1 Kings · chapter 22 · verse 38
1 Kings 22:38 in Kannada
ಆ ರಥವು ಸಮಾರ್ಯದ ಕೆರೆಯಲ್ಲಿ ತೊಳೆಯಲ್ಪಡುವಾಗ ಕರ್ತನು ಹೇಳಿದ ವಾಕ್ಯದ ಪ್ರಕಾರವೇ ನಾಯಿಗಳು ಅವನ ರಕ್ತವನ್ನು ನೆಕ್ಕಿದವು; ಹಾಗೆಯೇ ಅವರು ಕವಚವನ್ನು ತೊಳೆದರು.
Aa rathavu samaaryada kereyalli toleyalpaduvaaga kartanu helida vaakyada prakaarave naayigalu avana raktavannu nekkidavu; haageye avaru kavachavannu toledaru.
1 Kings 22:38 in English
- King James Version (KJV)
- And [one] washed the chariot in the pool of Samaria; and the dogs licked up his blood; and they washed his armour; according unto the word of the LORD which he spake.
- World English Bible (WEB)
- They washed the chariot by the pool of Samaria; and the dogs licked up his blood where the prostitutes washed themselves, according to the LORD’s word which he spoke.
- American Standard Version (ASV)
- And they washed the chariot by the pool of Samaria; and the dogs licked up his blood (now the harlots washed themselves [there]); according unto the word of Jehovah which he spake.
- Bible in Basic English (BBE)
- And the war-carriage was washed by the pool of Samaria, which was the bathing-place of the loose women, and the dogs were drinking his blood there, as the Lord had said.
- Darby Translation (DBY)
- And one washed the chariot in the pool of Samaria; and the dogs licked his blood, where the harlots bathed: according to the word of Jehovah, which he had spoken.
- Webster's Bible (WBS)
- And [one] washed the chariot in the pool of Samaria; and the dogs licked up his blood; and they washed his armor; according to the word of the LORD which he spoke.
- Young's Literal Translation (YLT)
- and [one] rinseth the chariot by the pool of Samaria, and the dogs lick his blood — when the armour they had washed — according to the word of Jehovah that He spake.
Read in context
- 36ಸೂರ್ಯ ಮುಣುಗುವಾಗ ಪ್ರತಿ ಮನುಷ್ಯನು ತನ್ನ ತನ್ನ ಪಟ್ಟಣಕ್ಕೂ ಪ್ರತಿ ಮನುಷ್ಯನು ತನ್ನ ತನ್ನ ದೇಶಕ್ಕೂ ಹೋಗಲಿ ಎಂದು ದಂಡಿನಲ್ಲಿ ಪ್ರಕಟ ಮಾಡಲ್ಪಟ್ಟಿತು.
- 37ಹಾಗೆಯೇ ಅರಸನು ಸತ್ತುಹೋಗಿ ಸಮಾರ್ಯಕ್ಕೆ ತರಲ್ಪಟ್ಟಾಗ ಅವರು ಅರಸನನ್ನು ಸಮಾ ರ್ಯದಲ್ಲಿ ಹೂಣಿಟ್ಟರು.
- 38ಆ ರಥವು ಸಮಾರ್ಯದ ಕೆರೆಯಲ್ಲಿ ತೊಳೆಯಲ್ಪಡುವಾಗ ಕರ್ತನು ಹೇಳಿದ ವಾಕ್ಯದ ಪ್ರಕಾರವೇ ನಾಯಿಗಳು ಅವನ ರಕ್ತವನ್ನು ನೆಕ್ಕಿದವು; ಹಾಗೆಯೇ ಅವರು ಕವಚವನ್ನು ತೊಳೆದರು.
- 39ಆದರೆ ಅಹಾಬನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಅವನು ಕಟ್ಟಿಸಿದ ದಂತದ ಮನೆಯೂ ಎಲ್ಲಾ ಪಟ್ಟಣಗಳೂ ಇಸ್ರಾಯೇಲಿನ ಅರಸುಗಳ ವೃತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ?
- 40ಹೀಗೆಯೇ ಅಹಾಬನು ತನ್ನ ಪಿತೃಗಳ ಸಂಗಡ ಮಲಗಿದನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಆಳಿದನು.
Cross references
- 1 Kings 21:19 1 ಅರಸುಗಳು 21:19ನೀನು ಅವನಿಗೆನೀನು ಕೊಂದುಹಾಕಿ ಸ್ವಾಧೀನಮಾಡಿಕೊಂಡಿಯಲ್ಲಾ. ಆದದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕು ವವು ಎಂದು ಕರ್ತನು ಹೇಳುತ್ತಾನೆಂದು ಅಂದನು.
- Matthew 24:35 ಮತ್ತಾಯನು 24:35ಆಕಾಶವೂ ಭೂಮಿಯೂ ಅಳಿದುಹೋಗುವವು; ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
- Joshua 23:14–15 ಯೆಹೋಶುವ 23:14–15ಇಗೋ, ನಾನು ಇಂದು ಭೂಲೋಕದವರೆಲ್ಲರ ಮಾರ್ಗವಾಗಿ ಹೋಗುತ್ತೇನೆ. ನಿಮ್ಮ ದೇವರಾದ ಕರ್ತನು ನಿಮಗೋಸ್ಕರ ಹೇಳಿದ ಎಲ್ಲಾ ಒಳ್ಳೇ ಮಾತುಗಳಲ್ಲಿ ಒಂದು ಮಾತಾದರೂ ತಪ್ಪಲಿಲ್ಲವೆಂದು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣಪ್ರಾಣದಿಂದಲೂ ಅರಿತಿದ್ದೀರಿ; ಅವು ಗಳಲ್ಲಿ ಒಂದು ಮಾತಾದರೂ ತಪ್ಪದೆ ಅವೆಲ್ಲಾ ನಿಮಗೆ ಸಂಭವಿಸಿದವು. ಈಗ ನಿಮ್ಮ ದೇವರಾದ ಕರ್ತನು ನಿಮಗೆ ವಾಗ್ದಾನಮಾಡಿದ ಒಳ್ಳೇ ಕಾರ್ಯಗಳೆಲ್ಲಾ ನಿಮಗೆ ಹೇಗೆ ಸಂಭವಿಸಿದವೋ ಹಾಗೆಯೇ ನಿಮ್ಮ ದೇವರಾದ ಕರ್ತನು ನಿಮಗೆ ಆಜ್ಞಾಪಿಸಿದ ತನ್ನ ಆಜ್ಞೆ ಗಳನ್ನು ನೀವು ವಿಾರಿ, ಅನ್ಯದೇವರುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನಿಮ್ಮ ದೇವರಾದ ಕರ್ತನು ನಿಮಗೆ ಕೊಟ್ಟ ಈ ಒಳ್ಳೇ ದೇಶದಿಂದ ನಿಮ್ಮನ್ನು ನಾಶಮಾಡುವ ಮಟ್ಟಿಗೂ ಕರ್ತನು ನಿಮ್ಮ ಮೇಲೆ ಸಕಲ ಕೇಡುಗಳನ್ನು ಬರಮಾಡುವನು.ಕರ್ತನ ಕೋಪವು ನಿಮ್ಮ ಮೇಲೆ ಉರಿಯುವದು; ಆತನು ನಿಮಗೆ ಕೊಟ್ಟ ಒಳ್ಳೇ ದೇಶದಿಂದ ನೀವು ಬೇಗನೆ ನಾಶವಾಗಿ ಹೋಗುವಿರಿ ಅಂದನು.
- Jeremiah 44:21–23 ಯೆರೆಮೀಯ 44:21–23ನೀವೂ ನಿಮ್ಮ ಪಿತೃಗಳೂ ನಿಮ್ಮ ಅರಸರೂ ನಿಮ್ಮ ಪ್ರಧಾನರೂ ದೇಶದ ಜನರೂ ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಸುಟ್ಟಧೂಪವನ್ನೇ ಕರ್ತನು ಜ್ಞಾಪಕ ಮಾಡಿಕೊಂಡದ್ದು ಅಲ್ಲವೋ? ಆತನ ಮನಸ್ಸಿಗೆ ಬಂದದ್ದು ಅದೇ ಅಲ್ಲವೋ? ಹೀಗೆ ನಿಮ್ಮ ಕೃತ್ಯಗಳ ಕೆಟ್ಟತನವನ್ನೂ ನೀವು ಮಾಡಿದ ಅಸಹ್ಯಗಳನ್ನೂ ಕರ್ತನು ಇನ್ನು ತಾಳಲಾರದ್ದದರಿಂದ ನಿಮ್ಮ ದೇಶವು ಈ ದಿನ ಇರುವ ಪ್ರಕಾರ ನಿವಾಸಿಗಳಿಲ್ಲದೆ ಹಾಳಾಗಿಯೂ ವಿಸ್ಮಯ ವಾಗಿಯೂ ಶಾಪವಾಗಿಯೂ ಇದೆ. ನೀವು ಧೂಪಸುಟ್ಟು ಕರ್ತನಿಗೆ ವಿರೋಧವಾಗಿ ಪಾಪ ಮಾಡಿ ಕರ್ತನ ಶಬ್ದವನ್ನು ಕೇಳದೆ ಆತನ ನ್ಯಾಯಪ್ರಮಾಣ ದಲ್ಲಾದರೂ ಆತನ ನಿಯಮಗಳಲ್ಲಾದರೂ ಆತನ ಸಾಕ್ಷಿಗಳಲ್ಲಾದರೂ ನಡೆದು ವಿಧೇಯರಾಗದೆ ಇದದರಿಂದ ಈ ಕೇಡು ಈ ದಿನ ಇರುವ ಹಾಗೆ ನಿಮಗೆ ಸಂಭವಿಸಿದೆ.
- Isaiah 48:3–5 ಯೆಶಾಯ 48:3–5ಆರಂಭದಲ್ಲೇ ಹಳೇ ಸಂಗತಿಗಳನ್ನು ನಾನು ಪ್ರಕಟಿಸಿದ್ದೇನೆ. ಅವು ನನ್ನ ಬಾಯಿಂದ ಹೊರಟವು ಮತ್ತು ನಾನು ಅವುಗಳನ್ನು ತೋರಿಸಿದ್ದೇನೆ. ನಾನು ತಟ್ಟನೆ ನಡೆಸಲು ಅವು ನೆರವೇರಿದವು. ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ಹಿತ್ತಾಳೆ ಎಂದು ನಾನು ತಿಳಿದುಕೊಂಡಿದ್ದೇನೆ. ಆದದರಿಂದಲೇ ಈ ಕಾರ್ಯ ಗಳನ್ನು ನನ್ನ ವಿಗ್ರಹವು ನಡಿಸಿದೆ, ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನ ಕಾಲದಲ್ಲಿಯೇ ತಿಳಿಸಿದೆನು.
- Isaiah 44:25–26 ಯೆಶಾಯ 44:25–26ಸುಳ್ಳುಗಾರರ ಗುರುತುಗಳನ್ನು ನಿರರ್ಥಕಮಾಡುವವನೂ ಕಣಿ ಹೇಳು ವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಬುದ್ದಿಹೀನ ವಾಗ ಮಾಡುವವನೂ ತನ್ನ ಸೇವಕನ ಮಾತು ಗಳನ್ನು ಸ್ಥಾಪಿಸುವವನೂ ತನ್ನ ದೂತರ ಆಲೋ ಚನೆಯನ್ನು ಪೂರೈಸುವವನೂ ಯೆರೂಸಲೇಮಿಗೆ--ನೀನು ನಿವಾಸವಾಗುವಿ; ಯೆಹೂದಪಟ್ಟಣಗಳಿಗೆ--ಕಟ್ಟಲ್ಪಡುವಿ; ಅದರ ಹಾಳು ಸ್ಥಳಗಳನ್ನು ನೆಟ್ಟಗೆ ಮಾಡುವೆನು ಎಂದು ಅನ್ನುವವನೂ
- Zechariah 1:4–6 ಜೆಕರ್ಯ 1:4–6ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ. ನಿಮ್ಮ ಪಿತೃ ಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ? ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.