1 Peter · chapter 1 · verse 14
1 Peter 1:14 in Kannada
ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ
Neevu munche ajnyaanigalaagiddaaga nimagidda duraashegalannu anusarisi nadedante innu nadeyuvavaraagirade
1 Peter 1:14 in English
- King James Version (KJV)
- As obedient children, not fashioning yourselves according to the former lusts in your ignorance:
- World English Bible (WEB)
- as children of obedience, not conforming yourselves according to your former lusts as in your ignorance,
- American Standard Version (ASV)
- as children of obedience, not fashioning yourselves according to your former lusts in [the time of] your ignorance:
- Bible in Basic English (BBE)
- Like children ruled by God, do not go back to the old desires of the time when you were without knowledge:
- Darby Translation (DBY)
- as children of obedience, not conformed to [your] former lusts in your ignorance;
- Webster's Bible (WBS)
- As obedient children, not fashioning yourselves according to the former lusts in your ignorance:
- Young's Literal Translation (YLT)
- as obedient children, not fashioning yourselves to the former desires in your ignorance,
Read in context
- 12ಪರಲೋಕದಿಂದ ಕಳುಹಿಸಲ್ಪಟ್ಟ ಪರಿಶುದ್ಧಾತ್ಮನಿಂದ ನಿಮಗೆ ಸುವಾರ್ತೆಯನ್ನು ಸಾರಿದವರು ಈಗ ನಿಮಗೆ ತಿಳಿಸುವಂಥ ಮತ್ತು ದೂತರು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುವಂಥ ಕಾರ್ಯಗಳಲ್ಲಿ ತಮಗೋಸ್ಕರವಲ್ಲ ನಮಗೋಸ್ಕರವೇ ಸೇವೆ ಮಾಡಿದರೆಂದು ಅವರಿಗೆ ಪ್ರಕಟವಾಯಿತು.
- 13ಆದದರಿಂದ ನೀವು ಮನಸ್ಸಿನ ನಡುವನ್ನು ಕಟ್ಟಿ ಕೊಂಡು ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷ ನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನೀರಿಕ್ಷೆಯನ್ನು ಅಂತ್ಯದವರೆಗೆ ಇಡಿರಿ.
- 14ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ
- 15ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾದ ಮಕ್ಕಳಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರ್ರಿ.
- 16ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧ ರಾಗಿರಬೇಕು ಎಂದು ಬರೆದದೆಯಲ್ಲಾ.
Cross references
- Romans 12:2 ರೋಮಾಪುರದವರಿಗೆ 12:2ಇಹಲೋಕವನ್ನು ಅನುಸರಿಸದೆ ಉತ್ತಮ ವಾದದ್ದೂ ಮೆಚ್ಚಿಕೆಯಾದದ್ದೂ ಪರಿಪೂರ್ಣ ವಾದದ್ದೂ ಆಗಿರುವ ದೇವರ ಚಿತ್ತವೇನೆಂದು ನೀವು ವಿವೇಚಿಸಿ ತಿಳಿದುಕೊಳ್ಳುವಂತೆ ನೂತನ ಮನಸ್ಸನ್ನು ಹೊಂದಿಕೊಂಡು ರೂಪಾಂತರಗೊಂಡವರಾಗಿರ್ರಿ.
- Titus 3:3–5 ತೀತನಿಗೆ 3:3–5ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು. ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು.
- 1 Peter 4:2–3 1 ಪೇತ್ರನು 4:2–3ಹೀಗೆ ಶರೀರದಲ್ಲಿ ಇನ್ನು ಉಳಿದಿರುವ ತನ್ನ ಜೀವಿತಕಾಲದಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವನು. ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಗಳು ಇವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದದ್ದನ್ನು ಮಾಡುವದರಲ್ಲಿಯೂ ನಮ್ಮ ಜೀವಿತ ದಲ್ಲಿ ಕಳೆದುಹೋದ ಕಾಲವೇ ಸಾಕು.
- Ephesians 2:2 ಎಫೆಸದವರಿಗೆ 2:2ನೀವು ಪೂರ್ವದಲ್ಲಿ ಅಪರಾಧ ಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹ ಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡಿಸುವ ಆತ್ಮನಿಗನುಸಾರವಾಗಿ ನಡೆದುಕೊಂಡಿರಿ;
- 1 Thessalonians 4:5 1 ಥೆಸಲೊನೀಕದವರಿಗೆ 4:5ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡಬಾರದು.
- Colossians 3:5–7 ಕೊಲೊಸ್ಸೆಯವರಿಗೆ 3:5–7ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಅಂದರೆ ಜಾರತ್ವ ಬಂಡುತನ ಕಾಮಾಭಿ ಲಾಷೆ ದುರಾಶೆ ವಿಗ್ರಹಾರಾಧನೆಯಾಗಿರುವ ಲೋಭ ಇವುಗಳನ್ನು ಸಾಯಿಸಿರಿ. ಇವುಗಳ ನಿಮಿತ್ತ ಅವಿಧೇಯ ರಾದ ಮಕ್ಕಳ ಮೇಲೆ ದೇವರ ಕೋಪವು ಬರುತ್ತದೆ. ಪೂರ್ವದಲ್ಲಿ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿ ದ್ದಾಗ ಅವುಗಳಂತೆ ನಡೆದಿರಿ.
- Ephesians 4:18–22 ಎಫೆಸದವರಿಗೆ 4:18–22ಅವರ ಮನಸ್ಸು ಮೊಬ್ಬಾಗಿ ಹೋಗಿದೆ. ಅವರು ತಮ್ಮ ಹೃದಯದ ಕುರುಡುತನದ ನಿಮಿತ್ತದಿಂದಲೂ ತಮ್ಮಲ್ಲಿರುವ ಆಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ. ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ. ನೀವಾದರೋ ಕ್ರಿಸ್ತನನ್ನು ಹಾಗೆ ಕಲಿತುಕೊಳ್ಳಲಿಲ್ಲ. ಆತನನ್ನೇ ಕೇಳಿದಿರಲ್ಲಾ, ಆತನಲ್ಲಿಯೇ ಉಪದೇಶ ವನ್ನು ಹೊಂದಿದಿರಲ್ಲಾ. ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದೆಂದರೆ--ನೀವು ನಿಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವ ವನ್ನು ತೆಗೆದು ಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟು ಹೋಗುವಂಥದು.
- Acts 17:30 ಅಪೊಸ್ತಲರ ಕೃತ್ಯಗಳು 17:30ಈ ಅಜ್ಞಾನಕಾಲಗಳನ್ನು ದೇವರುಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ಎಲ್ಲಾ ಕಡೆಯಲ್ಲಿರುವ ಮನು ಷ್ಯರೆಲ್ಲರೂ ಮಾನಸಾಂತರಪಡಬೇಕೆಂದು ಅಪ್ಪಣೆ ಕೊಡುತ್ತಾನೆ.
- Romans 6:4 ರೋಮಾಪುರದವರಿಗೆ 6:4ಹೀಗಿರಲಾಗಿ ನಾವು ಬಾಪ್ತಿಸ್ಮ ಮಾಡಿಸಿ ಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗು ವದಕ್ಕೆ ಆತನೊಂದಿಗೆ ಹೂಣಲ್ಪಟ್ಟೆವು; ಕ್ರಿಸ್ತನು ತಂದೆಯ ಮಹಿಮೆಯಿಂದ ಹೇಗೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೋ ಹಾಗೆಯೇ ನಾವು ಕೂಡ ಜೀವ ದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.
- Ephesians 5:6 ಎಫೆಸದವರಿಗೆ 5:6ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಯಾಕಂದರೆ ಇಂಥವುಗಳಿಂದ ದೇವರ ಕೋಪವು ಆತನಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.