1 Kings · chapter 4 · verse 30
1 Kings 4:30 in Kannada
ಸೊಲೊಮೋನನ ಜ್ಞಾನವು ಮೂಡಣ ದೇಶದ ಎಲ್ಲಾ ಜನರ ಜ್ಞಾನಕ್ಕಿಂತಲೂ ಐಗುಪ್ತದ ಎಲ್ಲಾ ಜನರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು.
Solomonana jnyaanavu moodana deshada ellaa janara jnyaanakkintaloo aiguptada ellaa janara jnyaanakkintaloo adhikavaagittu.
1 Kings 4:30 in English
- King James Version (KJV)
- And Solomon’s wisdom excelled the wisdom of all the children of the east country, and all the wisdom of Egypt.
- World English Bible (WEB)
- Solomon’s wisdom excelled the wisdom of all the children of the east and all the wisdom of Egypt.
- American Standard Version (ASV)
- And Solomon’s wisdom excelled the wisdom of all the children of the east, and all the wisdom of Egypt.
- Bible in Basic English (BBE)
- And Solomon's wisdom was greater than the wisdom of all the people of the East and all the wisdom of Egypt.
- Darby Translation (DBY)
- And Solomon's wisdom excelled the wisdom of all the sons of the east, and all the wisdom of Egypt.
- Webster's Bible (WBS)
- And Solomon's wisdom excelled the wisdom of all the children of the east country, and all the wisdom of Egypt.
- Young's Literal Translation (YLT)
- and the wisdom of Solomon is greater than the wisdom of any of the sons of the east, and than all the wisdom of Egypt;
Read in context
- 28ಹೀಗೆಯೇ ಪ್ರತಿ ಮನುಷ್ಯನು ತನ್ನ ವಂತಿನ ಪ್ರಕಾರ ಕುದುರೆಗಳಿಗೋಸ್ಕರವೂ ಸವಾರಿ ಒಂಟೆಗಳಿ ಗೋಸ್ಕರವೂ ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ ಹುಲ್ಲನ್ನೂ ತಂದನು.
- 29ಇದಲ್ಲದೆ ದೇವರು ಸೊಲೊ ಮೋನನಿಗೆ ಸಮುದ್ರ ತೀರದಲ್ಲಿರುವ ಮರಳಿನ ಹಾಗೆ ಅತ್ಯಧಿಕವಾಗಿ ಜ್ಞಾನ ವಿವೇಕಗಳನ್ನೂ ಮನೋವಿಶಾಲ ತೆಯನ್ನೂ ಕೊಟ್ಟನು.
- 30ಸೊಲೊಮೋನನ ಜ್ಞಾನವು ಮೂಡಣ ದೇಶದ ಎಲ್ಲಾ ಜನರ ಜ್ಞಾನಕ್ಕಿಂತಲೂ ಐಗುಪ್ತದ ಎಲ್ಲಾ ಜನರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು.
- 31ಎಜ್ರಾಹಿಯಾದ ಎತಾನನು, ಮಹೋಲನನ ಮಕ್ಕಳಾದ ಹೆಮಾನನು, ಕಲ್ಕೋಲನು, ದರ್ದಾವನು ಮೊದಲಾದ ಎಲ್ಲಾ ಜನ ರಿಗಿಂತ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ಜನಾಂಗಗಳಲ್ಲಿ ಅವನ ಕೀರ್ತಿ ಇತ್ತು.
- 32ಅವನು ಮೂರು ಸಾವಿರ ಸಾಮತಿಗಳನ್ನು ಹೇಳಿದನು; ಅವನ ಹಾಡುಗಳು ಸಾವಿರದ ಐದು.
Cross references
- Daniel 5:11–12 ದಾನಿಯೇಲನು 5:11–12ನಿನ್ನ ರಾಜ್ಯದಲ್ಲಿ ಪರಿಶುದ್ಧ ದೇವರುಗಳ ಆತ್ಮವುಳ್ಳ ಒಬ್ಬ ಮನುಷ್ಯನಿದ್ದಾನೆ; ದೇವ ರುಗಳ ಜ್ಞಾನಕ್ಕೆ ಸಮಾನವಾದ ಜ್ಞಾನವೂ ವಿವೇಕವೂ ಬುದ್ಧಿಯೂ ಪ್ರಕಾಶವೂ ನಿನ್ನ ತಂದೆಯ ಕಾಲದಲ್ಲಿ ಅವನೊಳಗೆ ಕಂಡುಬಂದವು. ನಿನ್ನ ತಂದೆಯಾದ ನೆಬೂಕದ್ನೆಚ್ಚರ ಅರಸನು ಅವನನ್ನು ಮಂತ್ರಗಾರರಿಗೂ ಜ್ಯೋತಿಷ್ಯರಿಗೂ ಕಸ್ದೀಯರಿಗೂ ಶಕುನಗಾರರಿಗೂ ಅಧಿಕಾರಿಯನ್ನಾಗಿ ನೇಮಿಸಿದನು. ಬೆಲ್ಶೆಚ್ಚರನೆಂಬ ಹೆಸರನ್ನು ಅರಸನಿಂದ ಪಡೆದ ಆ ದಾನಿಯೇಲನಲ್ಲಿ ಕನಸುಗಳ ಅರ್ಥವನ್ನು ಹೇಳುವದಕ್ಕೂ ಕಠಿಣವಾದ ಸಂಗತಿಗಳನ್ನು ತಿಳಿಸುವದಕ್ಕೂ ಮರ್ಮಗಳನ್ನು ಬಿಚ್ಚುವ ದಕ್ಕೂ ಉತ್ತಮ ಆತ್ಮವೂ ಜ್ಞಾನವೂ ವಿವೇಕವೂ ಸಿಕ್ಕಿ ದವು ಅಂದಳು. ಈಗ ಆ ದಾನಿಯೇಲನನ್ನು ಕರೆಯಿ ಸಿದರೆ ಅವನು ಈ ಬರಹದ ಅರ್ಥವನ್ನು ವಿವರಿಸುವನು ಅಂದಳು.
- Genesis 25:6 ಆದಿಕಾಂಡ 25:6ಅಬ್ರಹಾಮನಿಗೆ ಇದ್ದ ಉಪಪತ್ನಿಗಳ ಮಕ್ಕಳಿಗೆ ಅಬ್ರಹಾಮನು ದಾನಗಳನ್ನು ಕೊಟ್ಟು ತಾನು ಜೀವಿಸುತ್ತಿರುವಾಗಲೇ ಅವರನ್ನು ತನ್ನ ಮಗನಾದ ಇಸಾಕನ ಬಳಿಯಿಂದ ಪೂರ್ವದಿಕ್ಕಿನ ಕಡೆಗೆ ಮೂಡಣ ದೇಶಕ್ಕೆ ಕಳುಹಿಸಿದನು.
- Job 1:3 ಯೋಬನು 1:3ಅವನ ಸಂಪತ್ತು--ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡು ಎತ್ತುಗಳು, ಐನೂರು ಹೆಣ್ಣು ಕತ್ತೆಗಳೂ ಮತ್ತು ಬಹು ಸೇವಕರ ಸಮೂಹವಿತ್ತು. ಹೀಗೆ ಆ ಮನುಷ್ಯನು ಎಲ್ಲಾ ಮೂಡಣದವರಿಗಿಂತಲೂ ಬಹು ಸ್ವಾಸ್ತ್ಯವುಳ್ಳವ ನಾಗಿದ್ದನು.
- Acts 7:22 ಅಪೊಸ್ತಲರ ಕೃತ್ಯಗಳು 7:22ಮೋಶೆಯು ಐಗುಪ್ತದೇಶದವರ ಸರ್ವಜ್ಞಾನವನ್ನು ಕಲಿತವನಾಗಿ ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥ ನಾದನು.
- Daniel 1:20 ದಾನಿಯೇಲನು 1:20ಅರಸನು ಅವರ ಹತ್ತಿರ ವಿಚಾರಿಸಿದ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರ ರಿಗಿಂತಲೂ ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡರು.ದಾನಿಯೇಲನು ರಾಜ ನಾದ ಕೋರೆಷನ ಆಳಿಕೆಯ ಮೊದಲನೆಯ ವರುಷದ ತನಕ ಸನ್ನಿಧಿಸೇವಕನಾಗಿಯೇ ಇದ್ದನು.
- Isaiah 19:11–12 ಯೆಶಾಯ 19:11–12ಚೋಯನಿನ ಪ್ರಧಾನರು ನಿಜ ವಾಗಿ ಮೂರ್ಖರು, ಫರೋಹನ ಜ್ಞಾನವುಳ್ಳ ಸಲಹೆ ಗಾರರ ಆಲೋಚನೆಯು ಬುದ್ಧಿಹೀನವೇ. ನಾನು ಜ್ಞಾನಿಗಳ ಮಗನೆಂದು ಪುರಾತನ ರಾಜವಂಶಿಯನು ಎಂದು ನೀವು ಫರೋಹನಿಗೆ ಹೇಳುವದು ಹೇಗೆ? ಅವರು ಎಲ್ಲಿದ್ದಾರೆ? ನಿನ್ನ ಜ್ಞಾನಿಗಳು ಎಲ್ಲಿ? ಅವರು ನಿನಗೆ ಹೇಳಲಿ. ಸೈನ್ಯಗಳ ಕರ್ತನು ಐಗುಪ್ತ್ಯರ ವಿಷಯವಾಗಿ ಉದ್ದೇಶಿಸಿದ್ದನ್ನು ಅವರು ತಿಳಿದು ಕೊಳ್ಳಲಿ.
- Matthew 2:1 ಮತ್ತಾಯನು 2:1ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ, ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು --
- Matthew 2:16 ಮತ್ತಾಯನು 2:16ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ
- Daniel 4:7 ದಾನಿಯೇಲನು 4:7ಆಗ ಮಂತ್ರಗಾರರು, ಜೋತಿಷ್ಯರು, ಕಸ್ದೀಯರು, ಶಕುನಗಾರರು ಒಳಗೆ ಬಂದರು; ನಾನು ಕನಸನ್ನು ಅವರಿಗೆ ತಿಳಿಸಿದೆನು; ಆದರೆ ಅವರು ಅದರ ಅರ್ಥವನ್ನು ನನಗೆ ತಿಳಿಸಲಿಲ್ಲ.