2 Chronicles · chapter 10 · verse 15
2 Chronicles 10:15 in Kannada
ಹೀಗೆ ಅರ ಸನು ಜನರ ಮಾತನ್ನು ಕೇಳದೆ ಹೋದನು. ಕರ್ತನು ನೆಬಾಟನ ಮಗನಾದ ಯಾರೊಬ್ಬಾಮನಿಗೆ ಶಿಲೋವಿ ನವನಾದ ಅಹೀಯನ ಮುಖಾಂತರ ಹೇಳಿದ ವಾಕ್ಯವು ಈಡೇರುವದಕ್ಕೆ ಈ ಕಾರಣ ದೇವರಿಂದ ಉಂಟಾ ಯಿತು.
Heege ara sanu janara maatannu kelade hodanu. Kartanu nebaatana maganaada yaarobbaamanige shilovi navanaada aheeyana mukhaantara helida vaakyavu eederuvadakke ee kaarana devarinda untaa yitu.
2 Chronicles 10:15 in English
- King James Version (KJV)
- So the king hearkened not unto the people: for the cause was of God, that the LORD might perform his word, which he spake by the hand of Ahijah the Shilonite to Jeroboam the son of Nebat.
- World English Bible (WEB)
- So the king didn’t listen to the people; for it was brought about by God, that the LORD might establish his word, which he spoke by Ahijah the Shilonite to Jeroboam the son of Nebat.
- American Standard Version (ASV)
- So the king hearkened not unto the people; for it was brought about of God, that Jehovah might establish his word, which he spake by Ahijah the Shilonite to Jeroboam the son of Nebat.
- Bible in Basic English (BBE)
- So the king did not give ear to the people; for this came about by the purpose of God, so that the Lord might give effect to his word which he had said by Ahijah the Shilonite to Jeroboam, the son of Nebat.
- Darby Translation (DBY)
- So the king hearkened not to the people; for it was brought about by God, that Jehovah might give effect to his word, which he spoke through Ahijah the Shilonite to Jeroboam the son of Nebat.
- Webster's Bible (WBS)
- So the king hearkened not to the people: for the cause was of God, that the LORD might perform his word, which he spoke by the hand of Ahijah the Shilonite to Jeroboam the son of Nebat.
- Young's Literal Translation (YLT)
- And the king hath not hearkened unto the people, for the revolution hath been from God, for the sake of Jehovah's establishing His word that He spake by the hand of Abijah the Shilonite unto Jeroboam son of Nebat.
Read in context
- 13ಅರಸನು ಜನರಿಗೆ ಕಠಿಣವಾದ ಪ್ರತ್ಯುತ್ತರ ಹೇಳಿದನು; ಹಿರಿಯರು ಅವನಿಗೆ ಕೊಟ್ಟ ಆಲೋಚನೆಯನ್ನು ಬಿಟ್ಟು ಯೌವ ನಸ್ಥರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ ಅವರಿಗೆ--
- 14ನನ್ನ ತಂದೆಯು ನಿಮ್ಮ ನೊಗವನ್ನು ಭಾರ ಮಾಡಿದನು; ನಾನು ಅದನ್ನು ಇನ್ನೂ ಹೆಚ್ಚು ಭಾರ ಮಾಡುತ್ತೇನೆ. ನನ್ನ ತಂದೆಯು ನಿಮ್ಮನ್ನು ಬೆತ್ತಗಳಿಂದ ಶಿಕ್ಷಿಸಿದನು; ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಅಂದನು.
- 15ಹೀಗೆ ಅರ ಸನು ಜನರ ಮಾತನ್ನು ಕೇಳದೆ ಹೋದನು. ಕರ್ತನು ನೆಬಾಟನ ಮಗನಾದ ಯಾರೊಬ್ಬಾಮನಿಗೆ ಶಿಲೋವಿ ನವನಾದ ಅಹೀಯನ ಮುಖಾಂತರ ಹೇಳಿದ ವಾಕ್ಯವು ಈಡೇರುವದಕ್ಕೆ ಈ ಕಾರಣ ದೇವರಿಂದ ಉಂಟಾ ಯಿತು.
- 16ಅರಸನು ತಮಗೆ ಕಿವಿಗೊಡದೆ ಹೋದ ನೆಂದು ಸಮಸ್ತ ಇಸ್ರಾಯೇಲ್ಯರು ನೋಡಿ ಅರಸನಿಗೆ ಪ್ರತ್ಯುತ್ತರವಾಗಿ--ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಇಲ್ಲ. ಇಸ್ರಾ ಯೇಲ್ಯರೇ, ನಿಮ್ಮ ಗುಡಾರಗಳಿಗೆ ಹೋಗಿರಿ; ದಾವೀ ದನೇ, ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರೆಲ್ಲರು ತಮ್ಮ ಗುಡಾರಗಳಿಗೆ ಹೋದರು.
- 17ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲಿನ ಮಕ್ಕಳ ಮೇಲೆ ರೆಹಬ್ಬಾಮನು ಆಳಿದನು.
Cross references
- 1 Kings 11:29–39 1 ಅರಸುಗಳು 11:29–39ಆ ಕಾಲದಲ್ಲಿ ಏನಾಯಿತಂದರೆ, ಯಾರೊಬ್ಬಾಮನು ಯೆರೊಸಲೇಮಿ ನೊಳಗಿಂದ ಹೊರಟು ಹೋಗುವಾಗ ಶೀಲೋನ್ಯ ನಾದ ಅಹೀಯನೆಂಬ ಪ್ರವಾದಿಯು ಅವನನ್ನು ಹಾದಿ ಯಲ್ಲಿ ಕಂಡನು. ಅವನು ಹೊಸ ವಸ್ತ್ರವನ್ನು ಹೊದ್ದು ಕೊಂಡಿದ್ದನು. ಅವರಿಬ್ಬರೂ ಹೊಲದಲ್ಲಿ ಒಂಟಿಯಾ ಗಿದ್ದರು. ಆಗ ಅಹೀಯನು ತನ್ನ ಮೇಲೆ ಇರುವ ವಸ್ತ್ರವನ್ನು ಹಿಡಿದು ಹನ್ನೆರಡು ತುಂಡುಗಳಾಗಿ ಹರಿದು ಯಾರೊಬ್ಬಾಮನಿಗೆ--ಈ ಹತ್ತು ತುಂಡುಗಳನ್ನು ನೀನು ತೆಗೆದುಕೋ. ಇದಕ್ಕೆ ಇಸ್ರಾಯೇಲಿನ ದೇವರಾದ ಕರ್ತನು--ಇಗೋ, ನಾನು ಸೊಲೊಮೋನನ ಕೈ ಯಿಂದ ರಾಜ್ಯವನ್ನು ಕಿತ್ತುಕೊಂಡು ಹತ್ತು ಗೋತ್ರ ಗಳನ್ನು ನಿನಗೆ ಕೊಡುವೆನು. (ನನ್ನ ಸೇವಕನಾದ ದಾವೀದನಿಗೋಸ್ಕರವೂ ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿಗೋಸ್ಕರವೂ ಅವನಿಗೆ ಒಂದು ಗೋತ್ರ ಇರುವದು.) ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಕೈಕೊಳ್ಳು ವದಕ್ಕೂ ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡು ವದಕ್ಕೂ ಅವರು ನನ್ನ ಮಾರ್ಗಗಳಲ್ಲಿ ನಡೆಯದೆ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋ ರೆತನ್ನೂ ಮೋವಾಬ್ಯರ ದೇವರಾದ ಕೆಮೋಷನ್ನೂ ಅಮ್ಮೋನನ ಮಕ್ಕಳ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ. ಆದರೂ ನನ್ನ ಆಜ್ಞೆಗಳನ್ನೂ ಕಟ್ಟಳೆ ಗಳನ್ನೂ ಕೈಕೊಂಡದ್ದರಿಂದ ನಾನು ಆದು ತೆಗೆದು ಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದು ಕೊಳ್ಳದೆ ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು. ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತಕ್ಕೊಂಡು ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು. ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಯಾವಾಗಲೂ ಬೆಳಕು ಉಂಟಾಗುವ ಹಾಗೆ ಅವನ ಮಗನಿಗೆ ಒಂದು ಗೋತ್ರ ವನ್ನು ಕೊಡುವೆನು. ಇದಲ್ಲದೆ ನಾನು ನಿನ್ನನ್ನು ತಕ್ಕೊಂಡು ನೀನು ನಿನ್ನ ಪ್ರಾಣವು ಇಚ್ಚೈಸುವದೆಲ್ಲವನ್ನು ಆಳುವಂತೆ ಮಾಡಿ ಇಸ್ರಾಯೇಲಿನ ಮೇಲೆ ಅರಸನಾ ಗಿರುವಿ. ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ ನನ್ನ ಮಾರ್ಗಗಳಲ್ಲಿ ನಡೆದು ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ ನನ್ನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಕೈಕೊಂಡು ನನ್ನ ದೃಷ್ಟಿಗೆ ಯಥಾರ್ಥ ವಾದದ್ದನ್ನು ಮಾಡಿದರೆ ನಾನು ನಿನ್ನ ಸಂಗಡ ಇದ್ದು ದಾವೀದನಿಗೋಸ್ಕರ ಕಟ್ಟಿದ ಹಾಗೆ ನಿನಗೆ ಸ್ಥಿರವಾದ ಮನೆಯನ್ನು ಕಟ್ಟಿ ಇಸ್ರಾಯೇಲ್ಯರನ್ನು ನಿನಗೆ ಕೊಡು ವೆನು. ಇದಕ್ಕೋಸ್ಕರ ದಾವೀದನ ಸಂತತಿಯನ್ನು ಬಾಧಿಸುವೆನು; ಆದರೆ ನಿರಂತರವಾಗಿ ಅಲ್ಲ ಎಂದು ಹೇಳಿದನು.
- 1 Samuel 2:25 1 ಸಮುವೇಲನು 2:25ಮನು ಷ್ಯನಿಗೆ ವಿರೋಧವಾಗಿ ಮನುಷ್ಯನು ಪಾಪಮಾಡಿದರೆ ನ್ಯಾಯಾಧಿಪತಿಗಳು ಅವನಿಗೆ ನ್ಯಾಯತೀರಿಸುವರು.ಒಬ್ಬನು ಕರ್ತನಿಗೆ ವಿರೋಧವಾಗಿ ಪಾಪಮಾಡಿದರೆ ಅವನಿಗೋಸ್ಕರ ಪ್ರಾರ್ಥನೆ ಮಾಡತಕ್ಕವನು ಯಾರು ಅಂದನು. ಆದರೆ ಕರ್ತನು ಅವರನ್ನು ಕೊಂದುಹಾಕ ಬೇಕೆಂದಿದ್ದನಷ್ಟೆ, ಅವರು ತಮ್ಮ ತಂದೆಯ ಮಾತನ್ನು ಕೇಳದೆಹೋದರು.
- 2 Chronicles 25:16–20 2 ಪೂರ್ವಕಾಲವೃತ್ತಾಂತ 25:16–20ಅವನು ಅರ ಸನ ಸಂಗಡ ಮಾತನಾಡುತ್ತಿರುವಾಗ ಅರಸನು ಅವ ನಿಗೆ--ಅರಸನ ಯೋಚನಾಕರ್ತರಲ್ಲಿ ನೀನು ಒಬ್ಬ ನಾಗಿದ್ದೀಯೋ? ನೀನು ಯಾಕೆ ಹೊಡೆಯಲ್ಪಡಬೇಕು ಅಂದನು. ಆಗ ಪ್ರವಾದಿಯು--ನೀನು ನನ್ನ ಯೋಚನೆ ಯನ್ನು ಕೇಳದೆ ಇದನ್ನು ಮಾಡಿದ್ದರಿಂದ ದೇವರು ನಿನ್ನನ್ನು ನಾಶಮಾಡಲು ತೀರ್ಮಾನಿಸಿದ್ದಾನೆಂದು ನಾನು ಬಲ್ಲೆನು ಎಂದು ಹೇಳಿಬಿಟ್ಟನು. ಆಗ ಯೆಹೂದದ ಅರಸನಾದ ಅಮಚ್ಯನು ಆಲೋಚನೆ ಕೇಳಿ, ಇಸ್ರಾಯೇಲಿನ ಅರಸನಾದ ಯೇಹುವಿನ ಮಗನಾದ ಯೆಹೋವಾಹಾಜನ ಮಗ ನಾದ ಯೋವಾಷನಿಗೆ--ನಾವು ಒಬ್ಬರ ಮುಖ ವನ್ನು ಒಬ್ಬರು ನೋಡೋಣ ಬಾ ಎಂದು ಹೇಳಿ ಕಳುಹಿಸಿದನು. ಆದರೆ ಇಸ್ರಾಯೇಲಿನ ಅರಸ ನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ--ಲೆಬನೋನಿನಲ್ಲಿದ್ದ ಒಂದು ಮುಳ್ಳು ಗಿಡವು ಲೆಬನೋನಿನಲ್ಲಿರುವ ದೇವದಾರಿಗೆ--ನೀನು ನನ್ನ ಮಗನಿಗೆ ಹೆಂಡತಿಯಾಗಿರಲು ನಿನ್ನ ಮಗಳನ್ನು ಕೊಡು ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋ ನಿನಲ್ಲಿದ್ದ ಅಡವಿಯ ಮೃಗವು ಹಾದುಹೋಗುತ್ತಿರು ವಾಗ ಆ ಮುಳ್ಳು ಗಿಡವನ್ನು ತುಳಿಯಿತು. ಇಗೋನಾನು ಎದೋಮ್ಯರನ್ನು ಹೊಡೆದಿದ್ದೇನೆಂದು ಹೇಳಿ ಕೊಳ್ಳುತ್ತೀ; ಆದದರಿಂದ ನಿನ್ನ ಹೃದಯವು ನಿನ್ನನ್ನು ಅಹಂಕಾರದಿಂದ ಕೊಚ್ಕಿಕೊಳ್ಳುವಂತೆ ಮಾಡುತ್ತದೆ. ಈಗ ಮನೆಯಲ್ಲಿ ಕೂತಿರು. ನೀನೂ ನಿನ್ನ ಸಂಗಡ ಯೆಹೂದವೂ ಬಿದ್ದು ಹೋಗುವ ಹಾಗೆ ನಿನ್ನ ಕೇಡಿಗೆ ನೀನು ಕೈ ಹಾಕುವದೇನು ಅಂದನು. ಆದರೆ ಅಮ ಚ್ಯನು ಕೇಳದೆಹೋದನು. ಯಾಕಂದರೆ ಅವರು ಎದೋ ಮ್ಯರ ದೇವರುಗಳನ್ನು ಹುಡುಕಿದ ನಿಮಿತ್ತ ಅವರನ್ನು ಶತ್ರುಗಳ ಕೈಯಲ್ಲಿ ಒಪ್ಪಿಸುವ ಹಾಗೆ ಇದು ದೇವರಿಂದ ಆಯಿತು.
- Acts 2:23 ಅಪೊಸ್ತಲರ ಕೃತ್ಯಗಳು 2:23ಆದರೆ ದೇವರ ಸ್ಥಿರಸಂಕಲ್ಪಕ್ಕನುಸಾರವಾಗಿಯೂ ಭವಿಷ್ಯದ್ ಜ್ಞಾನಕ್ಕನುಸಾರವಾಗಿಯೂ ಆತನು ಒಪ್ಪಿಸಲ್ಪಟ್ಟಾಗ ನೀವು ಆತನನ್ನು ಹಿಡಿದು ದುಷ್ಟರ ಕೈಗಳಿಂದ ಶಿಲುಬೆಗೆ ಹಾಕಿಸಿಕೊಂದಿರಿ.
- 1 Kings 12:15 1 ಅರಸುಗಳು 12:15ಹೀಗೆಯೇ ಅರಸನು ಜನರ ಮಾತು ಕೇಳದೆ ಹೋದನು. ಯಾಕಂದರೆ ಕರ್ತನು ನೆಬಾಟನ ಮಗ ನಾದ ಯೆರೊಬ್ಬಾಮನಿಗೆ ಶಿಲೋನ್ಯನಾದ ಅಹೀಯನ ಮುಖಾಂತರವಾಗಿ ಹೇಳಿದ ಮಾತು ಈಡೇರುವದಕ್ಕೆ ಕಾರಣವು ಕರ್ತನಿಂದ ಉಂಟಾಯಿತು.
- Judges 14:4 ನ್ಯಾಯಸ್ಥಾಪಕರು 14:4ಇದು ಕರ್ತನಿಂದ ಉಂಟಾಯಿತೆಂದು ಅವನ ತಂದೆ ತಾಯಂದಿರು ಅರಿ ಯದೆ ಇದ್ದರು. ಏನಂದರೆ ಫಿಲಿಷ್ಟಿಯರಿಗೆ ವಿರೋಧ ವಾಗಿ ಅವನು ಕಾರಣವನ್ನು ಹುಡುಕಿದನು. ಆ ಕಾಲ ದಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರನ್ನೂ ಆಳುತ್ತಿದ್ದರು.
- Isaiah 19:14 ಯೆಶಾಯ 19:14ಕರ್ತನು ಅದರ ಮಧ್ಯದಲ್ಲಿ ವಕ್ರವಾದ ಆತ್ಮವನ್ನು ಕಲ್ಪಿಸಿದ್ದಾನೆ (ಬೆರೆಸಿದ್ದಾನೆ). ಅಮಲೇರಿದವನು ಕಕ್ಕುತ್ತಾ ಓಲಾಡುವ ಪ್ರಕಾರ ಐಗುಪ್ತವು ತನ್ನ ಒಂದೊಂದು ಕೆಲಸದಲ್ಲಿಯೂ ಓಲಾಡುವಂತೆ ಮಾಡಿದ್ದಾನೆ.
- 1 Kings 12:24 1 ಅರಸುಗಳು 12:24ಆದದರಿಂದ ಅವರು ಕರ್ತನ ವಾಕ್ಯವನ್ನು ಕೇಳಿ ಆ ವಾಕ್ಯದ ಪ್ರಕಾರವೇ ಹಿಂತಿರುಗಿ ಹೋದರು.
- 1 Kings 22:20 1 ಅರಸುಗಳು 22:20ಆಗ ಕರ್ತನು--ಅಹಾಬನು ಹೋಗಿ ಗಿಲ್ಯಾದಿನ ರಾಮೋ ತಿನ ಬಳಿಯಲ್ಲಿ ಬೀಳುವ ಹಾಗೆ ಅವನನ್ನು ಮರುಳು ಗೊಳಿಸುವವನು ಯಾರು ಅಂದನು.
- John 12:37–39 ಯೋಹಾನನು 12:37–39ಆದರೆ ಆತನು ಅನೇಕ ಅದ್ಭುತಕಾರ್ಯಗಳನ್ನು ಅವರ ಮುಂದೆ ಮಾಡಿದಾಗ್ಯೂ ಅವರು ಆತನನ್ನು ನಂಬಲಿಲ್ಲ. ಇದರಿಂದ--ಕರ್ತನೇ, ನಮ್ಮ ವರ್ತ ಮಾನವನ್ನು ಯಾರು ನಂಬಿದ್ದಾರೆ? ಕರ್ತನ ಬಾಹುವು ಯಾರಿಗೆ ಪ್ರಕಟವಾಯಿತು ಎಂದು ಪ್ರವಾದಿಯಾದ ಯೆಶಾಯನು ನುಡಿದದ್ದು ನೆರವೇರುವ ಹಾಗೆ ಇದಾಯಿತು. ಅವರು ನಂಬಲಾರದೆ ಇದ್ದದರಿಂದ ಯೆಶಾಯನು ತಿರಿಗಿ ಹೇಳಿದ್ದೇನಂದರೆ--
- Acts 4:28 ಅಪೊಸ್ತಲರ ಕೃತ್ಯಗಳು 4:28ನಿನ್ನ ಹಸ್ತವು ಮತ್ತು ನಿನ್ನ ಸಂಕಲ್ಪವು ಮೊದಲೇ ನಿಶ್ಚಯಿಸಿದ್ದನ್ನು ಮಾಡಿದರು.
- John 19:32–36 ಯೋಹಾನನು 19:32–36ಆಗ ಸೈನಿಕರು ಬಂದು ಆತನ ಜೊತೆಯಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಮೊದಲನೆಯವನ ಕಾಲುಗಳನ್ನೂ ಮತ್ತೊಬ್ಬನ ಕಾಲುಗಳನ್ನೂ ಮುರಿದರು. ಆದರೆ ಅವರು ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವದನ್ನು ಕಂಡು ಆತನ ಕಾಲುಗಳನ್ನು ಮುರಿ ಯಲಿಲ್ಲ. ಆದರೆ ಸೈನಿಕರಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು; ಕೂಡಲೆ ರಕ್ತವೂ ನೀರೂ ಹೊರಗೆ ಬಂತು. ಅದನ್ನು ನೋಡಿದವನೇ ಸಾಕ್ಷಿ ಕೊಟ್ಟಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ನೀವು ನಂಬುವಂತೆ ಅವನು ಹೇಳುವದು ಸತ್ಯವೆಂದು ಅವನು ಬಲ್ಲನು. ಯಾಕಂದರೆ--ಆತನ ಒಂದು ಎಲುಬಾದರೂ ಮುರಿಯಲ್ಪಡಬಾರದು ಎಂಬ ಬರಹವು ನೆರವೇರುವಂತೆ ಇವುಗಳು ಸಂಭವಿಸಿದವು.
Original words (Hebrew)
- king · H4428מֶלֶךְ melek
- hearkened · H8085שָׁמַע shâmaʻ
- people · H5971עַם ʻam
- cause · H5252נְסִבָּה nᵉçibbâh
- God · H430אֱלֹהִים ʼĕlôhîym
- perform · H6965קוּם qûwm
- word · H1697דָּבָר dâbâr
- spake · H1696דָבַר dâbar
- hand · H3027יָד yâd
- Ahijah · H281אֲחִיָּה ʼĂchîyâh
- Shilonite · H7888שִׁילוֹנִי Shîylôwnîy
- Jeroboam · H3379יָרׇבְעָם Yârobʻâm
- son · H1121בֵּן bên
- Nebat · H5028נְבָט Nᵉbâṭ