Proverbs · chapter 22 · verse 11
Proverbs 22:11 in Kannada
ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
Hrudaya shuddhiyannu preetisuvavanige tanna tutigala krupegaagi arasanu avanige snehita naagiruvanu.
Proverbs 22:11 in English
- King James Version (KJV)
- He that loveth pureness of heart, [for] the grace of his lips the king [shall be] his friend.
- World English Bible (WEB)
- He who loves purity of heart and speaks gracefully is the king’s friend.
- American Standard Version (ASV)
- He that loveth pureness of heart, [For] the grace of his lips the king will be his friend.
- Bible in Basic English (BBE)
- He whose heart is clean is dear to the Lord; for the grace of his lips the king will be his friend.
- Darby Translation (DBY)
- He that loveth pureness of heart, upon whose lips is grace, the king is his friend.
- Webster's Bible (WBS)
- He that loveth pureness of heart, [for] the grace of his lips the king [shall be] his friend.
- Young's Literal Translation (YLT)
- Whoso is loving cleanness of heart, Grace [are] his lips, a king [is] his friend.
Read in context
- 9ದಯಾದೃಷ್ಟಿಯುಳ್ಳವನು ಆಶೀ ರ್ವಾದವನ್ನು ಹೊಂದುವನು; ತನಗಿದ್ದ ಆಹಾರದಲ್ಲಿ ಬಡವರಿಗೆ ಕೊಡುತ್ತಾನೆ.
- 10ಪರಿಹಾಸ್ಯ ಮಾಡುವವ ನನ್ನು ಹೊರಗೆ ತಳ್ಳಿಬಿಟ್ಟರೆ ಕಲಹವು ನಿಲ್ಲುವದು; ಹೌದು, ವಿವಾದವೂ ನಿಂದೆಯೂ ನಿಂತುಹೋಗು ವವು.
- 11ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
- 12ಕರ್ತನ ಕಣ್ಣುಗಳು ತಿಳುವಳಿಕೆಯನ್ನು ಕಾಪಾಡುತ್ತವೆ; ಆತನು ದೋಷಿಯ ಮಾತುಗಳನ್ನು ಕೆಡವಿಹಾಕುತ್ತಾನೆ.
- 13ಸೋಮಾರಿಯು--ಹೊರಗೆ ಸಿಂಹವಿದೆ; ಅದು ನನ್ನನ್ನು ಬೀದಿಗಳಲ್ಲಿ ಕೊಂದು ಹಾಕುತ್ತದೆ ಎಂದು ಹೇಳುತ್ತಾನೆ.
Cross references
- Proverbs 16:13 ಜ್ಞಾನೋಕ್ತಿಗಳು 16:13ನೀತಿಯ ತುಟಿಗಳು ಅರಸರ ಆನಂದ. ನ್ಯಾಯ ವಾದದ್ದನ್ನು ಮಾತನಾಡುವವನನ್ನು ಅವರು ಪ್ರೀತಿಸು ತ್ತಾರೆ.
- Matthew 5:8 ಮತ್ತಾಯನು 5:8ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು.
- Psalm 101:6 ಕೀರ್ತನೆಗಳು 101:6ದೇಶದಲ್ಲಿರುವ ನಂಬಿಗಸ್ತರು ನನ್ನ ಸಂಗಡ ವಾಸಿ ಸುವ ಹಾಗೆ ನನ್ನ ಕಣ್ಣುಗಳು ಅವರ ಮೇಲೆ ಅವೆ; ಸಂಪೂರ್ಣವಾದ ಮಾರ್ಗದಲ್ಲಿ ನಡೆದು ಕೊಳ್ಳುವ ವನೇ ನನ್ನನ್ನು ಸೇವಿಸುವನು.
- Proverbs 14:35 ಜ್ಞಾನೋಕ್ತಿಗಳು 14:35ಜ್ಞಾನ ವುಳ್ಳ ಸೇವಕನ ಕಡೆಗೆ ಅರಸನ ದಯೆ ಇದೆ; ನಾಚಿಕೆ ಪಡಿಸುವವನ ಕಡೆಗೆ ಅವನ ರೌದ್ರವಿದೆ.
- Psalm 45:2 ಕೀರ್ತನೆಗಳು 45:2ನೀನು ಮನುಷ್ಯರ ಮಕ್ಕಳಿಗಿಂತ ಅತಿ ಸುಂದರ ನಾಗಿದ್ದೀ; ನಿನ್ನ ತುಟಿಗಳಲ್ಲಿ ಕೃಪೆಯು ಹೊಯಿದದೆ; ಆದದರಿಂದ ದೇವರು ಎಂದೆಂದಿಗೂ ನಿನ್ನನ್ನು ಆಶೀ ರ್ವದಿಸಿದ್ದಾನೆ.
- Ezra 7:6–11 ಎಜ್ರನು 7:6–11ಈ ಎಜ್ರನು ಇಸ್ರಾ ಯೇಲ್ ದೇವರಾಗಿರುವ ಕರ್ತನು ಕೊಟ್ಟ ಮೋಶೆಯ ನ್ಯಾಯಪ್ರಮಾಣದಲ್ಲಿ ನುರಿತ ಶಾಸ್ತ್ರಿಯಾಗಿದ್ದನು. ಇವನ ಮೇಲೆ ಅವನ ದೇವರಾಗಿರುವ ಕರ್ತನ ಕೈ ಇದ್ದ ಪ್ರಕಾರವೇ ಅರಸನು ಇವನಿಗೆ ಕೇಳಿದ್ದನ್ನೆಲ್ಲಾ ಕೊಟ್ಟನು. ಇದಲ್ಲದೆ ಇವನ ಸಂಗಡ ಇಸ್ರಾಯೇಲ್ ಮಕ್ಕಳಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ನೆತಿನಿ ಯರಲ್ಲಿಯೂ ಕೆಲವರು ಅರ್ತಷಸ್ತನ ಆಳಿಕೆಯು ಏಳನೇ ವರುಷದಲ್ಲಿ ಯೆರೂಸಲೇಮಿಗೆ ಹೋದರು. ಅರಸನ ಏಳನೇ ವರುಷದ ಐದನೇ ತಿಂಗಳಲ್ಲಿ ಇವನು ಯೆರೂ ಸಲೇಮಿಗೆ ಬಂದನು. ಇವನು ಮೊದಲನೇ ತಿಂಗಳಿನ ಮೊದಲನೇ ದಿವಸದಲ್ಲಿ ಬಾಬೆಲಿನಿಂದ ಹೋಗುವು ದಕ್ಕೆ ಯತ್ನಿಸಿ ತನ್ನ ದೇವರ ಒಳ್ಳೇ ಕೈ ಅವನ ಮೇಲೆ ಇದ್ದದ್ದರಿಂದ ಅವನ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆರೂಸಲೇಮಿನಲ್ಲಿ ಬಂದು ಸೇರಿದನು. ಎಜ್ರನು ಕರ್ತನ ನ್ಯಾಯಪ್ರಮಾಣವನ್ನು ವಿಚಾರಿ ಸುವದಕ್ಕೂ ಅದರ ಪ್ರಕಾರ ಮಾಡುವದಕ್ಕೂ ಇಸ್ರಾ ಯೇಲಿನಲ್ಲಿ ನೇಮನ್ಯಾಯಗಳನ್ನು ಕಲಿಸುವದಕ್ಕೂ ತನ್ನ ಹೃದಯವನ್ನು ಸಿದ್ಧಮಾಡಿದನು. ಕರ್ತನ ಆಜ್ಞೆಗಳ ವಾಕ್ಯಗಳನ್ನೂ ಆತನು ಇಸ್ರಾ ಯೇಲಿಗೆ ಕೊಟ್ಟ ಕಟ್ಟಳೆಗಳನ್ನೂ ಬೋಧಿಸತಕ್ಕ ಶಾಸ್ತ್ರಿಯೂ ಯಾಜಕನೂ ಆದ ಎಜ್ರನಿಗೆ ಅರಸನಾದ ಅರ್ತಷಸ್ತನು ಕೊಟ್ಟ ಪತ್ರದ ಪ್ರತಿ ಏನಂದರೆ--
- Daniel 6:20–23 ದಾನಿಯೇಲನು 6:20–23ಗವಿಯ ಹತ್ತಿರ ಬಂದಾಗ ದುಃಖದ ಧ್ವನಿಯಲ್ಲಿ ದಾನಿಯೇಲನ ಕಡೆಗೆ ಕೂಗಿದನು; ಅರಸನು ಮಾತನಾಡಿ ದಾನಿಯೇಲನಿಗೆ--ಜೀವವುಳ್ಳ ದೇವರ ಸೇವಕನಾದ ಓ ದಾನಿಯೇಲನೇ, ನೀನು ಯಾವಾ ಗಲೂ ಸೇವಿಸುವ ಆ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ಬಿಡಿಸಲು ಸಮರ್ಥನಾಗಿದ್ದಾನೆಯೇ? ಎಂದು ಕೇಳಿದನು. ಆಗ ದಾನಿಯೇಲನು ಅರಸನಿಗೆ--ಓ ಅರಸನೇ, ನೀನು ನಿರಂತರವಾಗಿ ಬಾಳು. ನನ್ನ ದೇವರು ತನ್ನ ದೂತನನ್ನು ಕಳುಹಿಸಿ ನನಗೆ ಕೇಡು ಮಾಡದ ಹಾಗೆ ಸಿಂಹಗಳ ಬಾಯಿಗಳನ್ನು ಮುಚ್ಚಿ ಹಾಕಿದ್ದಾನೆ; ಆತನ ಮುಂದೆ ನಾನು ಯಥಾರ್ಥನೆಂದು ತಿಳಿದುಬಂದಿದ್ದೇನೆ. ಓ ಅರಸನೇ, ನಿನ್ನ ಮುಂದೆಯೂ ಸಹ ನಾನು ಯಾರಿಗೂ ಕೇಡುಮಾಡಲಿಲ್ಲ ಎಂದು ಹೇಳಿದನು. ಆಗ ಅರಸನು ಅವನ ವಿಷಯದಲ್ಲಿ ಬಹಳ ಸಂತೋಷಪಟ್ಟು ದಾನಿಯೇಲನನ್ನು ಗವಿಯೊಳ ಗಿಂದ ಮೇಲಕ್ಕೆತ್ತಬೇಕೆಂದು ಆಜ್ಞೆ ಮಾಡಿದನು; ಹೀಗೆ ದಾನಿಯೇಲನನ್ನು ಗವಿಯೊಳಗಿಂದ ಮೇಲಕೆತ್ತಿದರು ಮತ್ತು ಅವನು ತನ್ನ ದೇವರಲ್ಲಿ ನಂಬಿಕೆಯಿಟ್ಟದ್ದರಿಂದ ಯಾವ ತರಹ ಹಾನಿಯೂ ಅವನಲ್ಲಿ ಕಾಣಲಿಲ್ಲ.
- Luke 4:22 ಲೂಕನು 4:22ಎಲ್ಲರೂ ಆತನಿಗೆ ಸಾಕ್ಷಿಕೊಟ್ಟು ಆತನ ಬಾಯಿಂದ ಹೊರಟ ಕೃಪಾವಾಕ್ಯಗಳಿಗಾಗಿ ಆಶ್ಚರ್ಯಪಟ್ಟು-- ಈತನು ಯೋಸೇಫನ ಮಗನಲ್ಲವೇ ಅಂದರು.
- Genesis 41:39–57 ಆದಿಕಾಂಡ 41:39–57ಫರೋಹನು ಯೋಸೇಫನಿಗೆ--ದೇವರು ನಿನಗೆ ಇವುಗಳೆನ್ನಲ್ಲಾ ತೋರಿಸಿದ ಮೇಲೆ ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ. ನೀನೇ ನನ್ನ ಮನೆಯ ಮೇಲಿರಬೇಕು. ನಿನ್ನ ಮಾತಿನ ಪ್ರಕಾರ ನನ್ನ ಜನರೆಲ್ಲಾ ಆಳಲ್ಪಡಲಿ; ಸಿಂಹಾಸನದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು ಅಂದನು. ಇದಲ್ಲದೆ ಫರೋಹನು ಯೋಸೇಫನಿಗೆ--ನೋಡು, ನಾನು ನಿನ್ನನ್ನು ಐಗುಪ್ತದೇಶದ ಮೇಲೆಲ್ಲಾ ನೇಮಿಸಿದ್ದೇನೆ ಅಂದನು. ಇದಲ್ಲದೆ ಫರೋಹನು ತನ್ನ ಕೈಯೊಳಗಿನ ಉಂಗುರವನ್ನು ತೆಗೆದು ಯೋಸೇಫನ ಕೈಯಲ್ಲಿಟ್ಟು ನಾರುಮಡಿಯ ವಸ್ತ್ರವನ್ನು ತೊಡಿಸಿ ಚಿನ್ನದ ಸರವನ್ನು ಅವನ ಕೊರಳಿಗೆ ಹಾಕಿದನು. ತನಗಿದ್ದ ಎರಡನೆಯ ರಥದಲ್ಲಿ ಅವನನ್ನು ಕೂರಿಸಿ ದಾಗ--ಅವನ ಮುಂದೆ ಮೊಣಕಾಲೂರಿರಿ ಎಂದು ಜನರು ಕೂಗಿದರು. ಹೀಗೆ ಅವನನ್ನು ಐಗುಪ್ತ ದೇಶದ ಮೇಲೆಲ್ಲಾ ಆಳುವವನನ್ನಾಗಿ ನೇಮಿಸಿದನು. ಇದಲ್ಲದೆ ಫರೋಹನು ಯೋಸೇಫನಿಗೆ--ನಾನು ಫರೋಹನು, ನಿನ್ನ ಅಪ್ಪಣೆಯಿಲ್ಲದೆ ಐಗುಪ್ತದೇಶ ದಲ್ಲೆಲ್ಲಾ ಯಾವನೂ ತನ್ನ ಕೈಯನ್ನಾಗಲಿ ಕಾಲ ನ್ನಾಗಲಿ ಎತ್ತಬಾರದು ಅಂದನು. ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಆಗ ಯೋಸೇಫನು ಐಗುಪ್ತದೇಶದಲ್ಲೆಲ್ಲಾ ಹೊರಟು ಸಂಚರಿಸಿದನು. ಯೋಸೇಫನು ಐಗುಪ್ತದ ಅರಸನಾದ ಫರೋ ಹನ ಮುಂದೆ ನಿಂತಾಗ ಮೂವತ್ತು ವರುಷದ ವನಾಗಿದ್ದನು. ತರುವಾಯ ಯೋಸೇಫನು ಫರೋಹನ ಸನ್ನಿಧಿಯಿಂದ ಹೊರಟು ಐಗುಪ್ತದೇಶವನ್ನೆಲ್ಲಾ ಸಂಚರಿಸಿದನು. ಆದರೆ ಆ ದೇಶವು ಸುಭಿಕ್ಷೆಯ ಏಳು ವರುಷಗಳಲ್ಲಿ ರಾಶಿರಾಶಿಯಾಗಿ ಫಲಕೊಟ್ಟಿತು. ಹೀಗಿರಲಾಗಿ ಅವನು ಐಗುಪ್ತದೇಶದಲ್ಲಿದ್ದ ಆ ಏಳು ವರುಷಗಳ ಆಹಾರವನ್ನೆಲ್ಲಾ ಕೂಡಿಸಿ ಪಟ್ಟಣ ಗಳಲ್ಲಿ ಇಟ್ಟನು. ಒಂದೊಂದು ಪಟ್ಟಣದ ಸುತ್ತಲಿರುವ ಬೆಳೆಯನ್ನು ಆಯಾ ಪಟ್ಟಣದಲ್ಲಿ ಕೂಡಿಸಿಟ್ಟನು. ಈ ಮೇರೆಗೆ ಯೋಸೇಫನು ದವಸ ಧಾನ್ಯವನ್ನು ಸಮುದ್ರದ ಮರಳಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವದನ್ನು ಬಿಟ್ಟುಬಿಟ್ಟನು. ಯಾಕಂದರೆ ಅದನ್ನು ಲೆಕ್ಕಮಾಡುವದಕ್ಕೆ ಆಗದೆ ಹೋಯಿತು. ಇದಲ್ಲದೆ ಬರಗಾಲದ ವರುಷಗಳು ಬರುವದಕ್ಕೆ ಮುಂಚೆ ಯೋಸೇಫನಿಗೆ ಇಬ್ಬರು ಕುಮಾರರು ಹುಟ್ಟಿದರು. ಓನಿನ ಯಾಜಕನಾದ ಪೋಟೀಫೆರನ ಮಗಳಾಗಿದ್ದ ಆಸನತ್ ಅವರನ್ನು ಯೋಸೇಫನಿಗೆ ಹೆತ್ತಳು. ಚೊಚ್ಚಲ ಮಗನಿಗೆ ಯೋಸೇಫನು ಮನಸ್ಸೆ ಎಂದು ಹೆಸರಿಟ್ಟನು. ಯಾಕಂದರೆ ಅವನು--ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನೆಲ್ಲಾ ಮರೆತುಬಿಡುವಂತೆ ಮಾಡಿದನು ಅಂದನು. ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯಾಮ್ ಎಂದು ಹೆಸರಿಟ್ಟನು: ಯಾಕಂದರೆ ನಾನು ಬಾಧೆಯನ್ನನುಭವಿಸಿದ ದೇಶದಲ್ಲಿ ಫಲಭರಿತ ನಾಗುವಂತೆ ದೇವರು ಮಾಡಿದ್ದಾನೆ ಅಂದನು. ಐಗುಪ್ತದೇಶದಲ್ಲಿದ್ದ ಸುಭಿಕ್ಷೆಯ ಏಳು ವರುಷ ಗಳು ಮುಗಿದ ತರುವಾಯ ಯೋಸೇಫನು ಹೇಳಿದಂತೆ ಬರುವದಕ್ಕಿದ್ದ ಬರಗಾಲದ ಏಳು ವರುಷ ಗಳು ಆರಂಭವಾದವು. ಆಗ ಎಲ್ಲಾ ದೇಶಗಳಲ್ಲಿ ಬರವಿತ್ತು. ಆದರೆ ಐಗುಪ್ತದೇಶದಲ್ಲೆಲ್ಲಾ ಆಹಾರ ವಿತ್ತು. ಐಗುಪ್ತದವರೆಲ್ಲಾ ಹಸಿದು ಜನರು ಆಹಾರ ಕ್ಕಾಗಿ ಫರೋಹನ ಬಳಿಗೆ ಹೋಗಿ ಕೂಗಿಕೊಂಡಾಗ ಫರೋಹನು ಎಲ್ಲಾ ಐಗುಪ್ತದವರಿಗೆ--ಯೋಸೇಫನ ಬಳಿಗೆ ಹೋಗಿರಿ; ಅವನು ನಿಮಗೆ ಹೇಳುವದನ್ನು ಮಾಡಿರಿ ಅಂದನು. ಭೂಮುಖದ ಮೇಲೆಲ್ಲಾ ಬರವಿತ್ತು. ಯೋಸೇಫನು ಧಾನ್ಯವಿದ್ದ ಕಣಜಗಳನ್ನೆಲ್ಲಾ ತೆರೆದು ಐಗುಪ್ತ್ಯರಿಗೆ ಮಾರಿದನು. ಆಗ ಬರವು ಐಗುಪ್ತದೇಶದಲ್ಲಿ ಕಠಿಣವಾಗಿತ್ತು.ಇದಲ್ಲದೆ ಭೂಮಿಯ ಮೇಲೆಲ್ಲಾ ಬರವು ಕಠಿಣವಾಗಿದ್ದದರಿಂದ ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವದಕ್ಕೆ ಐಗುಪ್ತಕ್ಕೆ ಬಂದರು. ಇದಲ್ಲದೆ ಭೂಮಿಯ ಮೇಲೆಲ್ಲಾ ಬರವು ಕಠಿಣವಾಗಿದ್ದದರಿಂದ ಎಲ್ಲಾ ದೇಶದವರು ಯೋಸೇಫನಿಂದ ಧಾನ್ಯವನ್ನು ಕೊಂಡುಕೊಳ್ಳುವದಕ್ಕೆ ಐಗುಪ್ತಕ್ಕೆ ಬಂದರು.
- Esther 10:3 ಎಸ್ತೇರಳು 10:3ಯಾಕಂದರೆ ಯೆಹೂದ್ಯನಾದ ಮೊರ್ದೆಕೈ ಅರಸನಾದ ಅಹಷ್ವೇರೋಷನಿಗೆ ಎರಡನೆಯವನೂ ಯೆಹೂದ್ಯ ರಲ್ಲಿ ದೊಡ್ಡವನೂ ತನ್ನ ಸಹೋದರರ ಸಮೂಹದಲ್ಲಿ ಸಮರ್ಪಕನೂ ತನ್ನ ಜನರ ಮೇಲನ್ನು ಹುಡುಕುವ ವನೂ ತನ್ನ ಸಮಸ್ತ ಸಂತಾನದವರಿಗೆ ಸಮಾಧಾನವನ್ನು ಮಾತನಾಡುವವನೂ ಆಗಿದ್ದನು.
- Daniel 2:46–49 ದಾನಿಯೇಲನು 2:46–49ಆಗ ಅರಸನಾದ ನೆಬೂಕದ್ನೆ ಚ್ಚರನು ಅಡ್ಡಬಿದ್ದು ದಾನಿಯೇಲನಿಗೆ ನಮಸ್ಕರಿಸಿರಿ, ಅವನಿಗೆ ಕಾಣಿಕೆಗಳನ್ನೂ ಸುಗಂಧದ್ರವ್ಯ ಅರ್ಪಿಸಬೇ ಕೆಂದೂ ಆಜ್ಞಾಪಿಸಿದನು. ಅರಸನು ದಾನಿಯೇಲನಿಗೆ ಉತ್ತರವಾಗಿ--ನೀನು ಈ ರಹಸ್ಯವನ್ನು ಪ್ರಕಟ ಮಾಡಲು ಸಮರ್ಥನಾದದರಿಂದ ನಿಶ್ಚಯವಾಗಿ ನಿಮ್ಮ ದೇವರು ದೇವರುಗಳಿಗೆ ದೇವರಾಗಿಯೂ ಅರಸುಗಳ ಕರ್ತನಾಗಿಯೂ ರಹಸ್ಯಗಳನ್ನು ಪ್ರಕಟಮಾಡುವಾತ ನಾಗಿಯೂ ಆಗಿದ್ದಾನೆ ಅಂದನು. ಆಗ ಅರಸನು ದಾನಿಯೇಲನನ್ನು ಒಬ್ಬ ಮಹಾ ವ್ಯಕ್ತಿಯನ್ನಾಗಿ ಮಾಡಿ ಅವನಿಗೆ ಅನೇಕ ದೊಡ್ಡ ಬಹುಮಾನಗಳನ್ನು ಕೊಟ್ಟು ಸಮಸ್ತ ಬಾಬೆಲಿನ ಪ್ರಾಂತ್ಯಗಳಿಗೆ ಅಧಿಕಾರಿಯನ್ನಾ ಗಿಯೂ ಬಾಬೆಲಿನ ಸಮಸ್ತ ಜ್ಞಾನಿಗಳಿಗೆ ಮುಖ್ಯಾಧಿ ಪತಿಯನ್ನಾಗಿಯೂ ನೇಮಿಸಿದನು.ಆ ಮೇಲೆ ದಾನಿ ಯೇಲನು ಅರಸನನ್ನು ಬೇಡಿಕೊಂಡದ್ದರಿಂದ ಅರಸನು ಶದ್ರಕ್ ಮೇಷಕ್ ಮತ್ತು ಅಬೇದ್ನೆಗೋ ಎಂಬವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನಾದರೋ ಅರಸನ ಅರಮನೆಯಲ್ಲೇ ಇದ್ದನು. ಆ ಮೇಲೆ ದಾನಿ ಯೇಲನು ಅರಸನನ್ನು ಬೇಡಿಕೊಂಡದ್ದರಿಂದ ಅರಸನು ಶದ್ರಕ್ ಮೇಷಕ್ ಮತ್ತು ಅಬೇದ್ನೆಗೋ ಎಂಬವರಿಗೆ ಬಾಬೆಲ್ ಸಂಸ್ಥಾನದ ಕಾರ್ಯಭಾರವನ್ನು ವಹಿಸಿದನು. ದಾನಿಯೇಲನಾದರೋ ಅರಸನ ಅರಮನೆಯಲ್ಲೇ ಇದ್ದನು.
- Daniel 3:30 ದಾನಿಯೇಲನು 3:30ಆಗ ಅರಸನು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬ ವರನ್ನು ಬಾಬೆಲ್ ಪ್ರಾಂತ್ಯದಲ್ಲಿ ಉನ್ನತ ಪದವಿಗೆ ತಂದನು.