1 Samuel · chapter 31 · verse 6
1 Samuel 31:6 in Kannada
ಹೀಗೆ ಆ ದಿನ ಸೌಲನೂ ಅವನ ಮೂವರು ಮಕ್ಕಳೂ ಅವನ ಆಯುಧ ಹಿಡಿಯುವವನೂ ಎಲ್ಲಾ ಜನರೂ ಸತ್ತರು.
Heege aa dina saulanoo avana moovaru makkaloo avana aayudha hidiyuvavanoo ellaa janaroo sattaru.
1 Samuel 31:6 in English
- King James Version (KJV)
- So Saul died, and his three sons, and his armourbearer, and all his men, that same day together.
- World English Bible (WEB)
- So Saul died with his three sons, his armor bearer, and all his men that same day together.
- American Standard Version (ASV)
- So Saul died, and his three sons, and his armorbearer, and all his men, that same day together.
- Bible in Basic English (BBE)
- So death overtook Saul and his three sons and his servant on the same day.
- Darby Translation (DBY)
- So Saul died, and his three sons, and his armour-bearer, and all his men, that same day together.
- Webster's Bible (WBS)
- So Saul died, and his three sons, and his armor-bearer, and all his men, that same day together.
- Young's Literal Translation (YLT)
- and Saul dieth, and three of his sons, and the bearer of his weapons, also all his men, on that day together.
Read in context
- 4ಆದಕಾರಣ ಅವನು ತನ್ನ ಆಯುಧ ಹಿಡಿಯುವವನಿಗೆ--ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ತಿವಿದುಬಿಟ್ಟು ಅವಮಾನ ಮಾಡದ ಹಾಗೆ ನೀನು ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ಅದರಿಂದ ತಿವಿ ಅಂದನು. ಆದರೆ ಅವನ ಆಯುಧ ಹಿಡಿಯು ವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡ ಲೊಲ್ಲದೆ ಹೋದನು. ಆಗ ಸೌಲನು ತಾನೇ ಕತ್ತಿ ಯನ್ನು ತಕ್ಕೊಂಡು ಅದರ ಮೇಲೆ ಬಿದ್ದನು.
- 5ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹಿಡಿಯುವವನು ನೋಡಿದಾಗ ಅವನೂ ಹಾಗೆಯೇ ತನ್ನ ಕತ್ತಿಯ ಮೇಲೆ ಬಿದ್ದು ಅವನ ಸಂಗಡ ಸತ್ತನು.
- 6ಹೀಗೆ ಆ ದಿನ ಸೌಲನೂ ಅವನ ಮೂವರು ಮಕ್ಕಳೂ ಅವನ ಆಯುಧ ಹಿಡಿಯುವವನೂ ಎಲ್ಲಾ ಜನರೂ ಸತ್ತರು.
- 7ಇಸ್ರಾಯೇಲ್ ಜನರು ಓಡಿಹೋದರೆಂದೂ ಸೌಲನೂ ಅವನ ಮಕ್ಕಳೂ ಸತ್ತರೆಂದೂ ತಗ್ಗಿಗೂ ಯೊರ್ದನಿಗೂ ಆಚೆಯಲ್ಲಿದ್ದ ಇಸ್ರಾಯೇಲ್ ಜನರು ಕಂಡಾಗ ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿ ಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸವಾಗಿದ್ದರು.
- 8ಮಾರನೇ ದಿವಸದಲ್ಲಿ ಫಿಲಿಷ್ಟಿಯರು ಕೊಲ್ಲಲ್ಪಟ್ಟವ ರನ್ನು ಸುಲುಕೊಳ್ಳಲು ಬಂದಾಗ ಗಿಲ್ಬೋವ ಬೆಟ್ಟದಲ್ಲಿ ಬಿದ್ದಿರುವ ಸೌಲನನ್ನೂ ಅವನ ಮೂವರು ಮಕ್ಕಳನ್ನೂ ಕಂಡುಕೊಂಡು
Cross references
- 1 Samuel 12:17 1 ಸಮುವೇಲನು 12:17ಈ ದಿನ ಗೋಧಿಯ ಸುಗ್ಗಿ ಅಲ್ಲವೋ? ನೀವು ನಿಮಗೆ ಒಬ್ಬ ಅರಸನನ್ನು ಕೇಳಿದ್ದ ರಿಂದ ಕರ್ತನ ದೃಷ್ಟಿಗೆ ನೀವು ಮಾಡಿದ ನಿಮ್ಮ ಕೆಟ್ಟತ ನವು ಹೆಚ್ಚಾಗಿದೆ ಎಂದು ತಿಳುಕೊಂಡು ನೋಡುವ ಹಾಗೆ ನಾನು ಕರ್ತನಿಗೆ ಮೊರೆಯಿಡುವೆನು; ಆಗ ಆತನು ಗುಡುಗನ್ನೂ ಮಳೆಯನ್ನೂ ಕಳುಹಿಸುವನು.
- 1 Samuel 4:10–11 1 ಸಮುವೇಲನು 4:10–11ಫಿಲಿಷ್ಟಿಯರು ಯುದ್ಧಮಾಡಿದರು. ಇಸ್ರಾಯೇಲ್ಯರು ಹೊಡೆಯಲ್ಪಟ್ಟು ಅವರು ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು. ಅಲ್ಲಿ ಮಹಾಸಂಹಾರ ವಾಯಿತು. ಯಾಕಂದರೆ ಇಸ್ರಾಯೇಲಿನ ಮೂವತ್ತು ಸಾವಿರ ಕಾಲಾಳುಗಳು ಮಡಿದರು. ದೇವರ ಮಂಜೂಷವು ಶತ್ರುವಶವಾಯಿತು. ಏಲಿಯ ಇಬ್ಬರು ಮಕ್ಕಳಾದ ಹೊಫ್ನಿಯೂ ಫೀನೆಹಾಸನೂ ಕೊಲ್ಲಲ್ಪಟ್ಟರು.
- Hosea 13:10–11 ಹೋಶೇಯ 13:10–11ನಾನೇ ನಿನ್ನ ಅರಸನಾಗಿ ರುವೆನು; ನಿನ್ನ ಎಲ್ಲಾ ಪಟ್ಟಣಗಳಲ್ಲಿ ನಿನ್ನನ್ನು ರಕ್ಷಿಸುವ ಬೇರೆಯ ವನು ಎಲ್ಲಿದ್ದಾನೆ? ಮತ್ತು--ರಾಜನನ್ನೂ ಪ್ರಧಾನ ರನ್ನೂ ನನಗೆ ದಯಪಾಲಿಸು ಎಂದು ನೀನು ಹೇಳಿದ ನ್ಯಾಯಾಧಿಪತಿಗಳು ಎಲ್ಲಿದ್ದಾರೆ? ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
- Ecclesiastes 9:1–2 ಪ್ರಸಂಗಿ 9:1–2ನಾನು ಇವೆಲ್ಲವುಗಳ ಮೇಲೆ ಮನಸ್ಸಿಟ್ಟು ಇವೆಲ್ಲವುಗಳಲ್ಲಿ ನಾನು ತೀರ್ಮಾನಿಸಿ ದ್ದೇನಂದರೆ--ನೀತಿವಂತನು ಮತ್ತು ಜ್ಞಾನಿ ಇವರ ಕೆಲಸಗಳು ದೇವರ ಕೈಯಲ್ಲಿವೆ; ಯಾವ ಮನುಷ್ಯನೂ ಅವರ ಮುಂದಿರುವ ಎಲ್ಲವುಗಳನ್ನು, ಅಂದರೆ ಪ್ರೀತಿ ಯನ್ನು ಅಥವಾ ದ್ವೇಷವನ್ನು ತಿಳಿಯಲಾರನು. ಎಲ್ಲವು ಗಳು ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವವು. ನೀತಿವಂತನಿಗೂ ದುಷ್ಟನಿಗೂ ಸಂಗತಿ ಒಳ್ಳೆಯವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವದು. ಒಳ್ಳೆಯ ವನ ಹಾಗೆಯೇ ಪಾಪಿಯೂ ಇರುವನು; ಆಣೆಯಿಡು ವವನಿಗೆ ಹೇಗೋ ಹಾಗೆಯೇ ಆಣೆಗೆ ಭಯಪಡುವ ವನೂ ಇರುವನು.
- 1 Chronicles 10:6 1 ಪೂರ್ವಕಾಲವೃತ್ತಾಂತ 10:6ಸೌಲನೂ ಅವನ ಮೂರು ಮಂದಿ ಕುಮಾರರೂ ಅವನ ಮನೆಯವರೆಲ್ಲರೂ ಒಟ್ಟಾಗಿ ಸತ್ತುಹೋದರು.
- 1 Samuel 28:19 1 ಸಮುವೇಲನು 28:19ಕರ್ತನು ನಿನ್ನ್ನ ಸಹಿತವಾಗಿ ಇಸ್ರಾಯೇಲ್ಯರನ್ನೂ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿ ಕೊಡುವನು. ನಾಳೆ ನೀನೂ ನಿನ್ನ ಕುಮಾರರೂ ನನ್ನ ಸಂಗಡ ಇರುವಿರಿ. ಕರ್ತನು ಇಸ್ರಾಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
- 1 Samuel 11:15 1 ಸಮುವೇಲನು 11:15ಹಾಗೆಯೇ ಜನರೆಲ್ಲರು ಗಿಲ್ಗಾಲಿಗೆ ಹೋಗಿ ಆ ಸ್ಥಳದಲ್ಲಿ ಕರ್ತನ ಮುಂದೆ ಸೌಲನನ್ನು ಅರಸನನ್ನಾಗಿ ಮಾಡಿ ಕರ್ತನಿಗೆ ಸಮಾ ಧಾನದ ಬಲಿಗಳನ್ನು ಅರ್ಪಿಸಿದರು. ಅಲ್ಲಿ ಸೌಲನೂ ಸಮಸ್ತ ಇಸ್ರಾಯೇಲ್ಯರೂ ಬಹಳವಾಗಿ ಸಂತೋಷ ಪಟ್ಟರು.
- 1 Samuel 12:25 1 ಸಮುವೇಲನು 12:25ಆದರೆ ನೀವು ಕೆಟ್ಟತನವನ್ನು ಇನ್ನೂ ಮಾಡಿದರೆ ನೀವೂ ನಿಮ್ಮ ಅರಸನೂ ನಾಶವಾಗುವಿರಿ ಅಂದನು.