1 Samuel · chapter 17 · verse 47
1 Samuel 17:47 in Kannada
ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
Ee dina israayelyarolage devaru iddaanendu bhoolokadavarellaroo tili yuvaru. Kartanu kattiyindaloo eetiyindaloo rakshisuvadilla endu ee sabheyellaa tilidukollu vadu; yaakandare yuddhavu kartanadu; aatanu nimmannu namma kaiyalli oppisikoduvanu andanu.
1 Samuel 17:47 in English
- King James Version (KJV)
- And all this assembly shall know that the LORD saveth not with sword and spear: for the battle [is] the LORD’s, and he will give you into our hands.
- World English Bible (WEB)
- and that all this assembly may know that the LORD doesn’t save with sword and spear; for the battle is the LORD’s, and he will give you into our hand.”
- American Standard Version (ASV)
- and that all this assembly may know that Jehovah saveth not with sword and spear: for the battle is Jehovah’s, and he will give you into our hand.
- Bible in Basic English (BBE)
- And all these people who are here today may see that the Lord does not give salvation by sword and spear: for the fight is the Lord's, and he will give you up into our hands.
- Darby Translation (DBY)
- and all this congregation shall know that Jehovah saves not with sword and spear; for the battle is Jehovah's, and he will give you into our hands.
- Webster's Bible (WBS)
- And all this assembly shall know that the LORD saveth not with sword and spear: for the battle [is] the LORD'S, and he will give you into our hands.
- Young's Literal Translation (YLT)
- and all this assembly do know that not by sword and by spear doth Jehovah save, that the battle [is] Jehovah's, and He hath given you into our hand.'
Read in context
- 45ಆಗ ದಾವೀದನು ಫಿಲಿಷ್ಟಿಯನಿಗೆ--ನೀನು ಕತ್ತಿ ಈಟಿಯ ಗುರಾಣಿಯ ಸಂಗಡ ನನ್ನ ಬಳಿಗೆ ಬರುತ್ತೀ; ಆದರೆ ನೀನು ನಿಂದಿಸಿದ ಇಸ್ರಾಯೇ ಲಿನ ಸೈನ್ಯಗಳ ದೇವರಾದಂಥ ಸೈನ್ಯಗಳ ಕರ್ತನ ಹೆಸರಿ ನಲ್ಲಿ ನಾನು ನಿನ್ನ ಬಳಿಗೆ ಬರುತ್ತೇನೆ.
- 46ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು.
- 47ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
- 48ಆ ಪಿಲಿಷ್ಟಿಯನು ಎದ್ದು ದಾವೀದನಿಗೆ ಎದುರಾಗಿ ಸವಿಾಪಿಸಿ ಬರುವಾಗ ದಾವೀದನು ತ್ವರೆಯಾಗಿ ಆ ಸೈನ್ಯಕ್ಕೆ ಫಿಲಿಷ್ಟಿಯನಿಗೆದುರಿಗೆ ಓಡಿಹೋಗಿ
- 49ತನ್ನ ಕೈಯನ್ನು ಚೀಲದಲ್ಲಿ ಹಾಕಿ ಅದರಲ್ಲಿರುವ ಒಂದು ಕಲ್ಲನ್ನು ತೆಗೆದುಕೊಂಡು ಕವಣೆಯಲ್ಲಿಟ್ಟು ಬೀಸಿ ಫಿಲಿಷ್ಟಿ ಯನ ಹಣೆಯನ್ನು ತಾಕುವಂತೆ ಎಸೆದನು. ಆ ಕಲ್ಲು ಅವನ ಹಣೆಯೊಳಗೆ ಹೊಕ್ಕಿದ್ದರಿಂದ ಅವನು ನೆಲದ ಮೇಲೆ ಬೋರಲು ಬಿದ್ದನು.
Cross references
- Psalm 44:6–7 ಕೀರ್ತನೆಗಳು 44:6–7ನಾನು ನನ್ನ ಬಿಲ್ಲಿ ನಲ್ಲಿ ಭರವಸವಿಡುವದಿಲ್ಲ. ನನ್ನ ಕತ್ತಿಯು ನನ್ನನ್ನು ರಕ್ಷಿಸುವದಿಲ್ಲ. ನೀನು ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿದಿ; ನಮ್ಮನ್ನು ಹಗೆಮಾಡಿದವರನ್ನು ನಾಚಿಕೆ ಪಡಿಸಿದಿ.
- Zechariah 4:6 ಜೆಕರ್ಯ 4:6ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Hosea 1:7 ಹೋಶೇಯ 1:7ನಾನು ಯೆಹೂದದ ಮನೆತನದವರನ್ನು ಕರುಣಿಸಿ ಅವರನ್ನು ಬಿಲ್ಲಿನಿಂದಲಾದರೂ ಕತ್ತಿಯಿಂದಲಾದರೂ ಯುದ್ಧದಿಂದಲಾದರೂ ಕುದುರೆಗಳಿಂದಲಾದರೂ ಇಲ್ಲವೆ ಕುದುರೆಯ ಸವಾರರಿಂದಲಾದರೂ ರಕ್ಷಿಸು ವದಿಲ್ಲ; ಆದರೆ ಅವರನ್ನು ಅವರ ದೇವರಾದ ಕರ್ತ ನಿಂದ ರಕ್ಷಿಸುವೆನು ಅಂದನು.
- Proverbs 21:30–31 ಜ್ಞಾನೋಕ್ತಿಗಳು 21:30–31ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ. ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.
- 1 Samuel 14:6 1 ಸಮುವೇಲನು 14:6ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.
- Romans 8:31 ರೋಮಾಪುರದವರಿಗೆ 8:31ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?
- 2 Chronicles 20:15–17 2 ಪೂರ್ವಕಾಲವೃತ್ತಾಂತ 20:15–17ಆಗ ಅವನುಯೆಹೂದದ ಸಮಸ್ತರೇ, ಯೆರೂಸಲೇಮಿನ ನಿವಾಸಿ ಗಳೇ, ಅರಸನಾದ ಯೆಹೋಷಾಫಾಟನೇ, ಕೇಳಿರಿ. ಕರ್ತನು ನಿಮಗೆ ಹೀಗೆ ಹೇಳುತ್ತಾನೆ--ಈ ಮಹಾಗುಂಪಿನ ನಿಮಿತ್ತ ನೀವು ಭಯಪಡಬೇಡಿರಿ, ಹೆದರ ಬೇಡಿರಿ. ಯಾಕಂದರೆ ಯುದ್ಧವು ನಿಮ್ಮದಲ್ಲ, ದೇವ ರದೇ. ಮಾರನೇ ದಿವಸ ನೀವು ಅವರಿಗೆ ಎದು ರಾಗಿ ಹೋಗಿರಿ. ಇಗೋ, ಅವರು ಹಚ್ಚೀಚು ಎಂಬ ಕಣಿವೆಯಿಂದ ಬರುತ್ತಾರೆ; ಯೆರೂವೇಲಿನ ಅರಣ್ಯದ ಮುಂಭಾಗದಲ್ಲಿರುವ ಹಳ್ಳದ ಅಂತ್ಯದಲ್ಲಿ ಅವರನ್ನು ಕಂಡುಕೊಳ್ಳುವಿರಿ. ಇದರಲ್ಲಿ ನೀವು ಯುದ್ಧ ಮಾಡಲು ಅವಶ್ಯವಿಲ್ಲ; ನೀವು ನೆಲೆಯಾಗಿ ನಿಂತು ಕೊಂಡು ಕರ್ತನು ನಿಮಗೆ ಮಾಡುವ ರಕ್ಷಣೆಯನ್ನು ನೋಡಿರಿ; ಯೆಹೂದದವರೇ, ಯೆರೂಸಲೇಮಿನ ವರೇ, ಭಯಪಡಬೇಡಿರಿ, ಹೆದರಬೇಡಿರಿ; ಮಾರನೇ ದಿವಸ ಅವರೆದುರಿಗೆ ಹೊರಟು ಹೋಗಿರಿ; ಕರ್ತನು ನಿಮ್ಮ ಸಂಗಡ ಇದ್ದಾನೆ ಅಂದನು.
- 2 Chronicles 14:11 2 ಪೂರ್ವಕಾಲವೃತ್ತಾಂತ 14:11ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು.
- Romans 8:37 ರೋಮಾಪುರದವರಿಗೆ 8:37ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ.
- Psalm 46:11 ಕೀರ್ತನೆಗಳು 46:11ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.
- Isaiah 9:7 ಯೆಶಾಯ 9:7ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
- Psalm 33:16–17 ಕೀರ್ತನೆಗಳು 33:16–17ಯಾವ ಅರಸನೂ ಅಧಿಕವಾದ ಸೈನ್ಯದಿಂದ ರಕ್ಷಿಸಲ್ಪಡುವದಿಲ್ಲ. ಪರಾಕ್ರಮ ಶಾಲಿಯು ಅಧಿಕಶಕ್ತಿಯಿಂದ ಬಿಡಿಸಲ್ಪಡುವದಿಲ್ಲ. ಕುದುರೆಯು ಭದ್ರತೆಗೆ ವ್ಯರ್ಥವಾಗಿದೆ; ಇಲ್ಲವೆ ತನ್ನ ಅಧಿಕಬಲದಿಂದ ಯಾರನ್ನೂ ತಪ್ಪಿಸುವದಿಲ್ಲ.