1 Samuel · chapter 7 · verse 12
1 Samuel 7:12 in Kannada
ಸಮುವೇಲನು ಒಂದು ಕಲ್ಲನ್ನು ತೆಗೆದುಕೊಂಡು ಮಿಚ್ಪೆಗೂ ಶೇನಿಗೂ ಮಧ್ಯ ದಲ್ಲಿ ನಿಲ್ಲಿಸಿ--ಈವರೆಗೂ ಕರ್ತನು ನಮಗೆ ಸಹಾಯ ಮಾಡಿದ್ದಾನೆಂದು ಹೇಳಿ ಅದಕ್ಕೆ ಎಬೆನೆಜೆರ ಎಂದು ಹೆಸರಿಟ್ಟನು.
Samuvelanu ondu kallannu tegedukondu michpegoo shenigoo madhya dalli nillisi--eevaregoo kartanu namage sahaaya maadiddaanendu heli adakke ebenejera endu hesarittanu.
1 Samuel 7:12 in English
- King James Version (KJV)
- Then Samuel took a stone, and set [it] between Mizpeh and Shen, and called the name of it Eben-ezer, saying, Hitherto hath the LORD helped us.
- World English Bible (WEB)
- Then Samuel took a stone and set it between Mizpah and Shen, and called its name Ebenezer, saying, “The LORD helped us until now.”
- American Standard Version (ASV)
- Then Samuel took a stone, and set it between Mizpah and Shen, and called the name of it Eben-ezer, saying, Hitherto hath Jehovah helped us.
- Bible in Basic English (BBE)
- Then Samuel took a stone and put it up between Mizpah and Jeshanah, naming it Eben-ezer, and saying, Up to now the Lord has been our help.
- Darby Translation (DBY)
- And Samuel took a stone and set it between Mizpah and Shen, and called the name of it Eben-ezer, and said, Hitherto Jehovah has helped us.
- Webster's Bible (WBS)
- Then Samuel took a stone, and set [it] between Mizpeh and Shen, and called the name of it Eben-ezer, saying, Hitherto hath the LORD helped us.
- Young's Literal Translation (YLT)
- And Samuel taketh a stone, and setteth [it] between Mizpeh and Shen, and calleth its name Eben-Ezer, saying, 'Hitherto hath Jehovah helped us.'
Read in context
- 10ಸಮುವೇಲನು ದಹನಬಲಿಯನ್ನು ಅರ್ಪಿಸುವಾಗ ಫಿಲಿಷ್ಟಿಯರು ಇಸ್ರಾಯೇಲಿನ ಮೇಲೆ ಯುದ್ಧಮಾಡಲು ಸವಿಾಪಕ್ಕೆ ಬಂದರು. ಆಗ ಕರ್ತನು ಫಿಲಿಷ್ಟಿಯರ ಮೇಲೆ ದೊಡ್ಡ ಶಬ್ದದಿಂದ ಗುಡುಗಿ ಅವರನ್ನು ಸೋಲಿ ಸಿದನು; ಅವರು ಇಸ್ರಾಯೇಲಿನ ಮುಂದೆ ಹೊಡೆ ಯಲ್ಪಟ್ಟರು.
- 11ಆಗ ಇಸ್ರಾಯೇಲ್ಯರು ಮಿಚ್ಛೆಯಿಂದ ಹೊರಟು ಫಿಲಿಷ್ಟಿಯರನ್ನು ಹಿಂದಟ್ಟಿ ಬೇತ್ಕರಿನ ವರೆಗೂ ಅವರನ್ನು ಹೊಡೆದರು.
- 12ಸಮುವೇಲನು ಒಂದು ಕಲ್ಲನ್ನು ತೆಗೆದುಕೊಂಡು ಮಿಚ್ಪೆಗೂ ಶೇನಿಗೂ ಮಧ್ಯ ದಲ್ಲಿ ನಿಲ್ಲಿಸಿ--ಈವರೆಗೂ ಕರ್ತನು ನಮಗೆ ಸಹಾಯ ಮಾಡಿದ್ದಾನೆಂದು ಹೇಳಿ ಅದಕ್ಕೆ ಎಬೆನೆಜೆರ ಎಂದು ಹೆಸರಿಟ್ಟನು.
- 13ಫಿಲಿಷ್ಟಿಯರು ತಗ್ಗಿಸಲ್ಪಟ್ಟು ಇಸ್ರಾ ಯೇಲಿನ ಮೇರೆಯಲ್ಲಿ ಬಾರದೆ ಇದ್ದರು. ಇದಲ್ಲದೆ ಸಮುವೇಲನು ಇದ್ದ ದಿವಸಗಳೆಲ್ಲಾ ಕರ್ತನ ಕೈ ಫಿಲಿಷ್ಟಿ ಯರಿಗೆ ವಿರೋಧವಾಗಿತ್ತು.
- 14ಫಿಲಿಷ್ಟಿಯರು ಇಸ್ರಾ ಯೇಲಿನಿಂದ ತೆಗೆದುಕೊಂಡಿದ್ದ ಎಕ್ರೋನ್ ಮೊದಲು ಗೊಂಡು ಗತ್ ವರೆಗೂ ಇರುವ ಪಟ್ಟಣಗಳು ಇಸ್ರಾ ಯೇಲಿಗೆ ತಿರಿಗಿ ಕೊಡಲ್ಪಟ್ಟವು. ಅವುಗಳ ಮೇರೆ ಗಳನ್ನು ಇಸ್ರಾಯೇಲ್ಯರು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕೊಂಡರು. ಇಸ್ರಾಯೇಲಿಗೂ ಅಮೋರಿಯರಿಗೂ ಮಧ್ಯ ಸಮಾಧಾನ ಉಂಟಾಗಿತ್ತು.
Cross references
- 2 Corinthians 1:10 2 ಕೊರಿಂಥದವರಿಗೆ 1:10ಆತನು ನಮ್ಮನ್ನು ಎಂಥಾ ಭಯಂಕರವಾದ ಮರಣದಿಂದ ತಪ್ಪಿಸಿದ್ದಾನೆ, ಮತ್ತು ತಪ್ಪಿಸುತ್ತಾನೆ, ಇನ್ನು ಮುಂದೆಯೂ ಆತನು ನಮ್ಮನ್ನು ತಪ್ಪಿಸುವನೆಂದು ನಾವು ಆತನಲ್ಲಿ ಭರವಸೆಯುಳ್ಳವರಾಗಿದ್ದೇವೆ.
- Joshua 4:9 ಯೆಹೋಶುವ 4:9ಯೆಹೋಶುವನು ಯೊರ್ದನಿನ ಮಧ್ಯದಲ್ಲಿ ಒಡಂಬಡಿಕೆಯ ಮಂಜೂಷವನ್ನು ಹೊತ್ತ ಯಾಜಕರ ಕಾಲುಗಳು ನಿಂತಿದ್ದ ಸ್ಥಳದಲ್ಲಿ ಹನ್ನೆರಡು ಕಲ್ಲುಗಳನ್ನು ನಿಲ್ಲಿಸಿದನು. ಅವು ಈ ದಿನದ ವರೆಗೂ ಅಲ್ಲಿಯೇ ಇವೆ.
- Acts 26:22 ಅಪೊಸ್ತಲರ ಕೃತ್ಯಗಳು 26:22ಹೀಗೆ ನಾನು ದೇವರ ಸಹಾಯವನ್ನು ಹೊಂದಿ ಈ ದಿವಸದವರೆಗೆ ಜೀವದಿಂದಿದ್ದು ಪ್ರವಾದಿಗಳೂ ಮೋಶೆಯೂ ಸಂಭವಿಸುವವೆಂದು ಹೇಳಿದವುಗಳನ್ನೇ ಹೊರತು ಮತ್ತೆ ಯಾವ ವಿಷಯಗಳನ್ನೂ ಹೇಳದೆ ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷೀಕರಿಸುವವ ನಾಗಿದ್ದೇನೆ.
- Genesis 22:14 ಆದಿಕಾಂಡ 22:14ಅಬ್ರಹಾಮನು ಆ ಸ್ಥಳಕ್ಕೆ ಯೆಹೋವಯಾರೆ ಎಂದು ಹೆಸರನ್ನು ಇಟ್ಟದ್ದರಿಂದ ಕರ್ತನ ಪರ್ವತದಲ್ಲಿ ಅದು ಕಾಣಲ್ಪಡುವದು ಎಂದು ಇಂದಿನ ವರೆಗೂ ಹೇಳುತ್ತಾರೆ.
- Genesis 35:14 ಆದಿಕಾಂಡ 35:14ಯಾಕೋಬನು ತನ್ನ ಸಂಗಡ ಮಾತನಾಡಿದ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಪಾನಾರ್ಪಣೆಮಾಡಿ ಅದರ ಮೇಲೆ ಎಣ್ಣೆಯನ್ನು ಹೊಯ್ದನು.
- 1 Samuel 5:1 1 ಸಮುವೇಲನು 5:1ಫಿಲಿಷ್ಟಿಯರು ದೇವರ ಮಂಜೂಷವನ್ನು ತಕ್ಕೊಂಡು ಎಬೆನೆಜೆರಿನಿಂದ ಅಷ್ಡೋದಿಗೆ ತಂದರು.
- Isaiah 46:3–4 ಯೆಶಾಯ 46:3–4ಓ ಯಾಕೋಬನ ಮನೆತನದವರೇ, ಇಸ್ರಾ ಯೇಲ್ ಮನೆತನದಲ್ಲಿ ಉಳಿದಿರುವವರೆಲ್ಲರೇ, ನಿಮ್ಮನ್ನು ಗರ್ಭದಲ್ಲಿ ಹೊತ್ತು, ಹುಟ್ಟಿದಂದಿನಿಂದ ವಹಿಸುತ್ತಿದ್ದಾತನ ಮಾತನ್ನು ಕೇಳಿರಿ-- ನಿಮ್ಮ ಮುಪ್ಪಿನ ಪ್ರಾಯದ ವರೆಗೆ ನಾನೇ (ಆಧಾರ) ನರೆಗೂದಲು ಬಂದಾಗಲೂ ನಾನು ನಿಮ್ಮನ್ನು ಹೊರುವೆನು, ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಅಂತೂ ನಾನು ನಿಮ್ಮನ್ನು ಹೊತ್ತು ಬಿಡುಗಡೆ ಮಾಡುವೆನು.
- Genesis 31:45–52 ಆದಿಕಾಂಡ 31:45–52ಆಗ ಯಾಕೋಬನು ಒಂದು ಕಲ್ಲನ್ನು ತೆಗೆದು ಕೊಂಡು ಸ್ತಂಭವಾಗಿ ನಿಲ್ಲಿಸಿದನು; ಯಾಕೋಬನು ತನ್ನ ಸಹೋದರರಿಗೆ (ಕಡೆಯವರಿಗೆ)--ಕಲ್ಲುಗಳನ್ನು ಕೂಡಿಸಿರಿ ಅಂದನು. ಅವರು ಕಲ್ಲುಗಳನ್ನು ತಕ್ಕೊಂಡು ಒಂದು ಕುಪ್ಪೆ ಮಾಡಿ ಆ ಕುಪ್ಪೆಯ ಮೇಲೆ ಅವರು ಊಟಮಾಡಿದರು. ಆ ಕುಪ್ಪೆಗೆ ಲಾಬಾನನು ಯಗರಸಾಹದೂತ ಎಂದು ಹೆಸರಿಟ್ಟನು; ಯಾಕೋ ಬನು ಗಲೇದ್ ಎಂದೂ ಹೆಸರಿಟ್ಟನು; ಆಗ ಲಾಬಾನನು--ಈ ಕುಪ್ಪೆಯು ಈ ಹೊತ್ತು ನಿನಗೂ ನನಗೂ ಸಾಕ್ಷಿಯಾಗಿದೆ ಅಂದನು. ಆದದರಿಂದ ಅದಕ್ಕೆ ಗಲೇದ್ ಎಂದೂ ಮಿಚ್ಪಾ ಎಂದೂ ಹೆಸರಾಯಿತು. ಯಾಕಂದರೆ--ನನಗೂ ನಿನಗೂ ಮಧ್ಯದಲ್ಲಿ ನಾವು ಒಬ್ಬರಿಗೊಬ್ಬರು ಅಗಲಿರುವಾಗ ಕರ್ತನು ನಮ್ಮನ್ನು ಕಾಪಾಡಲಿ. ನೀನು ನನ್ನ ಕುಮಾರ್ತೆಯರನ್ನು ಉಪದ್ರಪಡಿಸಿದರೆ ಇಲ್ಲವೆ ನನ್ನ ಮಕ್ಕಳ ಹೊರತಾಗಿ ಬೇರೆ ಹೆಂಡತಿಯರನ್ನು ನೀನು ತಕ್ಕೊಂಡರೆ ಯಾವ ಮನುಷ್ಯನೂ ನಮ್ಮ ಸಂಗಡ ಇರುವದಿಲ್ಲ. ನೋಡು, ನನಗೂ ನಿನಗೂ ನಡುವೆ ದೇವರೇ ಸಾಕ್ಷಿ ಅಂದನು. ಲಾಬಾನನು ಯಾಕೋಬ ನಿಗೆ--ನಿನಗೂ ನನಗೂ ಮಧ್ಯೆ ನಾನು ಹಾಕಿಸಿರುವ ಈ ಕುಪ್ಪೆಯನ್ನು ನೋಡು, ಈ ಸ್ತಂಭವನ್ನು ನೋಡು. ನಾನು ಈ ಕುಪ್ಪೆಯನ್ನು ದಾಟಿ ನಿನ್ನ ಹತ್ತಿರ ಬರುವದಿಲ್ಲ; ನೀನು ಈ ಕುಪ್ಪೆಯನ್ನು ಮತ್ತು ಸ್ತಂಭವನ್ನು ಕೇಡಿಗಾಗಿ ದಾಟುವದಿಲ್ಲವೆಂಬದಕ್ಕೆ ಈ ಕುಪ್ಪೆಯೂ ಸ್ತಂಭವೂ ಸಾಕ್ಷಿಯಾಗಿವೆ.
- Genesis 28:18–19 ಆದಿಕಾಂಡ 28:18–19ಯಾಕೋಬನು ಬೆಳಿಗ್ಗೆ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಸ್ತಂಭವಾಗಿ ನೆಟ್ಟು ಅದರ ಮೇಲೆ ಎಣ್ಣೆಯನ್ನು ಹೊಯ್ದನು. ಇದಲ್ಲದೆ ಅವನು ಆ ಸ್ಥಳಕ್ಕೆ ಬೇತೇಲ್ ಎಂದು ಹೆಸರಿಟ್ಟನು. ಆದರೆ ಅದಕ್ಕಿಂತ ಮೊದಲು ಆ ಪಟ್ಟಣಕ್ಕೆ ಲೂಜ್ ಎಂದು ಹೆಸರಿತ್ತು.
- Joshua 24:26–27 ಯೆಹೋಶುವ 24:26–27ಈ ಮಾತುಗಳನ್ನು ಯೆಹೋಶುವನು ದೇವರ ನ್ಯಾಯಪ್ರಮಾಣದ ಪುಸ್ತಕ ದಲ್ಲಿ ಬರೆದು ಒಂದು ದೊಡ್ಡ ಕಲ್ಲನ್ನು ಎತ್ತಿ ಅದನ್ನು ಅಲ್ಲಿ ಕರ್ತನ ಪರಿಶುದ್ಧ ಸ್ಥಳದ ಬಳಿಯಲ್ಲಿ ಏಲಾಮರದ ಕೆಳಗೆ ನೆಟ್ಟನು. ಯೆಹೋಶುವನು ಜನ ರಿಗೆಲ್ಲಾ--ಇಗೋ, ಈ ಕಲ್ಲು ನಿಮ್ಮ ಮಧ್ಯದಲ್ಲಿ ಸಾಕ್ಷಿಯಾಗಿರಲಿ. ಯಾಕಂದರೆ ಅದು ಕರ್ತನು ನಮ್ಮ ಸಂಗಡ ಹೇಳಿದ ಎಲ್ಲಾ ವಚನಗಳನ್ನು ಕೇಳಿತು. ಆದದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆಯದ ಹಾಗೆ ಇದೇ ನಿಮಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು.
- Joshua 4:20–24 ಯೆಹೋಶುವ 4:20–24ಅಲ್ಲಿ ಅವರು ಯೊರ್ದನಿನಿಂದ ತೆಗೆದು ಕೊಂಡ ಹನ್ನೆರಡು ಕಲ್ಲುಗಳನ್ನು ಯೆಹೋಶುವನು ಗಿಲ್ಗಾಲಿನಲ್ಲಿ ನಿಲ್ಲಿಸಿದನು. ಅವನು ಇಸ್ರಾಯೇಲ್ ಮಕ್ಕಳಿಗೆ--ನಿಮ್ಮ ಮಕ್ಕಳು ಈ ಕಲ್ಲುಗಳು ಏನೆಂದು ಬರುವ ಕಾಲದಲ್ಲಿ ತಮ್ಮ ತಂದೆಗಳನ್ನು ಕೇಳಿದಾಗ ನೀವು ಅವರಿಗೆ ತಿಳಿಸಬೇಕಾದದ್ದೇನಂದರೆ--ಇಸ್ರಾ ಯೇಲ್ಯರು ಒಣಗಿದ ಭೂಮಿಯಲ್ಲಿ ಈ ಯೊರ್ದನನ್ನು ದಾಟಿ ಬಂದರು. ಭೂಮಿಯ ಜನರೆಲ್ಲಾ ಕರ್ತನ ಹಸ್ತವು ಬಲವುಳ್ಳದ್ದೆಂದು ತಿಳಿಯುವ ಹಾಗೆಯೂ ನೀವು ನಿರಂತರವೂ ನಿಮ್ಮ ಕರ್ತನಾದ ದೇವರಿಗೆ ಭಯಪಡುವ ಹಾಗೆಯೂನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು. ನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು.
- Exodus 17:15 ವಿಮೋಚನಕಾಂಡ 17:15ಇದಾದ ಮೇಲೆ ಮೋಶೆಯು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ನಿಸ್ಸಿ ಎಂದು ಹೆಸರಿಟ್ಟನು.ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು.
Original words (Hebrew)
- Samuel · H8050שְׁמוּאֵל Shᵉmûwʼêl
- took · H3947לָקַח lâqach
- a · H259אֶחָד ʼechâd
- stone · H68אֶבֶן ʼeben
- set · H7760שׂוּם sûwm
- Mizpeh · H4709מִצְפָּה Mitspâh
- Shen · H8129שֵׁן Shên
- called · H7121קָרָא qârâʼ
- name · H8034שֵׁם shêm
- Eben-ezer · H72אֶבֶן הָעֵזֶר ʼEben hâ-ʻÊzer
- saying · H559אָמַר ʼâmar
- helped · H5826עָזַר ʻâzar