1 Samuel · chapter 2 · verse 6
1 Samuel 2:6 in Kannada
ಕರ್ತನು ಸಾಯಿಸುವಾತನೂ ಬದುಕಿಸುವಾತನೂ ಆಗಿದ್ದಾನೆ. ಸಮಾಧಿಗೆ ಇಳಿಯುವಂತೆ ಮಾಡುತ್ತಾನೆ. ಮೇಲಕ್ಕೆ ತರುತ್ತಾನೆ.
Kartanu saayisuvaatanoo badukisuvaatanoo aagiddaane. Samaadhige iliyuvante maaduttaane. Melakke taruttaane.
1 Samuel 2:6 in English
- King James Version (KJV)
- The LORD killeth, and maketh alive: he bringeth down to the grave, and bringeth up.
- World English Bible (WEB)
- “The LORD kills and makes alive. He brings down to Sheol and brings up.
- American Standard Version (ASV)
- Jehovah killeth, and maketh alive: He bringeth down to Sheol, and bringeth up.
- Bible in Basic English (BBE)
- The Lord is the giver of death and life: sending men down to the underworld and lifting them up.
- Darby Translation (DBY)
- Jehovah killeth, and maketh alive; he bringeth down to Sheol, and bringeth up.
- Webster's Bible (WBS)
- The LORD killeth, and maketh alive: he bringeth down to the grave, and bringeth up.
- Young's Literal Translation (YLT)
- Jehovah putteth to death, and keepeth alive, He bringeth down to Sheol, and bringeth up.
Read in context
- 4ಪರಾಕ್ರಮ ಶಾಲಿಗಳ ಬಿಲ್ಲುಗಳು ಮುರಿಯಲ್ಪಟ್ಟವು; ಎಡವಿದವರು ಬಲದಿಂದ ನಡುಕಟ್ಟಲ್ಪಟ್ಟಿದ್ದಾರೆ.
- 5ತೃಪ್ತಿಪಟ್ಟವರು ರೊಟ್ಟಿಗೋಸ್ಕರ ಕೂಲಿ ಕೆಲಸಕ್ಕೆ ಹೋಗುತ್ತಾರೆ; ಹಸಿದವರು ತಿಂದು ತೃಪ್ತರಾದರು; ಬಂಜೆಯಾದವಳು ಏಳು ಮಂದಿ ಮಕ್ಕಳನ್ನು ಹೆತ್ತಳು, ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನ ಳಾದಳು.
- 6ಕರ್ತನು ಸಾಯಿಸುವಾತನೂ ಬದುಕಿಸುವಾತನೂ ಆಗಿದ್ದಾನೆ. ಸಮಾಧಿಗೆ ಇಳಿಯುವಂತೆ ಮಾಡುತ್ತಾನೆ. ಮೇಲಕ್ಕೆ ತರುತ್ತಾನೆ.
- 7ಕರ್ತನು ಬಡತನವನ್ನು ಐಶ್ವರ್ಯ ವನ್ನು ಕೊಡುವಾತನೂ ತಗ್ಗಿಸುವಾತನೂ ಉನ್ನತಮಾಡು ವಾತನೂ ಆಗಿದ್ದಾನೆ.
- 8ದರಿದ್ರನನ್ನು ಭೂಮಿಯ ಧೂಳಿನಿಂದ ಎತ್ತುವಾ ತನೂ ಭಿಕ್ಷುಕನನ್ನು ತಿಪ್ಪೆಗುಂಡಿಯಿಂದ ತೆಗೆದು ಉನ್ನತ ಮಾಡುವಾತನೂ ಆಗಿದ್ದಾನೆ. ಅವರನ್ನು ಪ್ರಧಾ ನರ ಮಧ್ಯದಲ್ಲಿ ಕೂಡ್ರಿಸುತ್ತಾನೆ; ಘನತೆಯ ಸಿಂಹಾ ಸನವನ್ನು ಬಾಧ್ಯವಾಗಿ ಕೊಡುತ್ತಾನೆ. ಯಾಕಂದರೆ ಭೂಮಿಯ ಆಧಾರಸ್ತಂಭಗಳು ಕರ್ತನದಾಗಿವೆ, ಭೂಲೋಕವನ್ನು ಅವುಗಳ ಮೇಲೆ ಇಟ್ಟಿದ್ದಾನೆ.
Cross references
- Deuteronomy 32:39 ಧರ್ಮೋಪದೇಶಕಾಂಡ 32:39ನಾನು ಆತನೇ ಎಂದೂ ನನ್ನ ಹಾಗೆ ಬೇರೆ ದೇವರಿಲ್ಲವೆಂದೂ ಈಗ ನೋಡಿರಿ; ನಾನೇ ಸಾಯಿಸು ತ್ತೇನೆ, ಬದುಕಿಸುತ್ತೇನೆ; ಗಾಯ ಮಾಡುತ್ತೇನೆ, ನಾನೇ ಸ್ವಸ್ಥ ಮಾಡುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
- Isaiah 26:19 ಯೆಶಾಯ 26:19ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಏಳುವವು; ದೂಳಿನ ನಿವಾಸಿಗಳೇ; ಎಚ್ಚತ್ತು ಹರ್ಷ ಸ್ವರಗೈಯಿರಿ! ನೀನು ಸುರಿಯುವ ಇಬ್ಬನಿಯು ಇಬ್ಬನಿಯ ಸಸ್ಯಗಳಂತಿವೆ. ಭೂಮಿಯು ಸತ್ತವರನ್ನು ಹೊರಪಡಿಸುವದು.
- 2 Kings 5:7 2 ಅರಸುಗಳು 5:7ಇಸ್ರಾಯೇಲ್ಯರ ಅರಸನು ಆ ಪತ್ರವನ್ನು ಓದಿದ ಮೇಲೆ ತನ್ನ ವಸ್ತ್ರಗಳನ್ನು ಹರಿದುಕೊಂಡು--ಕೊಲ್ಲು ವದಕ್ಕೂ ಬದುಕಿಸುವದಕ್ಕೂ ನಾನು ದೇವರೋ? ಇವನ ಕುಷ್ಠರೋಗವನ್ನು ತಪ್ಪಿಸಿ ವಾಸಿಮಾಡುವದಕ್ಕೆ ನನ್ನ ಬಳಿಗೆ ಕಳುಹಿಸಿದ್ದೇನು? ಇವನು ನನಗೆ ವಿರೋಧ ವಾಗಿ ಜಗಳಕ್ಕೆ ಕಾರಣ ಹುಡುಕುವದನ್ನು ನೀವು ನೋಡಿ ತಿಳುಕೊಳ್ಳಿರಿ ಅಂದನು.
- Revelation 1:18 ಪ್ರಕಟನೆ 1:18ಸತ್ತವನಾದೆನು,ಈಗ ಬದುಕುವವನಾಗಿದ್ದೇನೆ. ಇಗೋ, ನಾನು ಎಂದೆಂ ದಿಗೂ ಬದುಕುವವನಾಗಿದ್ದೇನೆ. ಆಮೆನ್. ನರಕದ ಮತ್ತು ಮರಣದ ಬೀಗದ ಕೈಗಳೂ ನನ್ನಲ್ಲಿ ಅವೆ.
- Job 5:18 ಯೋಬನು 5:18ಆತನೇ ನೋಯಿಸುತ್ತಾನೆ, ಕಟ್ಟುವವನು ಆತನೇ; ಆತನು ಗಾಯ ಮಾಡುತ್ತಾನೆ; ಆತನ ಕೈಗಳು ಸ್ವಸ್ಥಮಾಡುತ್ತವೆ.
- Jonah 2:2–6 ಯೋನ 2:2–6ನಾನು ನನ್ನ ವ್ಯಥೆಯ ದೆಸೆಯಿಂದ ಕರ್ತನಿಗೆ ಮೊರೆಯಿಟ್ಟೆನು; ಆತನು ನನ್ನ ಕೂಗನ್ನು ಕೇಳಿದನು; ನರಕದ ಹೊಟ್ಟೆ ಯೊಳಗಿಂದ ನಾನು ಕೂಗಿದೆನು, ಆಗ ನನ್ನ ಶಬ್ದವನ್ನು ನೀನು ಕೇಳಿದಿ. ನನ್ನನ್ನು ನೀನು ಅಗಾಧದಲ್ಲಿಯೂ ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿ; ಪ್ರವಾಹಗಳು ನನ್ನನ್ನು ಸುತ್ತಿಕೊಂಡವು; ನಿನ್ನ ಎಲ್ಲಾ ಅಲೆಗಳೂ ನಿನ್ನ ತೆರೆಗಳೂ ನನ್ನ ಮೇಲೆ ದಾಟಿಹೋದವು. ಆಗ ನಾನು ಹೇಳಿದ್ದು--ನಿನ್ನ ಕಣ್ಣುಗಳ ಎದುರಿನಿಂದ ಹೊರಗೆ ಹಾಕಲ್ಪಟ್ಟಿದ್ದೇನೆ; ಆದಾಗ್ಯೂ ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ತಿರುಗಿ ನೋಡುವೆನು. ನೀರು ಗಳು ಪ್ರಾಣದ ಮಟ್ಟಿಗೂ ನನ್ನನ್ನು ಸುತ್ತಿಕೊಂಡವು; ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು; ಆಪುಗಳು ನನ್ನ ತಲೆಯನ್ನು ಸುತ್ತಿಕೊಂಡಿದ್ದವು. ಬೆಟ್ಟಗಳ ಬುಡದ ತನಕ ಇಳಿದು ಹೋದೆನು; ಭೂಮಿಯ ಅಡ್ಡದಂಡೆಗಳು ನಿತ್ಯವಾಗಿ ನನ್ನ ಸುತ್ತಲಿ ದ್ದವು; ಆದಾಗ್ಯೂ ಓ ದೇವರಾದ ನನ್ನ ಕರ್ತನೇ, ನೀನು ನನ್ನ ಪ್ರಾಣವನ್ನು ನಾಶನದೊಳಗಿಂದ ಎಬ್ಬಿಸಿದ್ದೀ.
- John 5:25–29 ಯೋಹಾನನು 5:25–29ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಸತ್ತವರು ದೇವಕುಮಾರನ ಧ್ವನಿಯನ್ನು ಕೇಳುವ ಗಳಿಗೆ ಬರುತ್ತದೆ; ಅದು ಈಗಲೇ ಬಂದಿದೆ; ಕೇಳುವವರು ಬದುಕುವರು. ತಂದೆಯು ಹೇಗೆ ಸ್ವತಃ ಜೀವವುಳ್ಳವನಾಗಿದ್ದಾನೋ ಹಾಗೆಯೇ ಮಗನೂ ಸ್ವತಃ ಜೀವವುಳ್ಳವನಾಗಿರುವಂತೆ ಆತನು ಅನುಗ್ರಹಿಸಿದ್ದಾನೆ. ಆತನು ಮನುಷ್ಯಕುಮಾರ ನಾಗಿರುವದರಿಂದ ನ್ಯಾಯತೀರಿಸುವ ಅಧಿಕಾರವನ್ನು ಸಹ ಆತನಿಗೆ ಕೊಟ್ಟಿದ್ದಾನೆ. ಇದಕ್ಕೆ ಆಶ್ಚರ್ಯಪಡ ಬೇಡಿರಿ; ಒಂದು ಕಾಲ ಬರುತ್ತದೆ; ಆಗ ಸಮಾಧಿಗಳಲ್ಲಿ ರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಹೊರಗೆ ಬರುವರು, ಒಳ್ಳೇದನ್ನು ಮಾಡಿದವರು ಜೀವದ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ತೀರ್ಪಿನ ಪುನರುತ್ಥಾನವನ್ನೂ ಹೊಂದುವರು.
- John 11:25 ಯೋಹಾನನು 11:25ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;
- Hosea 6:1–2 ಹೋಶೇಯ 6:1–2ಬನ್ನಿರಿ ನಾವು ಕರ್ತನ ಕಡೆಗೆ ತಿರುಗಿ ಕೊಳ್ಳೋಣ ಯಾಕಂದರೆ ಆತನು ಸೀಳಿ ಬಿಟ್ಟಿದ್ದಾನೆ, ನಮ್ಮನ್ನು ಸ್ವಸ್ಥ ಮಾಡುತ್ತಾನೆ; ಆತನು ಹೊಡೆದಿದ್ದಾನೆ; ಆತನು ನಮ್ಮನ್ನು ಕಟ್ಟುತ್ತಾನೆ. ಆತನು ಎರಡು ದಿನಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು; ಮೂರನೆಯ ದಿನದಲ್ಲಿ ಆತನೇ ನಮ್ಮನ್ನು ಎಬ್ಬಿಸುವನು; ನಾವು ಆತನ ದೃಷ್ಟಿಯಲ್ಲಿ ಜೀವಿಸುವೆವು.
- 1 Samuel 20:3 1 ಸಮುವೇಲನು 20:3ಆಗ ದಾವೀದನು ಪ್ರಮಾಣಮಾಡಿ--ನಿನ್ನ ಕಣ್ಣು ಮುಂದೆ ನನಗೆ ದಯೆದೊರಕೀತೆಂದು ನಿನ್ನ ತಂದೆಯು ನಿಶ್ಚಯವಾಗಿ ಬಲ್ಲನು; ಆದಕಾರಣ ಯೋನಾತಾನನು ವ್ಯಥೆಪಡದ ಹಾಗೆ--ಅವನು ಇದನ್ನು ತಿಳಿಯಬಾರದು ಎಂದು ಅನ್ನುತ್ತಾನೆ. ನಿಶ್ಚಯವಾಗಿ ಕರ್ತನಾಣೆ, ನಿನ್ನ ಪ್ರಾಣದಾಣೆ, ನನಗೂ ಮರಣಕ್ಕೂ ಒಂದು ಹೆಜ್ಜೆ ದೂರ ಮಾತ್ರವದೆ ಅಂದನು.
- Matthew 12:40 ಮತ್ತಾಯನು 12:40ಯಾಕಂದರೆ ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ಮಾನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಕುಮಾರನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭ ದಲ್ಲಿರುವನು.
- Psalm 116:3 ಕೀರ್ತನೆಗಳು 116:3ಮರಣದ ದುಃಖ ಗಳು ನನ್ನನ್ನು ಆವರಿಸಿಕೊಂಡವು; ನರಕದ ಬಾಧೆ ಗಳೂ ಇಕ್ಕಟ್ಟೂ ದುಃಖವೂ ನನ್ನನ್ನು ಹಿಡಿದವು.