1 Samuel · chapter 17 · verse 53
1 Samuel 17:53 in Kannada
ಇಸ್ರಾಯೇಲ್ ಮಕ್ಕಳು ಫಿಲಿಷ್ಟಿಯರನ್ನು ಓಡಿಸಿಬಿಟ್ಟ ತರುವಾಯ ತಿರಿಗಿ ಬಂದು ಅವರ ಡೇರೆಗಳನ್ನು ಸೂರೆಮಾಡಿದರು.
Israayel makkalu philishtiyarannu odisibitta taruvaaya tirigi bandu avara deregalannu sooremaadidaru.
1 Samuel 17:53 in English
- King James Version (KJV)
- And the children of Israel returned from chasing after the Philistines, and they spoiled their tents.
- World English Bible (WEB)
- The children of Israel returned from chasing after the Philistines, and they plundered their camp.
- American Standard Version (ASV)
- And the children of Israel returned from chasing after the Philistines, and they plundered their camp.
- Bible in Basic English (BBE)
- Then the children of Israel came back from going after the Philistines, and took their goods from the tents.
- Darby Translation (DBY)
- And the children of Israel returned from chasing after the Philistines, and they pillaged their camps.
- Webster's Bible (WBS)
- And the children of Israel returned from chasing the Philistines, and they plundered their tents.
- Young's Literal Translation (YLT)
- and the sons of Israel turn back from burning after the Philistines, and spoil their camps.
Read in context
- 51ದಾವೀದನ ಕೈಯಲ್ಲಿ ಕತ್ತಿಯು ಇರಲಿಲ್ಲ. ದಾವೀದನು ಓಡಿಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನೇ ಒರೆಯಿಂದ ಕಿತ್ತು ಅವನ ತಲೆಯನ್ನು ಕಡಿದು ಅವನನ್ನು ಕೊಂದು ಹಾಕಿದನು. ಫಿಲಿಷ್ಟಿಯರು ತಮ್ಮ ಪರಾಕ್ರಮಶಾಲಿ ಸತ್ತುಹೋದದ್ದನ್ನು ಕಂಡಾಗ ಓಡಿಹೋದರು.
- 52ಇಸ್ರಾಯೇಲ್ ಮನುಷ್ಯರೂ ಯೆಹೂದದ ಮನು ಷ್ಯರೂ ಎದ್ದು ಆರ್ಭಟಿಸಿ ತಗ್ಗಿನ ಮೇರೆಯ ವರೆಗೂ ಎಕ್ರೋನಿನ ಬಾಗಲುಗಳ ವರೆಗೂ ಫಿಲಿಷ್ಟಿಯರನ್ನು ಹಿಂದಟ್ಟಿದರು. ಆದರೆ ಕೊಲ್ಲಲ್ಪಟ್ಟ ಫಿಲಿಷ್ಟಿಯರು ಶಾರಯಿಮಿನ ಮಾರ್ಗದಲ್ಲಿ ಗತ್ ವರೆಗೂ ಎಕ್ರೋನಿನ ವರೆಗೂ ಬಿದ್ದಿದ್ದರು.
- 53ಇಸ್ರಾಯೇಲ್ ಮಕ್ಕಳು ಫಿಲಿಷ್ಟಿಯರನ್ನು ಓಡಿಸಿಬಿಟ್ಟ ತರುವಾಯ ತಿರಿಗಿ ಬಂದು ಅವರ ಡೇರೆಗಳನ್ನು ಸೂರೆಮಾಡಿದರು.
- 54ದಾವೀ ದನು ಫಿಲಿಷ್ಟಿಯನ ತಲೆಯನ್ನು ತಕ್ಕೊಂಡು ಅದನ್ನು ಯೆರೂಸಲೇಮಿಗೆ ತಂದನು. ಆದರೆ ಅವನ ಆಯುಧಗಳನ್ನು ತನ್ನ ಡೇರೆಯಲ್ಲಿ ಇಟ್ಟನು.
- 55ದಾವೀದನು ಫಿಲಿಷ್ಟಿಯನಿಗೆ ಎದುರಾಗಿ ಹೊರಟ ದ್ದನ್ನು ಸೌಲನು ನೋಡಿದಾಗ ತನ್ನ ಸೈನ್ಯಾಧಿಪತಿಯಾದ ಅಬ್ನೇರನಿಗೆ--ಅಬ್ನೇರನೇ, ಈ ಯುವಕನು ಯಾರ ಮಗನು ಅಂದನು. ಅದಕ್ಕೆ ಅಬ್ನೇರನು--ಅರಸನೇ, ನಿನ್ನ ಜೀವದಾಣೆ ನಾನರಿಯೆ ಅಂದನು.
Cross references
- Jeremiah 30:16 ಯೆರೆಮೀಯ 30:16ಆದರೂ ನಿನ್ನನ್ನು ನುಂಗುವವರೆಲ್ಲರೂ ನುಂಗಲ್ಪಡು ವರು; ನಿನ್ನ ವಿರೋಧಿಗಳಲ್ಲಿ ಪ್ರತಿಯೊಬ್ಬನೂ ಸೆರೆಗೆ ಹೋಗುವನು; ನಿನ್ನನ್ನು ಕೊಳ್ಳೆಮಾಡುವವರು ಕೊಳ್ಳೆ ಯಾಗುವರು; ನಿನಗೆ ಬಲೆ ಬೀಸುವವರೆಲ್ಲರನ್ನು ನಾನು ಬಲೆಗೆ ಒಪ್ಪಿಸುವೆನು.
- Jeremiah 4:20 ಯೆರೆಮೀಯ 4:20ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
- 2 Kings 7:7–16 2 ಅರಸುಗಳು 7:7–16ಅವರು ಸಂಜೆಯಲ್ಲಿ ಎದ್ದು ಪಾಳೆಯದಲ್ಲಿದ್ದ ಹಾಗೆ ತಮ್ಮ ಗುಡಾರಗಳನ್ನೂ ಕುದುರೆಗಳನ್ನೂ ಕತ್ತೆಗಳನ್ನೂ ಬಿಟ್ಟು ಬಿಟ್ಟು ತಮ್ಮ ಪ್ರಾಣಕ್ಕೋಸ್ಕರ ಓಡಿಹೋದರು. ಆ ಕುಷ್ಠರೋಗಿಗಳು ದಂಡಿನ ಅಂಚಿನ ವರೆಗೂ ಬಂದು ಒಂದು ಡೇರೆಯಲ್ಲಿ ಪ್ರವೇಶಿಸಿ ಅಲ್ಲಿ ತಿಂದು ಕುಡಿದು ಅಲ್ಲಿದ್ದ ಬೆಳ್ಳಿ ಬಂಗಾರವನ್ನೂ ವಸ್ತ್ರಗಳನ್ನೂ ತೆಗೆದುಕೊಂಡು ಹೋಗಿ ಬಚ್ಚಿಟ್ಟರು; ತಿರಿಗಿ ಬಂದು ಮತ್ತೊಂದು ಡೇರೆಯಲ್ಲಿ ಪ್ರವೇಶಿಸಿ ಅಲ್ಲಿಂದಲೂ ಹಾಗೆಯೇ ತೆಗೆದುಕೊಂಡು ಹೋಗಿ ಬಚ್ಚಿಟ್ಟರು. ಆಗ ಅವರು ಒಬ್ಬರಿಗೊಬ್ಬರು -- ನಾವು ಮಾಡಿದ್ದು ಒಳ್ಳೇದಲ್ಲ; ಈ ದಿವಸ ಒಳ್ಳೇ ಸಮಾಚಾರದ ದಿವಸ; ನಾವು ಸುಮ್ಮನೆ ಇದ್ದು ಉದಯವಾಗುವ ವರೆಗೆ ತಡೆದರೆ ಶಿಕ್ಷೆಯನ್ನು ಹೊಂದುವೆವು; ಆದಕಾರಣ ಬನ್ನಿರಿ ನಾವು ಹೋಗಿ ಅರಸನ ಮನೆಯವರಿಗೆ ತಿಳಿಸೋಣ ಎಂದು ಮಾತಾಡಿಕೊಂಡರು. ಹಾಗೆಯೇ ಅವರು ಬಂದು ಪಟ್ಟಣದ ಬಾಗಲು ಕಾಯುವವನನ್ನು ಕರೆದು ಅವನಿಗೆ -- ನಾವು ಅರಾಮ್ಯರ ಪಾಳೆಯಕ್ಕೆ ಹೋಗಿ ಬಂದೆವು; ಇಗೋ, ಅಲ್ಲಿ ಕಟ್ಟಲ್ಪಟ್ಟ ಕುದುರೆಗಳೂ ಕತ್ತೆಗಳೂ ನಿಶ್ಯಬ್ದವಾದ ಡೇರೆಗಳೂ ಹೊರತಾಗಿ ಮನು ಷ್ಯನಾದರೂ ಮನುಷ್ಯನ ಶಬ್ದವಾದರೂ ಅಲ್ಲಿ ಇಲ್ಲ ಅಂದರು. ಅವನು ಬಾಗಲು ಕಾಯುವವರನ್ನು ಕರೆದನು; ಅವರು ಒಳಗಿರುವ ಅರಸನ ಮನೆಯವರಿಗೆ ತಿಳಿಸಿದರು. ಆಗ ಅರಸನು ರಾತ್ರಿಯಲ್ಲಿ ಎದ್ದು ತನ್ನ ಸೇವಕರಿಗೆ--ಅರಾಮ್ಯರು ನಮಗೆ ಮಾಡಿದ್ದನ್ನು ನಿಮಗೆ ತಿಳಿಸುತ್ತೇನೆ. ನಾವು ಹಸಿದವರಾಗಿದ್ದೇವೆಂದು ಅವರು ತಿಳಿದು ಹೊಲದಲ್ಲಿ ಅಡಗಿಕೊಳ್ಳಲು ಪಾಳೆಯ ದಿಂದ ಹೊರಟು--ಅವರು ಪಟ್ಟಣದಿಂದ ಹೊರಟು ಬಂದಾಗ ನಾವು ಅವರನ್ನು ಸಜೀವಿಗಳನ್ನಾಗಿಯೇ ಹಿಡಿದು ಪಟ್ಟಣದಲ್ಲಿ ಪ್ರವೇಶಿಸುವೆವು ಅಂದುಕೊಂಡಿ ದ್ದಾರೆ ಅಂದನು. ಆಗ ಅವನ ಸೇವಕರಲ್ಲಿ ಒಬ್ಬನು --ಕುದುರೆಗಳಲ್ಲಿ ಐದು ಕುದುರೆಗಳನ್ನು ಕೆಲವರು ತಕ್ಕೊಂಡು ಹೋಗಲಿ; ಇಗೋ, ಅವು ಇಸ್ರಾಯೇಲಿನ ಎಲ್ಲಾ ಸಮೂಹದಲ್ಲಿ ಉಳಿದವುಗಳ ಹಾಗೆ ಅವೆ; ಅಂದರೆ ಇಗೋ, ಇಸ್ರಾಯೇಲಿನ ಎಲ್ಲಾ ಗುಂಪಿನಲ್ಲಿ ನಾಶವಾಗದೆ ಉಳಿದವುಗಳಂತಿವೆ; ನಾವು ಕಳುಹಿಸಿ ನೋಡೋಣ ಅಂದನು. ಹಾಗೆಯೇ ಅವರು ಎರಡು ರಥಗಳ ಕುದುರೆಗಳನ್ನು ತೆಗೆದುಕೊಂಡರು; ಆಗ ಅರಸನು--ನೀವು ಅರಾಮ್ಯರ ಪಾಳೆಯದ ಹಿಂದೆ ಹೋಗಿ ನೋಡಿರಿ ಎಂದು ಹೇಳಿ ಕಳುಹಿಸಿದನು. ಅವರು ಅವರ ಹಿಂದೆ ಯೊರ್ದನಿನ ವರೆಗೆ ಹೋದರು. ಇಗೋ, ಮಾರ್ಗದಲ್ಲೆಲ್ಲಾ ಅರಾಮ್ಯರು ಬಹು ಅವಸರದಿಂದ ಬಿಸಾಡಿದ ವಸ್ತ್ರಗಳೂ ಪಾತ್ರೆ ಗಳೂ ತುಂಬಿದ್ದನ್ನು ದೂತರು ತಿರಿಗಿ ಬಂದು ಅರಸ ನಿಗೆ ತಿಳಿಸಿದರು. ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲುಕೊಂಡರು. ಆದದ ರಿಂದ ಕರ್ತನ ವಾಕ್ಯದ ಪ್ರಕಾರವೇ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆಗೋದಿಯು ಒಂದು ಶೇಕೆಲಿಗೂ ಮಾರಲ್ಪಟ್ಟಿತು.