2 Chronicles · chapter 1 · verse 8
2 Chronicles 1:8 in Kannada
ಆಗ ಸೊಲೊಮೋನನು ದೇವ ರಿಗೆ--ನೀನು ನನ್ನ ತಂದೆಯಾದ ದಾವೀದನಿಗೆ ಬಹು ಕೃಪೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿ.
Aaga solomonanu deva rige--neenu nanna tandeyaada daaveedanige bahu krupeyannu torisi avanige badalaagi naanu aaluvante maadidi.
2 Chronicles 1:8 in English
- King James Version (KJV)
- And Solomon said unto God, Thou hast shewed great mercy unto David my father, and hast made me to reign in his stead.
- World English Bible (WEB)
- Solomon said to God, “You have shown great loving kindness to David my father, and have made me king in his place.
- American Standard Version (ASV)
- And Solomon said unto God, Thou hast showed great lovingkindness unto David my father, and hast made me king in his stead.
- Bible in Basic English (BBE)
- And Solomon said to God, Great was your mercy to David my father, and you have made me king in his place.
- Darby Translation (DBY)
- And Solomon said to God, Thou hast shewn unto David my father great loving-kindness, and hast made me king in his stead.
- Webster's Bible (WBS)
- And Solomon said to God, Thou hast shown great mercy to David my father, and hast made me to reign in his stead.
- Young's Literal Translation (YLT)
- And Solomon saith to God, 'Thou hast done with David my father great kindness, and hast caused me to reign in his stead.
Read in context
- 6ಆಗ ಸೊಲೊಮೋನನು ಸಭೆಯ ಗುಡಾರದ ಬಳಿಯಲ್ಲಿ ಕರ್ತನ ಮುಂದೆ ಇರುವ ತಾಮ್ರಪೀಠದ ಬಳಿಗೆ ಹೋಗಿ ಅದರ ಮೇಲೆ ಸಹಸ್ರ ದಹನಬಲಿಗಳನ್ನು ಅರ್ಪಿಸಿದನು.
- 7ಅದೇ ರಾತ್ರಿಯಲ್ಲಿ ದೇವರು ಸೊಲೊಮೋನನಿಗೆ ಕಾಣಿಸಿಕೊಂಡು--ನಾನು ನಿನಗೆ ಕೊಡಬೇಕಾದದ್ದನ್ನು ಕೇಳಿಕೋ ಅಂದನು.
- 8ಆಗ ಸೊಲೊಮೋನನು ದೇವ ರಿಗೆ--ನೀನು ನನ್ನ ತಂದೆಯಾದ ದಾವೀದನಿಗೆ ಬಹು ಕೃಪೆಯನ್ನು ತೋರಿಸಿ ಅವನಿಗೆ ಬದಲಾಗಿ ನಾನು ಆಳುವಂತೆ ಮಾಡಿದಿ.
- 9ಈಗ ಕರ್ತನಾದ ದೇವರೇ, ನನ್ನ ತಂದೆಯಾದ ದಾವೀದನಿಗೆ ನೀನು ಮಾಡಿದ ವಾಗ್ದಾನವು ಸ್ಥಾಪಿತವಾಗಲಿ, ಲೆಕ್ಕದಲ್ಲಿ ಧೂಳಿಯ ಹಾಗೆ ಹೆಚ್ಚಾಗಿರುವ ಜನರ ಮೇಲೆ ನನ್ನನ್ನು ಅರಸನಾಗ ಮಾಡಿದಿ.
- 10ನಾನು ಈ ಜನರ ಮುಂದೆ ಹೊರಡುವ ಹಾಗೆಯೂ ಬರುವ ಹಾಗೆಯೂ ನನಗೆ ಜ್ಞಾನವನ್ನೂ ತಿಳುವಳಿಕೆಯನ್ನೂ ಕೊಡು. ಈ ನಿನ್ನ ಮಹಾಜನಕ್ಕೆ ನ್ಯಾಯ ತೀರಿಸತಕ್ಕವನು ಯಾರು ಅಂದನು.
Cross references
- 1 Chronicles 28:5 1 ಪೂರ್ವಕಾಲವೃತ್ತಾಂತ 28:5ಕರ್ತನು ನನಗೆ ಅನೇಕ ಕುಮಾ ರರನ್ನು ಕೊಟ್ಟಿರುವಾಗ ನನ್ನ ಸಮಸ್ತ ಕುಮಾರರಲ್ಲಿ ಇಸ್ರಾಯೇಲಿನ ಮೇಲಾಗಿ ಕರ್ತನ ರಾಜ್ಯದ ಸಿಂಹಾ ಸನದ ಮೇಲೆ ಕುಳಿತುಕೊಳ್ಳುವದಕ್ಕೆ ನನ್ನ ಮಗನಾದ ಸೊಲೊಮೋನನನ್ನು ಆದುಕೊಂಡನು.
- Isaiah 55:3 ಯೆಶಾಯ 55:3ನಿಮ್ಮ ಕಿವಿಗಳನ್ನು ಬಾಗಿಸಿಕೊಂಡು ನನ್ನ ಬಳಿಗೆ ಬನ್ನಿರಿ; ಕೇಳಿರಿ, ನಿಮ್ಮ ಪ್ರಾಣವು ಬದುಕು ವದು; ನಿಶ್ಚಯವಾಗಿ ದಾವೀದನಿಗೆ ಖಂಡಿತವಾಗಿ ಮಾಡಿದ ಕರುಣೆಗಳ ಪ್ರಕಾರ ನಿಮ್ಮ ಸಂಗಡ ನಿತ್ಯ ವಾದ ಒಡಂಬಡಿಕೆಯನ್ನು ಮಾಡುವೆನು.
- 1 Chronicles 29:23 1 ಪೂರ್ವಕಾಲವೃತ್ತಾಂತ 29:23ಆಗ ಸೊಲೊಮೋನನು ತನ್ನ ತಂದೆಯಾದ ದಾವೀದನಿಗೆ ಬದಲಾಗಿ ಅರಸನಾಗಿ, ಕರ್ತನ ಸಿಂಹಾಸನದ ಮೇಲೆ ಕುಳಿತುಕೊಂಡು ಸಫಲ ಹೊಂದಿದನು. ಸಮಸ್ತ ಇಸ್ರಾಯೇಲ್ಯರು ಅವನಿಗೆ ವಿಧೇಯರಾದರು.
- 2 Samuel 12:7–8 2 ಸಮುವೇಲನು 12:7–8ಆಗ ನಾತಾನನು ದಾವೀದನಿಗೆ--ನೀನೇ ಆ ಮನು ಷ್ಯನು. ಇಸ್ರಾಯೇಲಿನ ದೇವರಾದ ಕರ್ತನು--ನಾನು ನಿನ್ನನ್ನು ಇಸ್ರಾಯೇಲಿನ ಮೇಲೆ ಅರಸನಾಗಿ ಅಭಿಷೇಕ ಮಾಡಿ ನಿನ್ನನ್ನು ಸೌಲನ ಕೈಗೆ ತಪ್ಪಿಸಿಬಿಟ್ಟು ನಿನ್ನ ಯಜಮಾನನ ಮನೆಯನ್ನೂ ನಿನ್ನ ಯಜಮಾನನ ಹೆಂಡತಿಯರನ್ನೂ ನಿನ್ನ ಎದೆಗೆ ಕೊಟ್ಟು ಇಸ್ರಾಯೇಲಿನ ಮನೆಯನ್ನೂ ಯೆಹೂದದ ಮನೆಯನ್ನೂ ನಿನಗೆ ಕೊಟ್ಟೆನು.
- Psalm 86:13 ಕೀರ್ತನೆಗಳು 86:13ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.
- Psalm 89:49 ಕೀರ್ತನೆಗಳು 89:49ಕರ್ತನೇ, ನಿನ್ನ ಸತ್ಯದಲ್ಲಿ ನೀನು ದಾವೀದನಿಗೆ ಆಣೆ ಇಟ್ಟ ನಿನ್ನ ಮುಂಚಿನ ಪ್ರೀತಿ ಕರುಣೆಯು ಎಲ್ಲಿ?
- 2 Samuel 7:8–9 2 ಸಮುವೇಲನು 7:8–9ಈಗ ನೀನು ನನ್ನ ಸೇವಕನಾದ ದಾವೀದನಿಗೆ--ನೀನು ನನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿರುವಂತೆ ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡೆನು; ನೀನು ಎಲ್ಲಿ ಹೋದರೂ ಅಲ್ಲಿ ನಿನ್ನ ಕೂಡ ಇದ್ದು ನಿನ್ನ ಶತ್ರುಗಳೆಲ್ಲರನ್ನು ನಿನ್ನ ಮುಂದೆ ಕಡಿದುಬಿಟ್ಟು ಭೂಮಿಯಲ್ಲಿರುವ ದೊಡ್ಡವರ ಹೆಸರಿನ ಹಾಗೆ ದೊಡ್ಡ ಹೆಸರನ್ನು ನಿನಗೆ ಉಂಟುಮಾಡಿದೆನು.
- Psalm 89:20–28 ಕೀರ್ತನೆಗಳು 89:20–28ನನ್ನ ಸೇವಕನಾದ ದಾವೀದನನ್ನು ಕಂಡು ಕೊಂಡಿದ್ದೇನೆ; ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ. ಅವನ ಸಂಗಡಲೇ ನನ್ನ ಕೈ ಸ್ಥಿರವಾಗಿರುವದು; ನನ್ನ ತೋಳು ಅವನನ್ನು ಬಲಪಡಿಸು ವುದು. ಶತ್ರುವು ಅವನನ್ನು ಬಲಾತ್ಕಾರ ಮಾಡನು; ಯಾವ ದುಷ್ಟನೂ ಅವನನ್ನು ಹಿಂಸೆ ಪಡಿಸನು. ಇದ ಲ್ಲದೆ ಅವನ ಮುಂದೆ ವೈರಿಗಳನ್ನು ಹೊಡೆದು ಬಿಡು ವೆನು; ಅವನ ಹಗೆಯವರನ್ನು ಸಂಕಟಪಡಿಸುವೆನು. ಆದರೆ ನನ್ನ ನಂಬಿಗಸ್ತಿಕೆಯೂ ಕರುಣೆಯೂ ಅವನ ಸಂಗಡ ಇರುವವು. ನನ್ನ ಹೆಸರಿನಲ್ಲಿ ಅವನ ಕೊಂಬು ಉನ್ನತವಾಗುವದು. ಸಮುದ್ರದಲ್ಲಿ ಅವನ ಕೈ ಯನ್ನೂ ನದಿಗಳಲ್ಲಿ ಅವನ ಬಲಗೈಯನ್ನೂ ಇರಿಸು ವೆನು. ಅವನು--ನೀನು ನನ್ನ ತಂದೆಯೂ ದೇವರೂ ರಕ್ಷಣೆಯ ಬಂಡೆಯೂ ಎಂದು ನನಗೆ ಮೊರೆಯಿಡು ವನು. ನಾನು ಅವನನ್ನು ನನ್ನ ಚೊಚ್ಚಲ ಮಗನ ನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾ ಗಿಯೂ ಮಾಡುವೆನು. ಎಂದೆಂದಿಗೂ ಅವನಿಗೋ ಸ್ಕರ ನನ್ನ ಕರುಣೆಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಅವನೊಂದಿಗೆ ದೃಢವಾಗಿರುವದು.