1 Samuel · chapter 27 · verse 3
1 Samuel 27:3 in Kannada
ದಾವೀದನು ಗತ್ ಊರಿನವ ನಾದ ಆಕೀಷನ ಬಳಿಯಲ್ಲಿ ತಾನೂ ತನ್ನ ಜನರೂ ವಾಸವಾಗಿದ್ದರು. ಪ್ರತಿ ಮನುಷ್ಯನು ತನ್ನ ಮನೆಯವರ ಸಹಿತವಾಗಿಯೂ ದಾವೀದನು ತನ್ನ ಇಬ್ಬರು ಹೆಂಡತಿ ಯರಾದ ಇಜ್ರೇಲಿಯಳಾದ ಅಹೀನೋವಮಳೂ ಕರ್ಮೆಲಿಯಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸಹಿತವಾಗಿಯೂ ಇದ್ದರು.
Daaveedanu gat oorinava naada aakeeshana baliyalli taanoo tanna janaroo vaasavaagiddaru. Prati manushyanu tanna maneyavara sahitavaagiyoo daaveedanu tanna ibbaru hendati yaraada ijreliyalaada aheenovamaloo karmeliyalaada naabaalana hendatiyaagidda abeegailaloo sahitavaagiyoo iddaru.
1 Samuel 27:3 in English
- King James Version (KJV)
- And David dwelt with Achish at Gath, he and his men, every man with his household, [even] David with his two wives, Ahinoam the Jezreelitess, and Abigail the Carmelitess, Nabal’s wife.
- World English Bible (WEB)
- David lived with Achish at Gath, he and his men, every man with his household, even David with his two wives, Ahinoam the Jezreelitess and Abigail the Carmelitess, Nabal’s wife.
- American Standard Version (ASV)
- And David dwelt with Achish at Gath, he and his men, every man with his household, even David with his two wives, Ahinoam the Jezreelitess, and Abigail the Carmelitess, Nabal’s wife.
- Bible in Basic English (BBE)
- And David and his men were living with Achish at Gath; every man had his family with him, and David had his two wives, Ahinoam of Jezreel, and Abigail of Carmel, who had been the wife of Nabal.
- Darby Translation (DBY)
- And David abode with Achish at Gath, he and his men, every man with his household; David with his two wives, Ahinoam the Jizreelitess, and Abigail the Carmelitess, Nabal's wife.
- Webster's Bible (WBS)
- And David dwelt with Achish at Gath, he and his men, every man with his household, [even] David with his two wives, Ahinoam the Jezreelitess, and Abigail the Carmelitess Nabal's wife.
- Young's Literal Translation (YLT)
- and David dwelleth with Achish in Gath, he and his men, each one with his household, [even] David and his two wives, Ahinoam the Jezreelitess, and Abigail wife of Nabal the Carmelitess.
Read in context
- 1ದಾವೀದನು ತನ್ನ ಹೃದಯದಲ್ಲಿ--ನಾನು ಎಂದಿಗಾದರೂ ಒಂದು ದಿನ ಸೌಲನ ಕೈಯಿಂದ ಮಡಿದುಹೋಗುತ್ತೇನೆ. ನಾನು ತ್ವರೆಯಾಗಿ ಫಿಲಿಷ್ಟಿಯರ ದೇಶಕ್ಕೆ ತಪ್ಪಿಸಿಕೊಂಡು ಓಡಿಹೋಗುವ ದಕ್ಕಿಂತ ನನಗೆ ಉತ್ತಮವಾದ ಕಾರ್ಯವಿಲ್ಲ. ಸೌಲನು ನನ್ನನ್ನು ಇಸ್ರಾಯೇಲಿನಲ್ಲಿ ಇನ್ನು ಹುಡುಕಲು ದಿಕ್ಕು ಕಾಣದೆ ಹೋಗುವನು. ಈ ಪ್ರಕಾರ ನಾನು ಅವನ ಕೈಯಿಂದ ತಪ್ಪಿಸಿಕೊಂಡು ಹೋಗುವೆನು ಅಂದು ಕೊಂಡನು.
- 2ಆದದರಿಂದ ದಾವೀದನು ಎದ್ದು ತನ್ನ ಸಂಗಡವಿದ್ದ ಆರು ನೂರು ಜನರೊಡನೆ ಗತ್ ಊರಿನ ಅರಸನಾಗಿರುವ ಮಾವೋಕಿನ ಮಗನಾದ ಆಕೀಷನ ಬಳಿಗೆ ಹೋದನು.
- 3ದಾವೀದನು ಗತ್ ಊರಿನವ ನಾದ ಆಕೀಷನ ಬಳಿಯಲ್ಲಿ ತಾನೂ ತನ್ನ ಜನರೂ ವಾಸವಾಗಿದ್ದರು. ಪ್ರತಿ ಮನುಷ್ಯನು ತನ್ನ ಮನೆಯವರ ಸಹಿತವಾಗಿಯೂ ದಾವೀದನು ತನ್ನ ಇಬ್ಬರು ಹೆಂಡತಿ ಯರಾದ ಇಜ್ರೇಲಿಯಳಾದ ಅಹೀನೋವಮಳೂ ಕರ್ಮೆಲಿಯಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸಹಿತವಾಗಿಯೂ ಇದ್ದರು.
- 4ದಾವೀ ದನು ಗತ್ ಊರಿಗೆ ಓಡಿಹೋದನೆಂದು ಸೌಲನಿಗೆ ತಿಳಿಸಲ್ಪಟ್ಟದ್ದರಿಂದ ಅವನು ಆ ತರುವಾಯ ಅವನನ್ನು ಹುಡುಕಲಿಲ್ಲ.
- 5ದಾವೀದನು ಆಕೀಷನಿಗೆ--ನಿನ್ನ ದೃಷ್ಟಿ ಯಲ್ಲಿ ನನಗೆ ದಯೆದೊರಕಿದ್ದರೆ ದೇಶದ ಗ್ರಾಮ ಗಳಲ್ಲಿ ನಾನು ಇರುವದಕ್ಕೆ ಅವರು ಒಂದು ಸ್ಥಳ ನನಗೆ ಕೊಡಲಿ; ನಿನ್ನ ದಾಸನು ಯಾಕೆ ನಿನ್ನ ಸಂಗಡ ರಾಜ್ಯದ ಪಟ್ಟಣದಲ್ಲಿ ಇರಬೇಕು ಅಂದನು.
Cross references
- 1 Samuel 25:42–43 1 ಸಮುವೇಲನು 25:42–43ಅಬೀಗೈಲಳು ಬೇಗನೆ ಎದ್ದು ಕತ್ತೆಯ ಮೇಲೆ ಹತ್ತಿಕೊಂಡು ತನ್ನ ಸಂಗಡ ಇರುವ ಐದು ಮಂದಿ ದಾಸಿಯರನ್ನು ಕರಕೊಂಡು ದಾವೀದನ ಸೇವಕರ ಹಿಂದೆ ಹೋಗಿ ಅವನಿಗೆ ಹೆಂಡತಿ ಯಾದಳು. ಇದಲ್ಲದೆ ದಾವೀದನು ಇಜ್ರೇಲು ಊರಿನವಳಾದ ಅಹೀನೋವಮಳನ್ನು ತಕ್ಕೊಂಡನು.ಅವರಿಬ್ಬರೂ ಅವನಿಗೆ ಹೆಂಡತಿಯರಾದರು.ಆದರೆ ಸೌಲನು ದಾವೀದನ ಹೆಂಡತಿಯಾದ ವಿಾಕಲಳೆಂಬ ತನ್ನ ಕುಮಾರ್ತೆಯನ್ನು ಗಲ್ಲೀಮ್ ಪಟ್ಟಣದ ಲಯಿಷನ ಮಗನಾದ ಪಲ್ಟೀಗೆ ಕೊಟ್ಟನು.
- 1 Samuel 30:5 1 ಸಮುವೇಲನು 30:5ದಾವೀದನ ಇಬ್ಬರು ಹೆಂಡತಿಯರಾಗಿದ್ದ ಇಜ್ರೇಲಿನವಳಾದ ಅಹೀನೋವಮಳೂ ಕರ್ಮೆಲಿನವಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಒಯ್ಯ ಲ್ಪಟ್ಟರು.
- 1 Samuel 30:3 1 ಸಮುವೇಲನು 30:3ದಾವೀದನೂ ಅವನ ಜನರೂ ಆ ಪಟ್ಟಣಕ್ಕೆ ಬಂದಾಗ ಇಗೋ, ಅದು ಬೆಂಕಿಯಿಂದ ಸುಟ್ಟು ಹಾಕಲ್ಪಟ್ಟಿತ್ತು. ಇದಲ್ಲದೆ ಅವರ ಹೆಂಡತಿಯರೂ ಕುಮಾರರೂ ಕುಮಾರ್ತೆಯರೂ ಸೆರೆಯಾಗಿ ಒಯ್ಯಲ್ಪಟ್ಟಿದ್ದರು.
- 1 Samuel 25:18–35 1 ಸಮುವೇಲನು 25:18–35ಆಗ ಅಬೀಗೈಲಳು ಶೀಘ್ರವಾಗಿ ಇನ್ನೂರು ರೊಟ್ಟಿಗಳನ್ನೂ ಎರಡು ಬುದ್ದಲಿ ದ್ರಾಕ್ಷಾರಸ ವನ್ನೂ ಸಿದ್ಧಪಡಿಸಿದ ಐದು ಕುರಿಗಳ ಮಾಂಸವನ್ನೂ ಐದು ಸೇರು ಹುರಿದ ಕಾಳುಗಳನ್ನೂ ಒಣಗಿದ ನೂರು ದ್ರಾಕ್ಷೇ ಗೊಂಚಲುಗಳನ್ನೂ ಒಣಗಿದ ಇನ್ನೂರು ಅಂಜೂರದ ಉಂಡೆಗಳನ್ನೂ ತೆಗೆದು ಕತ್ತೆಗಳ ಮೇಲೆ ಹೇರಿಸಿಕೊಂಡು ತನ್ನ ಸೇವಕರಿಗೆ--ನನಗೆ ಮುಂದಾಗಿ ಹೋಗಿರಿ; ಇಗೋ, ನಾನು ನಿಮ್ಮ ಹಿಂದೆ ಬರುವೆನೆಂದು ಹೇಳಿದಳು; ಆದರೆ ತನ್ನ ಗಂಡನಾದ ನಾಬಾಲನಿಗೆ ತಿಳಿಸಲಿಲ್ಲ. ಅವಳು ಒಂದು ಕತ್ತೆಯ ಮೇಲೆ ಹತ್ತಿಕೊಂಡು ಗುಡ್ಡದ ಮರೆಗೆ ಬಂದಾಗ ಇಗೋ, ದಾವೀದನೂ ಅವನ ಮನುಷ್ಯರೂ ಅವಳಿಗೆ ಎದುರಾಗಿ ಇಳಿದು ಬಂದರು. ಅವಳು ಅವರನ್ನು ಎದುರುಗೊಂಡಳು. ಆದರೆ ದಾವೀದನು--ಅಡವಿ ಯಲ್ಲಿದ್ದ ಇವನ ಎಲ್ಲಾದರಲ್ಲಿ ಒಂದಾದರೂ ಕಳಕೊಳ್ಳದ ಹಾಗೆ ನಾನು ಕಾಪಾಡಿದ್ದು ವ್ಯರ್ಥವಾಯಿತು. ಆದರೆ ನಾನು ಮಾಡಿದ ಉಪಕಾರಕ್ಕೆ ಬದಲಾಗಿ ಈಗ ಅವನು ನನಗೆ ಅಪಕಾರ ಮಾಡಿದ್ದಾನೆ. ಅವನಿಗೆ ಇರುವವ ರೆಲ್ಲರಲ್ಲಿ ಉದಯವಾಗುವವರೆಗೆ ನಾನು ಒಬ್ಬ ಗಂಡ ಸನ್ನು ಉಳಿಸಿದರೆ ದೇವರು ದಾವೀದನ ಶತ್ರುಗಳಿಗೆ ಹೀಗೆಯೂ ಇದಕ್ಕಿಂತ ಅಧಿಕವಾಗಿಯೂ ಮಾಡಲಿ ಅಂದನು. ಅಬೀಗೈಲಳು ದಾವೀದನನ್ನು ನೋಡಿದ ಕೂಡಲೇ ಕತ್ತೆಯಿಂದಿಳಿದು ದಾವೀದನಿಗೆ ಎದುರಾಗಿ ಹೋಗಿ ಅವನ ಮುಂದೆ ಬೋರಲು ಬಿದ್ದು ನೆಲಕ್ಕೆ ಎರಗಿ ಅವನ ಪಾದಗಳ ಮೇಲೆ ಬಿದ್ದು--ನನ್ನ ಒಡೆ ಯನೇ, ಈ ಅಕ್ರಮವು ನನ್ನ ಮೇಲೆಯೇ ಇರಲಿ. ದಯಮಾಡಿ ನಿನ್ನ ದಾಸಿಯನ್ನು ಮಾತಾಡಗೊಡಿಸಿ ನಿನ್ನ ದಾಸಿಯ ಮಾತುಗಳನ್ನು ಕೇಳು. ನನ್ನ ಒಡೆಯನು, ದಯಮಾಡಿ ಬೆಲಿಯಾಳನ ಈ ಮನುಷ್ಯ ನಾದ ನಾಬಾಲನ ಮೇಲೆ ಗಮನ ಇಡದೆ ಇರಲಿ. ಯಾಕಂದರೆ ಅವನ ಹೆಸರು ಹೇಗೋ ಹಾಗೆಯೇ ಅವನು ನಾಬಾಲನೆಂಬ ಹೆಸರುಳ್ಳವನು, ಮೂರ್ಖ ತನವು ಅವನ ಸಂಗಡ ಇರುವದು. ಆದರೆ ನನ್ನ ಒಡೆಯನಾದ ನೀನು ಕಳುಹಿಸಿದ ನಿನ್ನ ಯೌವನಸ್ಥರನ್ನು ನಿನ್ನ ದಾಸಿಯಾದ ನಾನು ನೋಡಲಿಲ್ಲ. ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವದಕ್ಕೂ ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವದಕ್ಕೂ ಹೋಗುವದನ್ನು ದೇವರು ಆಟಂಕ ಮಾಡಿದ್ದರಿಂದ ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಿನ್ನ ಶತ್ರುಗಳೂ ನನ್ನ ಒಡೆಯನಿಗೆ ಕೇಡನ್ನು ಹುಡುಕು ವವರೂ ನಾಬಾಲನ ಹಾಗೆಯೇ ಆಗಲಿ. ಈಗ ನಿನ್ನ ದಾಸಿಯು ನನ್ನ ಒಡೆಯನಿಗೆ ತಕ್ಕೊಂಡು ಬಂದ ಈ ಆಶೀರ್ವಾದವು ನನ್ನ ಒಡೆಯನನ್ನು ಹಿಂಬಾಲಿಸುವ ಯೌವನಸ್ಥರಿಗೆ ಕೊಡಲ್ಪಡಲಿ. ನೀನು ದಯಮಾಡಿ ನಿನ್ನ ದಾಸಿಯದ್ರೋಹವನ್ನು ಮನ್ನಿಸಬೇಕು; ನನ್ನ ಒಡೆಯನು ಕರ್ತನ ಯುದ್ಧಗಳನ್ನು ನಡೆಸುತ್ತಾನೆ; ನಿನ್ನ ದಿನಗಳಲ್ಲಿ ನಿನ್ನ ಬಳಿಯಲ್ಲಿ ಕೆಟ್ಟತನವು ಕಂಡುಹಿಡಿ ಯಲ್ಪಟ್ಟದ್ದಿಲ್ಲ; ಆದದರಿಂದ ಕರ್ತನು ನನ್ನ ಒಡೆಯನಿಗೆ ಸ್ಥಿರವಾದ ಮನೆಯನ್ನು ಖಂಡಿತವಾಗಿ ಮಾಡುವನು. ಈಗ ನಿನ್ನನ್ನು ಹಿಂದಟ್ಟಿ ನಿನ್ನ ಪ್ರಾಣವನ್ನು ಹುಡು ಕುವದಕ್ಕೆ ಒಬ್ಬನು ಎದ್ದಿದ್ದಾನೆ; ಆದರೂ ನನ್ನ ಒಡೆ ಯನ ಪ್ರಾಣವು ದೇವರಾದ ಕರ್ತನ ಬಳಿಯ ಜೀವದ ಕಟ್ಟಿನಲ್ಲಿ ಕಟ್ಟಲ್ಪಟ್ಟಿರುವದು; ನಿನ್ನ ಶತ್ರುಗಳ ಪ್ರಾಣವನ್ನು ಕವಣೆಯ ಮಧ್ಯದಲ್ಲಿಟ್ಟು ಎಸೆದ ಹಾಗೆಯೇ ಆತನು ಎಸೆದು ಬಿಡುವನು. ಇದಲ್ಲದೆ ನನ್ನ ಒಡೆಯನಾದ ನಿನ್ನನ್ನು ಕುರಿತು ಕರ್ತನು ಹೇಳಿದ ಒಳ್ಳೇದನ್ನೆಲ್ಲಾ ನಿನಗೆ ಮಾಡಿ ನಿನ್ನನ್ನು ಇಸ್ರಾಯೇಲ್ಯರ ಮೇಲೆ ನಾಯಕನಾಗಿ ನೇಮಿಸಿದಾಗ ಏನಾಗುವ ದಂದರೆ, ನೀನು ಸುಮ್ಮನೆ ರಕ್ತ ಚೆಲ್ಲಿದ್ದೂ ನನ್ನ ಒಡೆಯನು ತನಗೆ ತಾನೇ ಮುಯ್ಯಿ ತೀರಿಸಿಕೊಂಡದ್ದೂ ನಿನಗೆ ವ್ಯಥೆಯಾಗಿರುವದಿಲ್ಲ; ನನ್ನ ಒಡೆಯನ ಹೃದಯಕ್ಕೆ ಅಪರಾಧವಾಗಿರುವದಿಲ್ಲ. ಆದರೆ ನನ್ನ ಒಡೆಯನಿಗೆ ಕರ್ತನು ಚೆನ್ನಾಗಿ ನಡೆಸಿದಾಗ ನಿನ್ನ ದಾಸಿಯನ್ನು ಜ್ಞಾಪಕಮಾಡಿಕೊಳ್ಳಬೇಕು ಅಂದಳು. ಆಗ ದಾವೀದನು ಅಬೀಗೈಲಳಿಗೆ--ನನ್ನನ್ನು ಎದುರು ಗೊಳ್ಳುವದಕ್ಕೆ ಈ ಹೊತ್ತು ನಿನ್ನನ್ನು ಕಳುಹಿಸಿದ ಇಸ್ರಾ ಯೇಲಿನ ದೇವರಾದ ಕರ್ತನಿಗೆ ಸ್ತೋತ್ರವಾಗಲಿ. ನಿನ್ನ ಬುದ್ಧಿಮಾತು ಆಶೀರ್ವದಿಸಲ್ಪಡಲಿ. ನಾನು ರಕ್ತ ಚೆಲ್ಲುವದನ್ನೂ ನನ್ನ ಕೈಯಿಂದ ನಾನೇ ಮುಯ್ಯಿ ತೀರಿಸದಂತೆಯೂ ಈ ಹೊತ್ತು ನನ್ನನ್ನು ಆಟಂಕಪಡಿ ಸಿದ ನಿನಗೆ ಆಶೀರ್ವಾದವಾಗಲಿ. ನಿನಗೆ ಕೇಡು ಮಾಡದ ಹಾಗೆ ನನಗೆ ಆಟಂಕ ಮಾಡಿದ ಇಸ್ರಾ ಯೇಲಿನ ದೇವರಾದ ಕರ್ತನ ಜೀವದಾಣೆ, ನೀನು ಬೇಗನೆ ಬಂದು ನನ್ನನ್ನು ಎದುರುಗೊಳ್ಳದೆ ಹೋಗಿದ್ದರೆ ಉದಯವಾಗುವಷ್ಟರಲ್ಲಿ ನಾಬಾಲನಿಗೆ ಒಬ್ಬನಾದರೂ ಉಳಿಯುತ್ತಿರಲಿಲ್ಲ ಅಂದನು. ಅವಳು ತನಗೆ ತಂದ ದ್ದನ್ನು ದಾವೀದನು ಅವಳ ಕೈಯಿಂದ ತಕ್ಕೊಂಡು ಅವಳಿಗೆ--ನೀನು ಸಮಾಧಾನವಾಗಿ ನಿನ್ನ ಮನೆಗೆ ಹೋಗು; ಇಗೋ, ನಾನು ನಿನ್ನ ಮಾತನ್ನು ಕೇಳಿ ನಿನ್ನ ವಿಜ್ಞಾಪನೆಯನ್ನು ಅಂಗೀಕರಿಸಿದೆನು ಅಂದನು.
- 1 Samuel 25:3 1 ಸಮುವೇಲನು 25:3ಈ ಮನುಷ್ಯನ ಹೆಸರು ನಾಬಾಲನು; ಅವನ ಹೆಂಡತಿಯ ಹೆಸರು ಅಬೀಗೈಲ್. ಆ ಸ್ತ್ರೀಯು ಮಹಾ ಬುದ್ಧಿವಂತೆಯೂ ಸೌಂದರ್ಯವತಿಯೂ ಆಗಿದ್ದಳು. ಆದರೆ ಆ ಮನುಷ್ಯನು--ಕಠಿಣ ಸ್ವಭಾವದವನಾಗಿಯೂ ತನ್ನ ಕ್ರಿಯೆಗಳಲ್ಲಿ ಕೆಟ್ಟವನಾಗಿಯೂ ಇದ್ದನು; ಅವನು ಕಾಲೇಬನ ವಂಶಸ್ಥನು.
Original words (Hebrew)
- David · H1732דָּוִד Dâvid
- dwelt · H3427יָשַׁב yâshab
- Achish · H397אֲכִישׁ ʼĂkîysh
- Gath · H1661גַּת Gath
- men · H582אֱנוֹשׁ ʼĕnôwsh
- man · H376אִישׁ ʼîysh
- household · H1004בַּיִת bayith
- David · H1732דָּוִד Dâvid
- two · H8147שְׁנַיִם shᵉnayim
- wives · H802אִשָּׁה ʼishshâh
- Ahinoam · H293אֲחִינֹעַם ʼĂchîynôʻam
- Jezreelitess · H3159יִזְרְעֵאלִית Yizrᵉʻêʼlîyth
- Abigail · H26אֲבִיגַיִל ʼĂbîygayil
- Carmelitess · H3762כַּרְמְלִית Karmᵉlîyth
- Nabal’s · H5037נָבָל Nâbâl
- wife · H802אִשָּׁה ʼishshâh