1 Kings · chapter 21 · verse 8
1 Kings 21:8 in Kannada
ಹೀಗೆ ಅವಳು ಅಹಾ ಬನ ಹೆಸರಿನಲ್ಲಿ ಪತ್ರಗಳನ್ನು ಬರೆದು ಅವುಗಳಿಗೆ ಅವನ ಮುದ್ರೆ ಹಾಕಿ ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯ ರಿಗೂ ಗೌರವಸ್ಥರಿಗೂ ಕಳುಹಿಸಿದಳು.
Heege avalu ahaa bana hesarinalli patragalannu baredu avugalige avana mudre haaki aa patragalannu naabotana sangada avana pattanadalli vaasavaagiruva hiriya rigoo gauravastharigoo kaluhisidalu.
1 Kings 21:8 in English
- King James Version (KJV)
- So she wrote letters in Ahab’s name, and sealed [them] with his seal, and sent the letters unto the elders and to the nobles that [were] in his city, dwelling with Naboth.
- World English Bible (WEB)
- So she wrote letters in Ahab’s name and sealed them with his seal, and sent the letters to the elders and to the nobles who were in his city, who lived with Naboth.
- American Standard Version (ASV)
- So she wrote letters in Ahab’s name, and sealed them with his seal, and sent the letters unto the elders and to the nobles that were in his city, [and] that dwelt with Naboth.
- Bible in Basic English (BBE)
- So she sent a letter in Ahab's name, stamped with his stamp, to the responsible men and the chiefs who were in authority with Naboth.
- Darby Translation (DBY)
- And she wrote a letter in Ahab's name, and sealed it with his seal, and sent the letter to the elders and to the nobles that were in his city, dwelling with Naboth.
- Webster's Bible (WBS)
- So she wrote letters in Ahab's name, and sealed [them] with his seal, and sent the letters to the elders and to the nobles that [were] in his city, dwelling with Naboth.
- Young's Literal Translation (YLT)
- And she writeth letters in the name of Ahab, and sealeth with his seal, and sendeth the letters unto the elders, and unto the freemen, who are in his city, those dwelling with Naboth,
Read in context
- 6ಅವನು ಅವಳಿಗೆ--ನಾನು ಇಜ್ರೇಲ್ಯನಾದ ನಾಬೋ ತನ ಸಂಗಡ ಮಾತನಾಡಿ--ನಿನ್ನ ದ್ರಾಕ್ಷೇ ತೋಟವನ್ನು ನನಗೆ ಕ್ರಯಕ್ಕೆ ಕೊಡು; ಇಲ್ಲವೆ ನಿನಗೆ ಮನಸ್ಸಿದ್ದರೆ ಅದಕ್ಕೆ ಬದಲಾಗಿ ಬೇರೆ ದ್ರಾಕ್ಷೇ ತೋಟವನ್ನು ಕೊಡು ವೆನು ಎಂದು ಅವನಿಗೆ ಹೇಳಿದೆನು. ಅದಕ್ಕವನುನನ್ನ ದ್ರಾಕ್ಷೇ ತೋಟವನ್ನು ಕೊಡುವದಿಲ್ಲ ಅಂದನು ಎಂದು ಹೇಳಿದನು.
- 7ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ--ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೊ? ಎದ್ದು ರೊಟ್ಟಿತಿನ್ನು; ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೇಲ್ಯನಾದ ನಾಬೋತನ ದ್ರಾಕ್ಷೇ ತೋಟವನ್ನು ನಿನಗೆ ಕೊಡುವೆನು ಅಂದಳು.
- 8ಹೀಗೆ ಅವಳು ಅಹಾ ಬನ ಹೆಸರಿನಲ್ಲಿ ಪತ್ರಗಳನ್ನು ಬರೆದು ಅವುಗಳಿಗೆ ಅವನ ಮುದ್ರೆ ಹಾಕಿ ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯ ರಿಗೂ ಗೌರವಸ್ಥರಿಗೂ ಕಳುಹಿಸಿದಳು.
- 9ಅವಳು ಪತ್ರಗಳಲ್ಲಿ--ನೀವು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರದ ಸ್ಥಳದಲ್ಲಿ ನಿಲ್ಲಿಸಿ--
- 10ನೀನು ದೇವರನ್ನೂ ಅರಸನನ್ನೂ ದೂಷಿ ಸಿದಿ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ಬೆಲಿಯಾಳನ ಮಕ್ಕಳಾದ ಇಬ್ಬರು ಮನುಷ್ಯರನ್ನು ನಿಲ್ಲಿಸಿರಿ; ತರುವಾಯ ಅವನನ್ನು ಹೊರಗೆ ತಕ್ಕೊಂಡು ಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ ಎಂದು ಬರೆದಿತ್ತು.
Cross references
- Ezra 4:7–8 ಎಜ್ರನು 4:7–8ಆದರೆ ಅರ್ತಷಸ್ತನ ದಿವಸಗಳಲ್ಲಿ ಬಿಷ್ಲಾಮನೂ ಮಿತ್ರದಾತನೂ ಟಾಬೆಯೇಲನೂ ಮಿಕ್ಕಾದ ಅವರ ಜತೆಗಾರರೂ ಪಾರಸಿಯರ ಅರಸನಾದ ಆರ್ತಷಸ್ತನಿಗೆ ಒಂದು ಪತ್ರ ಬರೆದರು. ಬರೆದ ಆ ಪತ್ರವು ಅರಾಮ್ಯರ ಭಾಷೆಯಲ್ಲಿ ಟೀಕಿಸಲ್ಪಟ್ಟು, ಅರಾಮ್ಯರ ಅಕ್ಷರದಲ್ಲಿ ಬರೆಯಲ್ಪಟ್ಟಿತ್ತು. ಮುಖ್ಯಾಧಿಕಾರಿಯಾದ ರೆಹೂಮನೂ ಶಾಸ್ತ್ರಿ ಯಾದ ಶಿಂಷೈಯೂ ಯೆರೂಸಲೇಮಿಗೆ ವಿರೋಧವಾಗಿ ಅರಸನಾದ ಆರ್ತಷಸ್ತನಿಗೆ--
- Deuteronomy 16:18–19 ಧರ್ಮೋಪದೇಶಕಾಂಡ 16:18–19ಕರ್ತನು ನಿನಗೆ ನಿನ್ನ ಗೋತ್ರಗಳ ಪ್ರಕಾರ ಕೊಡುವ ನಿನ್ನ ಎಲ್ಲಾ ಬಾಗಲುಗಳಲ್ಲಿ ನಿನಗೆ ನ್ಯಾಯಾ ಧಿಪತಿಗಳನ್ನೂ ಅಧಿಕಾರಿಗಳನ್ನೂ ಇಟ್ಟುಕೊಳ್ಳಬೇಕು; ಅವರು ಜನಕ್ಕೆ ನೀತಿಯಿಂದ ನ್ಯಾಯತೀರಿಸಬೇಕು. ನೀನು ನ್ಯಾಯವನ್ನು ಓರೆಮಾಡಬಾರದು,ನೀನು ಮುಖದಾಕ್ಷಿಣ್ಯ ಮಾಡಬಾರದು; ಇಲ್ಲವೆ ಲಂಚ ತೆಗೆದುಕೊಳ್ಳಬಾರದು; ಲಂಚವು ಜ್ಞಾನಿಗಳ ಕಣ್ಣುಗಳನ್ನು ಕುರುಡುಮಾಡಿ ನೀತಿವಂತರ ಮಾತು ಗಳನ್ನು ಡೊಂಕುಮಾಡುತ್ತದೆ.
- Ezra 4:11 ಎಜ್ರನು 4:11ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿಯು--ಅರ್ತಷಸ್ತರಾಜರಿಗೆ, ಖಾವಂದರ ಸೇವಕ ರಾದ ಹೊಳೆಯ ಈಚೆಯವರು.
- 1 Kings 20:7 1 ಅರಸುಗಳು 20:7ಆಗ ಇಸ್ರಾಯೇಲಿನ ಅರಸನು ದೇಶದ ಹಿರಿಯರನ್ನೆಲ್ಲಾ ಕರೆಯಿಸಿ ಅವರಿಗೆಇವನು ಕೇಡನ್ನು ಹುಡುಕುತ್ತಾನೆಂದು ದಯಮಾಡಿ ತಿಳುಕೊಂಡು ನೋಡಿರಿ. ಯಾಕಂದರೆ ಅವನು ನನ್ನ ಹೆಂಡತಿಯರಿಗೋಸ್ಕರ ಮಕ್ಕಳಿಗೋಸ್ಕರವೂ ಬೆಳ್ಳಿಗೋ ಸ್ಕರವೂ ನನ್ನ ಬಂಗಾರಕ್ಕೋಸ್ಕರವೂ ನನ್ನ ಬಳಿಗೆ ಕಳುಹಿಸಿದಾಗ ನಾನು ಕೊಡುವದಿಲ್ಲವೆಂದು ಅವನಿಗೆ ಹೇಳಿದ್ದಿಲ್ಲ ಅಂದನು.
- 2 Chronicles 32:17 2 ಪೂರ್ವಕಾಲವೃತ್ತಾಂತ 32:17ಇದಲ್ಲದೆ ಅವನು ಇಸ್ರಾಯೇಲಿನ ದೇವರಾದ ಕರ್ತನನ್ನು ನಿಂದಿಸುವ ದಕ್ಕೂ ಆತನಿಗೆ ವಿರೋಧವಾಗಿ ಮಾತನಾಡುವದಕ್ಕೂ ಪತ್ರಗಳನ್ನು ಬರೆದನು. ಏನಂದರೆ--ಇತರ ದೇಶಗಳ ಜನಾಂಗಗಳ ದೇವರುಗಳು ತಮ್ಮ ಜನರನ್ನು ನನ್ನ ಕೈಯೊಳಗಿಂದ ಹೇಗೆ ಬಿಡಿಸಲಿಲ್ಲವೋ ಹಾಗೆಯೇ ಹಿಜ್ಕೀಯನ ದೇವರು ತನ್ನ ಜನರನ್ನು ನನ್ನ ಕೈಯೊಳಗಿಂದ ಬಿಡಿಸಲಾರನು.
- Esther 8:8–13 ಎಸ್ತೇರಳು 8:8–13ನೀವು ಯೆಹೂದ್ಯರಿ ಗೋಸ್ಕರ ಅರಸನ ಹೆಸರಿನಿಂದ ನಿಮ್ಮ ದೃಷ್ಟಿಗೆ ಒಳ್ಳೇ ದಾಗಿ ತೋರುವ ಹಾಗೆ ಬರೆದು ಅರಸನ ಉಂಗುರ ದಿಂದ ಮುದ್ರೆಯನ್ನು ಹಾಕಿರಿ. ಯಾಕಂದರೆ ಅರಸನ ಹೆಸರಿನಿಂದ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟ ಬರಹವನ್ನು ಯಾರೂ ಈಗ ರದ್ದು ಮಾಡುವದಕ್ಕಾಗುವದಿಲ್ಲ ಅಂದನು. ಆಗ ಅದೇ ಕಾಲದಲ್ಲಿ ಶೀವಾನ್ ಎಂಬುವ ಮೂರನೇ ತಿಂಗಳ ಇಪ್ಪತ್ತು ಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಮೊರ್ದೆಕೈ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಸಕಲ ಯೆಹೂದ್ಯರಿಗೂ ಭಾರತ ಮೊದಲು ಗೊಂಡು ಕೂಷಿನ ವರೆಗೂ ಇರುವ ನೂರಇಪ್ಪತ್ತೇಳು ಪ್ರಾಂತ್ಯಗಳ ಯಜಮಾನರಿಗೂ ಅಧಿಪತಿಗಳಿಗೂ ಪ್ರಧಾನರಿಗೂ ಪ್ರತಿ ಪ್ರಾಂತ್ಯಕ್ಕೆ ಅದರ ಬರಹದ ಪ್ರಕಾರವೂ ಪ್ರತಿ ಜನರಿಗೆ ಅವರ ಭಾಷೆಯ ಪ್ರಕಾ ರವೂ ಯೆಹೂದ್ಯರಿಗೆ ಅವರ ಬರಹದ ಪ್ರಕಾರವೂ ಅವರ ಭಾಷೆಯ ಪ್ರಕಾರವೂ ಬರೆಯಲ್ಪಟ್ಟಿತು. ಅವನು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆದು ಅರಸನ ಉಂಗುರದಿಂದ ಮುದ್ರೆ ಹಾಕಿ ಪತ್ರಗಳನ್ನು, ಕುದುರೆಗಳನ್ನು, ಸವಾರಿ ಹತ್ತಿ ಕೊಂಡಿದ್ದ ಅಂಚೆಯವರ ಮೂಲಕ ಹೇಸರ ಕತ್ತೆಗಳ ಮೇಲೆಯೂ ಒಂಟೆಗಳ ಮೇಲೆಯೂ ವೇಗವಾಗಿ ಓಡುವ ಎಳೇ ಒಂಟೆಗಳ ಮೇಲೆಯೂ ಕಳುಹಿಸಿದನು. ಅವುಗಳಲ್ಲಿ ಅರಸನು ಯೆಹೂದ್ಯರಿಗೆ ಕೊಟ್ಟದ್ದೇನಂದರೆ--ಅರಸ ನಾದ ಅಹಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿ, ಒಂದು ದಿನದಲ್ಲಿ ಅಡಾರ್ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಅವರು ಪ್ರತಿ ಪಟ್ಟಣದಲ್ಲಿ ಕೂಡಿಕೊಂಡು ತಮ್ಮ ಪ್ರಾಣಕ್ಕೋಸ್ಕರ ಎದ್ದು ಆ ಪ್ರಾಂತ್ಯದ ಜನರ ಸೈನ್ಯದಲ್ಲಿ ಯಾರಾದರೂ ಅವರಿಗೆ ವಿರೋಧವಾಗಿ ಎದ್ದರೆ ಅವರನ್ನು, ಚಿಕ್ಕವ ರನ್ನೂ ಸ್ತ್ರೀಯರನ್ನೂ ಕೂಡ ಸಂಹರಿಸುವದಕ್ಕೂ ಕೊಂದುಹಾಕುವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅಪ್ಪಣೆ ಕೊಟ್ಟನು. ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿಗೆಮುಯ್ಯಿ ಮಾಡಲು ಆ ದಿನಕ್ಕೆ ಅವರು ಸಿದ್ಧವಾಗಿರುವ ಹಾಗೆ ಈ ಆಜ್ಞಾಪತ್ರದ ಪ್ರತಿಯು ಪ್ರಾಂತ್ಯ, ಪ್ರಾಂತ್ಯದಲ್ಲಿ ಸಕಲ ಜನರಿಗೂ ಸಾರಿ ಹೇಳ ಲ್ಪಟ್ಟಿತು.
- 1 Kings 21:1 1 ಅರಸುಗಳು 21:1ಇವುಗಳ ತರುವಾಯ ಏನಾಯಿತಂದರೆ, ಇಜ್ರೆಲಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿಯಲ್ಲಿ ಇಜ್ರೆಲ್ಯನಾದ ನಾಬೋತನಿಗೆ ಒಂದು ದ್ರಾಕ್ಷೇ ತೋಟವಿತ್ತು.
- 2 Kings 10:1–7 2 ಅರಸುಗಳು 10:1–7ಸಮಾರ್ಯದಲ್ಲಿ ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳು ಇದ್ದದರಿಂದ ಯೇಹುವು ಸಮಾರ್ಯದಲ್ಲಿರುವ ಇಜ್ರೇಲಿನ ಪ್ರಧಾನರಿಗೂ ಹಿರಿ ಯರಿಗೂ ಅಹಾಬನ ಮಕ್ಕಳನ್ನು ಪಾಲಿಸುವವರಿಗೂ ಪತ್ರಗಳನ್ನು ಬರೆದು ಸಮಾರ್ಯಕ್ಕೆ ಕಳುಹಿಸಿ-- ನಿಮ್ಮ ಯಜಮಾನನ ಕುಮಾರರು ನಿಮ್ಮ ಬಳಿಯಲ್ಲಿ ಇದ್ದಾರೆ; ಇದಲ್ಲದೆ ರಥಗಳೂ ಕುದುರೆಗಳೂ ಕೋಟೆಯೂ ಆಯುಧಗಳೂ ನಿಮಗೆ ಉಂಟು. ಆದದರಿಂದ ಈ ಪತ್ರವು ನಿಮ್ಮ ಬಳಿಗೆ ಬಂದಾಗ ನೀವು ನಿಮ್ಮ ಯಜ ಮಾನನ ಕುಮಾರರಲ್ಲಿ ಉತ್ತಮನಾಗಿರುವ ಮತ್ತು ಸಮರ್ಥನಾಗಿರುವವನನ್ನು ನೋಡಿಕೊಂಡು ಅವ ನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕೂಡ್ರಿಸಿ ನಿಮ್ಮ ಯಜಮಾನನ ಮನೆಯವರಿಗೋಸ್ಕರ ಯುದ್ಧ ಮಾಡಿರಿ ಎಂದು ತಿಳಿಸಿದನು. ಆದರೆ ಅವರು ಬಹಳವಾಗಿ ಭಯಪಟ್ಟು--ಇಗೋ, ಇಬ್ಬರು ಅರಸು ಗಳು ಅವನ ಮುಂದೆ ನಿಲ್ಲಲಾರದೆ ಹೋದರು; ನಾವು ನಿಲ್ಲುವದು ಹೇಗೆ ಅಂದರು. ಆಗ ಮನೆಯ ಮೇಲೆ ಇರುವವನೂ ಪಟ್ಟಣದ ಮೇಲೆ ಇರುವವನೂ ಹಿರಿಯರೂ ಮಕ್ಕಳನ್ನು ಪೋಷಿಸುವವರೂ ಯೇಹು ವಿಗೆ--ನಾವು ನಿನ್ನ ಸೇವಕರು; ನೀನು ನಮಗೆ ಹೇಳುವ ದನ್ನೆಲ್ಲಾ ಮಾಡುತ್ತೇವೆ; ನಾವು ಯಾವನನ್ನಾದರೂ ಅರಸನಾಗಲು ಮಾಡುವದಿಲ್ಲ; ನಿನ್ನ ದೃಷ್ಟಿಗೆ ಒಳ್ಳೇದಾಗಿ ರುವದನ್ನು ಮಾಡು ಎಂದು ಹೇಳಿ ಕಳುಹಿಸಿದರು. ಆಗ ಅವನು ಅವರಿಗೆ ಎರಡನೇ ಸಾರಿ ಪತ್ರವನ್ನು ಬರೆದು--ನೀವು ನನ್ನವರಾಗಿದ್ದು ನನ್ನ ಮಾತು ಕೇಳುವ ವರಾಗಿದ್ದರೆ ನಿಮ್ಮ ಯಜಮಾನನ ಮಕ್ಕಳಾಗಿರುವ ಮನು ಷ್ಯರ ತಲೆಗಳನ್ನು ತಕ್ಕೊಂಡು ನಾಳೆ ಇಷ್ಟು ಹೊತ್ತಿಗೆ ಇಜ್ರೇಲಿಗೆ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದನು. ಅರಸನ ಮಕ್ಕಳಾದ ಎಪ್ಪತ್ತು ಮಂದಿ ಮಕ್ಕಳು ತಮ್ಮನ್ನು ಪೋಷಿಸುವ ಪಟ್ಟಣದ ಪ್ರಮುಖರ ಬಳಿಯಲ್ಲಿ ಇದ್ದರು. ಈ ಪತ್ರವು ಅವರ ಬಳಿಗೆ ಬಂದಾಗ ಏನಾಯಿತಂದರೆ, ಅವರು ಅರಸನ ಮಕ್ಕಳನ್ನು ಹಿಡಿದು ಎಪ್ಪತ್ತು ಮಂದಿಯನ್ನು ಕೊಂದು ಅವರ ತಲೆಗಳನ್ನು ಪುಟ್ಟಿಗಳಲ್ಲಿಟ್ಟು ಇಜ್ರೇಲಿನಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು.
- Numbers 11:16 ಅರಣ್ಯಕಾಂಡ 11:16ಕರ್ತನು ಮೋಶೆಗೆ ಹೇಳಿದ್ದೇನಂದರೆ--ಜನರ ಹಿರಿಯರೆಂದೂ ಅವರ ಮೇಲಿನ ಉದ್ಯೋಗಸ್ಥರೆಂದೂ ನೀನು ತಿಳಿದುಕೊಂಡಂಥ ಇಸ್ರಾಯೇಲ್ಯರ ಹಿರಿಯರೊ ಳಗೆ ಎಪ್ಪತ್ತು ಮಂದಿಯನ್ನು ನನ್ನ ಬಳಿಗೆ ಕೂಡಿಸಿ ಸಭೆಯ ಗುಡಾರದ ಕಡೆಗೆ ಕರಕೊಂಡು ಬಾ. ಅವರು ಅಲ್ಲಿ ನಿನ್ನ ಸಂಗಡ ನಿಂತಿರಲಿ.
- Deuteronomy 21:1–9 ಧರ್ಮೋಪದೇಶಕಾಂಡ 21:1–9ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯ ವಾಗಿ ಕೊಡುವ ದೇಶದಲ್ಲಿ ಯಾವನಾ ದರೂ ಹತನಾಗಿ ಹೊಲದಲ್ಲಿ ಸಿಕ್ಕಿರಲಾಗಿ ಅವನನ್ನು ಯಾರು ಹೊಡೆದರೆಂದು ತಿಳಿಯದೆ ಹೋದರೆ ನಿನ್ನ ಹಿರಿಯರೂ ನ್ಯಾಯಾಧಿಪತಿಗಳೂ ಹೊರಗೆ ಹೋಗಿ ಆ ಹತವಾದವನ ಸುತ್ತಲಿರುವ ಪಟ್ಟಣಗಳ ವರೆಗೂ ಅಳತೆಮಾಡಬೇಕು. ಹತನಾದವನಿಗೆ ಸವಿಾಪವಾದ ಊರು ಯಾವದೋ ಆ ಊರಿನ ಹಿರಿಯರು ಕೆಲಸ ಮಾಡದಂಥ, ನೊಗದಲ್ಲಿ ಎಳೆದಂಥ, ಒಂದು ಕಡಸನ್ನು ತಮಗೆ ತಕ್ಕೊಳ್ಳಬೇಕು. ಆ ಮೇಲೆ ಆ ಊರಿನ ಹಿರಿಯರು ಆ ಮಣಕವನ್ನು ನಿತ್ಯ ಹರಿಯುವ ಹಳ್ಳದ ಬಳಿಗೆ ಬೇಸಾಯವಾಗದಂಥ, ಬೀಜಹಾಕದಂಥ, ಸ್ಥಳಕ್ಕೆ ತಕ್ಕೊಂಡು ಹೋಗಿ ಅಲ್ಲಿ ಹಳ್ಳದಲ್ಲಿ ಮಣಕದ ಕುತ್ತಿಗೆಯನ್ನು ಕೊಯ್ಯಬೇಕು. ಆ ಮೇಲೆ ಲೇವಿಯ ಕುಮಾರರಾದ ಯಾಜಕರು ಹತ್ತಿರ ಬರಬೇಕು; ಅವರನ್ನು ನಿನ್ನ ದೇವರಾದ ಕರ್ತನು ತನಗೆ ಸೇವೆಮಾಡುವದಕ್ಕೂ ಕರ್ತನ ಹೆಸರಿನಲ್ಲಿ ಆಶೀರ್ವಾದ ಕೊಡುವದಕ್ಕೂ ಆದುಕೊಂಡಿದ್ದಾನೆ; ಅವರ ಮಾತಿನಿಂದ ಎಲ್ಲಾ ವಿವಾದ ಗಳಿಗೂ ಎಲ್ಲಾ ಪೆಟ್ಟುಗಳಿಗೂ ತೀರ್ಪು ಆಗಬೇಕು. ಆ ಮೇಲೆ ಹತನಾದವನಿಗೆ ಸವಿಾಪವಾಗಿರುವ ಆ ಊರಿನ ಹಿರಿಯರೆಲ್ಲರು ಹಳ್ಳದಲ್ಲಿ ಕೊಯ್ದ ಮಣಕದ ಮೇಲೆ ಕೈಗಳನ್ನು ತೊಳಕೊಂಡು ಉತ್ತರಕೊಟ್ಟು ಹೇಳತಕ್ಕದ್ದೇನಂದರೆ--ನಮ್ಮ ಕೈಗಳು ಈ ರಕ್ತವನ್ನು ಚೆಲ್ಲಲಿಲ್ಲ; ನಮ್ಮ ಕಣ್ಣುಗಳು ಅದನ್ನು ನೋಡಲಿಲ್ಲ. ಓ ಕರ್ತನೇ, ನೀನು ವಿಮೋಚಿಸಿದ ನಿನ್ನ ಜನರಾದ ಇಸ್ರಾಯೇಲ್ಯರಿಗೆ ಕರುಣೆಯುಳ್ಳವನಾಗಿರು. ನಿನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ನಿರ್ದೋಷವಾದ ರಕ್ತಾಪರಾಧವನ್ನು ಹೊರಿಸಬೇಡ ಎಂಬದೇ. ಆ ರಕ್ತಾಪರಾಧವು ಅವರಿಗೆ ಕ್ಷಮಿಸಲ್ಪಡುವದು. ಈ ಪ್ರಕಾರ ನೀನು ಕರ್ತನ ಮುಂದೆ ಸರಿಯಾದದ್ದನ್ನು ಮಾಡಿದರೆ ರಕ್ತಾಪರಾಧವನ್ನು ನಿನ್ನಿಂದ ತೆಗೆದುಹಾಕುವಿ.
- Nehemiah 6:5 ನೆಹೆಮೀಯ 6:5ಐದನೇ ಸಾರಿ ಸನ್ಬಲ್ಲಟನು ತನ್ನ ಸೇವಕನ ಕೈ ಯಲ್ಲಿ ತೆರೆದಿರುವ ಪತ್ರವನ್ನು ಕಳುಹಿಸಿದನು.
- Esther 3:12–15 ಎಸ್ತೇರಳು 3:12–15ಆಗ ಮೊದಲನೇ ತಿಂಗಳ ಹದಿಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಹಾಮಾನನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಪ್ರತಿ ಪ್ರಾಂತ್ಯದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತ್ಯದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅದರದರ ಬರಹದ ಪ್ರಕಾರವಾಗಿಯೂ ಜನರ ಪ್ರತಿಯೊಬ್ಬರ ಭಾಷೆಯ ಪ್ರಕಾರವಾಗಿಯೂ ಬರೆಯಲ್ಪಟ್ಟಿತು. ಅದು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟಿತು. ಒಂದೇ ದಿನದಲ್ಲಿ ಅಂದರೆ ಅಡಾರ್ ತಿಂಗಳೆಂಬ ಹನ್ನೆರಡನೇ ತಿಂಗಳ ಹದಿಮೂರನೇ ದಿನದಲ್ಲಿ ಹಿರಿಯರೂ ಕಿರಿಯರೂ ಮಕ್ಕಳೂ ಸ್ತ್ರೀಯರೂ ಸಹಿತವಾಗಿ ಎಲ್ಲಾ ಯೆಹೂದ್ಯರನ್ನು ಸಂಹರಿಸುವದಕ್ಕೂ ಕೊಂದುಹಾಕು ವದಕ್ಕೂ ನಾಶಮಾಡುವದಕ್ಕೂ ಅವರ ಆಸ್ತಿಯನ್ನು ಕೊಳ್ಳೆಹೊಡೆಯುವದಕ್ಕೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಅಂಚೆಯವರ ಮೂಲಕ ಪತ್ರಿಕೆಗಳು ಕಳುಹಿಸ ಲ್ಪಟ್ಟವು. ಅವರು ಆ ದಿನಕ್ಕೆ ಸಿದ್ಧವಾಗಿರುವ ಹಾಗೆ ಪ್ರತಿ ಪ್ರಾಂತ್ಯದಲ್ಲಿ ಕಟ್ಟಳೆಯಾಗಿ ಬರೆದ ಪತ್ರಿಕೆಯು ಎಲ್ಲಾ ಜನಗಳಿಗೆ ಪ್ರಸಿದ್ಧ ಮಾಡಲ್ಪಟ್ಟಿತು.ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು. ಅಂಚೆ ಯವರು ಅರಸನ ಆಜ್ಞೆಯಿಂದ ತ್ವರೆಯಾಗಿ ಹೊರಟು ಹೋದರು. ಶೂಷನ್ ಅರಮನೆಯಲ್ಲಿ ಆ ಆಜ್ಞೆಯು ಕೊಡಲ್ಪಟ್ಟಿತು. ಅರಸನೂ ಹಾಮಾನನೂ ಕುಡಿಯಲು ಕುಳಿತುಕೊಂಡರು. ಆದರೆ ಶೂಷನ್ ಪಟ್ಟಣವು ತಳ ಮಳಗೊಂಡಿತು.
Original words (Hebrew)
- wrote · H3789כָּתַב kâthab
- letters · H5612סֵפֶר çêpher
- Ahab’s · H256אַחְאָב ʼAchʼâb
- name · H8034שֵׁם shêm
- sealed · H2856חָתַם châtham
- seal · H2368חוֹתָם chôwthâm
- sent · H7971שָׁלַח shâlach
- letters · H5612סֵפֶר çêpher
- elders · H2205זָקֵן zâqên
- nobles · H2715חֹר chôr
- city · H5892עִיר ʻîyr
- dwelling · H3427יָשַׁב yâshab
- Naboth · H5022נָבוֹת Nâbôwth