1 Samuel · chapter 17 · verse 4
1 Samuel 17:4 in Kannada
ಆದರೆ ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಟನು.
Aadare gat oorina ranaveeranaada golyaatanemba hesarulla obbanu philishtiyara dandininda horatanu.
1 Samuel 17:4 in English
- King James Version (KJV)
- And there went out a champion out of the camp of the Philistines, named Goliath, of Gath, whose height [was] six cubits and a span.
- World English Bible (WEB)
- A champion out of the camp of the Philistines named Goliath of Gath, whose height was six cubits and a span went out.
- American Standard Version (ASV)
- And there went out a champion out of the camp of the Philistines, named Goliath, of Gath, whose height was six cubits and a span.
- Bible in Basic English (BBE)
- And a fighter came out from the tents of the Philistines, named Goliath of Gath; he was more than six cubits tall.
- Darby Translation (DBY)
- And there went out a champion from the camp of the Philistines, named Goliath, of Gath, whose height was six cubits and a span.
- Webster's Bible (WBS)
- And there went out a champion from the camp of the Philistines, named Goliath, of Gath, whose hight [was] six cubits and a span.
- Young's Literal Translation (YLT)
- And there goeth out a man of the duellists from the camps of the Philistines, Goliath [is] his name, from Gath; his height [is] six cubits and a span,
Read in context
- 2ಹಾಗೆಯೇ ಸೌಲನೂ ಇಸ್ರಾಯೇಲ್ ಮನುಷ್ಯರೂ ಕೂಡಿ ಕೊಂಡು ಏಲಾ ತಗ್ಗಿನ ಬಳಿಯಲ್ಲಿ ದಂಡಿಳಿದು ಫಿಲಿಷ್ಟಿ ಯರಿಗೆ ಎದುರಾಗಿ ಯುದ್ಧಮಾಡಲು ವ್ಯೂಹ ಕಟ್ಟಿದರು.
- 3ಫಿಲಿಷ್ಟಿಯರು ಒಂದು ಕಡೆಯಾಗಿ ಪರ್ವತದ ಬಳಿ ಯಲ್ಲಿಯೂ ಇಸ್ರಾಯೇಲ್ಯರು ಒಂದು ಕಡೆಯಾಗಿ ಪರ್ವತದ ಬಳಿಯಲ್ಲಿಯೂ ನಿಂತರು, ಅವರ ಮಧ್ಯದಲ್ಲಿ ತಗ್ಗು ಇತ್ತು.
- 4ಆದರೆ ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಹೆಸರುಳ್ಳ ಒಬ್ಬನು ಫಿಲಿಷ್ಟಿಯರ ದಂಡಿನಿಂದ ಹೊರಟನು.
- 5ಅವನು ಆರುವರೆ ಮೊಳ ಎತ್ತರ, ಅವನ ತಲೆಯ ಮೇಲೆ ಹಿತ್ತಾಳೆಯ ಶಿರಸ್ತ್ರಾಣ ಇತ್ತು, ಯುದ್ಧಕವಚವನ್ನು ತೊಟ್ಟುಕೊಂಡಿದ್ದನು. ಯುದ್ಧಕವಚದ ಹಿತ್ತಾಳೆಯು ಐದು ಸಾವಿರ ಶೇಕೆಲು ತೂಕವಾಗಿತ್ತು.
- 6ಅವನ ಕಾಲು ಗಳಲ್ಲಿ ಹಿತ್ತಾಳೆಯ ಚಮ್ಮಳಿಗೆ, ಅವನ ತೋಳುಗಳ ಮಧ್ಯದಲ್ಲಿ ಬರ್ಜಿ ಇತ್ತು.
Cross references
- Joshua 11:22 ಯೆಹೋಶುವ 11:22ಅನಾಕ್ಯರು ಇಸ್ರಾಯೇಲ್ ಮಕ್ಕಳ ದೇಶದಲ್ಲಿ ಒಬ್ಬನೂ ಉಳಿಯ ಲಿಲ್ಲ. ಗಾಜಾದಲ್ಲಿಯೂ ಗತ್ನಲ್ಲಿಯೂ ಅಷ್ಡೋದಿ ನಲ್ಲಿಯೂ ಮಾತ್ರ ಉಳಿದರು.ಹೀಗೆಯೇ ಯೆಹೋಶುವನು ದೇಶವನ್ನೆಲ್ಲಾ ಕರ್ತನು ಮೋಶೆಗೆ ಹೇಳಿದ ಪ್ರಕಾರವೇ ಹಿಡಿದು ಅದನ್ನು ಇಸ್ರಾಯೇಲಿಗೆ ಅವರ ಗೋತ್ರಗಳ ಭಾಗಗಳಿಗನುಸಾರ ಬಾಧ್ಯತೆಯಾಗಿ ಕೊಟ್ಟನು. ಆಗ ದೇಶವು ಯುದ್ಧವಿಲ್ಲದೆ ವಿಶ್ರಮಿಸಿ ಕೊಂಡಿತು.
- 1 Samuel 17:23 1 ಸಮುವೇಲನು 17:23ಅವನು ಇವರ ಸಂಗಡ ಮಾತನಾಡುತ್ತಾ ಇರುವಾಗ ಇಗೋ, ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ಫಿಲಿಷ್ಟಿಯರ ಸೈನ್ಯದಿಂದ ಹೊರಟು ಮೊದಲಿನ ಹಾಗೆಯೇ ಮಾತನಾಡಿದನು; ಆ ಮಾತುಗಳನ್ನು ದಾವೀದನು ಕೇಳಿದನು.
- 1 Chronicles 20:4–8 1 ಪೂರ್ವಕಾಲವೃತ್ತಾಂತ 20:4–8ಇದರ ತರುವಾಯ ಏನಾಯಿತಂದರೆ, ಗೆಜೆರಿನಲ್ಲಿ ಫಿಲಿಷ್ಟಿಯರ ಸಂಗಡ ಯುದ್ಧಉಂಟಾಯಿತು. ಆ ಕಾಲದಲ್ಲಿ ಹುಷಾತ್ಯನಾದ ಸಿಬ್ಬೆಕಾಯಿಯು ರೆಫಾಯನ ಮಕ್ಕಳಲ್ಲಿ ಒಬ್ಬನಾದ ಸಿಪ್ಪೈನನ್ನು ಕೊಂದದ್ದರಿಂದ ಅವರು ತಗ್ಗಿಸಲ್ಪಟ್ಟರು. ತಿರಿಗಿ ಫಿಲಿಷ್ಟಿಯರ ಸಂಗಡ ಯುದ್ಧ ಉಂಟಾಯಿತು. ಆಗ ಯಾಯಾರನ ಮಗ ನಾದ ಎಲ್ಹನಾನನು ಗಿತ್ತಿಯನಾಗಿರುವ ಗೊಲ್ಯಾತನ ಸಹೋದರನಾದ ಲಹ್ಮೀಯನ್ನು ಕೊಂದನು. ಇವನ ಈಟಿಯ ಕಟ್ಟಿಗೆಯು ನೇಯುವ ಕುಂಟೆ ಮರಕ್ಕೆ ಸಮಾನವಾಗಿತ್ತು. ಗತ್ನಲ್ಲಿ ಯುದ್ಧ ಉಂಟಾಯಿತು; ಅಲ್ಲಿ ಆರಾರು ಪ್ರಕಾರ ಇಪ್ಪತ್ತು ನಾಲ್ಕು ಬೆರಳುಗಳುಳ್ಳ ಉನ್ನತನಾದ ಒಬ್ಬ ಮನುಷ್ಯನಿದ್ದನು. ಇವನು ಸಹ ಮಹಾ ಶರೀರ ದವನಾದ ರೆಫಾಯನ ಮಗನಾಗಿದ್ದನು. ಇವನು ಇಸ್ರಾ ಯೇಲನ್ನು ನಿಂದಿಸಿದಾಗ ದಾವೀದನ ಸಹೋದರನಾದ ಶಿಮ್ಮನ ಮಗನಾಗಿರುವ ಯೋನಾತಾನನು ಅವನನ್ನು ಕೊಂದುಬಿಟ್ಟನು.ಇವರು ಗತ್ನಲ್ಲಿ ಆ ಮಹಾ ಶರೀರದವನಿಗೆ ಹುಟ್ಟಿದರು; ಅವರು ದಾವೀದನ ಕೈಯಿಂದಲೂ ಅವನ ಸೇವಕರ ಕೈಯಿಂದಲೂ ಸತ್ತುಬಿದ್ದರು. ಇವರು ಗತ್ನಲ್ಲಿ ಆ ಮಹಾ ಶರೀರದವನಿಗೆ ಹುಟ್ಟಿದರು; ಅವರು ದಾವೀದನ ಕೈಯಿಂದಲೂ ಅವನ ಸೇವಕರ ಕೈಯಿಂದಲೂ ಸತ್ತುಬಿದ್ದರು.
- 2 Samuel 21:16–22 2 ಸಮುವೇಲನು 21:16–22ಆಗ ಮುನ್ನೂರು ಶೇಕೆಲ ತೂಕವಾದ ಹಿತ್ತಾಳೆಯ ಈಟಿಯುಳ್ಳವನಾಗಿ ಹೊಸ ಕತ್ತಿಯನ್ನು ನಡುವಿನಲ್ಲಿ ಕಟ್ಟಿಕೊಂಡಿರುವ ಮಹಾ ಶರೀರದವನ ಮಕ್ಕಳಲ್ಲಿ ಇಷ್ಬೀಬೆನೋಬ್ನು ದಾವೀದ ನನ್ನು ಕೊಲ್ಲಬೇಕೆಂದಿದ್ದನು. ಆದರೆ ಚೆರೂಯಳ ಮಗನಾದ ಅಬೀಷೈಯು ಅವನಿಗೆ ಸಹಾಯವಾಗಿ ಬಂದು ಫಿಲಿಷ್ಟಿಯನನ್ನು ಹೊಡೆದು ಕೊಂದುಹಾಕಿ ದನು. ಆಗ ದಾವೀದನ ಜನರು ಅವನಿಗೆ--ನೀನು ಇಸ್ರಾಯೇಲಿನ ಬೆಳಕನ್ನು ಆರಿಸಿಬಿಡದ ಹಾಗೆ ಇನ್ನು ಮೇಲೆ ನಮ್ಮ ಸಂಗಡ ಯುದ್ಧಕ್ಕೆ ಹೊರಡಬೇಡ ಎಂದು ಅವನಿಗೆ ಆಣೆಯಿಟ್ಟರು. ತರುವಾಯ ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿ ನಲ್ಲಿ ಯುದ್ಧ ಉಂಟಾಯಿತು. ಆಗ ಹುಷಾತನಾದ ಸಿಬ್ಬೆಕೈನು ಮಹಾಶರೀರದವನ ಮಕ್ಕಳಲ್ಲಿ ಸಫ್ ಎಂಬವನನ್ನು ಕೊಂದನು. ತಿರಿಗಿ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ಉಂಟಾದಾಗ ಬೇತ್ಲೆಹೇಮಿನವನಾದ ಯಾರೇಯೋರೆ ಗೀಮ್ ಎಂಬವನ ಮಗನಾಗಿರುವ ಎಲ್ಹಾನಾನನು ಗಿತ್ತಿಯನಾದ ಗೊಲ್ಯಾತನ ಸಹೋದರನನ್ನು ಕೊಂದನು. ಈ ಗೊಲ್ಯಾತನ ಈಟಿಯ ಕಟ್ಟಿಗೆಯು ನೆಯ್ಯುವವರ ದೋಣೀ ಮರಕ್ಕೆ ಸಮಾನವಾಗಿತ್ತು. ಗತ್ ಊರಿನಲ್ಲಿ ಯುದ್ಧ ಉಂಟಾದಾಗ ಅಲ್ಲಿ ಎತ್ತರವಾದ ಒಬ್ಬ ಮನುಷ್ಯನಿದ್ದನು; ಅವನ ಕೈಕಾಲುಗಳ ಬೆರಳುಗಳು ಆರು ಆರಾಗಿ ಲೆಖ್ಖದಲ್ಲಿ ಇಪ್ಪತ್ತು ನಾಲ್ಕು ಆಗಿದ್ದವು. ಇವನು ಸಹ ಮಹಾಶರೀರದವನಿಗೆ ಹುಟ್ಟಿ ದನು. ಅವನು ಇಸ್ರಾಯೇಲನ್ನು ನಿಂದಿಸಿದ್ದರಿಂದ ದಾವೀದನ ಸಹೋದರನಾಗಿರುವ ಶಿಮ್ಮನ ಮಗ ನಾದ ಯೋನಾತಾನನು ಅವನನ್ನು ಕೊಂದುಬಿಟ್ಟನು.ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ಮಹಾಶರೀರದವನಿಗೆ ಹುಟ್ಟಿದ್ದರು; ಇವರು ದಾವೀದ ನಿಂದಲೂ ಅವನ ಸೇವಕರಿಂದಲೂ ಸಂಹಾರವಾದರು. ಈ ನಾಲ್ಕು ಮಂದಿಯು ಗತ್ ಊರಿನಲ್ಲಿದ್ದ ಮಹಾಶರೀರದವನಿಗೆ ಹುಟ್ಟಿದ್ದರು; ಇವರು ದಾವೀದ ನಿಂದಲೂ ಅವನ ಸೇವಕರಿಂದಲೂ ಸಂಹಾರವಾದರು.
- 1 Samuel 27:4 1 ಸಮುವೇಲನು 27:4ದಾವೀ ದನು ಗತ್ ಊರಿಗೆ ಓಡಿಹೋದನೆಂದು ಸೌಲನಿಗೆ ತಿಳಿಸಲ್ಪಟ್ಟದ್ದರಿಂದ ಅವನು ಆ ತರುವಾಯ ಅವನನ್ನು ಹುಡುಕಲಿಲ್ಲ.
- 1 Samuel 21:9–10 1 ಸಮುವೇಲನು 21:9–10ಅದಕ್ಕೆ ಯಾಜಕನು--ನೀನು ಏಲಾ ತಗ್ಗಿನಲ್ಲಿ ಸಂಹರಿಸಿದ ಫಿಲಿಷ್ಟಿಯನಾದ ಗೊಲ್ಯಾ ತನ ಕತ್ತಿಯನ್ನು ಎಫೋದಿನ ಹಿಂದೆ ಒಂದು ಬಟ್ಟೆ ಯಲ್ಲಿ ಸುತ್ತಿ ಇಟ್ಟಿದೆ. ಅದನ್ನು ನೀನು ತೆಗೆದುಕೊಂಡರೆ ತೆಗೆದುಕೋ ಯಾಕಂದರೆ ಅದು ಒಂದೇ ಅಲ್ಲದೆ ಇಲ್ಲಿ ಬೇರೊಂದು ಇಲ್ಲ ಅಂದನು. ಅದಕ್ಕೆ ದಾವೀದನು ಅದರಂಥದ್ದು ಇನ್ನಿಲ್ಲ; ಅದನ್ನು ನನಗೆ ಕೊಡು ಅಂದನು. ದಾವೀದನು ಎದ್ದು ಆ ದಿನ ಸೌಲನ ಭಯದಿಂದ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿ ಬಂದನು.
- Deuteronomy 3:11 ಧರ್ಮೋಪದೇಶಕಾಂಡ 3:11ಮಹಾ ಶರೀರಗಳಲ್ಲಿ ಉಳಿದವರೊಳಗೆ ಬಾಷಾನಿನ ಅರಸ ನಾದ ಓಗನು ಮಾತ್ರ ಉಳಿದನು; ಅಗೋ, ಅವನ ಮಂಚವು ಕಬ್ಬಿಣದ ಮಂಚ; ಅದು ಅಮ್ಮೋನನ ಮಕ್ಕಳ ರಬ್ಬಾನಲ್ಲಿ ಉಂಟಲ್ಲವೋ? ಅದರ ಉದ್ದವು ಪುರುಷನ ಕೈಯಳತೆಯ ಪ್ರಕಾರ ಒಂಭತ್ತು ಮೊಳ, ಅಗಲವು ನಾಲ್ಕು ಮೊಳ ಇತ್ತು.
- 1 Chronicles 11:23 1 ಪೂರ್ವಕಾಲವೃತ್ತಾಂತ 11:23ಮತ್ತೊಮ್ಮೆ ಅವನು ಐದುಮೊಳ ಉದ್ದವಾದ ಐಗುಪ್ತ್ಯನನ್ನೂ ಕೊಂದುಬಿಟ್ಟನು; ಐಗುಪ್ತ್ಯನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಂತಿರುವ ಒಂದು ಈಟಿ ಇತ್ತು; ಅವನು ಒಂದು ಕೋಲು ಹಿಡುಕೊಂಡು ಅವನ ಬಳಿಗೆ ಹೋಗಿ, ಐಗುಪ್ತ್ಯನ ಕೈಯಿಂದ ಈಟಿಯನ್ನು ಕಿತ್ತುಕೊಂಡು ಅವನ ಈಟಿಯಿಂದಲೇ ಅವನನ್ನು ಕೊಂದು ಹಾಕಿದನು.
- Amos 2:9 ಆಮೋಸ 2:9ಆದಾಗ್ಯೂ ನಾನು ಅಮೋರಿಯನನ್ನು ಅವರ ಮುಂದೆ ನಾಶಮಾಡಿದೆನು; ಅವನ ಎತ್ತರವು ದೇವದಾರುಗಳ ಎತ್ತರದಷ್ಟಿತ್ತು. ಅವನು ಓಕ್ ಮರದ ಹಾಗೆ ಬಲವಾಗಿದ್ದನು. ಆದರೂ ನಾನು ಅವನ ಮೇಲೆ ಫಲವನ್ನೂ ಕೆಳಗಿನ ಬೇರುಗಳನ್ನೂ ನಾಶ ಮಾಡಿದೆನು.