1 Kings · chapter 4 · verse 5
1 Kings 4:5 in Kannada
ನಾತಾ ನನ ಮಗನಾದ ಅಜರ್ಯನು ಅಧಿಪತಿಗಳ ಮೇಲ್ವಿಚಾ ರಕನು; ನಾತಾನನ ಮಗನಾದ ಜಾಬೂದನು ಮುಖ್ಯ ಸ್ಥನೂ ಅರಸನ ಸ್ನೇಹಿತನೂ ಆಗಿದ್ದನು.
Naataa nana maganaada ajaryanu adhipatigala melvichaa rakanu; naataanana maganaada jaaboodanu mukhya sthanoo arasana snehitanoo aagiddanu.
1 Kings 4:5 in English
- King James Version (KJV)
- And Azariah the son of Nathan [was] over the officers: and Zabud the son of Nathan [was] principal officer, [and] the king’s friend:
- World English Bible (WEB)
- Azariah the son of Nathan was over the officers; Zabud the son of Nathan was chief minister, the king’s friend;
- American Standard Version (ASV)
- and Azariah the son of Nathan was over the officers; and Zabud the son of Nathan was chief minister, [and] the king’s friend;
- Bible in Basic English (BBE)
- Azariah, the son of Nathan, was over those in authority in the different divisions of the country; Zabud, the son of Nathan, was priest and the king's friend;
- Darby Translation (DBY)
- and Azariah the son of Nathan was over the superintendents; and Zabud the son of Nathan was principal officer, the king's friend;
- Webster's Bible (WBS)
- And Azariah the son of Nathan [was] over the officers: and Zabud the son of Nathan [was] principal officer, [and] the king's friend:
- Young's Literal Translation (YLT)
- and Azariah son of Nathan [is] over the officers; and Zabud son of Nathan [is] minister, friend of the king;
Read in context
- 3ಶೀಷನ ಮಕ್ಕಳಾದ ಎಲೀಹೊರೇಫನೂ ಅಹೀ ಯಾಹು ಶಾಸ್ತ್ರಿಗಳು;
- 4ಅಹೀಲೂದನ ಮಗನಾದ ಯೆಹೋಷಾಫಾಟನು ಲೇಖಕನು. ಯೆಹೋಯಾದಾ ವನ ಮಗನಾದ ಬೆನಾಯನು ಸೈನ್ಯದ ಅಧಿಪತಿಯು; ಚಾದೋಕನೂ ಎಬ್ಯಾತಾರನೂ ಯಾಜಕರು.
- 5ನಾತಾ ನನ ಮಗನಾದ ಅಜರ್ಯನು ಅಧಿಪತಿಗಳ ಮೇಲ್ವಿಚಾ ರಕನು; ನಾತಾನನ ಮಗನಾದ ಜಾಬೂದನು ಮುಖ್ಯ ಸ್ಥನೂ ಅರಸನ ಸ್ನೇಹಿತನೂ ಆಗಿದ್ದನು.
- 6ಅಹೀಷಾ ರನು ಮನೆಯ ಮೇಲ್ವಿಚಾರಕನು; ಅಬ್ದನ ಮಗನಾದ ಅದೋನೀರಾಮನು ಕಂದಾಯದ ಮೇಲ್ವಿಚಾರಕನು.
- 7ಇದಲ್ಲದೆ ಅರಸನಿಗೂ ಅವನ ಮನೆಗೂ ಆಹಾರವನ್ನು ಸಿದ್ಧಮಾಡಿಸುವದಕ್ಕೊಸ್ಕರ ಸೊಲೊಮೋನನಿಗೆ ಸಮಸ್ತ ಇಸ್ರಾಯೇಲಿನ ಮೇಲೆ ಹನ್ನೆರಡು ಮಂದಿ ಅಧಿಪತಿಗಳಿದ್ದರು. ಅವನವನು ವರುಷದಲ್ಲಿ ತನ್ನ ವಂತಿನ ತಿಂಗಳು ಬಂದಾಗ ಆಹಾರವನ್ನು ಸಿದ್ಧಮಾಡಿ ದನು.
Cross references
- 2 Samuel 16:16 2 ಸಮುವೇಲನು 16:16ಅರ್ಕೀಯನಾದ ಹೂಷೈ ಯೆಂಬ ದಾವೀದನ ಸ್ನೇಹಿತನು ಅಬ್ಷಾಲೋಮನ ಬಳಿಗೆ ಬಂದು--ಅರಸನು ಬಾಳಲಿ, ಅರಸನು ಬಾಳಲಿ ಅಂದನು.
- 1 Chronicles 27:33 1 ಪೂರ್ವಕಾಲವೃತ್ತಾಂತ 27:33ಅರಸನ ಆಲೋಚನೆಗಾರನು ಅಹೀತೋಫೆಲನು, ಅರಸನ ಸ್ನೇಹಿತನು ಅರ್ಕೀಯನಾದ ಹೂಷೈಯು.ಅಹೀ ತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ ಎಬ್ಯಾತಾರನೂ. ಅರಸನ ಸೈನ್ಯದ ಅಧಿಪತಿಯು ಯೋವಾಬನು.
- 2 Samuel 15:37 2 ಸಮುವೇಲನು 15:37ಹಾಗೆಯೇ ದಾವೀದನ ಸ್ನೇಹಿತನಾದ ಹೂಷೈ ಪಟ್ಟಣಕ್ಕೆ ಬಂದನು; ಅಬ್ಷಾಲೋಮನು ಯೆರೂಸಲೇಮಿಗೆ ಬಂದನು.
- 2 Samuel 12:1–15 2 ಸಮುವೇಲನು 12:1–15ಕರ್ತನು ನಾತಾನನನ್ನು ದಾವೀದನ ಬಳಿಗೆ ಕಳುಹಿಸಿದನು. ಅವನು ಅವನ ಬಳಿಗೆ ಬಂದು ಹೇಳಿದ್ದೇನಂದರೆ--ಒಂದು ಪಟ್ಟಣದಲ್ಲಿ ಇಬ್ಬರು ಮನುಷ್ಯರಿದ್ದರು; ಒಬ್ಬನು ಐಶ್ವರ್ಯವಂತನು, ಮತ್ತೊಬ್ಬನು ಬಡವನು. ಐಶ್ವರ್ಯವಂತನಿಗೆ ಕುರಿ ಪಶುಗಳು ಬಹಳವಾಗಿದ್ದವು. ಆದರೆ ಬಡವನಿಗೆ ತಾನು ಕೊಂಡುಕೊಂಡ ಒಂದು ಚಿಕ್ಕ ಹೆಣ್ಣುಕುರಿ ಮರಿಯ ಹೊರತು ಬೇರೇನೂ ಇರಲಿಲ್ಲ. ಅದು ಅವನ ಸಂಗಡವೂ ಅವನ ಮಕ್ಕಳ ಸಂಗಡವೂ ಬೆಳೆದು ಅವನೊಡನೆ ಆಹಾರ ತಿಂದು ಅವನ ಪಾತ್ರೆಯಲ್ಲಿ ಕುಡಿದು ಅವನ ಮಗ್ಗುಲಲ್ಲಿ ಮಲಗಿಕೊಂಡು ಅವನಿಗೆ ಕುಮಾರ್ತೆಯ ಹಾಗಿತ್ತು. ಐಶ್ವರ್ಯವುಳ್ಳ ಆ ಮನು ಷ್ಯನ ಬಳಿಗೆ ಒಬ್ಬ ಪ್ರಯಾಣಿಕನು ಬಂದಾಗ ಪ್ರಯಾಣ ಮಾಡುವವನಿಗೆ ಅಡಿಗೆಯನ್ನು ಮಾಡಿಸುವದಕ್ಕೆ ತನ್ನ ಕುರಿ ಪಶುಗಳಲ್ಲಿ ಒಂದನ್ನೂ ತಕ್ಕೊಳ್ಳ ಮನಸ್ಸಿಲ್ಲದೆ ಆ ಬಡವನ ಕುರಿಯನ್ನು ತಕ್ಕೊಂಡು ಅದನ್ನು ತನ್ನ ಬಳಿಗೆ ಬಂದ ಆ ಮನುಷ್ಯನಿಗೆ ಅಡಿಗೆಯನ್ನು ಮಾಡಿಸಿ ದನು ಅಂದನು. ಆಗ ದಾವೀದನು ಆ ಮನುಷ್ಯನ ಮೇಲೆ ಬಹಳ ಕೋಪಿಸಿಕೊಂಡು ನಾತಾನನಿಗೆ--ಕರ್ತನ ಜೀವದಾಣೆ, ಇದನ್ನು ಮಾಡಿದ ಆ ಮನುಷ್ಯನು ನಿಜವಾಗಿಯೂ ಸಾಯಬೇಕು. ಅವನು ಕರುಣೆ ಯಿಲ್ಲದೆ ಈ ಕಾರ್ಯವನ್ನು ಮಾಡಿದ್ದರಿಂದ ಆ ಕುರಿ ಗೋಸ್ಕರ ನಾಲ್ಕರಷ್ಟು ತಿರಿಗಿ ಕೊಡಬೇಕು ಅಂದನು. ಆಗ ನಾತಾನನು ದಾವೀದನಿಗೆ--ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು--ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು ನಿನ್ನ ಯಜಮಾನನ ಮನೆಯನ್ನೂ ನಿನ್ನ ಯಜಮಾನನ ಹೆಂಡತಿಯರನ್ನೂ ನಿನ್ನ ಎದೆಗೆ ಕೊಟ್ಟು ಇಸ್ರಾಯೇಲಿನ ಮನೆಯನ್ನೂ ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು. ಇದು ಸಾಲದೆ ಇದ್ದರೆ ಇಂಥಿಂಥವುಗಳನ್ನು ನಿನಗೆ ಇನ್ನೂ ಕೊಡುತ್ತಿದ್ದೆನು. ನೀನು ಕರ್ತನ ದೃಷ್ಟಿಗೆ ಈ ಕೆಟ್ಟಕಾರ್ಯವನ್ನು ಮಾಡುವ ಹಾಗೆ ಆತನ ಆಜ್ಞೆ ಯನ್ನು ತಿರಸ್ಕರಿಸಿದ್ದೇನು? ನೀನು ಹಿತ್ತಿಯನಾದ ಊರೀಯನನ್ನು ಕತ್ತಿಯಿಂದ ಕೊಲ್ಲಿಸಿ ಅವನ ಹೆಂಡತಿ ಯನ್ನು ನಿನಗೆ ಹೆಂಡತಿಯಾಗಿ ತೆಗೆದುಕೊಂಡಿ; ಇದಲ್ಲದೆ ಅವನನ್ನು ಅಮ್ಮೋನನ ಮಕ್ಕಳ ಕತ್ತಿಯಿಂದ ಕೊಂದು ಹಾಕಿಸಿದಿ. ಈಗ ನೀನು ನನ್ನನ್ನು ತಿರಸ್ಕರಿಸಿ ಹಿತ್ತಿಯ ನಾದ ಊರೀಯನ ಹೆಂಡತಿಯನ್ನು ನಿನಗೆ ಹೆಂಡತಿ ಯಾಗಿ ತೆಗೆದುಕೊಂಡದ್ದರಿಂದ ಕತ್ತಿಯು ಎಂದಿಗೂ ನಿನ್ನ ಮನೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳುತ್ತಾನೆ. ಕರ್ತನು--ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಸಂಗಡ ಮಲಗುವನು. ನೀನು ಅದನ್ನು ಮರೆಯಲ್ಲಿ ಮಾಡಿದಿ; ಆದರೆ ನಾನು ಈ ಕಾರ್ಯವನ್ನು ಇಸ್ರಾಯೇಲ್ಯರೆಲ್ಲರ ಮುಂದೆಯೂ ಸೂರ್ಯನ ಮುಂದೆಯೂ ಮಾಡುವೆನು ಅಂದನು. ಆಗ ದಾವೀದನು ನಾತಾನನಿಗೆ--ನಾನು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆನು ಅಂದನು. ನಾತಾನನು ದಾವೀದನಿಗೆ--ನೀನು ಸಾಯದಹಾಗೆ ಕರ್ತನು ನಿನ್ನ ಪಾಪವನ್ನು ಪರಿಹರಿಸಿದನು. ಹೇಗಿ ದ್ದರೂ ಈ ಕಾರ್ಯದಿಂದ ನೀನು ಕರ್ತನ ಶತ್ರುಗಳಿಗೆ ಬಹಳವಾಗಿ ದೇವದೂಷಣೆ ಮಾಡುವಂತೆ ಆಸ್ಪದ ಕೊಟ್ಟ ಕಾರಣ ನಿನಗೆ ಹುಟ್ಟಿದ ಮಗುವು ಸಹ ನಿಶ್ಚಯ ವಾಗಿ ಸಾಯುವದು ಅಂದನು. ಆಗ ನಾತಾನನು ತನ್ನ ಮನೆಗೆ ಹೋದನು.
- 2 Samuel 12:25 2 ಸಮುವೇಲನು 12:25ಪ್ರವಾದಿಯಾದ ನಾತಾ ನನ ಮುಖಾಂತರ ಕರ್ತನ ನಿಮಿತ್ತ ಅವನಿಗೆ ಯೆದೀದ್ಯ ನೆಂದು ಹೆಸರಿಟ್ಟನು.
- Proverbs 22:11 ಜ್ಞಾನೋಕ್ತಿಗಳು 22:11ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
- James 2:23 ಯಾಕೋಬನು 2:23ಹೀಗೆ--ಅಬ್ರಹಾಮನು ದೇವರನ್ನು ನಂಬಿದನು; ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಲ್ಪಟ್ಟಿತು ಎಂಬ ಬರಹವು ಹೇಳುವಂತೆ ನೆರವೇರಿತು. ಅವನು ದೇವರ ಸ್ನೇಹಿತ ನೆಂದು ಕರೆಯಲ್ಪಟ್ಟನು.
- 2 Samuel 20:26 2 ಸಮುವೇಲನು 20:26ಯಾಯಾರಿನವನಾದ ಈರನೂ ದಾವೀದನ ಬಳಿಯಲ್ಲಿ ಮುಖ್ಯ ಅಧಿಪತಿಯಾಗಿದ್ದನು.
- 2 Samuel 19:37–38 2 ಸಮುವೇಲನು 19:37–38ಅಪ್ಪಣೆ ಆದರೆ ನಿನ್ನ ಸೇವಕನಾದ ನಾನು ತಿರಿಗಿ ಹೋಗಿ ನನ್ನ ಪಟ್ಟಣದಲ್ಲಿ ನನ್ನ ತಂದೆ ತಾಯಿಗಳ ಸಮಾಧಿಯ ಬಳಿಯಲ್ಲಿ ಸಾಯುತ್ತೇನೆ. ಆದರೆ ಅರಸನಾದ ನನ್ನ ಒಡೆಯನ ಸಂಗಡ ಇಗೋ, ನಿನ್ನ ಸೇವಕನಾದ ಕಿಮ್ಹಾಮನು ಬರುವನು; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ಅವನಿಗೆ ಮಾಡು ಅಂದನು. ಅರಸನು--ಕಿಮ್ಹಾಮನು ನನ್ನ ಸಂಗಡ ಬರಲಿ; ನಿನ್ನ ದೃಷ್ಟಿಗೆ ಒಳ್ಳೇದಾಗಿರುವದನ್ನು ನಾನು ಅವನಿಗೆ ಮಾಡುವೆನು; ನಿನಗೆ ನನ್ನಿಂದ ಬೇಕಾದದ್ದೆಲ್ಲಾ ಮಾಡುವೆನು ಅಂದನು.
- John 15:14–15 ಯೋಹಾನನು 15:14–15ನಾನು ನಿಮಗೆ ಆಜ್ಞಾಪಿಸಿರುವವುಗಳನ್ನು ಮಾಡಿದರೆ ನೀವು ನನ್ನ ಸ್ನೇಹಿತರಾಗಿರುವಿರಿ. ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳೆಂದು ಕರೆಯುವದಿಲ್ಲ; ಯಾಕಂದರೆ ತನ್ನ ದಣಿಯು ಮಾಡುವಂಥದ್ದು ಆಳಿಗೆ ತಿಳಿಯುವದಿಲ್ಲ; ಆದರೆ ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ; ಯಾಕಂದರೆ ನನ್ನ ತಂದೆಯಿಂದ ಕೇಳಿದವುಗಳನ್ನೆಲ್ಲಾ ನಾನು ನಿಮಗೆ ತಿಳಿಯಪಡಿಸಿದ್ದೇನೆ.
- 2 Samuel 7:2 2 ಸಮುವೇಲನು 7:2ಅರ ಸನು ಪ್ರವಾದಿಯಾದ ನಾತಾನನಿಗೆ--ನೋಡು, ನಾನು ದೇವದಾರುಗಳ ಮನೆಯಲ್ಲಿ ವಾಸವಾಗಿದ್ದೇನೆ; ಆದರೆ ದೇವರ ಮಂಜೂಷವು ತೆರೆಗಳ ಮಧ್ಯದಲ್ಲಿ ವಾಸವಾಗಿದೆ ಅಂದನು.
- John 13:23 ಯೋಹಾನನು 13:23ಶಿಷ್ಯ ರಲ್ಲಿ ಯೇಸು ಪ್ರೀತಿಸಿದ ಒಬ್ಬನು ಆತನ ಎದೆಯ ಮೇಲೆ ಒರಗಿಕೊಂಡಿದ್ದನು.