್ನು ಐಗುಪ್ತ ದೇಶಕ್ಕೆ ಕಳುಹಿಸುತ್ತೇನೆ, ಬಾ ಎಂದು ಹೇಳಿದನು. ಅವರು ಯಾವ ಮೋಶೆಗೆ--ನಿನ್ನನ್ನು ಅಧಿಕಾರಿ ಯನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ಮಾಡಿ ದವರು ಯಾರೆಂದು ಹೇಳಿ ಬೇಡವೆಂದರೋ ಅವ ನನ್ನೇ ದೇವರು ಪೊದೆಯಲ್ಲಿ ಕಾಣಿಸಿಕೊಂಡ ದೂತನ ಕೈಯಿಂದ ಅಧಿಕಾರಿಯನ್ನಾಗಿರುವಂತೆಯೂ ಬಿಡುಗಡೆ ಮಾಡುವವನನ್ನಾಗಿರುವಂತೆಯೂ ಕಳುಹಿಸಿದನು.
- Isaiah 43:2 ಯೆಶಾಯ 43:2ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
- Mark 12:26 ಮಾರ್ಕನು 12:26ಸತ್ತವರು ಎದ್ದು ಬರುವದರ ವಿಷಯವಾಗಿ--ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದನೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ?
- Deuteronomy 33:16 ಧರ್ಮೋಪದೇಶಕಾಂಡ 33:16ಭೂಮಿಯ ಅಮೂಲ್ಯವಾದವುಗಳಿಂದಲೂ ಅದರ ಸಂಪೂರ್ಣತೆಯಿಂದಲೂ ಕರ್ತನ ಕಡೆಯಿಂದ ಆಶೀರ್ವಾದ ಹೊಂದಲಿ; ಪೊದೆಯಲ್ಲಿ ವಾಸವಾಗಿ ದ್ದಾತನ ದಯೆಯು ಯೋಸೇಫನ ತಲೆಯ ಮೇಲೆಯೂ ತನ್ನ ಸಹೋದರರಿಂದ ಪ್ರತ್ಯೇಕವಾದವನ ತಲೆಯ ಮೇಲೆಯೂ ಬರಲಿ.
- Luke 20:37 ಲೂಕನು 20:37ಮೋಶೆಯು ಸಹ ಪೊದೆಯ ಹತ್ತಿರ ಕರ್ತನು ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡು ತ್ತಾರೆಂಬದನ್ನು ವ್ಯಕ್ತಪಡಿಸಿದನು.
- Psalm 66:12 ಕೀರ್ತನೆಗಳು 66:12ಮನುಷ್ಯರು ನಮ್ಮ ತಲೆಗಳ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀ. ನಾವು ಬೆಂಕಿಯಲ್ಲಿಯೂ ನೀರಿನಲ್ಲಿಯೂ ದಾಟಿದೆವು; ಆದರೆ ನೀನು ನಮ್ಮನ್ನು ಐಶ್ವರ್ಯದ ಸ್ಥಳಕ್ಕೆ ಬರಮಾಡಿದ್ದೀ;
- Isaiah 63:9 ಯೆಶಾಯ 63:9ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು.
- Exodus 3:16 ವಿಮೋಚನಕಾಂಡ 3:16ಆತನು--ನೀನು ಹೋಗಿ ಇಸ್ರಾಯೇಲ್ ಹಿರಿಯ ರನ್ನು ಕೂಡಿಸಿ ಅವರಿಗೆ--ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಕರ್ತನು ನನಗೆ ಕಾಣಿಸಿಕೊಂಡು--ನಿಮ್ಮನ್ನೂ ಐಗುಪ್ತದಲ್ಲಿ ನಿಮಗೆ ಮಾಡಿದ್ದನ್ನೂ ನಿಶ್ಚಯವಾಗಿ ನಾನು ನೋಡಿದ್ದೇನೆ.
- Malachi 3:1 ಮಲಾಕಿಯ 3:1ಇಗೋ, ನನ್ನ ದೂತನನ್ನು ನಾನು ಕಳುಹಿಸುತ್ತೇನೆ; ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು; ನೀವು ಹುಡುಕುವ ಕರ್ತನು ಫಕ್ಕನೆ ತನ್ನ ಆಲಯಕ್ಕೆ ಬರುವನು; ನೀವು ಸಂತೋಷಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ.
- Deuteronomy 4:20 ಧರ್ಮೋಪದೇಶಕಾಂಡ 4:20ನಿಮ್ಮನ್ನೇ ಕರ್ತನು ತಕ್ಕೊಂಡು ನೀವು ಈ ದಿನ ಇರುವ ಪ್ರಕಾರ ತನಗೆ ಸ್ವಾಸ್ತ್ಯವಾದ ಜನವಾಗುವ ಹಾಗೆ ಕಬ್ಬಿಣದ ಕುಲುಮೆಯೊಳಗಿಂದ ಅಂದರೆ ಐಗುಪ್ತದಿಂದ ಹೊರಗೆ ಬರಮಾಡಿದ್ದಾನೆ.
- Exodus 3:4–10 ವಿಮೋಚನಕಾಂಡ 3:4–10ಅವನು ನೋಡು ವದಕ್ಕೆ ಹತ್ತಿರ ಬರುವದನ್ನು ಕರ್ತನು ನೋಡಿದಾಗ ದೇವರು ಪೊದೆಯೊಳಗಿಂದ ಅವನಿಗೆ--ಮೋಶೆಯೇ, ಮೋಶೆಯೇ ಎಂದು ಕರೆದನು; ಆಗ ಅವನು--ನಾನು ಇಲ್ಲಿ ಇದ್ದೇನೆ ಅಂದನು. ಆಗ ಆತನು--ಇಲ್ಲಿ ಸವಿಾಪಕ್ಕೆ ಬರಬೇಡ, ನಿನ್ನ ಪಾದಗಳಿಂದ ಕೆರ ಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ ಅಂದನು. ಇದಲ್ಲದೆ ಆತನು ಅವನಿಗೆ--ನಾನು ನಿನ್ನ ತಂದೆಯ ದೇವರು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಆಗಿದ್ದೇನೆ ಎಂದು ಹೇಳಿದನು. ಆಗ ಮೋಶೆಯು ದೇವರನ್ನು ನೋಡುವದಕ್ಕೆ ಭಯ ಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು. ಆಗ ಕರ್ತನು--ಐಗುಪ್ತದಲ್ಲಿರುವ ನನ್ನ ಜನರ ವ್ಯಥೆಯನ್ನು ನಿಶ್ಚಯವಾಗಿಯೂ ಕಂಡಿದ್ದೇನೆ, ಬಿಟ್ಟೀ ಕೆಲಸಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು. ಅವರ ದುಃಖವನ್ನು ಬಲ್ಲೆನು. ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ. ಆದದರಿಂದ ಈಗ ಕೇಳು, ಇಸ್ರಾಯೇಲ್ ಮಕ್ಕಳ ಕೂಗು ನನ್ನ ಬಳಿಗೆ ಬಂದಿತು; ಐಗುಪ್ತ್ಯರು ಅವರನ್ನು ಬಾಧಿಸುವ ಬಾಧೆಯನ್ನು ನಾನು ನೋಡಿದ್ದೇನೆ. ಆದದರಿಂದ ಈಗ ಬಾ, ನಾನು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ಇಸ್ರಾಯೇಲ್ ಮಕ್ಕಳಾದ ನನ್ನ ಜನರನ್ನು ನೀನು ಐಗುಪ್ತದೊಳಗಿಂದ ಹೊರಗೆ ಬರಮಾಡಬೇಕು ಅಂದನು.
- Genesis 16:7–13 ಆದಿಕಾಂಡ 16:7–13ಆಗ ಕರ್ತನ ದೂತನು ಅರಣ್ಯದಲ್ಲಿ ಶೂರಿನ ಮಾರ್ಗದಲ್ಲಿರುವ ಒಂದು ನೀರಿನ ಬುಗ್ಗೆಯ ಬಳಿಯಲ್ಲಿ ಅವಳನ್ನು ಕಂಡು ಸಾರಯಳ ದಾಸಿಯಾದ ಹಾಗರಳೇ, ನೀನು ಎಲ್ಲಿಂದ ಬಂದಿ? ನೀನು ಎಲ್ಲಿಗೆ ಹೋಗುತ್ತೀ ಅಂದನು. ಅವಳು--ನನ್ನ ಯಜಮಾನಿಯಾದ ಸಾರ ಯಳ ಸಮ್ಮುಖದಿಂದ ಓಡಿ ಹೋಗುತ್ತಿದ್ದೇನೆ ಅಂದಳು. ಕರ್ತನ ದೂತನು ಅವಳಿಗೆ--ನಿನ್ನ ಯಜಮಾನಿಯ ಬಳಿಗೆ ಹಿಂತಿರುಗಿ ಹೋಗಿ ಅವಳಿಗೆ ನೀನು ಅಧೀನಳಾಗಿರು ಅಂದನು. ಇದಲ್ಲದೆ ಕರ್ತನ ದೂತನು ಅವಳಿಗೆ--ನಿನ್ನ ಸಂತತಿಯನ್ನು ಬಹಳವಾಗಿ ಹೆಚ್ಚಿಸುವೆನು; ಅದು ಹೆಚ್ಚಾಗುವದರಿಂದ ಅದನ್ನು ಲೆಕ್ಕಿಸುವದಕ್ಕಾಗುವದಿಲ್ಲ ಅಂದನು. ಕರ್ತನ ದೂತನು ಅವಳಿಗೆ--ಇಗೋ, ನೀನು ಗರ್ಭಿಣಿ ಯಾಗಿದ್ದೀ, ನೀನು ಒಬ್ಬ ಮಗನನ್ನು ಹೆರುವಿ; ಅವನಿಗೆ ಇಷ್ಮಾಯೇಲ ಎಂದು ಹೆಸರಿಡಬೇಕು. ಯಾಕಂದರೆ ಕರ್ತನು ನಿನ್ನ ವ್ಯಥೆಯನ್ನು ಕೇಳಿದ್ದಾನೆ. ಅವನು ಕಾಡು ಮನುಷ್ಯನಾಗಿರುವನು; ಎಲ್ಲರಿಗೆ ವಿರೋಧವಾಗಿ ಅವನ ಕೈಯೂ ಅವನಿಗೆ ವಿರೋಧ ವಾಗಿ ಎಲ್ಲರ ಕೈಯೂ ಇರುವದು, ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿ ವಾಸವಾಗಿರುವನು ಅಂದನು. ಹಾಗರಳು ತನ್ನ ಸಂಗಡ ಮಾತನಾಡಿದ ಕರ್ತನಿಗೆ--ನೀನು ನನ್ನನ್ನು ನೋಡುವ ದೇವರು ಎಂದು ಹೆಸರಿಟ್ಟಳು. ಯಾಕಂದರೆ ನನ್ನನ್ನು ನೋಡುವಾ ತನನ್ನು ನಾನು ಇಲ್ಲಿಯೂ ನೋಡುವಂತಾಯಿತಲ್ಲಾ ಎಂದು ಅಂದುಕೊಂಡಳು.