1 Samuel · chapter 21 · verse 1
1 Samuel 21:1 in Kannada
ತರುವಾಯ ದಾವೀದನು ನೋಬ್ ಊರಲ್ಲಿದ್ದ ಯಾಜಕನಾದ ಅಹೀಮೆಲೆ ಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಎದುರುಗೊಳ್ಳಬಂದಾಗ ಹೆದರಿ--ಒಬ್ಬರೂ ನಿನ್ನ ಸಂಗಡ ಬಾರದೆ ನೀನು ಒಂಟಿಯಾಗಿ ಬಂದದ್ದು ಏನೆಂದು ಅವನನ್ನು ಕೇಳಿದನು.
Taruvaaya daaveedanu nob oorallidda yaajakanaada aheemele kana balige bandanu. Aheemelekanu daaveedanannu edurugollabandaaga hedari--obbaroo ninna sangada baarade neenu ontiyaagi bandaddu enendu avanannu kelidanu.
1 Samuel 21:1 in English
- King James Version (KJV)
- Then came David to Nob to Ahimelech the priest: and Ahimelech was afraid at the meeting of David, and said unto him, Why [art] thou alone, and no man with thee?
- World English Bible (WEB)
- Then David came to Nob to Ahimelech the priest. Ahimelech came to meet David trembling, and said to him, “Why are you alone, and no man with you?”
- American Standard Version (ASV)
- Then came David to Nob to Ahimelech the priest: and Ahimelech came to meet David trembling, and said unto him, Why art thou alone, and no man with thee?
- Bible in Basic English (BBE)
- Then David came to Nob, to Ahimelech the priest: and Ahimelech was full of fear at meeting David, and said to him, Why are you by yourself, having no man with you?
- Darby Translation (DBY)
- And David came to Nob, to Ahimelech the priest; and Ahimelech trembled at meeting David, and said to him, Why art thou alone, and no man with thee?
- Webster's Bible (WBS)
- Then came David to Nob to Ahimelech the priest: and Ahimelech was afraid at the meeting of David, and said to him, Why [art] thou alone, and no man with thee?
- Young's Literal Translation (YLT)
- And David cometh in to Nob, unto Ahimelech the priest, and Ahimelech trembleth at meeting David, and saith to him, 'Wherefore [art] thou thyself alone, and no man with thee?'
Read in context
- 1ತರುವಾಯ ದಾವೀದನು ನೋಬ್ ಊರಲ್ಲಿದ್ದ ಯಾಜಕನಾದ ಅಹೀಮೆಲೆ ಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಎದುರುಗೊಳ್ಳಬಂದಾಗ ಹೆದರಿ--ಒಬ್ಬರೂ ನಿನ್ನ ಸಂಗಡ ಬಾರದೆ ನೀನು ಒಂಟಿಯಾಗಿ ಬಂದದ್ದು ಏನೆಂದು ಅವನನ್ನು ಕೇಳಿದನು.
- 2ದಾವೀದನು ಯಾಜಕನಾದ ಅಹೀಮೆಲೆಕನಿಗೆ--ಅರಸನು ನನಗೆ ಒಂದು ಕಾರ್ಯವನ್ನು ಆಜ್ಞಾಪಿಸಿ--ನಾನು ಕಳುಹಿಸಿದ ಕಾರ್ಯವು ನಿನಗೆ ಆಜ್ಞಾಪಿಸಿದ್ದು ಇಂಥಾದ್ದೆಂದು ಒಬ್ಬರಿಗೂ ತಿಳಿಯ ಬಾರದೆಂದು ನನಗೆ ಹೇಳಿದನು. ಇಂಥಿಂಥ ಸ್ಥಳಗಳಿಗೆ ಹೋಗಬೇಕೆಂದು ನಾನು ನನ್ನ ಕೆಲಸದವರಿಗೆ ನೇಮಿಸಿದ್ದೇನೆ.
- 3ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ಐದು ರೊಟ್ಟಿಗಳನ್ನಾದರೂ ನಿನಗೆ ದೊರಕಿದ ಯಾವದನ್ನಾದರೂ ನನಗೆ ಕೊಡು ಅಂದನು.
Cross references
- Mark 2:26 ಮಾರ್ಕನು 2:26ಮಹಾಯಾಜಕನಾದ ಅಬಿಯಾತರನ ದಿವಸಗಳಲ್ಲಿ ಅವನು ದೇವರ ಮನೆಯೊಳಕ್ಕೆ ಹೋಗಿ ಯಾಜಕರ ಹೊರತು ಬೇರೆಯವರು ತಿನ್ನುವದು ನ್ಯಾಯವಲ್ಲದ ಸಮ್ಮುಖದ ರೊಟ್ಟಿಯನ್ನು ಹೇಗೆ ತಿಂದು ತನ್ನ ಜೊತೆಯಲ್ಲಿ ಇದ್ದವರಿಗೂ ಕೊಟ್ಟನೆಂಬದನ್ನು ನೀವು ಎಂದಾದರೂ ಓದಲಿಲ್ಲವೋ ಎಂದು ಹೇಳಿ ದನು.
- Nehemiah 11:32 ನೆಹೆಮೀಯ 11:32ಅನಾತೋತು ನೋಬು ಅನನ್ಯವು
- 1 Samuel 16:4 1 ಸಮುವೇಲನು 16:4ಕರ್ತನು ಹೇಳಿದ ಪ್ರಕಾರ ಸಮುವೇಲನು ಮಾಡಿ ಬೇತ್ಲೆಹೇಮಿಗೆ ಬಂದನು. ಆಗ ಊರಿನ ಹಿರಿಯರು ಅವನ ಬರುವಿಕೆಯನ್ನು ಕಂಡು ನಡುಗಿ ಅವನಿಗೆ--ಸಮಾಧಾನವೋ ಅಂದರು.
- Isaiah 10:32 ಯೆಶಾಯ 10:32ಆ ದಿನ ದಲ್ಲಿ ಅವನು ನೋಬಿನಲ್ಲಿ ಇಳುಕೊಂಡವನಂತೆ ಇದ್ದಾಗ್ಯೂ ಚೀಯೋನ್ ಕುಮಾರ್ತೆಯ ಪರ್ವತಕ್ಕೂ ಯೆರೂಸಲೇಮಿನ ಗುಡ್ಡಕ್ಕೂ ವಿರೋಧವಾಗಿ ತನ್ನ ಕೈಯನ್ನು ಅಲ್ಲಾಡಿಸುವನು.
- 1 Samuel 14:3 1 ಸಮುವೇಲನು 14:3ಆಗ ಏಲಿಯ ಮಗನಾಗಿರುವ ಫೀನೆ ಹಾಸನ ಮಗನಾದ ಈಕಾಬೋದನ ಸಹೋದರನಾದ ಅಹೀಟೂಬನ ಮಗನಾದ ಅಹೀಯನು ಶೀಲೋವಿ ನಲ್ಲಿ ಎಫೋದನ್ನು ಧರಿಸಿಕೊಂಡು ಕರ್ತನ ಯಾಜಕ ನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.
- 1 Samuel 22:9–19 1 ಸಮುವೇಲನು 22:9–19ಆಗ ಸೌಲನ ಸೇವಕರಿಗೆ ಯಜಮಾನನಾಗಿದ್ದ ಎದೋಮ್ಯನಾದ ದೋಯೇಗನು ಪ್ರತ್ಯುತ್ತರವಾಗಿ--ಇಷಯನ ಮಗನು ನೋಬದ ಲ್ಲಿರುವ ಅಹೀಟೂಬನ ಮಗನಾದ ಅಹೀಮೆಲೆಕನ ಬಳಿಗೆ ಬಂದದ್ದನ್ನು ನಾನು ನೋಡಿದೆನು. ಇವನು ಅವನಿಗೋಸ್ಕರ ಕರ್ತನನ್ನು ಕೇಳಿ ಅವನಿಗೆ ಆಹಾರವನ್ನು ಕೊಟ್ಟು ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯನ್ನು ಅವನಿಗೆ ಕೊಟ್ಟನು ಅಂದನು. ಅರಸನು ಅಹೀಟೂ ಬನ ಮಗನಾದ ಯಾಜಕನಾಗಿರುವ ಅಹೀಮೆಲಕ ನನ್ನೂ ನೋಬದಲ್ಲಿರುವ ಯಾಜಕರಾಗಿರುವ ಅವನ ತಂದೆಯ ಮನೆಯವರೆಲ್ಲರನ್ನೂ ಕರೇ ಕಳುಹಿಸಿದನು. ಅವರೆಲ್ಲರೂ ಅರಸನ ಬಳಿಗೆ ಬಂದರು. ಆಗ ಸೌಲನು--ಅಹೀಟೂಬನ ಮಗನೇ, ಕೇಳು ಅಂದನು. ಅದಕ್ಕವನು--ಇಗೋ, ನನ್ನ ಒಡೆಯನೇ, ನಾನು ಇಲ್ಲಿದ್ದೇನೆ ಅಂದನು. ಸೌಲನು ಅವನಿಗೆ--ನೀನೂ ಇಷಯನ ಮಗನೂ ನನಗೆ ವಿರೋಧವಾಗಿ ಒಳಸಂಚು ಮಾಡಿದ್ದೇನು? ಅವನು ಅಡಗಿಕೊಂಡು ನನಗೆ ವಿರೋ ಧವಾಗಿ ಏಳುವ ಹಾಗೆ ನೀನು ಅವನಿಗೆ ರೊಟ್ಟಿಯನ್ನೂ ಕತ್ತಿಯನ್ನೂ ಕೊಟ್ಟು ದೇವರನ್ನು ಅವನಿಗೋಸ್ಕರ ವಿಚಾರಿಸಿದ್ದೇನು ಅಂದನು. ಅಹೀಮೆಲೆಕನು ಅರಸನಿಗೆ ಪ್ರತ್ಯುತ್ತರವಾಗಿ--ನಿನ್ನ ಎಲ್ಲಾ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾವನಿ ದ್ದಾನೆ? ಅವನು ಅರಸನಿಗೆ ಅಳಿಯನೂ ನಿನ್ನ ಆಜ್ಞೆಗಳ ಹಾಗೆ ಮಾಡಿಕೊಂಡು ಬರುವವನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ. ನಾನು ಅವನಿಗೋಸ್ಕರ ದೇವರನ್ನು ಕೇಳಲು ಪ್ರಾರಂಭಿಸಿದ್ದೆನೋ? ಅದು ನನಗೆ ದೂರವಾಗಿರಲಿ. ಅರಸನು ತನ್ನ ಸೇವಕನ ಮೇಲಾ ದರೂ ನನ್ನ ತಂದೆಯ ಮನೆಯವರಲ್ಲಿ ಯಾರ ಮೇಲಾ ದರೂ ಅಪರಾಧ ಹೊರಿಸಬಾರದು; ನಿನ್ನ ಸೇವಕನು ಇದರಲ್ಲಿ ಹೆಚ್ಚಾದದ್ದನ್ನಾದರೂ ಕಡಿಮೆಯಾದದ್ದನ್ನಾ ದರೂ ತಿಳಿದವನಲ್ಲ ಅಂದನು. ಅದಕ್ಕೆ ಅರಸನುಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯವ ರೆಲ್ಲರೂ ನಿಶ್ಚಯವಾಗಿ ಸಾಯಲೇಬೇಕು ಅಂದನು. ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆನೀವು ತಿರುಗಿಕೊಂಡು ಕರ್ತನ ಯಾಜಕರನ್ನು ಕೊಂದು ಹಾಕಿರಿ. ಅವರ ಕೈ ದಾವೀದನ ಸಂಗಡ ಸಹಾಯ ವಾಗಿದೆ. ಅವನು ಓಡಿಹೋಗುವದನ್ನು ಅವರು ತಿಳಿದಿದ್ದು ಅದನ್ನು ನನಗೆ ತಿಳಿಸದೆ ಹೋದರು ಅಂದನು. ಆದರೆ ಅರಸನ ಸೇವಕರು ಕರ್ತನ ಯಾಜಕರ ಮೇಲೆ ಬೀಳಲು ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು. ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು. ಇದಲ್ಲದೆ ಯಾಜಕರ ಪಟ್ಟಣ ವಾದ ನೋಬಿನಲ್ಲಿ ಇರುವ ಪುರುಷರನ್ನೂ ಸ್ತ್ರೀಯ ರನ್ನೂ ಮಕ್ಕಳನ್ನೂ ಕೂಸುಗಳನ್ನೂ ಎತ್ತುಗಳನ್ನೂ ಕತ್ತೆಗಳನ್ನೂ ಕುರಿಗಳನ್ನೂ ಕತ್ತಿಯಿಂದ ಸಂಹರಿಸಿದನು.