1 Samuel · chapter 12 · verse 8
1 Samuel 12:8 in Kannada
ಯಾಕೋಬನು ಐಗುಪ್ತಕ್ಕೆ ಬಂದ ತರುವಾಯ ನಿಮ್ಮ ತಂದೆಗಳು ಕರ್ತ ನಿಗೆ ಮೊರೆಯಿಟ್ಟರು. ಆಗ ಕರ್ತನು ಮೋಶೆಯನ್ನೂ ಆರೋನನನ್ನೂ ಕಳುಹಿಸಿದನು. ಇವರು ನಿಮ್ಮ ತಂದೆ ಗಳನ್ನು ಐಗುಪ್ತದಿಂದ ಕರತಂದು ಅವರನ್ನು ಈ ದೇಶ ದಲ್ಲಿ ವಾಸಿಸುವಂತೆ ಮಾಡಿದನು.
Yaakobanu aiguptakke banda taruvaaya nimma tandegalu karta nige moreyittaru. Aaga kartanu mosheyannoo aaronanannoo kaluhisidanu. Ivaru nimma tande galannu aiguptadinda karatandu avarannu ee desha dalli vaasisuvante maadidanu.
1 Samuel 12:8 in English
- King James Version (KJV)
- When Jacob was come into Egypt, and your fathers cried unto the LORD, then the LORD sent Moses and Aaron, which brought forth your fathers out of Egypt, and made them dwell in this place.
- World English Bible (WEB)
- “When Jacob had come into Egypt, and your fathers cried to the LORD, then the LORD sent Moses and Aaron, who brought your fathers out of Egypt, and made them to dwell in this place.
- American Standard Version (ASV)
- When Jacob was come into Egypt, and your fathers cried unto Jehovah, then Jehovah sent Moses and Aaron, who brought forth your fathers out of Egypt, and made them to dwell in this place.
- Bible in Basic English (BBE)
- When Jacob and his sons had come into Egypt, and were crushed by the Egyptians, the prayers of your fathers came up to the Lord, and the Lord sent Moses and Aaron, who took your fathers out of Egypt, and he put them into this place.
- Darby Translation (DBY)
- When Jacob had come into Egypt, and your fathers cried to Jehovah, then Jehovah sent Moses and Aaron, and they brought your fathers forth out of Egypt, and made them dwell in this place.
- Webster's Bible (WBS)
- When Jacob had come into Egypt, and your fathers cried to the LORD, then the LORD sent Moses and Aaron, who brought forth your fathers from Egypt, and made them dwell in this place.
- Young's Literal Translation (YLT)
- 'When Jacob hath come in to Egypt, and your fathers cry unto Jehovah, then Jehovah sendeth Moses and Aaron, and they bring out your fathers from Egypt, and cause them to dwell in this place,
Read in context
- 6ಆಗ ಸಮುವೇಲನು ಜನರಿಗೆ--ಮೋಶೆ ಯನ್ನೂ ಆರೋನನನ್ನೂ ಮುಂದಕ್ಕೆ ತಂದು ನಿಮ್ಮ ಪಿತೃಗಳನ್ನು ಐಗುಪ್ತದೇಶದೊಳಗಿಂದ ಬರಮಾಡಿದ ಕರ್ತನೇ ಇದಕ್ಕೆ ಸಾಕ್ಷಿ.
- 7ಆದದರಿಂದ ಈಗ ನಿಲ್ಲಿರಿ; ಕರ್ತನು ನಿಮಗೂ ನಿಮ್ಮ ತಂದೆಗಳಿಗೂ ಮಾಡಿದ ಸಮಸ್ತ ನೀತಿಯುಳ್ಳ ಕ್ರಿಯೆಗಳ ವಿಷಯ ಕರ್ತನ ಮುಂದೆ ನಿಮಗೆ ನ್ಯಾಯ ಹೇಳುತ್ತೇನೆ.
- 8ಯಾಕೋಬನು ಐಗುಪ್ತಕ್ಕೆ ಬಂದ ತರುವಾಯ ನಿಮ್ಮ ತಂದೆಗಳು ಕರ್ತ ನಿಗೆ ಮೊರೆಯಿಟ್ಟರು. ಆಗ ಕರ್ತನು ಮೋಶೆಯನ್ನೂ ಆರೋನನನ್ನೂ ಕಳುಹಿಸಿದನು. ಇವರು ನಿಮ್ಮ ತಂದೆ ಗಳನ್ನು ಐಗುಪ್ತದಿಂದ ಕರತಂದು ಅವರನ್ನು ಈ ದೇಶ ದಲ್ಲಿ ವಾಸಿಸುವಂತೆ ಮಾಡಿದನು.
- 9ಆದರೆ ಅವರು ತಮ್ಮ ದೇವರಾದ ಕರ್ತನನ್ನು ಮರೆತುಹೋದಾಗ ಆತನು ಅವರನ್ನು ಹಾಚೋರಿನ ಸೈನ್ಯಾಧಿಪತಿಯಾದ ಸೀಸೆರನ ಕೈಗೂ ಫಿಲಿಷ್ಟಿಯರ ಕೈಗೂ ಮೋವಾಬ್ಯರ ಅರಸನ ಕೈಗೂ ಮಾರಿಬಿಟ್ಟನು.
- 10ಇವರು ಅವರ ಸಂಗಡ ಯುದ್ಧಮಾಡಿದರು. ಆದದರಿಂದ ಅವರು ಕರ್ತನಿಗೆ ಮೊರೆಯಿಟ್ಟು--ನಾವು ಕರ್ತನಾದ ನಿನ್ನನ್ನು ಬಿಟ್ಟು ಬಾಳನನ್ನೂ ಅಷ್ಟೋರೆತನ್ನೂ ಸೇವಿಸಿದ್ದರಿಂದ ಪಾಪಮಾಡಿದೆವು. ಈಗ ನೀನು ನಮ್ಮ ಶತ್ರುಗಳ ಕೈಯಿಂದ ನಮ್ಮನ್ನು ಬಿಡಿಸು, ನಾವು ನಿನ್ನನ್ನು ಸೇವಿಸು ವೆವು ಅಂದರು.
Cross references
- Exodus 4:14–16 ವಿಮೋಚನಕಾಂಡ 4:14–16ಕರ್ತನು ಮೋಶೆಯ ಮೇಲೆ ಕೋಪಗೊಂಡು--ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡ ಬಲ್ಲನೆಂದು ನಾನು ಬಲ್ಲೆನು. ಇಗೋ, ಅವನು ನಿನ್ನನ್ನು ಎದುರು ಗೊಳ್ಳುವದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿ ತನ್ನ ಹೃದಯದಲ್ಲಿ ಆನಂದಿಸುವನು. ಅವನ ಸಂಗಡ ನೀನು ಮಾತನಾಡಿ ಹೇಳಬೇಕಾದ ಮಾತು ಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀನು ಮಾಡತಕ್ಕದ್ದನ್ನು ಕಲಿಸುವೆನು. ಅವನು ನಿನಗಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿ ರುವನು; ನೀನು ಅವನಿಗೆ ದೇವರಂತಿರುವಿ.
- Exodus 2:23–24 ವಿಮೋಚನಕಾಂಡ 2:23–24ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು. ದೇವರು ಅವರ ನರಳಾಟವನ್ನು ಕೇಳಿ ಅಬ್ರಹಾಮ ಇಸಾಕ ಯಾಕೋಬ ಇವರ ಸಂಗಡ ತಾನು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಂಡನು.ಆಗ ದೇವರು ಇಸ್ರಾಯೇಲ್ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.
- Psalm 44:1–3 ಕೀರ್ತನೆಗಳು 44:1–3ಓ ದೇವರೇ, ನೀನು ಹಿಂದಿನ ಕಾಲದಲ್ಲಿ, ಅಂದರೆ ನಮ್ಮ ತಂದೆಗಳ ದಿವಸದಲ್ಲಿ ಮಾಡಿದ ಕಾರ್ಯವನ್ನು ಅವರು ನಮಗೆ ವಿವರಿಸಿದ್ದಾರೆ; ಅದನ್ನು ನಾವು ನಮ್ಮ ಕಿವಿಗಳಿಂದ ಕೇಳಿದ್ದೇವೆ. ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ. ಅವರು ತಮ್ಮ ಕತ್ತಿಯಿಂದ ದೇಶವನ್ನು ಸ್ವಾಧೀನಪಡಿಸಿಕೊಳ್ಳಲಿಲ್ಲ; ಅವರ ತೋಳು ಅವರನ್ನು ರಕ್ಷಿಸಲಿಲ್ಲ; ಆದರೆ ನಿನ್ನ ಬಲಗೈಯೂ ತೋಳೂ ನಿನ್ನ ಮುಖದ ಪ್ರಕಾಶವೂ ಇವುಗಳೇ ಅವರನ್ನು ರಕ್ಷಿಸಿದವು; ನಿನ್ನ ಒಲುಮೆ ಅವರಿಗಿತ್ತಲ್ಲಾ.
- Psalm 105:44 ಕೀರ್ತನೆಗಳು 105:44ಅವರು ಪ್ರಜೆಗಳ ಕಷ್ಟಾರ್ಜಿತವನ್ನು ಸ್ವಾಧೀನಮಾಡಿಕೊಂಡರು.ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.
- Genesis 46:5–7 ಆದಿಕಾಂಡ 46:5–7ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಇಸ್ರಾಯೇಲನ ಮಕ್ಕಳು ತಮ್ಮ ತಂದೆಯಾದ ಯಾಕೋಬನನ್ನೂ ತಮ್ಮ ಚಿಕ್ಕವರನ್ನೂ ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ಬಂಡಿಗಳ ಮೇಲೆ ಏರಿಸಿಕೊಂಡು ಹೋದರು. ಅವರು ತಮ್ಮ ದನಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತಕ್ಕೊಂಡು ಐಗುಪ್ತಕ್ಕೆ ಬಂದರು. ಯಾಕೋಬನು ತನ್ನ ಎಲ್ಲಾ ಸಂತತಿಯೊಂದಿಗೆ ಬಂದನು. ತನ್ನ ಕುಮಾರ ರನ್ನೂ ಕುಮಾರರ ಕುಮಾರರನ್ನೂ ಕುಮಾರ್ತೆಯರನ್ನೂ ಕುಮಾರರ ಕುಮಾರ್ತೆಯರನ್ನೂ ಅಂತೂ ತನ್ನ ಸಂತತಿ ಯನ್ನೆಲ್ಲಾ ತನ್ನೊಂದಿಗೆ ಐಗುಪ್ತಕ್ಕೆ ಕರಕೊಂಡು ಬಂದನು.
- Exodus 6:26 ವಿಮೋಚನಕಾಂಡ 6:26ಇಸ್ರಾಯೇಲ್ ಮಕ್ಕಳನ್ನು ಅವರ ಸೈನ್ಯಗಳ ಪ್ರಕಾರ ಐಗುಪ್ತದೊಳಗಿಂದ ಹೊರಗೆ ಬರಮಾಡ ಬೇಕೆಂದು ಕರ್ತನು ಯಾರಿಗೆ ಹೇಳಿದನೋ ಆ ಆರೋನ ಮೋಶೆ ಇವರೇ.
- Numbers 20:15 ಅರಣ್ಯಕಾಂಡ 20:15ನಮ್ಮ ಪಿತೃಗಳು ಐಗುಪ್ತಕ್ಕೆ ಇಳಿದು ಹೋದರು; ಐಗುಪ್ತದಲ್ಲಿ ನಾವು ಬಹಳ ದಿವಸ ವಾಸವಾಗಿದ್ದೆವು; ಐಗುಪ್ತದವರು ನಮಗೂ ನಮ್ಮ ಪಿತೃಗಳಿಗೂ ಕೇಡನ್ನು ಮಾಡಿದರು.
- Psalm 78:54–55 ಕೀರ್ತನೆಗಳು 78:54–55ತನ್ನ ಪರಿಶುದ್ದಾಲಯದ ಮೇರೆಗೂ ಆತನ ಬಲಗೈ ಕೊಂಡುಕೊಂಡ ಈ ಪರ್ವತಕ್ಕೂ ಅವರನ್ನು ಬರ ಮಾಡಿದನು. ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.
- Joshua 1:2–4 ಯೆಹೋಶುವ 1:2–4ನನ್ನ ಸೇವಕನಾದ ಮೋಶೆಯು ಸತ್ತನು; ಈಗ ನೀನು ಈ ಜನರೆಲ್ಲರ ಸಹಿತವಾಗಿ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶಕ್ಕೆ ಹೋಗು. ನಾನು ಮೋಶೆಗೆ ಹೇಳಿದ ಹಾಗೆ ನಿಮ್ಮ ಪಾದವು ತುಳಿಯುವ ಎಲ್ಲಾ ಸ್ಥಳವನ್ನು ನಿಮಗೆ ಕೊಟ್ಟೆನು. ಅರಣ್ಯವೂ ಈ ಲೆಬನೋನೂ ಮೊದಲುಗೊಂಡು ಯೂಫ್ರೇಟೀಸ್ ಮಹಾನದಿಯ ವರೆಗೆ ಇರುವ ಹಿತ್ತಿಯರ ದೇಶವೆಲ್ಲಾ ಸೂರ್ಯನು ಅಸ್ತಮಿಸುವ ಕಡೆಗೆ ಮಹಾಸಮುದ್ರದ ವರೆಗೂ ನಿಮ್ಮ ಮೇರೆಯಾಗಿರುವದು.
- Exodus 14:30–31 ವಿಮೋಚನಕಾಂಡ 14:30–31ಆ ದಿನದಲ್ಲಿ ಕರ್ತನು ಈ ಪ್ರಕಾರ ಇಸ್ರಾಯೇಲ್ಯ ರನ್ನು ಐಗುಪ್ತ್ಯರ ಕೈಯಿಂದ ರಕ್ಷಿಸಿದನು. ಇಸ್ರಾಯೇ ಲ್ಯರು ಸಮುದ್ರತೀರದಲ್ಲಿ ಸತ್ತ ಐಗುಪ್ತ್ಯರನ್ನು ನೋಡಿ ದರು.ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು. ಐಗುಪ್ತ್ಯರ ಮೇಲೆ ಕರ್ತನು ಮಾಡಿದ ದೊಡ್ಡ ಕಾರ್ಯವನ್ನು ಇಸ್ರಾಯೇಲ್ಯರು ನೋಡಿ ಕರ್ತ ನಿಗೆ ಭಯಪಟ್ಟು ಕರ್ತನಲ್ಲಿಯೂ ಆತನ ಸೇವಕನಾದ ಮೋಶೆಯಲ್ಲಿಯೂ ನಂಬಿಕೆಯಿಟ್ಟರು.
- Joshua 3:10–13 ಯೆಹೋಶುವ 3:10–13ಯೆಹೋಶು ವನು--ಜೀವವುಳ್ಳ ದೇವರು ನಿಮ್ಮ ಮಧ್ಯದಲ್ಲಿರು ವದನ್ನೂ ಆತನು ಕಾನಾನ್ಯರು ಹಿತ್ತಿಯರು ಹಿವ್ವಿಯರು ಪೆರಿಜೀಯರು ಗಿರ್ಗಾಷಿಯರು ಅಮೋರಿಯರು ಯೊಬೂಸಿಯರು ಇವರನ್ನು ನಿಮ್ಮ ಮುಂದೆ ನಿಶ್ಚಯ ವಾಗಿ ಓಡಿಸಿ ಬಿಡುವದನ್ನೂ ನೀವು ತಿಳಿಯುವ ಹಾಗೆ ಇಗೋ, ಸಮಸ್ತ ಭೂಮಿಗೆ ಕರ್ತನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದೆ ಯೊರ್ದನನ್ನು ದಾಟಿಹೋಗುವದು. ಆದದರಿಂದ ಈಗ ಇಸ್ರಾಯೇಲ್ ಗೋತ್ರಗಳಲ್ಲಿ ಹನ್ನೆರಡು ಮಂದಿ ಯನ್ನು ಒಂದೊಂದು ಗೋತ್ರಕ್ಕೆ ಒಬ್ಬೊಬ್ಬನಂತೆ ನೀವು ತಕ್ಕೊಳ್ಳಿರಿ. ಆಗ ಆಗುವದೇನಂದರೆ, ಸಮಸ್ತ ಭೂಮಿಗೂ ಕರ್ತನಾಗಿರುವ ಕರ್ತನ ಆ ಮಂಜೂಷ ವನ್ನು ಹೊರುವ ಯಾಜಕರ ಅಂಗಾಲುಗಳು ಯೊರ್ದ ನಿನ ನೀರಲ್ಲಿ ಇಟ್ಟಾಗಲೇ ನದಿಯ ನೀರು ಭೇದಿಸಲ್ಪಟ್ಟು ಮೇಲಿನಿಂದ ಹರಿದು ಬರುವ ನೀರು ಹರಿಯದೆ ರಾಶಿಯಾಗಿ ನಿಲ್ಲುವದು ಎಂದು ಹೇಳಿದನು.
- Acts 7:15 ಅಪೊಸ್ತಲರ ಕೃತ್ಯಗಳು 7:15ಹೀಗೆ ಯಾಕೋಬನು ಐಗುಪ್ತ ದೇಶಕ್ಕೆ ಇಳಿದು ಹೋದನು. ಅಲ್ಲಿ ಅವನೂ ನಮ್ಮ ಪಿತೃಗಳೂ ಮೃತಿಹೊಂದಿದರು.
Original words (Hebrew)
- Jacob · H3290יַעֲקֹב Yaʻăqôb
- come · H935בּוֹא bôwʼ
- Egypt · H4714מִצְרַיִם Mitsrayim
- fathers · H1אָב ʼâb
- cried · H2199זָעַק zâʻaq
- sent · H7971שָׁלַח shâlach
- Moses · H4872מֹשֶׁה Môsheh
- Aaron · H175אַהֲרוֹן ʼAhărôwn
- forth · H3318יָצָא yâtsâʼ
- fathers · H1אָב ʼâb
- Egypt · H4714מִצְרַיִם Mitsrayim
- dwell · H3427יָשַׁב yâshab
- place · H4725מָקוֹם mâqôwm