John · chapter 11 · verse 25
John 11:25 in Kannada
ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;
Yesu aakege--naane punarutthaanavoo jeevavoo aagiddene; nannalli nambike iduvavanu sattaroo badukuvanu;
John 11:25 in English
- King James Version (KJV)
- Jesus said unto her, I am the resurrection, and the life: he that believeth in me, though he were dead, yet shall he live:
- World English Bible (WEB)
- Jesus said to her, “I am the resurrection and the life. He who believes in me will still live, even if he dies.
- American Standard Version (ASV)
- Jesus said unto her, I am the resurrection, and the life: he that believeth on me, though he die, yet shall he live;
- Bible in Basic English (BBE)
- Jesus said to her, I am myself that day and that life; he who has faith in me will have life even if he is dead;
- Darby Translation (DBY)
- Jesus said to her, I am the resurrection and the life: he that believes on me, though he have died, shall live;
- Webster's Bible (WBS)
- Jesus said to her, I am the resurrection, and the life: he that believeth in me, though he were dead, yet shall he live:
- Young's Literal Translation (YLT)
- Jesus said to her, 'I am the rising again, and the life; he who is believing in me, even if he may die, shall live;
Read in context
- 23ಯೇಸು ಆಕೆಗೆ--ನಿನ್ನ ಸಹೋದರನು ತಿರಿಗಿ ಎದ್ದೇಳುವನು ಎಂದು ಹೇಳಿದನು.
- 24ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.
- 25ಯೇಸು ಆಕೆಗೆ--ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು;
- 26ಯಾವನಾದರೂ ಬದುಕುತ್ತಾ ನನ್ನಲ್ಲಿ ನಂಬಿಕೆಯಿಡುವದಾದರೆ ಅವನು ಎಂದಿಗೂ ಸಾಯುವ ದಿಲ್ಲ. ಇದನ್ನು ನೀನು ನಂಬುತ್ತೀಯೋ ಎಂದು ಕೇಳಿದ್ದಕ್ಕೆ
- 27ಆಕೆಯು ಆತನಿಗೆ--ಹೌದು, ಕರ್ತನೇ, ಲೋಕಕ್ಕೆ ಬರಬೇಕಾಗಿದ್ದ ದೇವರಮಗನಾದ ಕ್ರಿಸ್ತನು ನೀನೇ ಎಂದು ನಾನು ನಂಬುತ್ತೇನೆ ಅಂದಳು.
Cross references
- 1 Thessalonians 4:14 1 ಥೆಸಲೊನೀಕದವರಿಗೆ 4:14ಯೇಸು ಸತ್ತು ತಿರಿಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನ ಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬ ಬೇಕಲ್ಲವೇ.
- John 3:36 ಯೋಹಾನನು 3:36ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.
- 1 John 5:11–12 1 ಯೋಹಾನನು 5:11–12ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು.ಈ ಜೀವವು ಆತನ ಮಗನಲ್ಲಿ ಅದೆ ಎಂಬದೇ. ಯಾವನಲ್ಲಿ (ದೇವರ) ಮಗನು ಇದ್ದಾನೋ ಅವನಿಗೆ ಜೀವ ಉಂಟು; ಯಾವನಲ್ಲಿ ದೇವರ ಮಗನು ಇರುವ ದಿಲ್ಲವೋ ಅವನಿಗೆ ಜೀವವಿಲ್ಲ.
- John 1:4 ಯೋಹಾನನು 1:4ಆತನಲ್ಲಿ ಜೀವವಿತ್ತು; ಆ ಜೀವವು ಮನುಷ್ಯ ರಿಗೆ ಬೆಳಕಾಗಿತ್ತು.
- Romans 8:10–11 ರೋಮಾಪುರದವರಿಗೆ 8:10–11ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ದೇಹವು ಪಾಪದ ದೆಸೆಯಿಂದ ಸತ್ತದ್ದಾಗಿದ್ದರೂ ಆತ್ಮವು ನೀತಿಯ ದೆಸೆ ಯಿಂದ ಜೀವವುಳ್ಳದ್ದಾಗಿದೆ. ಯೇಸುವನ್ನು ಸತ್ತವ ರೊಳಗಿಂದ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿ ದ್ದರೆ ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದಾತನು ನಿಮ್ಮಲ್ಲಿ ವಾಸವಾಗಿರುವ ತನ್ನ ಆತ್ಮನ ಮೂಲಕ ನಿಮ್ಮ ಮರ್ತ್ಯ ದೇಹಗಳನ್ನು ಸಹ ಬದುಕಿಸುವನು.
- John 5:21 ಯೋಹಾನನು 5:21ತಂದೆಯು ಹೇಗೆ ಸತ್ತವರನ್ನು ಎಬ್ಬಿಸಿ ಬದುಕಿಸುತ್ತಾನೋ ಹಾಗೆಯೇ ಮಗನೂ ತನಗೆ ಇಷ್ಟವಿರು ವವರನ್ನು ಬದುಕಿಸುತ್ತಾನೆ.
- Isaiah 26:19 ಯೆಶಾಯ 26:19ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಏಳುವವು; ದೂಳಿನ ನಿವಾಸಿಗಳೇ; ಎಚ್ಚತ್ತು ಹರ್ಷ ಸ್ವರಗೈಯಿರಿ! ನೀನು ಸುರಿಯುವ ಇಬ್ಬನಿಯು ಇಬ್ಬನಿಯ ಸಸ್ಯಗಳಂತಿವೆ. ಭೂಮಿಯು ಸತ್ತವರನ್ನು ಹೊರಪಡಿಸುವದು.
- Romans 8:2 ರೋಮಾಪುರದವರಿಗೆ 8:2ಜೀವವನ್ನುಂಟು ಮಾಡುವ ಆತ್ಮನ ನಿಯಮವು ಕ್ರಿಸ್ತ ಯೇಸುವಿನಲ್ಲಿ ನನ್ನನ್ನು ಪಾಪ ಮರಣಗಳ ನಿಯಮ ದಿಂದ ಬಿಡಿಸಿತು.
- John 6:39–40 ಯೋಹಾನನು 6:39–40ನನ್ನನ್ನು ಕಳುಹಿಸಿದ ತಂದೆಯ ಚಿತ್ತವೇನಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಒಬ್ಬನನ್ನೂ ಕಳಕೊಳ್ಳದೆ ಕಡೇ ದಿನದಲ್ಲಿ ಅವನನ್ನು ತಿರಿಗಿ ಎಬ್ಬಿಸುವದೇ. ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು.
- John 6:44 ಯೋಹಾನನು 6:44ನನ್ನನ್ನು ಕಳುಹಿಸಿದ ತಂದೆಯು ಎಳೆಯದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು.
- Philippians 3:20–21 ಫಿಲಿಪ್ಪಿಯವರಿಗೆ 3:20–21ನಾವಾದರೊ ಪರಲೋಕ ನಿವಾಸಿಗಳು; ಅಲ್ಲಿಂದಲೇ ರಕ್ಷಕನು ಬರುವದನ್ನು ಎದುರು ನೋಡುತ್ತಾ ಇದ್ದೇವೆ; ಆತನೇ ಕರ್ತನಾದ ಯೇಸು ಕ್ರಿಸ್ತನು.ಆತನು ಎಲ್ಲವನ್ನೂ ತನಗೆ ಅಧೀನ ಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾ ವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸು ವದಕ್ಕೆ ಶಕ್ತನಾಗಿದ್ದು ಪ್ರಭಾವವುಳ್ಳ ತನ್ನ ದೇಹಕ್ಕೆ ಸಾರೂಪ್ಯವಾಗುವಂತೆ ಮಾಡುವನು. ಆತನು ಎಲ್ಲವನ್ನೂ ತನಗೆ ಅಧೀನ ಮಾಡಿಕೊಳ್ಳಲಾಗುವ ಪರಾಕ್ರಮವನ್ನು ಸಾಧಿಸಿ ದೀನಾ ವಸ್ಥೆಯುಳ್ಳ ನಮ್ಮ ದೇಹವನ್ನು ರೂಪಾಂತರಪಡಿಸು ವದಕ್ಕೆ ಶಕ್ತನಾಗಿದ್ದು ಪ್ರಭಾವವುಳ್ಳ ತನ್ನ ದೇಹಕ್ಕೆ ಸಾರೂಪ್ಯವಾಗುವಂತೆ ಮಾಡುವನು.
- Job 19:25–27 ಯೋಬನು 19:25–27ನನ್ನ ವಿಮೋಚಕನು ಜೀವಿಸುತ್ತಾನೆಂದೂ ಆತನು ಕಡೆಯ ದಿನದಲ್ಲಿ ಭೂಮಿಯ ಮೇಲೆ ನಿಲ್ಲುವನೆಂದೂ ತಿಳಿದಿದ್ದೇನೆ; ನನ್ನ ಚರ್ಮದ ಹುಳಗಳು ಈ ದೇಹ ವನ್ನು ನಾಶಪಡಿಸಿದಾಗ್ಯೂ ನಾನು ನನ್ನ ಶರೀರದಿಂದ ದೇವರನ್ನು ನೋಡುವೆನು. ಆತನನ್ನು ನನಗೆ ನಾನೇ ದೃಷ್ಟಿಸುವೆನು; ನನ್ನ ಕಣ್ಣುಗಳೇ ನೋಡುವವು, ಬೇರೆ ಯವರಲ್ಲ.; ನನ್ನೊಳಗೆ ನನ್ನ ಅಂತರಿಂದ್ರಿಯಗಳು ಲಯವಾಗಿವೆ.