1 Kings · chapter 20 · verse 11
1 Kings 20:11 in Kannada
ಅದಕ್ಕೆ ಇಸ್ರಾಯೇಲಿನ ಅರಸನು ಪ್ರತ್ತ್ಯುತ್ತರವಾಗಿ--ನಡುಕಟ್ಟಿಕೊಳ್ಳುವವನು ಬಿಚ್ಚಿ ಹಾಕುವವನ ಹಾಗೆ ಹೊಗಳಿಕೊಳ್ಳದಿರಲಿ ಎಂದು ಹೇಳು ಅಂದನು.
Adakke israayelina arasanu prattyuttaravaagi--nadukattikolluvavanu bichchi haakuvavana haage hogalikolladirali endu helu andanu.
1 Kings 20:11 in English
- King James Version (KJV)
- And the king of Israel answered and said, Tell [him], Let not him that girdeth on [his harness] boast himself as he that putteth it off.
- World English Bible (WEB)
- The king of Israel answered, “Tell him, ‘Don’t let him who puts on his armor brag like he who takes it off.’”
- American Standard Version (ASV)
- And the king of Israel answered and said, Tell him, Let not him that girdeth on [his armor] boast himself as he that putteth it off.
- Bible in Basic English (BBE)
- And the king of Israel said in answer, Say to him, The time for loud talk is not when a man is putting on his arms, but when he is taking them off.
- Darby Translation (DBY)
- And the king of Israel answered and said, Tell [him], Let not him that girdeth on boast himself as he that putteth off!
- Webster's Bible (WBS)
- And the king of Israel answered and said, Tell [him] , Let not him that girdeth on [his harness] boast himself as he that putteth it off.
- Young's Literal Translation (YLT)
- And the king of Israel answereth and saith, 'Speak ye: let not him who is girding on boast himself as him who is loosing [his armour].'
Read in context
- 9ನೀವು ಅರಸನಾದ ನನ್ನ ಒಡೆಯನಿಗೆ ಹೇಳಬೇಕಾದದ್ದೇನಂದರೆ, ನೀನು ಮೊದಲು ಹೇಳಿದ ಸಮಸ್ತವನ್ನೂ ಮಾಡುವೆನು; ಆದರೆ ಈ ಕಾರ್ಯವನ್ನು ನಾನು ಮಾಡಕೂಡದು ಎಂದು ಹೇಳಿರಿ ಅಂದನು. ದೂತರು ಹೋಗಿ ಈ ಮಾತನ್ನು ಅವನಿಗೆ ಹೇಳಿದರು.
- 10ಆಗ ಬೆನ್ಹದದನು ಕಳುಹಿಸಿ--ನನ್ನನ್ನು ಹಿಂಬಾಲಿಸುವ ಸಮಸ್ತ ಜನರು ಕೈತುಂಬ ತಕ್ಕೊಳ್ಳಲು ಸಮಾರ್ಯದ ಧೂಳು ಸಾಕಾದರೆ ದೇವರುಗಳು ನನಗೆ ಹೀಗೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ ಎಂದು ಅವನಿಗೆ ಹೇಳಿ ಕಳುಹಿಸಿದನು.
- 11ಅದಕ್ಕೆ ಇಸ್ರಾಯೇಲಿನ ಅರಸನು ಪ್ರತ್ತ್ಯುತ್ತರವಾಗಿ--ನಡುಕಟ್ಟಿಕೊಳ್ಳುವವನು ಬಿಚ್ಚಿ ಹಾಕುವವನ ಹಾಗೆ ಹೊಗಳಿಕೊಳ್ಳದಿರಲಿ ಎಂದು ಹೇಳು ಅಂದನು.
- 12ಅವನೂ ರಾಜರೂ ಅವನ ಜೊತೆ ಡೇರೆಗಳಲ್ಲಿ ಕುಡಿಯುತ್ತಿರಲು ಈ ವಾರ್ತೆಯನ್ನು ಕೇಳುತ್ತಲೇ ಅವನು ತನ್ನ ಸೇವಕರಿಗೆ--ಸಿದ್ಧಮಾಡಿರಿ ಅಂದನು. ಹಾಗೆಯೆ ಪಟ್ಟಣಕ್ಕೆ ವಿರೋಧವಾಗಿ ಯುದ್ಧಕ್ಕೆ ಸಿದ್ಧಮಾಡಿದರು.
- 13ಆಗ ಇಗೋ, ಒಬ್ಬ ಪ್ರವಾದಿಯು ಇಸ್ರಾಯೇ ಲಿನ ಅರಸನಾದ ಅಹಾಬನ ಬಳಿಗೆ ಬಂದು--ಈ ದೊಡ್ಡ ಗುಂಪನ್ನು ನೋಡಿದಿಯೋ? ಇಗೋ, ನಾನೇ ಕರ್ತನೆಂದು ನೀನು ತಿಳಿಯುವ ಹಾಗೆ ಈ ಹೊತ್ತು ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನೆಂದು ಕರ್ತನು ಹೇಳುತ್ತಾನೆ ಅಂದನು.
Cross references
- Proverbs 27:1 ಜ್ಞಾನೋಕ್ತಿಗಳು 27:1ನಾಳೆಯ ವಿಷಯವಾಗಿ ಕೊಚ್ಚಿಕೊಳ್ಳಬೇಡ; ಒಂದು ದಿನವು ಯಾವದನ್ನು ಸಂಭವಿಸುವಂತೆ ಮಾಡುತ್ತದೋ ಅದು ನಿನಗೆ ತಿಳಿ ಯದು.
- Isaiah 10:15–16 ಯೆಶಾಯ 10:15–16ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿ ಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಅಥವಾ ಬೆತ್ತವು ತಾನು ಮರವಲ್ಲ ಎಂಬಂತೆ ತನ್ನನ್ನು ತಾನು ಎತ್ತಿಕೊಂಡ ಹಾಗೆ ಇರುವದು. ಆದಕಾರಣ ಸೈನ್ಯಗಳ ಕರ್ತನಾದ ಕರ್ತನು ಅವನ ಕೊಬ್ಬಿನಲ್ಲಿ ಕ್ಷಯವನ್ನುಂಟುಮಾಡುವನು; ದಹಿ ಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭ ವದ ಕೆಳಗೆ ಹತ್ತಿಕೊಳ್ಳುವದು.
- Ecclesiastes 9:11 ಪ್ರಸಂಗಿ 9:11ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನೋಡಿದ್ದೇನಂದರೆ, ವೇಗಿಗಳಿಗೆ ಓಟವೂ ಪರಾಕ್ರಮ ಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ರೊಟ್ಟಿಯೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವದಿಲ್ಲ. ಕಾಲವೂ ಗತಿಯೂ ಅವರೆಲ್ಲರಿಗೆ ಸಂಭವಿ ಸುತ್ತವೆ.
- 1 Samuel 17:44–47 1 ಸಮುವೇಲನು 17:44–47ದಾವೀದನಿಗೆ--ನೀನು ನನ್ನ ಬಳಿಗೆ ಬಾ; ನಿನ್ನ ಮಾಂಸವನ್ನು ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು ಅಂದನು. ಆಗ ದಾವೀದನು ಫಿಲಿಷ್ಟಿಯನಿಗೆ--ನೀನು ಕತ್ತಿ ಈಟಿಯ ಗುರಾಣಿಯ ಸಂಗಡ ನನ್ನ ಬಳಿಗೆ ಬರುತ್ತೀ; ಆದರೆ ನೀನು ನಿಂದಿಸಿದ ಇಸ್ರಾಯೇ ಲಿನ ಸೈನ್ಯಗಳ ದೇವರಾದಂಥ ಸೈನ್ಯಗಳ ಕರ್ತನ ಹೆಸರಿ ನಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ. ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
- 1 Samuel 14:6 1 ಸಮುವೇಲನು 14:6ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.
- Matthew 26:33–35 ಮತ್ತಾಯನು 26:33–35ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ-- ಎಲ್ಲರೂ ನಿನ್ನ ವಿಷಯದಲ್ಲಿ ಅಭ್ಯಂತರಪಟ್ಟರೂ ನಾನು ಎಂದಿಗೂ ಅಭ್ಯಂತರಪಡುವದಿಲ್ಲ ಅಂದನು. ಯೇಸು ಅವ ನಿಗೆ--ಈ ರಾತ್ರಿಯಲ್ಲಿ ಹುಂಜ ಕೂಗುವದಕ್ಕಿಂತ ಮುಂಚೆ ಮೂರು ಸಾರಿ ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು. ಅದಕ್ಕೆ ಪೇತ್ರನು ಆತನಿಗೆ-- ನಿನ್ನೊಂದಿಗೆ ಸಾಯಬೇಕಾಗಿದ್ದರೂ ನಾನು ನಿನ್ನನ್ನು ಅಲ್ಲಗಳೆಯುವ ದೇ ಇಲ್ಲ ಅಂದನು. ಅದೇ ಪ್ರಕಾರ ಶಿಷ್ಯರೆಲ್ಲರೂ ಹೇಳಿದರು.
- Matthew 26:75 ಮತ್ತಾಯನು 26:75ಆಗ ಪೇತ್ರನು--ಹುಂಜವು ಕೂಗುವದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ಅಲ್ಲಗಳೆ ಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.
- 1 Samuel 14:12–13 1 ಸಮುವೇಲನು 14:12–13ಠಾಣದ ಮನುಷ್ಯರು ಯೋನಾತಾನನಿಗೂ ಅವನ ಆಯುಧ ಹೊರುವವನಿಗೂ--ನಮ್ಮ ಬಳಿಗೆ ಬನ್ನಿರಿ; ನಿಮಗೆ ಕಾರ್ಯ ತೋರಿಸುತ್ತೇವೆ ಎಂದು ಪ್ರತ್ಯುತ್ತರಕೊಟ್ಟರು. ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ವನಿಗೆ--ನನ್ನ ಹಿಂದೆ ಏರಿ ಬಾ; ಕರ್ತನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಟ್ಟನು ಅಂದನು. ಯೋನಾತಾನನು ತನ್ನ ಕೈಗಳಿಂದಲೂ ಕಾಲುಗಳಿಂದ ಲೂ ಹತ್ತಿದನು. ಅವನ ಆಯುಧಗಳನ್ನು ಹೊರುವ ವನು ಅವನ ಹಿಂದೆ ಹತ್ತಿದನು. ಆಗ ಪಿಲಿಷ್ಟಿಯರು ಯೋನಾತಾನನ ಮುಂದೆ ಬಿದ್ದರು. ಅವನ ಆಯುಧ ಗಳನ್ನು ಹೊರುವವನು ಅವನ ಹಿಂದೆ ಕೊಲ್ಲುತ್ತಾ ಹೋದನು.