1 Samuel · chapter 16 · verse 14
1 Samuel 16:14 in Kannada
ಆದರೆ ಕರ್ತನ ಆತ್ಮನು ಸೌಲನನ್ನು ಬಿಟ್ಟು ಹೋದನು;
Aadare kartana aatmanu saulanannu bittu hodanu;
1 Samuel 16:14 in English
- King James Version (KJV)
- But the Spirit of the LORD departed from Saul, and an evil spirit from the LORD troubled him.
- World English Bible (WEB)
- Now the LORD’s Spirit departed from Saul, and an evil spirit from the LORD troubled him.
- American Standard Version (ASV)
- Now the Spirit of Jehovah departed from Saul, and an evil spirit from Jehovah troubled him.
- Bible in Basic English (BBE)
- Now the spirit of the Lord had gone from Saul, and an evil spirit from the Lord was troubling him.
- Darby Translation (DBY)
- And the Spirit of Jehovah departed from Saul, and an evil spirit from Jehovah troubled him.
- Webster's Bible (WBS)
- But the Spirit of the LORD departed from Saul, and an evil spirit from the LORD troubled him.
- Young's Literal Translation (YLT)
- And the Spirit of Jehovah turned aside from Saul, and a spirit of sadness from Jehovah terrified him;
Read in context
- 12ಆಗ ಇಷಯನು ಅವನನ್ನು ಕರೇಕಳುಹಿಸಿದನು. ಅವನು ಕೆಂಪಾದ ಮೈಬಣ್ಣದವನಾಗಿಯೂ ಸುಂದರ ಮುಖವುಳ್ಳವ ನಾಗಿಯೂ ನೋಟಕ್ಕೆ ಚೆಲುವಿಕೆಯುಳ್ಳವನಾಗಿಯೂ ಇದ್ದನು. ಆಗ ಕರ್ತನು ಸಮುವೇಲನಿಗೆ--ನೀನೆದ್ದು ಇವನನ್ನು ಅಭಿಷೇಕಿಸು; ಇವನೇ ಅವನು ಅಂದನು.
- 13ಸಮುವೇಲನು ಎಣ್ಣೆ ಇರುವ ಕೊಂಬನ್ನು ತಕ್ಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಕರ್ತನ ಆತ್ಮನು ದಾವೀದನ ಮೇಲೆ ಬಂದನು. ಸಮುವೇಲನು ಎದ್ದು ರಾಮಕ್ಕೆ ಹೋದನು.
- 14ಆದರೆ ಕರ್ತನ ಆತ್ಮನು ಸೌಲನನ್ನು ಬಿಟ್ಟು ಹೋದನು;
- 15ಕರ್ತನಿಂದ ಬಂದ ದುರಾತ್ಮವು ಅವ ನನ್ನು ಪೀಡಿಸಿತು. ಆಗ ಸೌಲನ ಸೇವಕರು ಅವ ನಿಗೆ--ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಬಾಧಿಸುತ್ತದೆ;
- 16ಕಿನ್ನರಿಯನ್ನು ಬಾರಿಸಲು ನಿಪುಣನಾದ ಒಬ್ಬನನ್ನು ಹುಡುಕುವ ಹಾಗೆ ನಮ್ಮ ಒಡೆಯನಾದ ನೀನು ನಿನ್ನ ಸನ್ನಿಧಿಯಲ್ಲಿರುವ ನಿನ್ನ ಸೇವಕರಿಗೆ ಹೇಳ ಬೇಕು. ದೇವರಿಂದ ದುರಾತ್ಮವು ನಿನ್ನ ಮೇಲೆ ಬಂದಿರು ವಾಗ ಅವನು ತನ್ನ ಕೈಯಿಂದ ಅದನ್ನು ಬಾರಿಸಿದರೆ ನಿನಗೆ ಒಳ್ಳೆಯದಾಗಿರುವದು ಅಂದರು.
Cross references
- Psalm 51:11 ಕೀರ್ತನೆಗಳು 51:11ನಿನ್ನ ಸಮ್ಮುಖದಿಂದ ನನ್ನನ್ನು ಹೊರಗೆ ಹಾಕಬೇಡ; ನಿನ್ನ ಪರಿಶುದ್ಧಾತ್ಮನನ್ನು ನನ್ನಿಂದ ತೆಗೆದುಕೊಳ್ಳಬೇಡ.
- 1 Samuel 18:12 1 ಸಮುವೇಲನು 18:12ಸೌಲನು ದಾವೀದನಿಗೆ ಭಯಪಟ್ಟನು; ಕರ್ತನು ಅವನ ಸಂಗಡ ಇದ್ದನು. ಕರ್ತನು ಸೌಲನ ಕಡೆಯಿಂದ ಹೊರಟು ಹೋಗಿದ್ದನು;
- Judges 9:23 ನ್ಯಾಯಸ್ಥಾಪಕರು 9:23ದೇವರು ಅಬೀಮೆಲೆಕನಿಗೂ ಶೆಕೆಮಿನ ಜನರಿಗೂ ನಡುವೆ ದುರಾತ್ಮನನ್ನು ಕಳುಹಿಸಿದನು.
- 1 Samuel 28:15 1 ಸಮುವೇಲನು 28:15ಆಗ ಸಮುವೇಲನು ಸೌಲನಿಗೆ--ನೀನು ನನ್ನನ್ನು ಏರಿ ಬರ ಮಾಡಿ ಯಾಕೆ ವಿಶ್ರಾಂತಿಯನ್ನು ಕೆಡಿಸಿದಿ ಅಂದನು. ಅದಕ್ಕೆ ಸೌಲನು--ನಾನು ಬಹಳ ಇಕ್ಕಟ್ಟಿನಲ್ಲಿದ್ದೇನೆ; ಯಾಕಂದರೆ ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧ ಮಾಡುತ್ತಾರೆ; ಆದರೆ ದೇವರು ನನ್ನನ್ನು ಬಿಟ್ಟುಹೋದನು. ಆತನು ಪ್ರವಾದಿಗಳ ಮುಖಾಂತರ ವಾದರೂ ಸ್ವಪ್ನದ ಮುಖಾಂತರವಾದರೂ ನನಗೆ ಪ್ರತ್ಯುತ್ತರಕೊಡಲಿಲ್ಲ; ಆದದರಿಂದ ನಾನು ಮಾಡ ಬೇಕಾದದ್ದನ್ನು ನೀನು ತಿಳಿಸುವ ಹಾಗೆ ನಿನ್ನನ್ನು ಕರೆಸಿದೆನು ಅಂದನು.
- 1 Samuel 18:10 1 ಸಮುವೇಲನು 18:10ಮಾರನೆ ದಿವಸದಲ್ಲಿ ದೇವರಿಂದ ಬಂದ ದುರಾತ್ಮವು ಸೌಲನ ಮೇಲೆ ಇಳಿಯಿತು. ಅವನು ಮನೆಯ ಮಧ್ಯ ದಲ್ಲಿ ಪ್ರವಾದಿಸುತ್ತಿದ್ದನು (ಕಾಲಜ್ಞಾನ). ಆಗ ದಾವೀ ದನು ಪ್ರತಿದಿನ ಮಾಡುತ್ತಿದ್ದ ಹಾಗೆಯೇ ತನ್ನ ಕೈಯಿಂದ ಬಾರಿಸುತ್ತಿದ್ದನು. ಆದರೆ ಸೌಲನ ಕೈಯಲ್ಲಿ ಈಟಿಯು ಇತ್ತು.
- Judges 16:20 ನ್ಯಾಯಸ್ಥಾಪಕರು 16:20ಅವಳು--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಅವನು ತನ್ನ ನಿದ್ರೆಯಿಂದ ಎಚ್ಚತ್ತು ಕರ್ತನು ತನ್ನನ್ನು ಬಿಟ್ಟು ತೊಲಗಿದ್ದನ್ನು ಅರಿಯದೆ ಬೇರೆ ಸಮಯಗಳಂತೆಯೇನಾನು ಹೊರಟು ಕೊಸರಿಕೊಂಡು ಹೋಗುವೆನು ಅಂದುಕೊಂಡನು.
- Acts 19:15–16 ಅಪೊಸ್ತಲರ ಕೃತ್ಯಗಳು 19:15–16ಆದರೆ ದುರಾತ್ಮವು ಪ್ರತ್ಯುತ್ತರವಾಗಿ--ನಾನು ಯೇಸುವನ್ನು ಬಲ್ಲೆನು, ಪೌಲನನ್ನೂ ಬಲ್ಲೆನು; ನೀವಾದರೆ ಯಾರು ಎಂದು ಕೇಳಿತು. ದುರಾತ್ಮಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿಬಿದ್ದು ಅವರನ್ನು ಸೋಲಿಸಿ ಬಲಾತ್ಕರಿ ಸಿದ್ದರಿಂದ ಅವರು ಬೆತ್ತಲೆಯಾಗಿ ಗಾಯಗೊಂಡು ಆ ಮನೆಯೊಳಗಿಂದ ಓಡಿ ಹೋದರು.
- 1 Kings 22:22 1 ಅರಸುಗಳು 22:22ಆಗ ಕರ್ತನು ಅದಕ್ಕೆ--ಯಾವದರಿಂದ ಅಂದನು. ಅದಕ್ಕದು-- ನಾನು ಹೊರಟು ಅವನ ಎಲ್ಲಾ ಪ್ರವಾದಿಗಳ ಬಾಯಿಯಲ್ಲಿ ಸುಳ್ಳಾದ ಆತ್ಮನಾಗಿ ರುವೆನು ಅಂದಿತು.
- Hosea 9:12 ಹೋಶೇಯ 9:12ಅವರು ತಮ್ಮ ಮಕ್ಕಳನ್ನು ಬೆಳೆಸಿದಾಗ್ಯೂ ಒಬ್ಬ ಮನುಷ್ಯನು ಉಳಿಯದ ಹಾಗೆ ನಾನು ಅವರನ್ನು ಅನಾಥರನ್ನಾಗಿ ಮಾಡುವೆನು. ಹೌದು, ನಾನು ಅವ ರನ್ನು ಬಿಟ್ಟು ಹೋಗುವಾಗ ಅವರಿಗೆ ಅಯ್ಯೋ!
- 1 Samuel 11:6 1 ಸಮುವೇಲನು 11:6ಸೌಲನು ಈ ಮಾತು ಗಳನ್ನು ಕೇಳಿದಾಗ ದೇವರ ಆತ್ಮನು ಅವನ ಮೇಲೆ ಬಂದನು; ಅವನು ಬಹು ಕೋಪೋದ್ರೇಕಗೊಂಡವ ನಾಗಿ
- 1 Samuel 19:9–10 1 ಸಮುವೇಲನು 19:9–10ಸೌಲನು ತನ್ನ ಕೈಯಲ್ಲಿ ಈಟಿಯನ್ನು ಹಿಡಿದು ತನ್ನ ಮನೆಯೊಳಗೆ ಕುಳಿತಿರುವಾಗ ಕರ್ತನಿಂದ ಕಳುಹಿಸಲ್ಪಟ್ಟ ದುರಾತ್ಮವು ಅವನ ಮೇಲೆ ಬಂತು; ದಾವೀದನು ತನ್ನ ಕೈಯಿಂದ (ಕಿನ್ನರಿ) ಬಾರಿಸುತ್ತಿದ್ದನು. ಆಗ ಸೌಲನು ದಾವೀದನನ್ನು ಈಟಿಯಿಂದ ಗೋಡೆಗೆ ಹತ್ತಿಕೊಳ್ಳುವ ಹಾಗೆ ಹೊಡೆಯಬೇಕೆಂದು ಯತ್ನಿಸಿದನು; ಆದರೆ ಇವನು ಸೌಲನ ಎದುರಿನಿಂದ ತಪ್ಪಿಸಿಕೊಂಡನು. ಈಟಿಯು ಗೋಡೆಯಲ್ಲಿ ಹತ್ತಿ ಕೊಳ್ಳುವಂತೆ ಅವನು ಹೊಡೆದನು. ದಾವೀದನು ಆ ರಾತ್ರಿಯಲ್ಲಿ ಓಡಿಹೋಗಿ ತಪ್ಪಿಸಿಕೊಂಡನು.
- Judges 16:29 ನ್ಯಾಯಸ್ಥಾಪಕರು 16:29ಎಂದು ಹೇಳಿ ಸಂಸೋನನು ಆ ಮನೆಯ ಆಧಾರವಾದ ಎರಡು ನಡುವಿನ ಸ್ತಂಭ ಗಳನ್ನು ಒಂದು ತನ್ನ ಬಲಗೈಯಿಂದಲೂ ಮತ್ತೊಂದು ತನ್ನ ಎಡಗೈಯಿಂದಲೂ ಹಿಡುಕೊಂಡು--