Jeremiah · chapter 4 · verse 20
Jeremiah 4:20 in Kannada
ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
Naasha nada mele naashanavu koogalpattide, deshavellaa haalaayitu; phakkane nanna gudaaragaloo kshana maatradalli nanna teregaloo haalaadavu.
Jeremiah 4:20 in English
- King James Version (KJV)
- Destruction upon destruction is cried; for the whole land is spoiled: suddenly are my tents spoiled, [and] my curtains in a moment.
- World English Bible (WEB)
- Destruction on destruction is decreed, for the whole land is laid waste. Suddenly my tents are destroyed, and my curtains gone in a moment.
- American Standard Version (ASV)
- Destruction upon destruction is cried; for the whole land is laid waste: suddenly are my tents destroyed, [and] my curtains in a moment.
- Bible in Basic English (BBE)
- News is given of destruction on destruction; all the land is made waste: suddenly my tents, straight away my curtains, are made waste.
- Darby Translation (DBY)
- Destruction upon destruction is proclaimed; for the whole land is wasted: suddenly are my tents laid waste, my curtains, in a moment.
- Webster's Bible (WBS)
- Destruction upon destruction is cried; for the whole land is laid waste; suddenly are my tents ruined, [and] my curtains in a moment.
- Young's Literal Translation (YLT)
- Destruction on destruction is proclaimed, For spoiled hath been all the land, Suddenly spoiled have been my tents, In a moment — my curtains.
Read in context
- 18ನಿನ್ನ ಮಾರ್ಗಗಳು ನಿನ್ನ ಕ್ರಿಯೆಗಳು ಇವುಗಳನ್ನು ನಿನಗೆ ಉಂಟುಮಾಡಿದವು, ಇದು ನಿನ್ನ ಕೆಟ್ಟತನವೇ; ಅದು ಕಹಿಯಾದದ್ದಲ್ಲವೋ? ನಿನ್ನ ಹೃದಯಕ್ಕೆ ತಾಕುತ್ತದ್ದಲ್ಲವೋ?
- 19ನನ್ನ ಕರುಳುಗಳು, ನನ್ನ ಕರುಳುಗಳು! ನನ್ನ ಹೃದಯದಲ್ಲಿಯೇ ನೊಂದುಕೊಂಡಿದ್ದೇನೆ; ನನ್ನ ಹೃದ ಯವು ನನ್ನಲ್ಲಿ ಕೂಗುತ್ತದೆ, ಮೌನವಾಗಿರಲಾರೆನು; ಓ ನನ್ನ ಪ್ರಾಣವೇ, ತುತೂರಿಯ ಶಬ್ದವನ್ನೂ ಯುದ್ಧದ ಆರ್ಭಟವನ್ನೂ ನೀನು ಕೇಳಿದ್ದೀ.
- 20ನಾಶ ನದ ಮೇಲೆ ನಾಶನವು ಕೂಗಲ್ಪಟ್ಟಿದೆ, ದೇಶವೆಲ್ಲಾ ಹಾಳಾಯಿತು; ಫಕ್ಕನೆ ನನ್ನ ಗುಡಾರಗಳೂ ಕ್ಷಣ ಮಾತ್ರದಲ್ಲಿ ನನ್ನ ತೆರೆಗಳೂ ಹಾಳಾದವು.
- 21ಎಷ್ಟರ ವರೆಗೆ ನಾನು ಧ್ವಜವನ್ನು ನೋಡುತ್ತಾ ತುತೂರಿಯ ಶಬ್ದವನ್ನು ಕೇಳಲಿ?
- 22ನನ್ನ ಜನರು ಮೂಢರಾಗಿದ್ದಾರೆ, ನನ್ನನ್ನು ಅವರು ಅರಿಯರು; ಕುಡಿಕರಾದ ಮಕ್ಕಳಾಗಿದ್ದಾರೆ, ಗ್ರಹಿಕೆ ಯುಳ್ಳವರಲ್ಲ; ಕೆಟ್ಟದ್ದನ್ನು ಮಾಡುವದಕ್ಕೆ ಜಾಣರಾಗಿ ದ್ದಾರೆ, ಒಳ್ಳೇದನ್ನು ಮಾಡುವದನ್ನು ಅರಿಯರು.
Cross references
- Psalm 42:7 ಕೀರ್ತನೆಗಳು 42:7ನಿನ್ನ ನೀರಿನ ಪ್ರವಾಹದ ಶಬ್ದದಿಂದ ಅಗಾಧವು ಅಗಾಧಕ್ಕೆ ಕೂಗು ತ್ತದೆ; ನಿನ್ನ ಅಲೆಗಳೂ ತೆರೆಗಳೂ ಎಲ್ಲಾ ನನ್ನ ಮೇಲೆ ಹಾದುಹೋಗಿವೆ.
- 2 Thessalonians 1:9 2 ಥೆಸಲೊನೀಕದವರಿಗೆ 1:9ಅಂಥವರು ಕರ್ತನ ಸಾನಿಧ್ಯದಿಂದಲೂ ಬಲವುಳ್ಳ ಆತನ ಮಹಿಮೆಯಿಂದಲೂ ನಿತ್ಯ ನಾಶನವೆಂಬ ಶಿಕ್ಷೆ ಯನ್ನು ಹೊಂದುವರು.
- Matthew 10:28 ಮತ್ತಾಯನು 10:28ಶರೀರವನ್ನು ಕೊಲ್ಲುವವರಿಗೆ ಹೆದರಬೇಡಿರಿ; ಯಾಕಂದರೆ ಅವರು ಆತ್ಮವನ್ನು ಕೊಲ್ಲಲು ಶಕ್ತರಲ್ಲ; ಆದರೆ ಆತ್ಮ ಮತ್ತು ಶರೀರ ಎರಡನ್ನೂ ನರಕದಲ್ಲಿ ನಾಶಮಾಡಲು ಶಕ್ತನಾಗಿರು ವಾತನಿಗೇ ಭಯಪಡಿರಿ.
- Joel 1:15 ಯೋವೇಲ 1:15ಆ ದಿನಕ್ಕಾಗಿ ಅಯ್ಯೋ, ಯಾಕಂದರೆ ಕರ್ತನ ದಿನವು ಸವಿಾಪವಾಗಿದೆ; ಸರ್ವಶಕ್ತನ ಕಡೆಯಿಂದ ನಾಶದಂತೆ ಬರುತ್ತದೆ.
- Ezekiel 7:25–26 ಯೆಹೆಜ್ಕೇಲನು 7:25–26ನಾಶವು ಬರುತ್ತದೆ ಮತ್ತು ಅವರು ಸಮಾಧಾನವನ್ನು ಹುಡುಕುತ್ತಾರೆ; ಆದರೆ ಅದು ಇರುವದಿಲ್ಲ. ಕೇಡಿನ ಮೇಲೆ ಕೇಡು ಬರು ವದು; ಸುದ್ದಿಯ ಮೇಲೆ ಸುದ್ದಿ ಬರುವದು. ಆಗ ಅವರು ಪ್ರವಾದಿಯ ದರ್ಶನವನ್ನು ಹುಡುಕುವರು. ಆದರೆ ನ್ಯಾಯಪ್ರಮಾಣವು ಯಾಜಕರನ್ನೂ ಆಲೋ ಚನೆಯು ಪೂರ್ವಿಕರನ್ನೂ ಬಿಟ್ಟು ನಾಶವಾಗುವದು.ಅರಸನು ದುಃಖಿಸುವನು, ಪ್ರಧಾನನು ನಿರ್ಗತಿಕನಾ ಗುವನು; ದೇಶದ ಜನರ ಕೈಗಳು ತೊಂದರೆಗೊಳ್ಳು ವವು; ಅವರ ಮಾರ್ಗಗಳ ಪ್ರಕಾರ ಅವರ ಹಾಗೆಯೇ ಮಾಡುವೆನು; ಅವರ ನ್ಯಾಯಗಳ ಪ್ರಕಾರ ಅವರಿಗೆ ನ್ಯಾಯತೀರಿಸುವೆನು. ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Leviticus 26:24 ಯಾಜಕಕಾಂಡ 26:24ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು.
- Leviticus 26:21 ಯಾಜಕಕಾಂಡ 26:21ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧ ವಾಗಿ ನಡೆದರೆ ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ನಿಮ್ಮ ಮೇಲೆ ವ್ಯಾಧಿಗಳನ್ನು ಬರಮಾಡುವೆನು.
- Jeremiah 10:19–20 ಯೆರೆಮೀಯ 10:19–20ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ಕಠಿಣವಾಗಿದೆ; ಆದರೆ ನಾನು--ನಿಶ್ಚಯ ವಾಗಿ ಇದು ಸಂತಾಪವಾಗಿದೆ; ನಾನು ತಾಳಲೇಬೇಕು ಅಂದೆನು. ನನ್ನ ಗುಡಾರವು ಸೂರೆಯಾಯಿತು; ನನ್ನ ಹಗ್ಗಗಳೆಲ್ಲಾ ಹರಿದಿವೆ; ನನ್ನ ಮಕ್ಕಳು ನನ್ನನ್ನು ಬಿಟ್ಟು ಹೋಗಿದ್ದಾರೆ, ಅವರು ಇಲ್ಲ; ಇನ್ನು ಮೇಲೆ ನನ್ನ ಡೇರೆಯನ್ನು ಹರಡುವದಕ್ಕೂ ನನ್ನ ಪರದೆಗಳನ್ನು ನಿಲ್ಲಿಸುವದಕ್ಕೂ ಒಬ್ಬನೂ ಇಲ್ಲ.
- Isaiah 13:6 ಯೆಶಾಯ 13:6ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು.
- Isaiah 33:20 ಯೆಶಾಯ 33:20ನಮ್ಮ ಹಬ್ಬಗಳು ನಡೆಯುವ ಚೀಯೋನ್ ಪಟ್ಟಣವನ್ನು ದೃಷ್ಟಿಸಿರಿ, ಯೆರೂಸಲೇಮ್ ನೆಮ್ಮದಿಯ ನಿವಾಸವಾಗಿಯೂ ಗೂಟಕೀಳದ, ಹಗ್ಗ ಹರಿಯದ, ಒಂದೇ ಕಡೆ ಇರುವ ಗುಡಾರವಾಗಿಯೂ ಇರುವದನ್ನು ನೀವು ಕಣ್ಣಾರೆ ಕಾಣುವಿರಿ.
- Lamentations 3:47 ಪ್ರಲಾಪಗಳು 3:47ಭಯವೂ ಬೋನೂ ನಾಶನವೂ ಸಂಹಾರವೂ ನಮ್ಮ ಮೇಲೆ ಬಂದಿವೆ.
- Exodus 33:5 ವಿಮೋಚನಕಾಂಡ 33:5ಕರ್ತನು ಮೋಶೆಗೆ--ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳು--ನೀವು ಬಗ್ಗದ ಕುತ್ತಿಗೆಯುಳ್ಳ ಜನರು, ನಾನು ಕ್ಷಣಮಾತ್ರದಲ್ಲಿ ನಿಮ್ಮೊಳಗೆ ಬಂದು ನಿಮ್ಮನ್ನು ನಿರ್ಮೂಲಮಾಡುವೆನು. ಹೀಗಿರುವದರಿಂದ ನಾನು ನಿಮಗೆ ಏನು ಮಾಡಬೇಕೋ ಅದನ್ನು ತಿಳುಕೊಳ್ಳು ವಂತೆ ನಿಮ್ಮ ಆಭರಣಗಳನ್ನು ಈಗ ನಿಮ್ಮಿಂದ ತೆಗೆದು ಬಿಡಿರಿ ಎಂದು ಹೇಳು ಅಂದನು.