1 Samuel · chapter 30 · verse 11
1 Samuel 30:11 in Kannada
ಅವರು ಒಬ್ಬ ಐಗುಪ್ತ್ಯನನ್ನು ಅಡವಿಯಲ್ಲಿ ಕಂಡುಕೊಂಡು ಅವನನ್ನು ದಾವೀದನ ಬಳಿಗೆ ತಂದು ಅವನಿಗೆ ರೊಟ್ಟಿಕೊಟ್ಟರು; ಅವನು ತಿಂದನು.
Avaru obba aiguptyanannu adaviyalli kandukondu avanannu daaveedana balige tandu avanige rottikottaru; avanu tindanu.
1 Samuel 30:11 in English
- King James Version (KJV)
- And they found an Egyptian in the field, and brought him to David, and gave him bread, and he did eat; and they made him drink water;
- World English Bible (WEB)
- They found an Egyptian in the field, and brought him to David, and gave him bread, and he ate; and they gave him water to drink.
- American Standard Version (ASV)
- And they found an Egyptian in the field, and brought him to David, and gave him bread, and he did eat; and they gave him water to drink;
- Bible in Basic English (BBE)
- And in the fields they saw an Egyptian whom they took to David, and they gave him bread, and he had a meal, and they gave him water for drink;
- Darby Translation (DBY)
- And they found an Egyptian in the field, and brought him to David, and gave him bread, and he ate; and they gave him water to drink,
- Webster's Bible (WBS)
- And they found an Egyptian in the field, and brought him to David, and gave him bread, and he ate; and they made him drink water;
- Young's Literal Translation (YLT)
- and they find a man, an Egyptian, in the field, and take him unto David, and give to him bread, and he eateth, and they cause him to drink water,
Read in context
- 9ಆಗ ದಾವೀದನೂ ಅವನ ಸಂಗಡ ಇದ್ದ ಆರು ನೂರು ಜನರೂ ಹೋದರು; ಅವರು ಬೆಸೋರ್ ಎಂಬ ಹಳ್ಳದ ಬಳಿಗೆ ಬಂದಾಗ ಹಿಂದುಳಿದವರು ಅಲ್ಲಿ ನಿಂತರು.
- 10ದಾವೀದನು, ತಾನೂ ನಾನೂರು ಜನರೂ ಹಿಂದಟ್ಟಿಹೋದರು. ಬೆಸೋರಿನ ಹಳ್ಳವನ್ನು ದಾಟಲಾರದೆ ದಣಿದಿದ್ದದರಿಂದ ಇನ್ನೂರು ಜನರು ಅಲ್ಲಿ ನಿಂತರು.
- 11ಅವರು ಒಬ್ಬ ಐಗುಪ್ತ್ಯನನ್ನು ಅಡವಿಯಲ್ಲಿ ಕಂಡುಕೊಂಡು ಅವನನ್ನು ದಾವೀದನ ಬಳಿಗೆ ತಂದು ಅವನಿಗೆ ರೊಟ್ಟಿಕೊಟ್ಟರು; ಅವನು ತಿಂದನು.
- 12ಅವನಿಗೆ ನೀರನ್ನು ಕುಡಿಸಿ ಅಂಜೂರದ ಫಲದ ಅಡೆಯಲ್ಲಿ ಒಂದು ತುಂಡನ್ನೂ ಒಣಗಿದ ಎರಡು ದ್ರಾಕ್ಷೇ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದು ಪ್ರಾಣದಲ್ಲಿ ಚೇತರಿಸಿ ಕೊಂಡನು. ಯಾಕಂದರೆ ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.
- 13ದಾವೀದನು ಅವನನ್ನು--ನೀನು ಯಾರವನು? ನೀನು ಎಲ್ಲಿಯವನು ಎಂದು ಕೇಳಿದಾಗ ಅವನು--ನಾನು ಒಬ್ಬ ಅಮಾಲೇಕ್ಯನ ಸೇವಕನಾದ ಐಗುಪ್ತದೇಶದ ಯೌವನಸ್ಥನು. ಈ ಮೂರು ದಿವಸ ನಾನು ರೋಗದಲ್ಲಿ ಬಿದ್ದದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
Cross references
- Deuteronomy 23:7 ಧರ್ಮೋಪದೇಶಕಾಂಡ 23:7ಎದೋಮ್ಯನನ್ನು ಅಸಹ್ಯಿಸಬೇಡ; ಅವನು ನಿನ್ನ ಸಹೋದರನು; ಐಗುಪ್ತ್ಯನನ್ನು ಅಸಹ್ಯಿಸಬೇಡ; ಅವನ ದೇಶದಲ್ಲಿ ನೀನು ಪರವಾಸಿಯಾಗಿದ್ದಿ.
- Romans 12:20–21 ರೋಮಾಪುರದವರಿಗೆ 12:20–21ಹಾಗಾದರೆ ನಿನ್ನ ವೈರಿಯು ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು. ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.
- Proverbs 25:21 ಜ್ಞಾನೋಕ್ತಿಗಳು 25:21ನಿನ್ನ ಶತ್ರು ಹಸಿದಿದ್ದರೆ ತಿನ್ನುವ ದಕ್ಕೆ ಅವನಿಗೆ ರೊಟ್ಟಿ ಕೊಡು; ಅವನು ಬಾಯಾರಿದ್ದರೆ ಕುಡಿಯುವದಕ್ಕೆ ನೀರು ಕೊಡು.
- Matthew 25:35 ಮತ್ತಾಯನು 25:35ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ;
- Deuteronomy 15:7–11 ಧರ್ಮೋಪದೇಶಕಾಂಡ 15:7–11ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಸಹೋದರರಲ್ಲಿ ಒಬ್ಬನಾಗಿರುವ ಬಡವನು ನಿನ್ನಲ್ಲಿದ್ದರೆ ನಿನ್ನ ಹೃದಯವನ್ನು ಕಠಿಣಮಾಡಿಕೊಳ್ಳಬೇಡ. ನಿನ್ನ ಕೈಯನ್ನು ನಿನ್ನ ಬಡ ಸಹೋದರನಿಗೆ ಮುಚ್ಚಿಕೊಳ್ಳ ಬೇಡ. ನಿನ್ನ ಕೈಯನ್ನು ಅವನಿಗೆ ವಿಶಾಲವಾಗಿ ತೆರೆಯಬೇಕು; ಅವನಿಗೆ ಬೇಕಾಗುವದರಲ್ಲಿ ಬೇಕಾದಷ್ಟು ಸಾಲ ಅವನಿಗೆ ಕೊಡಬೇಕು. ಬಿಡುಗಡೆಯ ವರುಷ ವಾದ ಏಳನೇ ವರುಷವು ಸವಿಾಪವಾಯಿತೆಂಬ ದುಷ್ಟಾಲೋಚನೆ ನಿನ್ನ ಹೃದಯದಲ್ಲಿ ಹುಟ್ಟಿ ನಿನ್ನ ಬಡ ಸಹೋದರನ ಮೇಲೆ ನಿನ್ನ ಕಣ್ಣು ಕೆಟ್ಟದ್ದಾಗಿ ನೀನು ಅವನಿಗೆ ಏನೂ ಕೊಡದೆ ಇರುವದರಿಂದ ಅವನು ನಿನಗೆ ವಿರೋಧವಾಗಿ ಕರ್ತನಿಗೆ ಕೂಗುವಾಗ ನಿನ್ನಲ್ಲಿ ಪಾಪ ಉಂಟಾಗದ ಹಾಗೆ ನೋಡಿಕೋ. ಅವನಿಗೆ ಕೊಟ್ಟೇ ಕೊಡಬೇಕು; ಅವನಿಗೆ ಕೊಡುವಾಗ ನಿನ್ನ ಹೃದಯದಲ್ಲಿ ದುಃಖವಾಗಬಾರದು; ಯಾಕಂದರೆ ಇದಕ್ಕೋಸ್ಕರವೇ ನಿನ್ನ ದೇವರಾದ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೆಲಸಗಳಲ್ಲಿಯೂ ನೀನು ಕೈ ಹಾಕುವ ದೆಲ್ಲಾದರಲ್ಲಿಯೂ ಆಶೀರ್ವದಿಸುವನು. ಬಡವರು ದೇಶದಲ್ಲಿ ಇಲ್ಲದೆ ಹೋಗುವದಿಲ್ಲ: ಆದದರಿಂದನಿನ್ನ ಸಹೋದರನಿಗೂ ದರಿದ್ರನಿಗೂ ಬಡವನಿಗೂ ದೇಶದಲ್ಲಿ ನಿನ್ನ ಕೈಯನ್ನು ವಿಶಾಲವಾಗಿ ತೆರೆಯ ಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.
- Luke 10:36–37 ಲೂಕನು 10:36–37ಈ ಮೂವರಲ್ಲಿ ಯಾರು ಆ ಕಳ್ಳರ ನಡುವೆ ಸಿಕ್ಕಿ ಬಿದ್ದವನಿಗೆ ನೆರೆಯವ ನಾದನೆಂದು ನೀನು ಯೋಚಿಸುತ್ತೀ ಎಂದು ಕೇಳಿದ್ದಕ್ಕೆ ಅವನು-- ಯಾವನು ಅವನ ಮೇಲೆ ಕನಿಕರ ತೋರಿಸಿದನೋ ಅವನೇ ಅಂದನು. ಆಗ ಯೇಸು ಅವನಿಗೆ--ಹೋಗು, ನೀನೂ ಅದರಂತೆಯೇ ಮಾಡು ಎಂದು ಹೇಳಿದನು.