2 Chronicles · chapter 1 · verse 9
2 Chronicles 1:9 in Kannada
ಈಗ ಕರ್ತನಾದ ದೇವರೇ, ನನ್ನ ತಂದೆಯಾದ ದಾವೀದನಿಗೆ ನೀನು ಮಾಡಿದ ವಾಗ್ದಾನವು ಸ್ಥಾಪಿತವಾಗಲಿ, ಲೆಕ್ಕದಲ್ಲಿ ಧೂಳಿಯ ಹಾಗೆ ಹೆಚ್ಚಾಗಿರುವ ಜನರ ಮೇಲೆ ನನ್ನನ್ನು ಅರಸನಾಗ ಮಾಡಿದಿ.
Eega kartanaada devare, nanna tandeyaada daaveedanige neenu maadida vaagdaanavu sthaapitavaagali, lekkadalli dhooliya haage hechchaagiruva janara mele nannannu arasanaaga maadidi.
2 Chronicles 1:9 in English
- King James Version (KJV)
- Now, O LORD God, let thy promise unto David my father be established: for thou hast made me king over a people like the dust of the earth in multitude.
- World English Bible (WEB)
- Now, LORD God, let your promise to David my father be established; for you have made me king over a people like the dust of the earth in multitude.
- American Standard Version (ASV)
- Now, O Jehovah God, let thy promise unto David my father be established; for thou hast made me king over a people like the dust of the earth in multitude.
- Bible in Basic English (BBE)
- Now, O Lord God, let your word to David my father come true; for you have made me king over a people like the dust of the earth in number.
- Darby Translation (DBY)
- Now, Jehovah Elohim, let thy word unto David my father be firm; for thou hast made me king over a people numerous as the dust of the earth.
- Webster's Bible (WBS)
- Now, O LORD God, let thy promise to David my father be established: for thou hast made me king over a people like the dust of the earth in multitude.
- Young's Literal Translation (YLT)
- Now, O Jehovah God, is Thy word with David my father stedfast, for Thou hast caused me to reign over a people numerous as the dust of the earth;
Read in context
- 7ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು--ನಾನು ನಿನಗೆ ಕೊಡಬೇಕಾದದ್ದನ್ನು ಕೇಳಿಕೋ ಅಂದನು.
- 8ಆಗ ಸೊಲೊಮೋನನು ದೇವ ರಿಗೆ--ನೀನು ನನ್ನ ತಂದೆಯಾದ ದಾವೀದನಿಗೆ ಬಹು ಕೃಪೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿ.
- 9ಈಗ ಕರ್ತನಾದ ದೇವರೇ, ನನ್ನ ತಂದೆಯಾದ ದಾವೀದನಿಗೆ ನೀನು ಮಾಡಿದ ವಾಗ್ದಾನವು ಸ್ಥಾಪಿತವಾಗಲಿ, ಲೆಕ್ಕದಲ್ಲಿ ಧೂಳಿಯ ಹಾಗೆ ಹೆಚ್ಚಾಗಿರುವ ಜನರ ಮೇಲೆ ನನ್ನನ್ನು ಅರಸನಾಗ ಮಾಡಿದಿ.
- 10ನಾನು ಈ ಜನರ ಮುಂದೆ ಹೊರಡುವ ಹಾಗೆಯೂ ಬರುವ ಹಾಗೆಯೂ ನನಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡು. ಈ ನಿನ್ನ ಮಹಾಜನಕ್ಕೆ ನ್ಯಾಯ ತೀರಿಸತಕ್ಕವನು ಯಾರು ಅಂದನು.
- 11ಆಗ ದೇವರು ಸೊಲೊಮೋನನಿಗೆ--ಇದು ನಿನ್ನ ಹೃದಯ ದಲ್ಲಿ ಇದ್ದದರಿಂದಲೂ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ನಿನ್ನ ಶತ್ರುಗಳ ಪ್ರಾಣವನ್ನೂ ಹೆಚ್ಚಾದ ದಿವಸಗಳನ್ನೂ ನೀನು ಕೇಳದೆ ನಾನು ಯಾರ ಮೇಲೆ ನಿನ್ನನ್ನು ಅರಸನಾಗಿ ಮಾಡಿದೆನೋ ಆ ನನ್ನ ಜನರಿಗೆ ನ್ಯಾಯ ತೀರಿಸುವ ಹಾಗೆ ಜ್ಞಾನವನ್ನೂ ತಿಳುವಳಿಕೆ ಯನ್ನೂ ನೀನು ಕೇಳಿದ್ದರಿಂದ ಅವು ನಿನಗೆ ಕೊಡ ಲ್ಪಟ್ಟವು.
Cross references
- Genesis 13:16 ಆದಿಕಾಂಡ 13:16ನಿನ್ನ ಸಂತತಿಯನ್ನು ಭೂಮಿಯ ಧೂಳಿನಷ್ಟು ಮಾಡುವೆನು. ಭೂಮಿಯ ಧೂಳನ್ನು ಒಬ್ಬನು ಲೆಕ್ಕಿಸಬಹುದಾದರೆ ನಿನ್ನ ಸಂತಾನವು ಸಹ ಲೆಕ್ಕಿಸಲ್ಪಡುವದು.
- 2 Samuel 7:12–16 2 ಸಮುವೇಲನು 7:12–16ಇದಲ್ಲದೆ ಕರ್ತನು ನಿನಗೆ ತಿಳಿಸುವದೇನಂದರೆ, ನಾನು ನಿನಗೆ ಮನೆಯನ್ನು ಕಟ್ಟುವೆನು. ನಿನ್ನ ದಿವಸಗಳು ಪೂರ್ತಿ ಯಾಗಿ ನೀನು ನಿನ್ನ ಪಿತೃಗಳ ಸಂಗಡ ಮಲಗಿಕೊಂಡಿ ರುವಾಗ ನಿನ್ನ ಕರುಳುಗಳಿಂದ ಹೊರಡುವ ನಿನ್ನ ಸಂತತಿಯನ್ನು ನಿನ್ನ ತರುವಾಯ ಎಬ್ಬಿಸಿ ನಾನು ಅವನ ರಾಜ್ಯವನ್ನು ಸ್ಥಿರಮಾಡುವೆನು. ಅವನು ನನ್ನ ಹೆಸ ರಿಗೆ ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯದ ಸಿಂಹಾಸನವನ್ನು ಸದಾಕಾಲಕ್ಕೂ ಸ್ಥಿರಮಾಡುವೆನು. ನಾನು ಅವನ ತಂದೆಯಾಗಿರುವೆನು; ಅವನು ನನ್ನ ಮಗನಾಗಿರುವನು. ಅವನು ಕೆಟ್ಟತನ ಮಾಡಿದರೆ ನಾನು ಅವನನ್ನು ಮನುಷ್ಯರ ಕೋಲಿನಿಂದಲೂ ಮನುಷ್ಯರ ಮಕ್ಕಳ ಪೆಟ್ಟುಗಳಿಂದಲೂ ದಂಡಿಸುವೆನು. ಆದರೆ ನಾನು ನಿನ್ನ ಮುಂದೆ ತೊರೆದುಬಿಟ್ಟ ಸೌಲ ನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ. ನಿನ್ನ ಮನೆಯೂ ನಿನ್ನ ರಾಜ್ಯವೂ ನಿನ್ನ ಮುಂದೆ ಸದಾಕಾಲಕ್ಕೂ ಸ್ಥಿರಮಾಡಲ್ಪಡುವವು; ನಿನ್ನ ಸಿಂಹಾಸನವು ಯುಗ ಯುಗಾಂತರಕ್ಕೂ ಶಾಶ್ವತವಾಗಿರುವದು ಎಂದು ಹೇಳಿ ದನು.
- Genesis 22:17 ಆದಿಕಾಂಡ 22:17ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು.
- Psalm 132:11–12 ಕೀರ್ತನೆಗಳು 132:11–12ಕರ್ತನು ದಾವೀದನಿಗೆ ಸತ್ಯದ ಆಣೆ ಇಟ್ಟಿದ್ದಾನೆ; ಅದರಿಂದ ತಿರುಗಿಕೊಳ್ಳನು; ಅದು--ನಿನ್ನ ಸಂತಾನ ವನ್ನು ನಿನ್ನ ಸಿಂಹಾಸನದ ಮೇಲೆ ಇರಿಸು ವದು. ನಿನ್ನ ಮಕ್ಕಳಿಗೆ ನಾನು ಕಲಿಸುವ ನನ್ನ ಒಡಂಬಡಿಕೆಯನ್ನೂ ನನ್ನ ಸಾಕ್ಷಿಯನ್ನೂ ಕೈಕೊಂಡರೆ ಅವರ ಮಕ್ಕಳು ಸಹ ಎಂದೆಂದಿಗೂ ನಿನ್ನ ಸಿಂಹಾಸನ ದಲ್ಲಿ ಕೂಡ್ರುವರು.
- Psalm 89:35–37 ಕೀರ್ತನೆಗಳು 89:35–37ಒಂದು ಸಾರಿ ನನ್ನ ಪರಿಶುದ್ಧತ್ವ ದಿಂದ ಆಣೆಯಿಟ್ಟು ಹೇಳಿದ್ದೇನೆ; ದಾವೀದನಿಗೆ ಸುಳ್ಳಾ ಡೆನು. ಅವನ ಸಂತತಿಯು ಯುಗ ಯುಗಕ್ಕೂ ಅವನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವದು. ಚಂದ್ರನ ಹಾಗೆ ಅದು ಯುಗಯುಗಕ್ಕೂ, ಸ್ಥಿರವಾಗಿರುವದು; ಪರಲೋಕದಲ್ಲಿ ರುವ ಸಾಕ್ಷಿಯ ಹಾಗೆ ನಂಬಿಕೆ ಯುಳ್ಳದ್ದಾಗಿರುವದು ಸೆಲಾ.
- Numbers 23:10 ಅರಣ್ಯಕಾಂಡ 23:10ಯಾಕೋಬನ ಧೂಳನ್ನು ಎಣಿಸುವದಕ್ಕೂ ಇಸ್ರಾಯೇಲಿನ ನಾಲ್ಕನೇ ಒಂದು ಪಾಲನ್ನಾದರೂ ಲೆಕ್ಕ ಮಾಡುವದಕ್ಕೂ ಯಾರಿಂದಾದೀತು? ನೀತಿವಂತನು ಸಾಯುವಂತೆ ನಾನೂ ಸಾಯಬೇಕು, ನನ್ನ ಕಡೇ ಅಂತ್ಯವು ಅವನಂತೆಯೇ ಆಗಲಿ ಎಂದು ಹೇಳಿದನು.
- 1 Chronicles 17:11–14 1 ಪೂರ್ವಕಾಲವೃತ್ತಾಂತ 17:11–14ನಿನ್ನ ದಿವಸಗಳು ತೀರಿದ ಮೇಲೆ ನೀನು ನಿನ್ನ ಪಿತೃಗಳ ಬಳಿಗೆ ಸೇರಿದಾಗ ಆಗುವದೇ ನಂದರೆ, ನಾನು ನಿನ್ನ ತರುವಾಯ ನಿನ್ನ ಪುತ್ರರಿಂದಾ ಗುವ ನಿನ್ನ ಸಂತತಿಯನ್ನು ಎಬ್ಬಿಸಿ ಅವನಿಗೆ ರಾಜ್ಯವನ್ನು ಸ್ಥಿರಮಾಡುವೆನು. ಅವನು ನನಗೆ ಮನೆಯನ್ನು ಕಟ್ಟುವನು. ಅವನ ಸಿಂಹಾಸನವನ್ನು ಎಂದೆಂದಿಗೂ ಸ್ಥಿರಮಾಡುವೆನು. ನಾನು ಅವನ ತಂದೆಯಾಗಿರು ವೆನು; ಅವನು ನನ್ನ ಮಗನಾಗಿರುವನು. ನಿನಗೆ ಮುಂಚೆ ಇದ್ದವನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ. ಅವನನ್ನು ನನ್ನ ಮನೆಯಲ್ಲಿಯೂ ನನ್ನ ರಾಜ್ಯದಲ್ಲಿಯೂ ಎಂದೆಂದಿಗೂ ನೆಲೆಗೊಳಿಸುವೆನು; ಅವನ ಸಿಂಹಾಸನವು ಯುಗ ಯುಗಕ್ಕೂ ಸ್ಥಿರವಾಗಿರುವದು.
- 1 Kings 3:7–8 1 ಅರಸುಗಳು 3:7–8ನನ್ನ ದೇವರಾದ ಕರ್ತನೇ, ನೀನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ನಿನ್ನ ಸೇವಕನನ್ನು ಅರಸನಾಗಮಾಡಿದ್ದೀ. ಆದರೆ ನಾನು ಚಿಕ್ಕ ಬಾಲಕನಾಗಿದ್ದು ಹೊರಗೆ ಹೋಗುವದಕ್ಕೂ ಒಳಗೆ ಬರುವದಕ್ಕೂ ಅರಿಯದೆ ಇದ್ದೇನೆ. ಇದಲ್ಲದೆ ನಿನ್ನ ಸೇವಕನು ನೀನು ಆದುಕೊಂಡ ನಿನ್ನ ಮಹಾಜನರ ಮಧ್ಯದಲ್ಲಿ ಇದ್ದಾನೆ. ಆ ಜನರು ಬಹಳವಾಗಿರುವ ದರಿಂದ ಅವರನ್ನು ಎಣಿಸಲೂ ಲೆಕ್ಕ ಬರೆಯಲೂ ಆಗದು.
- 2 Samuel 7:25–29 2 ಸಮುವೇಲನು 7:25–29ಈಗ ಓ ಕರ್ತನಾದ ದೇವರೇ, ನೀನು ನಿನ್ನ ದಾಸನನ್ನು ಕುರಿತೂ ಅವನ ಮನೆಯನ್ನು ಕುರಿತೂ ಹೇಳಿದ ವಾಕ್ಯವನ್ನು ಶಾಶ್ವತಕ್ಕೂ ಸ್ಥಿರಪಡಿಸಿ ನೀನು ಹೇಳಿದ ಹಾಗೆಯೇ ಮಾಡು. ಸೈನ್ಯಗಳ ಕರ್ತನು ಇಸ್ರಾಯೇಲಿನ ಮೇಲೆ ದೇವರಾಗಿದ್ದಾನೆಂದು ಸದಾಕಾಲಕ್ಕೂ ನಿನ್ನ ನಾಮವು ಘನಹೊಂದಲಿ. ಇದಲ್ಲದೆ ನಿನ್ನ ದಾಸನಾದ ದಾವೀ ದನ ಮನೆಯು ನಿನ್ನ ಮುಂದೆ ಸ್ಥಿರವಾಗಿರಲಿ. ಸೈನ್ಯ ಗಳ ಓ ಕರ್ತನೇ, ಇಸ್ರಾಯೇಲಿನ ದೇವರೇ, ನಿನ್ನ ದಾಸನಿಗೆ--ನಾನು ನಿನಗೆ ಮನೆಯನ್ನು ಕಟ್ಟುವೆನೆಂದು ಪ್ರಕಟಮಾಡಿದ್ದರಿಂದ ನಿನ್ನನ್ನು ಕುರಿತು ಈ ಪ್ರಾರ್ಥನೆ ಯನ್ನು ಪ್ರಾರ್ಥಿಸುವದಕ್ಕೆ ನಿನ್ನ ದಾಸನ ಹೃದಯದಲ್ಲಿ ಉಂಟಾಯಿತು. ಈಗ ಓ ಕರ್ತನಾದ ದೇವರೇ, ನೀನೇ ದೇವರಾದಾತನು, ನಿನ್ನ ವಾಕ್ಯಗಳು ಸತ್ಯವು; ನಿನ್ನ ದಾಸನಿಗೆ ಈ ಒಳ್ಳೇದನ್ನು ವಾಗ್ದಾನಮಾಡಿದಿ.ಆದಕಾರಣ ಈಗ ನಿನ್ನ ದಾಸನ ಮನೆಯು ನಿನ್ನ ಮುಂದೆ ಸದಾಕಾಲಕ್ಕೂ ಇರುವ ಹಾಗೆ ಅದನ್ನು ಆಶೀರ್ವದಿಸಲು ನಿನ್ನ ಚಿತ್ತವಾಗಿರಲಿ, ಯಾಕಂದರೆ ಓ ಕರ್ತನಾದ ದೇವರೇ, ನೀನು ಅದನ್ನು ಹೇಳಿದಿ; ನಿನ್ನ ದಾಸನ ಮನೆಯು ಸದಾಕಾಲವೂ ನಿನ್ನ ಆಶೀರ್ವಾದದಿಂದ ಆಶೀರ್ವದಿಸಲ್ಪಟ್ಟಿರಲಿ ಎಂದು ಹೇಳಿದನು. ಆದಕಾರಣ ಈಗ ನಿನ್ನ ದಾಸನ ಮನೆಯು ನಿನ್ನ ಮುಂದೆ ಸದಾಕಾಲಕ್ಕೂ ಇರುವ ಹಾಗೆ ಅದನ್ನು ಆಶೀರ್ವದಿಸಲು ನಿನ್ನ ಚಿತ್ತವಾಗಿರಲಿ, ಯಾಕಂದರೆ ಓ ಕರ್ತನಾದ ದೇವರೇ, ನೀನು ಅದನ್ನು ಹೇಳಿದಿ; ನಿನ್ನ ದಾಸನ ಮನೆಯು ಸದಾಕಾಲವೂ ನಿನ್ನ ಆಶೀರ್ವಾದದಿಂದ ಆಶೀರ್ವದಿಸಲ್ಪಟ್ಟಿರಲಿ ಎಂದು ಹೇಳಿದನು.
- 1 Chronicles 28:6–7 1 ಪೂರ್ವಕಾಲವೃತ್ತಾಂತ 28:6–7ಆತನು ನನ್ನ ಸಂಗಡ--ನಿನ್ನ ಮಗನಾದ ಸೊಲೊಮೋನನು ತಾನೇನನ್ನ ಮನೆಯನ್ನೂ ಅಂಗಳಗಳನ್ನೂ ಕಟ್ಟಿಸುವನು; ಅವನನ್ನು ನನಗೆ ಮಗನಾಗಿರಲು ಆದುಕೊಂಡೆನು. ನಾನು ಅವನಿಗೆ ತಂದೆಯಾಗಿರುವೆನು. ಇದಲ್ಲದೆ ಈಗಿನಂತೆ ನನ್ನ ಆಜ್ಞೆಗಳನ್ನೂ ನ್ಯಾಯಗಳನ್ನೂ ಅವನು ನಡಿಸಲು ದೃಢವಾಗಿದ್ದರೆ ಅವನ ರಾಜ್ಯವನ್ನು ಯುಗ ಯುಗಾಂತರಕ್ಕೂ ಸ್ಥಿರಪಡಿಸುವೆನು ಅಂದನು.
- 1 Chronicles 17:23–27 1 ಪೂರ್ವಕಾಲವೃತ್ತಾಂತ 17:23–27ಈಗ ಕರ್ತನೇ, ನೀನು ನಿನ್ನ ಸೇವಕನನ್ನು ಕುರಿತು ಅವನ ಮನೆಯನ್ನು ಕುರಿತು ಹೇಳಿದ ಮಾತು ಯುಗಯುಗಾಂತರಕ್ಕೂ ನಿಶ್ಚಯವಾಗಲಿ; ನೀನು ಹೇಳಿದ ಹಾಗೆ ಮಾಡು. ಅದು ನಿಶ್ಚಯವಾಗಲಿ; ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಇಸ್ರಾಯೇಲಿಗೆ ದೇವರಾಗಿದ್ದಾ ನೆಂದು ನಿನ್ನ ನಾಮವು ಯುಗಯುಗಾಂತರಕ್ಕೂ ಘನ ಹೊಂದಲಿ; ನಿನ್ನ ಸೇವಕನಾದ ದಾವೀದನ ಮನೆಯು ನಿನ್ನ ಮುಂದೆ ಸ್ಥಿರಪಟ್ಟಿರಲಿ. ಯಾಕಂದರೆ ಓ ನನ್ನ ದೇವರೇ, ನೀನು ನಿನ್ನ ಸೇವಕನಿಗೆ ಮನೆಯನ್ನು ಕಟ್ಟುವೆನೆಂದು ಹೇಳಿದಿ. ಆದದರಿಂದ ನಿನ್ನ ಸೇವಕನು ನಿನ್ನ ಮುಂದೆ ಪ್ರಾರ್ಥನೆ ಮಾಡಲು ಎಡೆ ಸಿಕ್ಕಿತು. ಈಗ ಕರ್ತನೇ, ನೀನು ದೇವರಾಗಿದ್ದೀ; ಈ ಒಳ್ಳೇ ವಾಗ್ದಾನವನ್ನು ನಿನ್ನ ಸೇವಕನಿಗೆ ಹೇಳಿದಿ.ಹಾಗಾದರೆ ನಿನ್ನ ಸೇವಕನ ಮನೆ ನಿನ್ನ ಮುಂದೆ ಯುಗಯುಗಕ್ಕೂ ಇರುವಹಾಗೆ ಅದನ್ನು ಆಶೀರ್ವದಿಸುವಂತೆ ನಿನಗೆ ಮೆಚ್ಚಿಕೆಯಾಗಲಿ; ಕರ್ತನೇ ನೀನು ಆಶೀರ್ವದಿಸಿದ್ದು ಯುಗಯುಗಕ್ಕೂ ಆಶೀರ್ವದಿಸಲ್ಪಟ್ಟಿರುವದು. ಹಾಗಾದರೆ ನಿನ್ನ ಸೇವಕನ ಮನೆ ನಿನ್ನ ಮುಂದೆ ಯುಗಯುಗಕ್ಕೂ ಇರುವಹಾಗೆ ಅದನ್ನು ಆಶೀರ್ವದಿಸುವಂತೆ ನಿನಗೆ ಮೆಚ್ಚಿಕೆಯಾಗಲಿ; ಕರ್ತನೇ ನೀನು ಆಶೀರ್ವದಿಸಿದ್ದು ಯುಗಯುಗಕ್ಕೂ ಆಶೀರ್ವದಿಸಲ್ಪಟ್ಟಿರುವದು.